ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ದೇಸಾಯಿ ಮನೆಯಲ್ಲಿ ತಾರಕಕ್ಕೇರಿದ ಆಸ್ತಿ ವಿಚಾರ; ಅಶೋಕನಿಂದ ಪ್ರಿಯಾಗೂ ಗೊತ್ತಾಯ್ತು ಭಾರ್ಗವಿಯ ಅಸಲಿ ಮುಖ!

Seetha Rama Serial: ದೇಸಾಯಿ ಮನೆಯಲ್ಲಿ ತಾರಕಕ್ಕೇರಿದ ಆಸ್ತಿ ವಿಚಾರ; ಅಶೋಕನಿಂದ ಪ್ರಿಯಾಗೂ ಗೊತ್ತಾಯ್ತು ಭಾರ್ಗವಿಯ ಅಸಲಿ ಮುಖ!

ದೇಸಾಯಿ ಮನೆಯಲ್ಲೀಗ ಆಸ್ತಿ ವಿಚಾರ ತಾರಕಕ್ಕೇರಿದೆ. ರಾಮನ ಮದುವೆಯ ನಡುವೆಯೇ ವಿಲ್‌ ವಿಚಾರವನ್ನು ಮಾವ ಸೂರ್ಯಪ್ರಕಾಶ್‌ ಪ್ರಸ್ತಾಪಿಸುತ್ತಿದ್ದಂತೆ, ಭಾರ್ಗವಿ ನಿಗಿ ನಿಗಿ ಕೆಂಡದಂತಾಗಿದ್ದಾಳೆ. ಈಕೆಯ ಅಸಲಿ ಮುಖವನ್ನೂ ಪತ್ನಿ ಪ್ರಿಯಾ ಮುಂದೆ ಹೊರಗೆಡವಿದ್ದಾನೆ ಅಶೋಕ.

Seetha Rama Serial: ದೇಸಾಯಿ ಮನೆಯಲ್ಲಿ ತಾರಕಕ್ಕೇರಿದ ಆಸ್ತಿ ವಿಚಾರ; ಅಶೋಕನಿಂದ ಪ್ರಿಯಾಗೂ ಗೊತ್ತಾಯ್ತು ಭಾರ್ಗವಿಯ ಅಸಲಿ ಮುಖ!
Seetha Rama Serial: ದೇಸಾಯಿ ಮನೆಯಲ್ಲಿ ತಾರಕಕ್ಕೇರಿದ ಆಸ್ತಿ ವಿಚಾರ; ಅಶೋಕನಿಂದ ಪ್ರಿಯಾಗೂ ಗೊತ್ತಾಯ್ತು ಭಾರ್ಗವಿಯ ಅಸಲಿ ಮುಖ!

Seetha Rama Serial: ಸೀತಾ ರಾಮ ಧಾರಾವಾಹಿಯಲ್ಲೀ ಇಲ್ಲಿಯವರೆಗೂ ರಾಮನ ಮದುವೆಗೆ ಅಡ್ಡಗಾಲಾಗಿ ನಿಂತಿದ್ದಳು ಭಾರ್ಗವಿ. ಶತಾಯಗತಾಯ ರಾಮನ ಜೀವನ ಹಾಳು ಮಾಡಲೆಂದೇ ಹಾತೊರೆಯುತ್ತಿದ್ದಾಳೆ. ಈ ನಡುವೆ ಬೇಕು ಅಂತಲೇ ಸೀತಾ ಮತ್ತು ರಾಮನ ಮದುವೆಯನ್ನೂ ಎಲ್ಲರ ಮುಂದೆ ಘೋಷಣೆ ಮಾಡಿ, ರಾಮನ ಕಣ್ಣಿಗೆ ದೇವರಂತೆ ಕಂಡಿದ್ದಾಳೆ. ಆದರೆ, ಅದೇ ರಾಮನಿಗೆ ಶಪಿಸುವ ಕೆಲಸ ಆಕೆಯಿಂದ ಮುಂದುವರಿದಿದೆ. ಹೀಗಿರುವಾಗಲೇ ಮಾವ ಸೂರ್ಯ ಪ್ರಕಾಶ್‌ನ ಮಾತು ಭಾರ್ವಿವಿಗೆ ಶಾಕ್‌ ನೀಡಿದೆ.

ಟ್ರೆಂಡಿಂಗ್​ ಸುದ್ದಿ

ಯಾವತ್ತೂ ಆಸ್ತಿ ವಿಚಾರವಾಗಿ ಮಾತನಾಡದ ಸೂರ್ಯ ಪ್ರಕಾಶ್‌, ವಿಲ್‌ ವಿಚಾರವನ್ನು ಬಿಚ್ಚಿಟ್ಟಿದ್ದಾನೆ. ಇದು ಭಾರ್ಗವಿಯ ಕೋಪಕ್ಕೆ ಕಾರಣವಾಗಿದೆ. ಜತೆಗೆ ಲಾಯರ್‌ನ ಕರೆಸುವಂತೆಯೂ ಹೇಳಿದ್ದರಿಂದ, ಈಗ ಲಾಯರ್‌ ಸೂರ್ಯಪ್ರಕಾಶನ ಮುಂದೆ ಬಂದು ಕೂತಿದ್ದಾನೆ. ವಾಣಿ ಬರೆದಿಟ್ಟ ವಿಲ್‌ ಬಗ್ಗೆ ಲಾಯರ್‌ ಜತೆ ಸೂರ್ಯಪ್ರಕಾಶ್‌ ಮಾತನಾಡುತ್ತಿದ್ದಾನೆ. ಇದೇ ವೇಳೆ ಭಾರ್ಗವಿಯ ಆಗಮನವೂ ಆಗಿದೆ. ಆತನ ಮುಂದೆಯೇ ಆಸ್ತಿ ವಿಚಾರವನ್ನು ಲಾಯರ್‌ ಜತೆ ಚರ್ಚೆ ಮಾಡ್ತಿದ್ದಾನೆ ಸೂರ್ಯಪ್ರಕಾಶ್.‌

ವಾಣಿ ಮತ್ತು ಹಿರಿ ಮಗ ಇಂದ್ರಿಜಿತ್‌ಗೆ ನಾನು ನೀಡಿದ ಆಸ್ತಿಯಲ್ಲಿ, ಅರ್ಧ ರಾಮ್‌ಗೆ ಸೇರಬೇಕು. ಇನ್ನು ಅರ್ಧ ಆಸ್ತಿಯಲ್ಲಿ ವಿಶ್ವ ಮತ್ತು ಸತ್ಯನಿಗೆ ಸೇರಬೇಕು ಎಂದು ಸೂರ್ಯಪ್ರಕಾಶ್‌ ಹೇಳುತ್ತಿದ್ದಂತೆ, ಅಲ್ಲೇ ನಿಂತಿದ್ದ ಭಾರ್ಗವಿ ಕೆಂಡವಾಗಿದ್ದಾಳೆ. ವಾಣಿಯ ಆಸ್ತಿಯ ರಾಮನಿಗೆ, ಇಂದ್ರನ ಆಸ್ತಿ ನನ್ನ ಇನ್ನಿಬ್ಬರು ಮಕ್ಕಳಿಗೆ. ಹಾಗಾಗಿ ಈ ರೀತಿಯಲ್ಲಿ ತಿದ್ದುಪಡಿ ಮಾಡಿ ಎಂದು ಲಾಯರ್‌ಗೆ ಹೇಳಿದ್ದಾನೆ. ಜತೆಗೆ ಇದೆಲ್ಲ ಲೆಕ್ಕಕ್ಕೆ ಬರುವುದು ರಾಮನ ಮದುವೆ ಆದಮೇಲೆ ಎಂದೂ ಹೇಳಿದ್ದಾನೆ ಸೂರ್ಯಪ್ರಕಾಶ್‌.

ಭಾರ್ಗವಿಯನ್ನು ಅಣಕ ಮಾಡಿದ ವಿಶ್ವ

ಈ ನಡುವೆ ಸೀತಾಗೆ ಫೋನ್‌ ಕರೆ ಮಾಡಿದ್ದಾನೆ ರಾಮ್.‌ ಆದಷ್ಟು ಬೇಗ ನಮ್ಮ ಮದುವೆ ಮಾಡಿಸಲು ತಾತ ಪ್ಲಾನ್‌ ಮಾಡ್ತಿದ್ದಾರೆ. ಇಬ್ಬರ ನಡುವೆ ಮಾತುಕತೆ ನಡೆದಿದೆ. ನಮ್ಮ ತಾತನಿಗೆ ಏನೂ ಆಗಲ್ಲ ಅಲ್ವ ಎಂದಿದ್ದಾನೆ. ಸೀತಾ ಸಹ ರಾಮನಿಗೆ ಧೈರ್ಯ ತುಂಬಿದ್ದಾಳೆ. ಇತ್ತ ಭಾರ್ಗವಿ ಮಾತ್ರ ತಾತನ ನಿರ್ಧಾರದಿಂದ ನಿಗಿ ನಿಗಿ ಕೆಂಡವಾಗುತ್ತಿದ್ದಾಳೆ. ಭಾರ್ಗವಿಯ ಪ್ಲಾನ್‌ ಪ್ಲಾಪ್‌ ಆಗಿದ್ದಕ್ಕೆ ಪತ್ನಿಯನ್ನು ಕಿಚಾಯಿಸುತ್ತಿದ್ದಾನೆ ವಿಶ್ವ. ನಿನ್ನ ಕೈಗೆ ಮತ್ತೆ ಚಿಪ್ಪೇ ಸಿಕ್ತಲ್ಲ. ನಾವು ಏನೇ ಅಂದುಕೊಂಡರೂ ಹಣೆಯಲ್ಲಿ ಬರೆದಿದ್ದೇ ಆಗೋದು ಎಂದಿದ್ದಾನೆ.

ಮಾವಯ್ಯನ ವಿರುದ್ಧ ಹಲ್ಲು ಮಸಿದ ಭಾರ್ಗವಿ

ವಿಶ್ವನ ಮಾತುಗಳನ್ನು ಕಂಡು ಕೋಪಗೊಂಡ ಭಾರ್ಗವಿ, ಮಾವಯ್ಯನ ವಿಲ್‌ ವಿಚಾರವನ್ನು ಹೇಳಿದ್ದಾಳೆ. ಅರ್ಧ ಭಾಗ ರಾಮ್‌ಗೆ ಇನ್ನರ್ಧದಲ್ಲಿ ನಿಮ್ಮಬ್ಬರಿಗೆ ಎಂದಿದ್ದಾಳೆ. ಈ ಬಿಡಿಗಾಸಿಗೆ ನಾನು ಆಸೆ ಪಡೋಳಲ್ಲ. ಇಂದ್ರನ ಹೆಸರಿನಲ್ಲಿನ ಆಸ್ತಿ ನನಗೆ ಸೇರಬೇಕು. ಪಾಲಿಗೆ ಬಂದಿದ್ದು ಪಂಚಾಮೃತ ಅಂತ ಹಾಕಿದ ಭಿಕ್ಷೆಯನ್ನು ತೆಗೆದುಕೊಳ್ಳುವವಳಲ್ಲ ಈ ಭಾರ್ಗವಿ. ನನಗೆ ಬೇಕಿರೋದನ್ನು ನಾನೇ ಕಿತ್ಕೋತಿನಿ ಎಂದೂ ಗುಡುಗಿದ್ದಾಳೆ. ಚಾಕರಿ ಮಾಡಲು ನಾನು ಬೇಕು, ಆಸ್ತಿ ಬರೆಯುವಾಗ ನಾನು ಬೇಕಿಲ್ಲ ಅಲ್ವಾ ಎಂದು ಮಾವನ ವಿರುದ್ಧ ಹಲ್ಲು ಮಸಿಯುತ್ತಿದ್ದಾಳೆ.

ಭಾರ್ಗವಿ ನಿಜ ಮುಖ ಪ್ರಿಯಾಗೂ ಗೊತ್ತಾಯ್ತು

ಆಸ್ತಿಯಲ್ಲಿ ಅರ್ಧ ಭಾಗ ಆ ರಾಮನ ಸಂಸಾರಕ್ಕೆ ಹೇಗೆ ಹೋಗುತ್ತದೆ ನಾನೂ ನೋಡ್ತಿನಿ. ಅವನ ಸಂಸಾರ ಇದ್ರೆ ತಾನೇ ಆಸ್ತಿ ಹೋಗೋದಕ್ಕೆ. ಏಯ್.. ವಾಣಿ ಆಸ್ತಿ ನನಗೆ ಸಿಗಬಾರದು ಅಂತ ದಿಗ್ಬಂಧನ ಹಾಕಿದ್ದೀಯಾ? ಅದನ್ನ ನಾನೇ ಕಿತ್ಕೋತಿನಿ ನೋಡ್ತಿರಿ ಎಂದಿದ್ದಾಳೆ. ಈ ನಡುವೆ ಪ್ರಿಯಾ ಜತೆಗೆ ರಾಮನ ಮನೆಯವರ ಕಟು ಸತ್ಯವನ್ನು ಹೇಳಿಕೊಂಡಿದ್ದಾನೆ. ಭಾರ್ಗವಿಯಲ್ಲಿನ ಕೆಟ್ಟ ಗುಣದ ಬಗ್ಗೆಯೂ ಪತ್ನಿ ಮುಂದೆ ಬಿಚ್ಚಿಟ್ಟಿದ್ದಾನೆ. ಇಷ್ಟು ದಿನ ರಾಮನ ಮದುವೆ ಮುರೀಬೇಕು ಎಂದು ಪಟ್ಟು ಹಿಡಿದಿದ್ದ ಭಾರ್ಗವಿ, ಇದೀಗ ಆಸ್ತಿ ಪಡೆಯಲು ಷಡ್ಯಂತ್ರ ರೂಪಿಸುತ್ತಿದ್ದಾಳೆ.

IPL_Entry_Point