ಕನ್ನಡ ಸುದ್ದಿ  /  ಮನರಂಜನೆ  /  ಒಂದೂವರೆ ವರ್ಷ ಕಾಯಿಸಿ, ಕೊನೆಗೂ ಒಟಿಟಿಗೆ ಬಂದ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ; ವೀಕ್ಷಣೆ ಎಲ್ಲಿ?

ಒಂದೂವರೆ ವರ್ಷ ಕಾಯಿಸಿ, ಕೊನೆಗೂ ಒಟಿಟಿಗೆ ಬಂದ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ; ವೀಕ್ಷಣೆ ಎಲ್ಲಿ?

2022ರ ನವೆಂಬರ್‌ನಲ್ಲಿ ತೆರೆಕಂಡು ನೋಡುಗರಿಂದ ಮೆಚ್ಚುಗೆ ಪಡೆದಿದ್ದ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ, ಕೊನೆಗೂ ಒಟಿಟಿ ಮೆಟ್ಟಿಲೇರಿದೆ. ಹಾಗಾದರೆ ಬಹುತಾರಾಗಣದ ಈ ಸಿನಿಮಾ ಯಾವ ಒಟಿಟಿಯಲ್ಲಿ ವೀಕ್ಷಿಸಬಹುದು? ಇಲ್ಲಿದೆ ಮಾಹಿತಿ.

ಒಂದೂವರೆ ವರ್ಷ ಕಾಯಿಸಿ, ಕೊನೆಗೂ ಒಟಿಟಿಗೆ ಬಂದ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ; ವೀಕ್ಷಣೆ ಎಲ್ಲಿ?
ಒಂದೂವರೆ ವರ್ಷ ಕಾಯಿಸಿ, ಕೊನೆಗೂ ಒಟಿಟಿಗೆ ಬಂದ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ; ವೀಕ್ಷಣೆ ಎಲ್ಲಿ?

Dharani Mandala Madyadolage on OTT: ಕನ್ನಡದಲ್ಲಿ ಕಳೆದ ಒಂದೂವರೆ ವರ್ಷಗಳ ಹಿಂದೆಯೇ ತೆರೆಗೆ ಬಂದಿದ್ದ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಬಹುತಾರಾಗಣದ ಈ ಸಿನಿಮಾ 2022ರ ನವೆಂಬರ್‌ 2 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಹೀಗೆ ಬಿಡುಗಡೆಯಾಗಿದ್ದ ಚಿತ್ರ ನೋಡುಗರಿಂದ ಮೆಚ್ಚುಗೆ ಪಡೆದುಕೊಂಡರೂ, ಅಷ್ಟಾಗೆ ಪ್ರೇಕ್ಷಕನನ್ನು ಥಿಯೇಟರ್‌ಗೆ ಕರೆತಂದಿರಲಿಲ್ಲ. ನಿರ್ದೇಶಕ ಶ್ರೀಧರ್‌ ಶಿಕಾರಿಪುರ ತಮ್ಮ ಮೊದಲ ಪ್ರಯತ್ನದಲ್ಲಿಯೇ ವಿಶೇಷ ಕಥೆಯೊಂದಿಗೆ ಆಗಮಿಸಿದ್ದರೂ, ಹೆಚ್ಚು ದಿನ ಚಿತ್ರಮಂದಿರಗಳಲ್ಲಿ ನಿಲ್ಲಲ್ಲಿಲ್ಲ. ಇದೀಗ ಇದೇ ಸಿನಿಮಾ ಒಟಿಟಿಗೆ ಆಗಮಿಸಿದೆ.

ಟ್ರೆಂಡಿಂಗ್​ ಸುದ್ದಿ

ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳ ಆಗಮನವಾಗುತ್ತಿಲ್ಲ. ಇತ್ತ ಒಟಿಟಿಯಲ್ಲಿ ಸಣ್ಣ ಸಿನಿಮಾಗಳ ಹರಿವು ನಿರಂತರವಾಗಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಅಲ್ಲಿ ಮೆಚ್ಚುಗೆ ಪಡೆದ ಎಷ್ಟೋ ಸಿನಿಮಾಗಳು, ಒಟಿಟಿಯಲ್ಲಿ ದೊಡ್ಡ ಯಶಸ್ಸನ್ನು ಪಡೆದುಕೊಳ್ಳುತ್ತಿವೆ. ಆ ಪೈಕಿ ಬ್ಲಿಂಕ್‌ ಸಿನಿಮಾ ಚಿತ್ರಮಂದಿರಗಳಲ್ಲಿ ಹೆಚ್ಚು ದಿನ ನಿಲ್ಲದ ಈ ಚಿತ್ರವನ್ನು ಒಟಿಟಿಯಲ್ಲಿ ಹೆಚ್ಚು ಜನ ನೋಡಿ ಮೆಚ್ಚಿಕೊಂಡರು. ಶಾಖಾಹಾರಿ ಚಿತ್ರಕ್ಕೂ ಅಂಥದ್ದೇ ಪ್ರತಿಕ್ರಿಯೆ ಸಿಕ್ಕಿತು. ಇತ್ತೀಚಿನ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ನಿರ್ಮಾಣದ O2 ಚಿತ್ರಕ್ಕೂ ಇದೀಗ ನೋಡುಗ ಬಹುಪರಾಕ್‌ ಹೇಳುತ್ತಿದ್ದಾನೆ.

ಹೀಗಿರುವಾಗಲೇ 2022ರ ನವೆಂಬರ್‌ನಲ್ಲಿ ತೆರೆಗೆ ಬಂದಿದ್ದ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಇದೀಗ ಒಟಿಟಿಗೆ ಆಗಮಿಸಿದ್ದು, ಚಿತ್ರತಂಡ ನಿಟ್ಟುಸಿರು ಬಿಟ್ಟಿದೆ. ಹೋದಲ್ಲಿ ಬಂದಲ್ಲಿ ಡಿಜಿಟಲ್‌ ಸ್ಟ್ರೀಮಿಂಗ್‌ ಯಾವಾಗ ಎಂಬ ಪ್ರಶ್ನೆಯನ್ನೇ ಎದುರಿಸಿದ್ದ ಈ ಸಿನಿಮಾ ತಂಡ ಇದೀಗ "ನಮ್ಮ ಸಿನಿಮಾ ಒಟಿಟಿಗೆ ಬಂದಿದೆ" ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡು, ಸಿನಿಮಾ ವೀಕ್ಷಣೆಗೆ ಆಹ್ವಾನ ನೀಡುತ್ತಿದೆ.

ಏನಿದು ಸಿನಿಮಾ?

ತೆರೆ ತುಂಬ ಕಾಣಿಸುವ ಹಲವು ಬಗೆಯ ಪಾತ್ರಗಳು ಒಂದಕ್ಕಿಂತ ಒಂದು ವಿಚಿತ್ರ. ಬಾಕ್ಸಿಂಗ್‌ನಲ್ಲಿ ಮಿಂಚಬೇಕು ಎಂದು ಒಬ್ಬ, ಇನ್ನೊಬ್ಬಳು ಡ್ರಗ್‌ ವ್ಯಸನಿ. ಅಪ್ಪ ಅಮ್ಮನನ್ನು ನೋಡಬೇಕೆಂಬ ಹಪಹಪಿಯಲ್ಲಿ ಒಬ್ಬ ಕಾದರೆ, ಪ್ರೀತಿ ಕೈ ಕೊಟ್ಟಿತು ಎಂಬ ಕಾರಣಕ್ಕೆ ಸಾಯಬೇಕೆಂಬು ನಿರ್ಧರಿಸಿದ ಭಗ್ನಪ್ರೇಮಿ ಮತ್ತೊಂದು ಕಡೆ. ಇವರೆಲ್ಲರೂ ಒಂದೇ ಊರಿನವರಾದರೂ, ಒಬ್ಬರಿಗೊಬ್ಬರು ಸಂಬಂಧ ಇರದವರು. ಒಂದು ಇಡೀ ರಾತ್ರಿ ಇವರೆಲ್ಲರು ಒಂದಿಲ್ಲೊಂದು ಕಾರಣಕ್ಕೆ ಭೇಟಿಯಾಗುತ್ತಾರೆ. ನಾವು ಒಬ್ಬರಿಗೆ ಒಳ್ಳೆಯದನ್ನು ಮಾಡಿದ್ರೆ, ಆ ಒಳ್ಳೆಯ ಕೆಲಸವೇ ನಮ್ಮನ್ನು ಹೇಗೆ ಕಾಪಾಡುತ್ತೆ ಎಂಬ ವಿಷಯವನ್ನೂ ಈ ಸಿನಿಮಾ ಮಾತನಾಡುತ್ತದೆ.

ತಾರಾಗಣ ಮತ್ತು ತಾಂತ್ರಿಕ ವರ್ಗ ಹೀಗಿದೆ..

ಕ್ರೈಂ ಥ್ರಿಲ್ಲರ್‌ ಕಥಾಹಂದರದ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾದಲ್ಲಿ ನವೀನ್‌ ಶಂಕರ್‌, ಐಶಾನಿ ಶೆಟ್ಟಿ, ಯಶ್‌ ಶೆಟ್ಟಿ, ನಿತೇಶ್, ಪ್ರಕಾಶ್‌ ತುಮ್ಮಿನಾಡು, ಸಿದ್ದು ಮೂಲಿಮನಿ, ಬಾಲ ರಾಜವಾಡಿ ಸೇರಿ ಇನ್ನೂ ಹಲವು ಪ್ರಮುಖ ತಾರಾಗಣದಲ್ಲಿದ್ದಾರೆ. ಹೈಪರ್‌ ಲಿಂಕ್‌ ಮಾದರಿಯ 'ಧರಣಿ ಮಂಡಲ ಮಧ್ಯದೊಳಗೆ' ಚಿತ್ರಕ್ಕೆ ಕೀರ್ತನ್‌ ಪೂಜಾರಿ ಛಾಯಾಗ್ರಹಣ ಮಾಡಿದರೆ, ಉಜ್ವಲ್‌ ಚಂದ್ರ ಸಂಕಲನಕಾರರಾಗಿದ್ದಾರೆ. ರೋನಾಡ್ ಬಕ್ಕೇಶ್ ಹಾಗೂ ಕಾರ್ತಿಕ್ ಚನ್ನೋಜಿ ರಾವ್ ಜೋಡಿ ಈ ಚಿತ್ರಕ್ಕೆ ಸಂಗೀತ ನೀಡಿದೆ.

ಯಾವ ಒಟಿಟಿಯಲ್ಲಿ ವೀಕ್ಷಣೆ

ಹೀಗೆ ಹತ್ತು ಹಲವು ವಿಶೇಷತೆಗಳನ್ನು ಹೊತ್ತ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಇದೀಗ ಒಟಿಟಿಗೆ ಆಗಮಿಸಿದೆ. ಅಮೆಜಾನ್‌ ಪ್ರೈಂ ವಿಡಿಯೋದಲ್ಲಿ ಈ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಿದೆ. ಚಿತ್ರಮಂದಿರದಲ್ಲಿ ಇಷ್ಟು ದಿನ ಈ ಚಿತ್ರವನ್ನು ಮಿಸ್‌ ಮಾಡಿಕೊಂಡವರು ಡಿಜಿಟಲ್‌ ವೀಕ್ಷಣೆಗೆ ಕಾಯುತ್ತಿದ್ದರು. ಇದೀಗ ಆ ಆಸೆ ಈಡೇರಿದೆ. ಬಹುತಾರಾಗಣದ ಈ ಸಿನಿಮಾ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಟಿ20 ವರ್ಲ್ಡ್‌ಕಪ್ 2024