ಬಯಲಾಯ್ತು ಸಿಹಿ ಹುಟ್ಟಿನ ರಹಸ್ಯ!? ಶಾಲಿನಿಯ ಬಾಯ್ತಪ್ಪಿ ಬಂದ ಆ ಮಾತೇ ಇದೀಗ ಭಾರ್ಗವಿಗೆ ಬ್ರಹ್ಮಾಸ್ತ್ರ; ಸೀತಾ ರಾಮ ಧಾರಾವಾಹಿ
ಸೀತಾ ರಾಮ ಧಾರಾವಾಹಿ: ಇಲ್ಲಿಯವರೆಗೂ ಭಾರ್ಗವಿ ಗಮನಕ್ಕೆ ಬರದ ಒಂದು ವಿಚಾರ, ಅದೀಗ ಶಾಲಿನಿ ಮೂಲಕ ಗೊತ್ತಾಗಿದೆ. ಈ ಮೂಲಕ ಸಿಹಿ ಹುಟ್ಟಿನ ರಹಸ್ಯ ಬಯಲಾಗೋ ಸಮಯ ಹತ್ತಿರ ಬಂದಂತೆ ಗೋಚರವಾಗುತ್ತಿದೆ.
ಮನೆ ಬದಲಿಸೋ ಹಿನ್ನೆಲೆಯಲ್ಲಿ ರಾಮ್ ಮನೆಯಲ್ಲಿಯೇ ಠಿಕಾಣಿ ಹೂಡಿದ್ದಾನೆ ಮೇಘಶ್ಯಾಮ್ ಮತ್ತು ಶಾಲಿನಿ. ಶ್ಯಾಮ್, ರಾಮ್ ಮನೆಗೆ ಬಂದಿದ್ದೇ ತಡ, ಈ ದಂಪತಿಯ ಜತೆಗೆ ತುಂಬ ಹತ್ತಿರವಾಗುತ್ತಿದ್ದಾಳೆ ಸಿಹಿ. ಆದರೆ, ಎಲ್ಲೋ ಒಂದು ಕಡೆ ಸಿಹಿ ಎಲ್ಲಿ ತನ್ನ ಕೈ ತಪ್ಪಿ ಹೋಗುತ್ತಾಳೋ ಅನ್ನೋ ಭಯ ಸೀತಾ ಮನದಲ್ಲಿ ಆವರಿಸಿದೆ. ಒಳಗೊಳಗೆ ದುಗುಡ ಶುರುವಾಗಿದೆ. ಬಿಸಿ ತುಪ್ಪ ಬಾಯಲ್ಲಿಟ್ಟುಕೊಂಡ ಸ್ಥಿತಿ ಸೀತಾಳದ್ದಾಗಿದೆ. ಅಸಲಿ ಸತ್ಯವನ್ನು ಯಾರ ಮುಂದೆಯೂ ಹೇಳದಂತಾಗಿದೆ. ಹೀಗಿರುವಾಗಲೇ ಇದೇ ಪರಿಸ್ಥಿತಿಯನ್ನು ಎನ್‌ಕ್ಯಾಶ್ ಮಾಡಿಕೊಂಡ ಭಾರ್ಗವಿ, ತನ್ನ ಬೇಳೆ ಬೇಯಿಸಿಕೊಳ್ಳ ಹೊರಟಿದ್ದಾಳೆ.
ಇಲ್ಲಿಯವರೆಗೂ ಬಾಡಿಗೆ ತಾಯಿಯಿಂದ ಮೋಸವಾಗಿದೆ. ಹೇಗಾದರೂ ಮಾಡಿ ಹಿಂದಿನ ದಾಖಲೆಗಳನ್ನು ಹುಡುಕಿ, ಆ ಸರೋಗಸಿ ಮದರ್ ಕಡೆಯಿಂದ ಮಗುವನ್ನು ತನ್ನದಾಗಿಸಿಕೊಳ್ಳುವ ಪ್ಲಾನ್‌ನಲ್ಲಿದ್ದಾನೆ ಮೇಘಾಶ್ಯಾಮ್. ಶ್ಯಾಮನಿಗೆ ಜತೆಯಾಗಿ ರಾಮ್ ಸಹ ಕೈ ಜೋಡಿಸಿದ್ದಾನೆ. ಆದರೆ, ಇಲ್ಲಿಯವರೆಗೂ ಸರೋಗಸಿ ಮದರ್‌ಗೆ ಟ್ರೀಟ್‌ಮೆಂಟ್ ನೀಡಿದ ಡಾಕ್ಟರ್ ಯಾರು ಎಂಬ ವಿಚಾರ ಶ್ಯಾಮ್ ಬಾಯಿಂದ ಹೊರಬಂದಿಲ್ಲ. ಹೀಗಿರುವಾಗಲೇ ನೀವೇಕೆ ಆ ಡಾಕ್ಟರ್ ಅವರನ್ನು ಸಂಪರ್ಕಿಸಬಾರದು? ಹೇಗೋ ಅವರಿಗೆ ಗೊತ್ತೇ ಇರುತ್ತೆ ಎಂದಿದ್ದಾಳೆ ಭಾರ್ಗವಿ. ಯಾರು ಆ ಡಾಕ್ಟರ್ ಎಂದೂ ಕೇಳಿದ್ದಾಳೆ. ಇನ್ನೇನು ಶ್ಯಾಮ್ ಹೇಳಬೇಕು ಎನ್ನುವಷ್ಟರಲ್ಲಿ ಸಿಹಿ ಎಂಟ್ರಿಯಾಗಿದೆ.
ಸ್ಕಿಟ್ ನೆಪದಲ್ಲಿ ಬಂದ ಸಿಹಿ, ಶ್ಯಾಮ್ ಮತ್ತು ಶಾಲಿನಿಯನ್ನೇ ಅಪ್ಪ ಅಮ್ಮ ಅಂದುಕೊಂಡು ಸ್ಕಿಟ್ ಪ್ರಾಕ್ಟಿಸ್ ಮಾಡಿದ್ದಾಳೆ. ನೀವು ಸಿಗ್ತೀರಾ ಅಂತ ನಾನು ಅಂದುಕೊಂಡಿರಲಿಲ್ಲ. ಆದರೆ ನೀವು ಇಲ್ಲೇ ಇದ್ದೀರಾ ಎಂದು ಓಡಿ ಬಂದು ಅಪ್ಪನನ್ನು ಹಗ್ ಮಾಡಿದ್ದಾಳೆ. ನಾನು ನಿಮ್ಮನ್ನು ಬಿಟ್ಟು ಎಲ್ಲೂ ಹೋಗಲ್ಲ, ಥ್ಯಾಂಕ್ಯು ದೇವರೇ ನನಗೆ ನನ್ನ ಅಪ್ಪ ಅಮ್ಮನ ಕೊಟ್ಟಿದ್ದಕ್ಕೆ ಎಂದಿದ್ದಾಳೆ ಸಿಹಿ. ನಮ್ಮನ್ನು ಯಾವತ್ತೂ ಬಿಟ್ಟೋಗಬಾರದು ಎಂದು ಶ್ಯಾಮ್ ಸಿಹಿಗೆ ಹೇಳಿದ್ದಾನೆ. ಆದರೆ, ಇಲ್ಲಿ ಸ್ಕಿಟ್ ನಡೀತಿದೆ ಅನ್ನೋದು ಸೀತಾಗೆ ಗೊತ್ತಿಲ್ಲ. ದೂರದಿಂದಲೇ ಶ್ಯಾಮ್ ಮತ್ತು ಶಾಲಿನಿಯನ್ನು ಅಪ್ಪ ಅಮ್ಮ ಅಂದಿದ್ದಕ್ಕೆ ಸೀತಾಳ ಕರುಳು ಚುರ್ ಎಂದಿದೆ.
ಭಾರ್ಗವಿ ಸೀತಾ ನಡುವೆ ಮಾತು..
ಇತ್ತ ಸೀತಾಳ ಮುಖದಲ್ಲಿನ ಬದಲಾವಣೆಗಳನ್ನು ಸೂಕ್ಷ್ಮವಾಗಿಯೇ ಗಮನಿಸ್ತಿದ್ದಾಳೆ ಭಾರ್ಗವಿ. ಸಿಹಿ ಶಾಲಿನಿ ಮತ್ತು ಶ್ಯಾಮ್ ಜತೆ ಹತ್ತಿರವಾಗುವುದನ್ನು ಕಂಡು ಭಾರ್ಗವಿ ಸಹ ಒಳಗೊಳಗೇಮ, ಇಲ್ಲಿ ಏನೋ ಇದೆ ಅನ್ನೋ ಲೆಕ್ಕದಲ್ಲಿ ತಂತ್ರ ಹೆಣೆಯುತ್ತಿದ್ದಾಳೆ. ಊಟಕ್ಕೆ ಕೂತಾಗ ಶಾಲಿನಿಗೆ ಸ್ವೀಟ್ ತಿನಿಸಿದ್ದಾಳೆ ಸಿಹಿ. ಊಟದ ಬಳಿಕ ಇದೇ ವಿಚಾರವನ್ನು ಸೀತಾ ಬಳಿ ಚರ್ಚೆ ಮಾಡಿದ್ದಾಳೆ ಭಾರ್ಗವಿ. ಸಿಹಿ ನಿನ್ನಿಂದ ದೂರ ಆಗ್ತಿದ್ದಾಳೆ ಅನ್ನೋ ಅಳುಕು ನಿನ್ನನ್ನು ಕಾಡುತ್ತಿದೆಯಾ ಸೀತಾ ಎಂದಿದ್ದಾಳೆ. ಅದಕ್ಕೆ ಉತ್ತರಿಸಿದ ಸೀತಾ, ಸಿಹಿ ಯಾವತ್ತೂ ನನ್ನನ್ನು ಬಿಟ್ಟು ಹೋಗಲ್ಲ. ಅವಳು ನನ್ನ ಮಗಳು, ನನ್ನ ಜತೆನೇ ಇರ್ತಾಳೆ ಎಂದಿದ್ದಾಳೆ.
ಯಾವ ತಾಯಿ ತಾನೇ ನನ್ನ ಮಗುವನ್ನು ನನ್ನ ಮಗು ನನ್ನ ಮಗು ಅಂತ ಹೇಳ್ತಾಳೆ? ಇದ್ಯಾಕೆ ಸೀತಾ ಇಷ್ಟೊಂದು ಅನ್‌ಸೆಕ್ಯೂರ್ ಆಗಿದ್ದೀಯಾ? ಇಲ್ಲಿ ಏನೋ ನಡಿತೀದೆ. ಏನೋ ಮುಚ್ಚಿಡ್ತಿದ್ದೀಯಾ ಸೀತಾ ಎಂದು ತನಗೆ ತಾನೇ ಪ್ರಶ್ನೆ ಮಾಡಿಕೊಂಡಿದ್ದಾಳೆ.
ಅನಂತಲಕ್ಷ್ಮೀ ವಿಚಾರ ಬಾಯ್ಬಿಟ್ಟ ಶಾಲಿನಿ
ಸರೋಗಸಿ ಮಾಡಿಸಿದ ಡಾಕ್ಟರ್ ಯಾರು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ, ನೇರವಾಗಿ ಶಾಲಿನಿ ಬಳಿ ಬಂದ ಭಾರ್ಗವಿ, ಸರೋಗಸಿ ಬಗ್ಗೆ ಚರ್ಚೆ ನಡೆಸಿದ್ದಾಳೆ. ಇದೇ ವೇಳೆ ಮಗು ವಿಷ್ಯಾ ಬಂದಾಗ ಯಾಕೆ ಅದನ್ನು ಹೇಳಿಕೊಳ್ಳಲು ಹಿಂಜರಿಯುತ್ತಿದ್ದೀಯಾ ಎಂದು ಭಾರ್ಗವಿ ಶಾಲಿನಿಯನ್ನು ಪ್ರಶ್ನೆ ಮಾಡಿದ್ದಾಳೆ. ಆ ಮಗು ಹುಟ್ಟದಿದ್ದರೂ, ಸತ್ತೋಗಿದೆ ಎಂದು ಶ್ಯಾಮ್ ಹತ್ತಿರ ಸುಳ್ಳು ಹೇಳಿದ್ದೆ. ಈಗ ಹೋಗಿ ಡಾಕ್ಟರ್ ಹತ್ರ ಹೋಗಿ ವಿಚಾರಿಸಿದ್ರೆ, ಈ ಸತ್ಯ ಆಚೆ ಬರುತ್ತೆ ಎಂದಿದ್ದಾಳೆ ಶಾಲಿನಿ. ಆಗ ಹಣ ಇದ್ದರೆ ಏನು ಬೇಕಾದರೂ ಮಾಡಬಹುದಲ್ಲ ಎಂದ ಭಾರ್ಗವಿಗೆ, ಆದರೆ, ಡಾ ಅನಂತಲಕ್ಷ್ಮೀ ಆಗಲ್ವಲ್ಲ ಎಂದಿದ್ದಾಳೆ. ಅಲ್ಲಿಗೆ ಅನಂತಲಕ್ಷ್ಮೀ ವಿಚಾರ ಭಾರ್ಗವಿಗೆ ತಿಳಿದಿದೆ.
ಸೀತಾ ರಾಮ ಧಾರಾವಾಹಿ ಪಾತ್ರವರ್ಗ
ನಿರ್ದೇಶಕ: ಮಧುಸೂಧನ್
ಗಗನ್ ಚಿನ್ನಪ್ಪ: ಶ್ರೀರಾಮ (ನಾಯಕ)
ವೈಷ್ಣವಿ ಗೌಡ: ಸೀತಾ (ನಾಯಕ)
ರೀತು ಸಿಂಗ್: ಸಿಹಿ (ಸೀತಾ ಮಗಳು)
ಮೇಘಶ್ಯಾಮ- ನಾಗಾರ್ಜುನ್ ಬಿ.ಆರ್
ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)
ಭಾರ್ಗವಿ: ಪೂಜಾ ಲೋಕೇಶ್ (ಶ್ರೀರಾಮನ ಚಿಕ್ಕಮ್ಮ)
ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್ ದೇಸಾಯಿ (ಶ್ರೀರಾಮನ ತಾತ)
ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)
ವಿಕಾಸ್ ಕಾರ್‌ಗೋಡ್: ಲಾಯರ್ ರುದ್ರಪ್ರತಾಪ್
ಸತೀಶ್ ಚಂದ್ರ: ಚರಣ್. ಡಿ
ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್ (ಶ್ರೀರಾಮನ ಚಿಕ್ಕಪ್ಪ)
ಜಯದೇವ್ ಮೋಹನ್: ಸತ್ಯಜೀತ್ (ಶ್ರೀರಾಮನ ಚಿಕ್ಕಪ್ಪ)