ಕನ್ನಡ ಸುದ್ದಿ  /  Entertainment  /  Kannada Television News Seetha Rama Serial Wednesday March 6th Episode Highlights Seetha Raama Serial Latest Updates Mnk

Seetha Rama Serial: ಚಾಂದಿನಿಯ ಧಿಮಾಕಿಗೆ ಟಕ್ಕರ್‌ ಕೊಟ್ಟ ಪ್ರಿಯಾ, ರಾಮನ ನೋವಿಗೆ ಮುದ್ದು ಸಿಹಿಯೇ ಮದ್ದಾಗಿದ್ದಾಳೆ

Seetha Rama Serial: ಆಫೀಸ್‌ನಲ್ಲಿ ಚಾಂದಿನಿಯ ಆಟಾಟೋಪ ಮಿತಿ ಮೀರಿದೆ. ಆಕೆಯ ದರ್ಪಕ್ಕೆ ಸರಿಯಾಗಿಯೇ ಟಕ್ಕರ್‌ ಕೊಟ್ಟಿದ್ದಾಳೆ ಪ್ರಿಯಾ. ಈ ನಡುವೆ ರಾಮನ ಮನೆಗೆ ಅಚ್ಚರಿಯ ರೀತಿಯಲ್ಲಿ ಎಂಟ್ರಿಕೊಟ್ಟಿದ್ದಾಳೆ ಸಿಹಿ.

Seetha Rama Serial: ಚಾಂದಿನಿಯ ಧಿಮಾಕಿಗೆ ಟಕ್ಕರ್‌ ಕೊಟ್ಟ ಪ್ರಿಯಾ, ರಾಮನ ನೋವಿಗೆ ಮುದ್ದು ಸಿಹಿಯೇ ಮದ್ದಾಗಿದ್ದಾಳೆ
Seetha Rama Serial: ಚಾಂದಿನಿಯ ಧಿಮಾಕಿಗೆ ಟಕ್ಕರ್‌ ಕೊಟ್ಟ ಪ್ರಿಯಾ, ರಾಮನ ನೋವಿಗೆ ಮುದ್ದು ಸಿಹಿಯೇ ಮದ್ದಾಗಿದ್ದಾಳೆ

Seetha Rama Serial:‌ ಸೀತಾ ಮತ್ತು ಚಾಂದಿನಿ ಅಧಿಕೃತವಾಗಿ ಮೊದಲ ಸಲ ಮುಖಾಮುಖಿಯಾಗಿದ್ದಾರೆ. ನಾನೇ ಸೀತಾ ಎನ್ನುತ್ತಿದ್ದಂತೆ, ಸರಿ ನನ್ನ ಕ್ಯಾಬಿನ್‌ಗೆ ಬನ್ನಿ ಎಂದಿದ್ದಾಳೆ ಚಾಂದಿನಿ. ಇದಕ್ಕೆ ಓಕೆ ಎಂದಿದ್ದಾಳೆ ಸೀತಾ. ಅಷ್ಟಕ್ಕೇ ಸುಮ್ಮನಾಗದ ಚಾಂದಿನಿ, ಬರೀ ಓಕೆ ಎನ್ನುವುದಷ್ಟೇ ಅಲ್ಲ. ಮ್ಯಾಮ್‌ ಅನ್ನಬೇಕು. ನಾನು ಅದನ್ನು ಬಯಸ್ತೀನಿ ಎಂದು ಸೊಕ್ಕಿನಿಂದಲೇ ಸೀತಾಗೆ ಹೇಳಿದ್ದಾಳೆ ಚಾಂದಿನಿ. ಅಲ್ಲೇ ಇದ್ದ ಪ್ರಿಯಾ ಸಹ ಕೊಂಚ ಗರಂ ಆಗಿದ್ದಾಳೆ. ಯಾರೇ ಇವಳು, ಮುಖ ನೋಡಿದರೆ, ಬರೀ ಕೊಬ್ಬೇ ಇದೆ ಇವಳಿಗೆ ಎಂದಿದ್ದಾಳೆ. ಇನ್ನು ಕೆಲವರು, ರಾಮ್‌ ಅವರಿಗೆ ಸರ್‌ ಎಂದರೆ ಬೇಡ ಜಸ್ಟ್‌ ಕಾಲ್‌ ಮಿ ರಾಮ್‌ ಅಂತಾರೆ, ಇವ್ರೇನ್‌ ಗುರು ಹೀಗಾಡ್ತಾರೆ ಎಂದು ಮಾತನಾಡಿಕೊಂಡಿದ್ದಾರೆ.

ಈ ನಡುವೆ ಸೀತಾಗೆ ಲಂಚ್‌ ಆರ್ಡರ್‌ ಮಾಡುವಂತೆ ಹೇಳಿ ಸೊಕ್ಕು ಪ್ರದರ್ಶಿಸಿದ್ದಳು ಚಾಂದಿನಿ. ಕೆಲಸದ ನಡುವೆ ಅದನ್ನು ಮರೆತು ಹೋದ ಸೀತಾಗೆ ಕ್ಲಾಸ್‌ ತೆಗೆದುಕೊಂಡಿದ್ದಳು. ಇದನ್ನು ಸಹಿಸದ ಪ್ರಿಯಾ, ಆಕೆಗೇ ಟಕ್ಕರ್‌ ಕೊಟ್ಟಿದ್ದಾಳೆ. ಚಾಂದಿನಿಗೆ ಮುಟ್ಟಿನೋಡಿಕೊಳ್ಳುವಂತೆ ಗುನ್ನ ಕೊಟ್ಟಿದ್ದಾಳೆ ಪ್ರಿಯಾ. ಚಾಂದಿನಿ ತಿನ್ನಬೇಕಿದ್ದ ಸ್ಯಾಂಡ್‌ವಿಚ್‌ಗೆ ಖಾರ ಹಾಕಿ ಆಕೆಯ ಹೊಟ್ಟೆ ಉರಿಸಿದ್ದಾಳೆ. ಇದೇ ಸಿಟ್ಟಲ್ಲಿ ಸೀತಾಳಿಗೆ ಟಾರ್ಚರ್‌ ಕೊಡುವ ಕೆಲಸ ಮುಂದುವರಿಸಿದ್ದಾಳೆ ಚಾಂದಿನಿ.

ಚಾಂದಿನಿಯ ಆಟೋಟೋಪವನ್ನು ರೆಕಾರ್ಡ್‌ ಮಾಡುವ ಮೂಲಕ ಅಸಲಿ ವಿಚಾರವನ್ನು ಆಫೀಸ್‌ನ ಎಲ್ಲರಿಗೂ ಕೇಳುವಂತೆ ಹೇಳಿದ್ದಾಳೆ. ಈ ಮೊದಲೆಲ್ಲ ಹೀಗೆ ಇರಲಿಲ್ಲ ಎಂದು ಪರೋಕ್ಷವಾಗಿಯೇ ಚಾಂದಿನಿಗೆ ತಿವಿದಿದ್ದಾಳೆ ಪ್ರಿಯಾ. ಈ ನಡುವೆ ಮಾಡ್ತಿನಿ ಇರು ನಿನಗೆ ಎನ್ನುತ್ತಲೇ, ಪ್ರಿಯಾಳ ಫೋನ್‌ನಲ್ಲಿನ ವಿಡಿಯೋವನ್ನು ಡಿಲಿಟ್‌ ಮಾಡಿ ತನ್ನ ಕ್ಯಾಬಿನ್‌ಗೆ ತೆರಳಿದ್ದಾಳೆ ಚಾಂದಿನಿ.

ಮತ್ತೊಂದು ಕಡೆ, ಸಿಹಿ ರಾಮನ ಮನೆ ಹುಡುಕಿಕೊಂಡು ಆಗಮಿಸಿದ್ದಾಳೆ. ಪೋಸ್ಟ್‌ ಮನ್‌ ಸಹಾಯದಿಂದ, ಆತನಿಂದ ಡ್ರಾಪ್‌ ಪಡೆದುಕೊಂಡು ರಾಮನ ಮನೆ ತಲುಪಿಯೇ ಬಿಟ್ಟಿದ್ದಾಳೆ ಪುಟಾಣಿ ಸಿಹಿ. ಪುಣ್ಯಕ್ಕೆ ಮನೆಯಲ್ಲಿ ಭಾರ್ಗವಿ ಇಲ್ಲ. ವಿಶ್ವಜಿತ್‌ ಎದುರಾದರೂ, ಮಗನ ಫ್ರೆಂಡ್‌ ಇರಬಹುದು ಎಂದು ಮೇಲಕ್ಕೆ ಕಳುಹಿಸಿದ್ದಾನೆ. ಇದಾದ ಬಳಿಕ ಅಲ್ಲೇ ಇದ್ದ ಅಶೋಕ ಮತ್ತು ಅಂಜಲಿ ಮುಂದೆ ಪ್ರತ್ಯಕ್ಷಳಾಗಿದ್ದಾಳೆ ಸಿಹಿ. ಸಿಹಿಯ ಆಗಮನವಾಗ್ತಿದ್ದಂತೆ, ಅಶೋಕನೂ ಕೊಂಚ ಶಾಕ್‌ಗೆ ಒಳಗಾಗಿದ್ದಾನೆ.

ನೇರವಾಗಿ ರಾಮನ ಕೋಣೆಗೆ ಎಂಟ್ರಿಕೊಟ್ಟಿದ್ದಾಳೆ ಸಿಹಿ. ಸಿಹಿಯನ್ನು ನೋಡುತ್ತಿದ್ದಂತೆ, ರಾಮನ ಮೊಗದಲ್ಲಿ ನಗು ಉಕ್ಕಿದೆ. ಮಾತನಾಡಲು ಕೊಂಚ ಕಷ್ಟಪಡ್ತಿದ್ದ ರಾಮ್‌, ಸಿಹಿ ಎದುರು ಬರ್ತಿದ್ದಂತೆ, ಮಾತು ಮೊದಲಿಗಿಂತ ಸ್ಪಷ್ಟವಾಗಿವೆ. ಫ್ರೆಂಡ್‌ ನಿನ್ನ ನೋಡಬೇಕು, ಮುತ್ತುಕೊಡಬೇಕು ಅನಿಸ್ತು ಅದಕ್ಕೆ ಬಂದೆ ಎಂದಿದ್ದಾಳೆ ಸಿಹಿ. ಅಷ್ಟೇ ಅಲ್ಲ ರಾಮ್‌ಗೆ ತಾನೇ ಊಟ ಮಾಡಿಸಿದ್ದಾಳೆ. ಅಲ್ಲಿಗೆ ಇಬ್ಬರೂ ಒಂದಷ್ಟು ಖುಷಿಯಲ್ಲಿ ಕ್ಷಣಗಳನ್ನು ಕಳೆದಿದ್ದಾರೆ. ರಾಮನ ಮೊಗದಲ್ಲಿನ ನಗು ಕಂಡು ಅಲ್ಲೇ ಇದ್ದ ಅಶೋಕ ಇನ್ನಷ್ಟು ಖುಷಿಪಟ್ಟಿದ್ದಾನೆ. ರಾಮನ ನೋವಿಗೆ ಮುದ್ದು ಸಿಹಿಯ ಪ್ರೀತಿಯೇ ಮದ್ದಾಗಿದ್ದಾಳೆ.

IPL_Entry_Point