ಒಳ ಉಡುಪಿನ ಹೊಸ ಜಾಹೀರಾತು ಹಂಚಿಕೊಂಡ ರಾಕಿಂಗ್‌ ಸ್ಟಾರ್‌ ಯಶ್‌; ಕಾಮೆಂಟ್‌ ಬಾಕ್ಸ್‌ ತುಂಬಾ ಫೈರ್‌, ಲವ್‌ ಎಮೋಜಿ-sandalwood news rocking star yash shared new inner wear advertisement fans comment fire heart emoji rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಒಳ ಉಡುಪಿನ ಹೊಸ ಜಾಹೀರಾತು ಹಂಚಿಕೊಂಡ ರಾಕಿಂಗ್‌ ಸ್ಟಾರ್‌ ಯಶ್‌; ಕಾಮೆಂಟ್‌ ಬಾಕ್ಸ್‌ ತುಂಬಾ ಫೈರ್‌, ಲವ್‌ ಎಮೋಜಿ

ಒಳ ಉಡುಪಿನ ಹೊಸ ಜಾಹೀರಾತು ಹಂಚಿಕೊಂಡ ರಾಕಿಂಗ್‌ ಸ್ಟಾರ್‌ ಯಶ್‌; ಕಾಮೆಂಟ್‌ ಬಾಕ್ಸ್‌ ತುಂಬಾ ಫೈರ್‌, ಲವ್‌ ಎಮೋಜಿ

ಪೆಪ್ಸಿ, ಡುರೆಕ್ಸ್‌ ಪೇಂಟ್‌, ಅಡುಗೆ ಎಣ್ಣೆ, ಪರ್ಫ್ಯೂಮ್‌, ಬಿಯರ್ಡ್‌ ಆಯಿಲ್‌ ಸೇರಿದಂತೆ ಅನೇಕ ಆಡ್‌ಗಳಲ್ಲಿ ಕಾಣಿಸಿಕೊಂಡಿದ್ದ ಯಶ್‌ ಒಳ ಉಡುಪಿನ ಜಾಹೀರಾತಿನಲ್ಲೂ ನಟಿಸಿದ್ದರು. ಈಗ ಅದೇ ಬ್ರಾಂಡ್‌ನ ಹೊಸ ಜಾಹೀರಾತಿನಲ್ಲಿ ಯಶ್‌ ಅಭಿನಯಿಸಿದ್ದು ಅದನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಒಳ ಉಡುಪಿನ ಹೊಸ ಜಾಹೀರಾತು ಹಂಚಿಕೊಂಡ ರಾಕಿಂಗ್‌ ಸ್ಟಾರ್‌ ಯಶ್‌; ಕಾಮೆಂಟ್‌ ಬಾಕ್ಸ್‌ ತುಂಬಾ ಫೈರ್‌, ಹಾಟ್‌ ಎಮೋಜಿ
ಒಳ ಉಡುಪಿನ ಹೊಸ ಜಾಹೀರಾತು ಹಂಚಿಕೊಂಡ ರಾಕಿಂಗ್‌ ಸ್ಟಾರ್‌ ಯಶ್‌; ಕಾಮೆಂಟ್‌ ಬಾಕ್ಸ್‌ ತುಂಬಾ ಫೈರ್‌, ಹಾಟ್‌ ಎಮೋಜಿ

ರಾಕಿಂಗ್‌ ಸ್ಟಾರ್‌ ಯಶ್‌ ಸದ್ಯಕ್ಕೆ ಟಾಕ್ಸಿಕ್‌ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಕೆಜಿಎಫ್‌ 2 ನಂತರ ಅವರ ಹೊಸ ಸಿನಿಮಾ ಅಪ್‌ಡೇಟ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳು ಈಗ ಟಾಕ್ಸಿಕ್‌ ಚಿತ್ರದ ಅಪ್‌ಡೇಟ್‌ಗಾಗಿ ಕಾಯುತ್ತಿದ್ದಾರೆ. ಬೆಂಗಳೂರು, ಮುಂಬೈ ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದೆ. ಈ ನಡುವೆ ಯಶ್‌ ಹೊಸ ಜಾಹೀರಾತೊಂದನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹೊಸ ಒಳ ಉಡುಪಿನ ಜಾಹೀರಾತಿನಲ್ಲಿ ಯಶ್‌

ಸಿನಿಮಾ ನಟ-ನಟಿಯರ ಖ್ಯಾತಿ ಹೆಚ್ಚುತ್ತಿದ್ದಂತೆ ಜಾಹೀರಾತು ಕಂಪನಿಗಳು ಕೂಡಾ ಅವರ ಹಿಂದೆ ಬೀಳುತ್ತವೆ. ಇದುವರೆಗೂ ಬಹಳಷ್ಟು ನಟ ನಟಿಯರು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್‌, ಕೆಜಿಎಫ್‌ ಸಿನಿಮಾ ಬಿಡುಗಡೆ ಆಗಿ ನ್ಯಾಷನಲ್‌ ಸ್ಟಾರ್‌ ಆಗುತ್ತಿದ್ದಂತೆ ಅವರು ಕೂಡಾ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಯಶ್‌ ಪೆಪ್ಸಿ, ಡುರೆಕ್ಸ್‌ ಪೇಂಟ್‌, ಅಡುಗೆ ಎಣ್ಣೆ, ಪರ್ಫ್ಯೂಮ್‌, ಬಿಯರ್ಡ್‌ ಆಯಿಲ್‌ ಸೇರಿದಂತೆ ಅನೇಕ ಆಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತುಗಳು ಟಿವಿಯಲ್ಲಿ ಕೂಡಾ ಪ್ರಸಾರವಾಗುತ್ತಿದೆ. ಇದಕ್ಕೂ ಮುನ್ನ ಯಶ್‌ ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅದೇ ಜಾಹೀರಾತಿನ ಮತ್ತೊಂದು ಸೀರೀಸ್‌ನಲ್ಲಿ ಯಶ್‌ ನಟಿಸಿದ್ದಾರೆ.

ಭಾರತೀಯ ಚಿತ್ರರಂಗದ ಸಿಇಓ ನೀವು ಎಂದ ಅಭಿಮಾನಿಗಳು

ಒಳ ಉಡುಪಿನ ಮತ್ತೊಂದು ಜಾಹೀರಾತನ್ನು ಯಶ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ Workout. Hangout. Repeat. Macroman MSeries! ನೀವು ಟ್ರೈ ಮಾಡಿದ್ದೀರಾ? ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಈ ಹೊಸ ಆಡ್‌ ನೋಡಿ ಅಭಿಮಾನಿಗಳ ಸಂಭ್ರಮ ಹೇಳತೀರದು. ಕಾಮೆಂಟ್‌ ಬಾಕ್ಸ್‌ ತುಂಬಾ ಫೈರ್‌, ಲವ್‌ ಎಮೋಜಿಗಳೇ ಕಾಣಸಿಗುತ್ತಿವೆ. ಯಶ್‌ ಬಾಸ್‌ ಅಭಿಮಾನಿಗಳು ಹಾಜರಾತಿ ಕಡ್ಡಾಯ, ನಿಮ್ಮ ಮೇಲೆ ಕ್ರಷ್‌ ಅಗಿದೆ, ನಮ್ಮ ದೇವರು ಯಶ್‌ ಬಾಸ್‌, ನೀವು ಬಹಳ ಹಾಟ್‌ ಗುರೂ, ಕರ್ನಾಟಕದ ಒರಿಜಿನಲ್‌ ಬ್ರಾಂಡ್‌ ಯಶ್‌ ಬಾಸ್‌, ಭಾರತದ ಸಿನಿಮಾರಂಗದ ಸಿಇಓ ನೀವು ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್‌ ಮಾಡುತ್ತಿದ್ದಾರೆ.

ಟಾಕ್ಸಿಕ್‌, ರಾಮಾಯಣ ಸಿನಿಮಾದಲ್ಲಿ ಬ್ಯುಸಿಯಾದ ರಾಕಿಂಗ್‌ ಸ್ಟಾರ್‌

ಯಶ್‌ ಅಭಿನಯದ ಟಾಕ್ಸಿಕ್‌ ಚಿತ್ರವನ್ನು ಕೆವಿಎನ್‌ ಪ್ರೊಡಕ್ಷನ್ಸ್‌, ಮೊನ್‌ಸ್ಟಾರ್‌ ಮೈಂಡ್ರ ಕ್ರಿಯೇಷನ್ಸ್‌ ಜೊತೆ ಸೇರಿ ನಿರ್ಮಿಸುತ್ತಿದ್ದಾರೆ. ಮಲಯಾಳಂನ ಗೀತು ಮೋಹನ್‌ ದಾಸ್‌ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ನಿರ್ದೇಶನ, ನಿರ್ಮಾಣ ಸೇರಿದಂತೆ ಟಾಕ್ಸಿಕ್‌ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ರಿವೀಲ್‌ ಮಾಡಿಲ್ಲ. ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಿದ್ದಾರೆ, ಸಂಗೀತ ನಿರ್ದೇಶನ ಯಾರದ್ದು? ಯಾವ ಸ್ಥಳದಲ್ಲಿ ಚಿತ್ರೀಕರಣ ಮಾಡಲಾಗಿದೆ? ಸಿನಿಮಾ ರಿಲೀಸ್‌ ಯಾವಾಗ? ಎಲ್ಲಾ ಅಪ್‌ಡೇಟ್‌ಗಾಗಿ ಸಿನಿಪ್ರಿಯರು ಕಾಯುತ್ತಿದ್ದಾರೆ. ಇದರ ಜೊತೆಗೆ ಯಶ್‌ ರಾಮಾಯಣ ಚಿತ್ರವನ್ನು ಕೂಡಾ ಒಪ್ಪಿಕೊಂಡಿದ್ದಾರೆ.

ರಾಮಾಯಣ ಚಿತ್ರದಲ್ಲಿ ಯಶ್‌ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದ್ದೂರಿ ವೆಚ್ಚದಲ್ಲಿ ಸಿನಿಮಾ ತಯಾರಾಗುತ್ತಿದ್ದು ಚಿತ್ರದಲ್ಲಿ ರಣಬೀರ್‌ ಕಪೂರ್‌ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರವನ್ನು ನಿತೀಶ್‌ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ 2025 ಡಿಸೆಂಬರ್‌ ಅಥವಾ 2026 ಜನವರಿ ವೇಳೆಗೆ ಬೆಳ್ಳಿ ಪರದೆಯ ಮೇಲೆ ಮತ್ತೊಂದು ರಾಮಾಯಣ ದರ್ಶನವಾಗಲಿದೆ. ಯಶ್‌ ಅವರನ್ನು ರಾವಣನ ಪಾತ್ರದಲ್ಲಿ ನೋಡಲು ಅಭಿಮಾನಿಗಳು ಕೂಡಾ ಕಾಯುತ್ತಿದ್ದಾರೆ.

mysore-dasara_Entry_Point