UI Box Office Collection: ಇಳಿಕೆ ಕಂಡ ‘UI’ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್; ನಾಲ್ಕನೇ ದಿನ ಗಳಿಸಿದ್ದೆಷ್ಟು?
UI Box Office Collection Day 4: ಉಪೇಂದ್ರ ಅಭಿನಯದ ಸಿನಿಮಾ ‘UI’ ಬಿಡುಗಡೆಯಾಗಿ ನಾಲ್ಕು ದಿನಗಳು ಕಳೆದವು. ದಿನದಿಂದ ದಿನಕ್ಕೆ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಇಳಿಕೆ ಕಂಡುಬರುತ್ತಿದೆ. ನಾಲ್ಕನೇ ದಿನದ ಗಳಿಕೆಯ ಮಾಹಿತಿ ಇಲ್ಲಿದೆ.
UI Box Office Collection Day 4: ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ಯ ತುಂಬಾ ಟ್ರೆಂಡ್‌ನಲ್ಲಿರುವ ಸಿನಿಮಾ ಎಂದರೆ ಅದು ಉಪೇಂದ್ರ ಅವರ ಅಭಿನಯ ಹಾಗೂ ನಿರ್ದೇಶನದ ಸಿನಿಮಾ ಯುಐ. ಈ ಸಿನಿಮಾ ವೀಕ್ಷಕರಿಂದ ಪಾಸಿಟಿವ್ ಟಾಕ್ ಪಡೆದುಕೊಂಡಿದೆ. ಸಾಕಷ್ಟು ಜನ ಈಗಾಗಲೇ ಸಿನಿಮಾವನ್ನು ಥಿಯೇಟರ್‌ನಲ್ಲಿ ವೀಕ್ಷಿಸಿ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬಾಕ್ಸ್ ಆಫೀಸ್ ಕಲೆಕ್ಷನ್ ಕೂಡ ಚೆನ್ನಾಗಿಯೇ ಇದೆ. Sacnilk ವೆಬ್‌ಸೈಟ್ ಪ್ರಕಾರ ಯುಐ ಸಿನಿಮಾ ನಾಲ್ಕನೇ ದಿನದ ಕಲೆಕ್ಷನ್ 2.35 ಕೋಟಿ ಎಂದು ವರದಿಯಾಗಿದೆ. ಇನ್ನು ನಾಲ್ಕು ದಿನಗಳಲ್ಲಿ ಒಟ್ಟು 20.85 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಅಂದಾಜಿಸಲಾಗಿದೆ.
ಯುಐ 4ನೇ ದಿನದ ಕಲೆಕ್ಷನ್
ಉಪೇಂದ್ರ ಅಭಿನಯದ ಈ ಚಿತ್ರವು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಮೊದಲ ದಿನದಂದು ರೂ 6.95 ಕೋಟಿ ಕಲೆಕ್ಷನ್ ಮಾಡಿತು. ಕನ್ನಡದಿಂದ ರೂ 6.25 ಕೋಟಿ, ತೆಲುಗಿನಿಂದ ರೂ 65 ಲಕ್ಷ, ತಮಿಳುನಾಡಿನಿಂದ ರೂ 4 ಲಕ್ಷ, ಮತ್ತು ಹಿಂದಿಯಿಂದ ರೂ 1 ಲಕ್ಷ. 2ನೇ ದಿನ ಭಾರತದಿಂದ 5.6 ಕೋಟಿ ರೂ ಮತ್ತು 3ನೇ ದಿನದಲ್ಲಿ 5.95 ಕೋಟಿ ರೂ ಗಳಿಸಿತು. ನಾಲ್ಕನೇ ದಿನ 2.25 ಕೋಟಿ ಸಂಗ್ರವಾಗಿದೆ ಎಂದು ಅಂದಾಜಿಸಲಾಗಿದೆ. ಡಿಸೆಂಬರ್ 23 ರಂದು ಕಲೆಕ್ಷನ್ ಸ್ವಲ್ಪ ನಿಧಾನವಾಯಿತು.
ಸಿನಿಮಾ ತಂಡ
ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ಜಿ. ಮನೋಹರನ್ ಹಾಗೂ ಕೆ.ಪಿ. ಶ್ರೀಕಾಂತ್ ಯುಐ ಚಿತ್ರವನ್ನು ನಿರ್ಮಿಸಿದ್ದಾರೆ. ನವೀನ್ ಮನೋಹರ್ ಅವರ ಸಹ ನಿರ್ಮಾಣ ಹಾಗೂ ತುಳಸಿರಾಮ ನಾಯ್ಡು (ಲಹರಿ ವೇಲು), ಜಿ. ರಮೇಶ್, ಜಿ. ಆನಂದ್, ಚಂದ್ರು ಮನೋಹರನ್ ಹಾಗೂ ನಾಗೇಂದ್ರ ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಚಿತ್ರದಲ್ಲಿ ಉಪೇಂದ್ರಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
ತಾರಾಗಣ
ಚಿತ್ರದಲ್ಲಿ ಉಪೇಂದ್ರ, ಸನ್ನಿ ಲಿಯೋನ್, ರೀಷ್ಮಾ ನಾಣಯ್ಯ, ಸಾಧು ಕೋಕಿಲಾ ಮತ್ತು ಮುರಳಿ ಶರ್ಮಾ ನಟಿಸಿದ್ದಾರೆ. ಉಪೇಂದ್ರ ಅವರೇ ನಿರ್ದೇಶಿಸಿರುವ ಈ ಚಿತ್ರಕ್ಕೆ ಲಹರಿ ಫಿಲ್ಮ್ಸ್ ಮತ್ತು ವೀನಸ್ ಎಂಟರ್‌ಟೈನರ್ ಹಣ ಹಾಕಿದ್ದಾರೆ.