Seetha Rama Serial: ಮಾಡಿದ ಪಾಪ ಮರೆಯೋಕಾಗ್ತಿಲ್ಲ, ಹೊರಗೆ ಆರ್ಭಟಿಸೋ ಭಾರ್ಗವಿಗೆ ಒಳಗೊಳಗೇ ವಾಣಿಯ ಭಯ ತಪ್ತಿಲ್ಲ!
ಹೊರಗೆ ಆರ್ಭಟಿಸೋ ಭಾರ್ಗವಿಗೆ ಒಳಗೊಳಗೇ ಭಯ ತಪ್ತಿಲ್ಲ. ರಾತ್ರಿ ಮಲಗಿದ ಬಳಿಕ ಕನಸಲ್ಲಿ ರಾಮನ ತಾಯಿ ವಾಣಿ ಆಕೆಯ ನಿದ್ದೆಯನ್ನೇ ಹಾಳು ಮಾಡುತ್ತಿದ್ದಾಳೆ. ಇಷ್ಟು ದಿನ ನಂಬಿಕೆಯ ಮುಖವಾಡ ಹಾಕಿಕೊಂಡು, ನಿನ್ನದಲ್ಲದ ಗೌರವ ಗಳಿಸಿಕೊಂಡೆ. ಆದರೆ, ಇದೀಗ ನಿನ್ನ ಮುಖವಾಡ ಕಳಚಿ, ಪಾಪದ ಮುಖ ಬಯಲು ಮಾಡೋ ದಿನ ಹತ್ತಿರ ಬಂತು ಭಾರ್ಗವಿ ಎಂದು ಎಚ್ಚರಿಕೆ ನೀಡುತ್ತಿದ್ದಾಳೆ ವಾಣಿ.
Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ, ರಾಮನ ವಿರುದ್ಧ ಭಾರ್ಗವಿ ಒಂದಿಲ್ಲೊಂದು ರಣತಂತ್ರ ಹೆಣೆಯುತ್ತಿದ್ದಾಳೆ. ಸೀತಾಳ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡು, ಆಸ್ತಿಯನ್ನು ಲಪಟಾಯಿಸಲು ಸಂಚು ರೂಪಿಸುತ್ತಿದ್ದಾಳೆ. ಮತ್ತೊಂದು ಕಡೆ, ಚಿಕ್ಕಿ ಭಾರ್ಗವಿ ತುಂಬ ಒಳ್ಳೆಯವರು ಎಂದೇ ನಂಬಿಕೊಂಡಿದ್ದಾಳೆ ಸೀತಾ. ಈ ವಿಚಾರವನ್ನು ಪ್ರಿಯಾ ಮುಂದೆಯೂ ಹೇಳಿಕೊಂಡಿದ್ದಾಳೆ. ಆದರೆ, ಪ್ರಿಯಾಗೆ, ಭಾರ್ಗವಿ ಹೇಗೆ ಎಂಬುದನ್ನು ಪತಿ ಅಶೋಕ ಮನವರಿಕೆ ಮಾಡಿಕೊಟ್ಟಿದ್ದಾನೆ. ಇಷ್ಟೆಲ್ಲ ಗೊತ್ತಿದ್ದರೂ ಪ್ರಿಯಾ ಮಾತ್ರ ಅಸಲಿ ವಿಚಾರವನ್ನು ಬಾಯಿಬಿಡುತ್ತಿಲ್ಲ.
ಇತ್ತ ಪ್ರಿಯಾಳನ್ನು ನೋಡಿದ ರಾಮ್, ಎಲ್ಲ ಅಶೋಕ, ಕಾಣ್ತಾನೆ ಇಲ್ಲ ಹುಷಾರಾದ್ನಾ? ಎಂದು ಪ್ರಶ್ನೆ ಮಾಡಿದ್ದಾನೆ. ಹಾ ಇನ್ನೂ ರೆಸ್ಟ್‌ನಲ್ಲಿದ್ದಾರೆ ಎಂದಿದ್ದಾಲೆ ಪ್ರಿಯಾ. ಇವತ್ತು ಆಗಿದ್ದಾಗಲಿ ಅವನ್ನು ಭೇಟಿ ಆಗಲೇಬೇಕು. ಇಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಮನೆಲಿದ್ದು ಏನ್ಮಾಡ್ತಿದ್ದಾನವನು ಎಂದಿದ್ದಾನೆ ರಾಮ. ಈ ನಡುವೆ ಅಶೋಕನ ಪ್ರಾಣಕ್ಕೆ ಸಂಚಕಾರ ಎದುರಾದಾಗ, ಅದರ ಹಿಂದೆ ಯಾರಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಅಶೋಕ ರಾಮನಿಂದ ಡಿಸ್ಟನ್ಸ್ ಮೆಂಟೇನ್ ಮಾಡುತ್ತಿದ್ದಾನೆ. ಇದು ರುದ್ರಪ್ರತಾಪ್‌ನ ಪ್ಲಾನಾ? ಅಥವಾ ಭಾರ್ಗವಿ ಪ್ಲಾನ್ ಇರಬಹುದಾ ಎಂದುಕೊಳ್ಳುತ್ತಿದ್ದಾನೆ.
ರುದ್ರನ ಪ್ರೀತಿಯಲ್ಲಿ ಬಿದ್ದ ಅಂಜಲಿ
ಇವರೆಲ್ಲರ ಕಥೆ ಒಂದು ಕಡೆ ಸಾಗಿದರೆ, ರಾಮು ಹೆಸರಿನಲ್ಲಿ ಅಶೋಕನ ತಂಗಿ ಅಂಜಲಿ ಬಾಳಲ್ಲಿ ಆಟ ಆಡುತ್ತಿದ್ದಾನೆ ಲಾಯರ್ ರುದ್ರಪ್ರತಾಪ್. ಆತನ ಪ್ರತಿ ಮಾತನ್ನೂ ನಂಬುತ್ತಿರುವ ಅಂಜಲಿ, ಅವನನ್ನು ಒಳ್ಳೆಯವಳೆಂದು ತಿಳಿದುಕೊಂಡಿದ್ದಾಳೆ. ನಿತ್ಯ ಫೋನ್‌ನಲ್ಲಿ ಇವರ ಮಾತುಕತೆಯೂ ಮುಂದುವರಿದೆ. ಇಬ್ಬರೂ ಕದ್ದು ಮುಚ್ಚಿ ಮಾತನಾಡುವ ವಿಚಾರವೂ ಪ್ರಿಯಾಳ ಅಮ್ಮ ಪ್ರೇಮಾಗೆ ಗೊತ್ತಾಗಿದೆ. ಇದೇ ವಿಚಾರವನ್ನು ಪ್ರಿಯಾ ಬಳಿ ಹೇಳಿದರೂ, ಅಮ್ಮನ ಮಾತನ್ನು ಆಕೆ ನಂಬುತ್ತಿಲ್ಲ. ಒಂದು ವೇಳೆ ಅವಳು ಯಾರನ್ನಾದರೂ ಪ್ರೀತಿಸಿದರೆ, ಗಂಡು ಹುಡುಕುವ ಕೆಲಸ ನಮಗಿರಲ್ಲ ಎಂದಿದ್ದಾಳೆ.
ಕನಸಲ್ಲೇ ಭಾರ್ಗವಿಗೆ ಭಯ ಹುಟ್ಟಿಸಿದ ವಾಣಿ
ಇತ್ತ ಹೊರಗೆ ಆರ್ಭಟಿಸೋ ಭಾರ್ಗವಿಗೆ ಒಳಗೊಳಗೇ ಭಯ ತಪ್ತಿಲ್ಲ. ರಾತ್ರಿ ಮಲಗಿದ ಬಳಿಕ ಕನಸಲ್ಲಿ ರಾಮನ ತಾಯಿ ವಾಣಿ ಆಕೆಯ ನಿದ್ದೆಯನ್ನೇ ಹಾಳು ಮಾಡುತ್ತಿದ್ದಾಳೆ. ಇಷ್ಟು ದಿನ ನಂಬಿಕೆಯ ಮುಖವಾಡ ಹಾಕಿಕೊಂಡು, ನಿನ್ನದಲ್ಲದ ಗೌರವ ಗಳಿಸಿಕೊಂಡೆ. ಆದರೆ, ಇದೀಗ ನಿನ್ನ ಮುಖವಾಡ ಕಳಚಿ, ಪಾಪದ ಮುಖ ಬಯಲು ಮಾಡೋ ದಿನ ಹತ್ತಿರ ಬಂತು ಭಾರ್ಗವಿ. ಇಲ್ಲಿರೋದು ಯಾವುದೂ ನಿನಗೆ ಸೇರಿದ್ದಲ್ಲ. ಎಲ್ಲವನ್ನೂ ನೀನು ಕಿತ್ತುಕೊಂಡಿರೋದು. ಆಸ್ತಿ, ಅಂತಸ್ತು, ನಂಬಿಕೆ ಎಲ್ಲವನ್ನೂ ಮೈಮೇಲೆ ಹೇರಿಕೊಂಡು ಕೂತಿದ್ದೀಯಾ. ಮನೆಯವರ ಕಣ್ಣಿಗೆ ಕಟ್ಟಿದ ಬಟ್ಟೆ ಕಳಚಿ ಬೀಳುವ ಸಮಯ ಬಂದಿದೆ. ನನ್ನ ಸೊಸೆ ನಿನ್ನ ದುರಾಸೆ ದರ್ಪಕ್ಕೆ ಕೊನೇ ಹಾಡ್ತಾಳೆ ಎಂದು ಭಾರ್ಗವಿಗೆ ಭಯಹುಟ್ಟಿಸಿದ್ದಾಳೆ ವಾಣಿ.
ಸೀತಾ ರಾಮ ಧಾರಾವಾಹಿ ಪಾತ್ರವರ್ಗ
ನಿರ್ದೇಶಕ: ಮಧುಸೂಧನ್
ಗಗನ್ ಶ್ರೀನಿವಾಸ್: ಶ್ರೀರಾಮ (ನಾಯಕ)
ವೈಷ್ಣವಿ ಗೌಡ: ಸೀತಾ (ನಾಯಕ)
ರೀತು ಸಿಂಗ್: ಸಿಹಿ (ಸೀತಾ ಮಗಳು)
ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)
ಭಾರ್ಗವಿ: ಪೂಜಾ ಲೋಕೇಶ್ (ಶ್ರೀರಾಮನ ಚಿಕ್ಕಮ್ಮ)
ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್ ದೇಸಾಯಿ (ಶ್ರೀರಾಮನ ತಾತ)
ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)
ವಿಕಾಸ್ ಕಾರ್‌ಗೋಡ್: ಲಾಯರ್ ರುದ್ರಪ್ರತಾಪ್
ಸತೀಶ್ ಚಂದ್ರ: ಚರಣ್. ಡಿ
ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್ (ಶ್ರೀರಾಮನ ಚಿಕ್ಕಪ್ಪ)
ಜಯದೇವ್ ಮೋಹನ್: ಸತ್ಯಜೀತ್ (ಶ್ರೀರಾಮನ ಚಿಕ್ಕಪ್ಪ)
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)