ಕನ್ನಡ ಸುದ್ದಿ  /  ಮನರಂಜನೆ  /  ಹುಣಸೆ ಮರ ಮುಪ್ಪಾದರೆ, ಹುಳಿ ಮುಪ್ಪಾ ಎನ್ನುತ್ತ ರಾಜಾ ರಾಣಿ ರಿಯಾಲಿಟಿ ಶೋಗೆ ಎಂಟ್ರಿಕೊಟ್ಟ ‘ಕರ್ನಾಟಕ ಜೋಡಿ’!

ಹುಣಸೆ ಮರ ಮುಪ್ಪಾದರೆ, ಹುಳಿ ಮುಪ್ಪಾ ಎನ್ನುತ್ತ ರಾಜಾ ರಾಣಿ ರಿಯಾಲಿಟಿ ಶೋಗೆ ಎಂಟ್ರಿಕೊಟ್ಟ ‘ಕರ್ನಾಟಕ ಜೋಡಿ’!

ಇನ್‌ಸ್ಟಾಗ್ರಾಂನಲ್ಲಿ ಮೂರುವರೆ ಲಕ್ಷಕ್ಕೂ ಅಧಿಕ ಫಾಲೋವರ್ಸ್‌ ಹೊಂದಿರುವ ಕರ್ನಾಟಕ ಜೋಡಿ ಖ್ಯಾತಿಯ ಗೋವಿಂದ ರಾಜ್‌ ದಂಪತಿ ಇದೀಗ ರಾಜಾ ರಾಣಿ ರೀಲೋಡೆಡ್‌ ರಿಯಾಲಿಟಿ ಶೋಗೆ ಆಗಮಿಸಿದೆ. ಸ್ಪರ್ಧಿಯಾಗಿ ಈ ಜೋಡಿ ಮಿಂಚಲಿದೆ.

ಹುಣಸೇ ಮರ ಮುಪ್ಪಾದರೆ, ಹುಳಿ ಮುಪ್ಪಾ ಎನ್ನುತ್ತ ರಾಜಾ ರಾಣಿ ರಿಯಾಲಿಟಿ ಶೋಗೆ ಎಂಟ್ರಿಕೊಟ್ಟ ‘ಕರ್ನಾಟಕ ಜೋಡಿ’!
ಹುಣಸೇ ಮರ ಮುಪ್ಪಾದರೆ, ಹುಳಿ ಮುಪ್ಪಾ ಎನ್ನುತ್ತ ರಾಜಾ ರಾಣಿ ರಿಯಾಲಿಟಿ ಶೋಗೆ ಎಂಟ್ರಿಕೊಟ್ಟ ‘ಕರ್ನಾಟಕ ಜೋಡಿ’!

Raja Rani Reloaded Show: ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡಿ, ರೀಲ್ಸ್‌ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡವರು ಒಬ್ಬಿಬ್ಬರಲ್ಲ. ಅಂದ ಚೆಂದದ ಮೂಲಕ ಕೆಲವರು ಫಾಲೋವರ್ಸ್‌ ಹೆಚ್ಚಿಸಿಕೊಂಡರೆ, ಇನ್ನು ಕೆಲವರು ತಮ್ಮ ನಟನೆ, ರೀಲ್ಸ್‌ನಲ್ಲಿ ಕಾಣಿಸಿಕೊಳ್ಳುವ ರೀತಿಯಿಂದಲೂ ಜನಮನ್ನಣೆ ಗಳಿಸಿದವರಿದ್ದಾರೆ. ಹಾಗೇ ಮನ್ನಣೆ ಪಡೆದವರು ಕಿರುತೆರೆ, ಸಿನಿಮಾ ಕ್ಷೇತ್ರದಲ್ಲೂ ಹೆಸರು ಮಾಡಿದ್ದಾರೆ. ಅದೇ ರೀತಿ ಇನ್‌ಸ್ಟಾಗ್ರಾಂನಲ್ಲಿ ಹಾಡುಗಳಿಗೆ ರೀಲ್ಸ್‌ ಮಾಡುವ ಮೂಲಕವೇ ಎಲ್ಲರ ಗಮನ ಸೆಳೆದ ಜೋಡಿ ಎಂದರೆ ಅದು ಕರ್ನಾಟಕ ಜೋಡಿ!

ಟ್ರೆಂಡಿಂಗ್​ ಸುದ್ದಿ

ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ಇತ್ತೀಚೆಗಷ್ಟೇ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಬೃಂದಾವನ ಧಾರಾವಾಹಿ ಕೊನೆಗೊಂಡಿತು. ಆ ಧಾರಾವಾಹಿಯಲ್ಲಿ ವರುಣ್‌ ಆರಾಧ್ಯ ಸೋಷಿಯಲ್‌ ಮೀಡಿಯಾದ ಪ್ರಭಾವಳಿಯೊಂದಿಗೆ ನಾಯಕನಾಗಿ ಆಯ್ಕೆ ಆಗಿದ್ದರು. ಅದಕ್ಕೂ ಮುನ್ನ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಕಾಂಟ್ರವರ್ಸಿಯಿಂದಲೇ ಗುಲ್ಲೆಬ್ಬಿಸುತ್ತಿದ್ದ ಸೋನು ಶ್ರೀನಿವಾಸ್‌ ಗೌಡ ಸಹ ಬಿಗ್‌ಬಾಸ್‌ಗೆ ಎಂಟ್ರಿಕೊಟ್ಟಿದ್ದರು. ಈಗ ತಮ್ಮ ಪ್ರತಿಭೆ ಮೂಲಕವೇ ಇನ್‌ಸ್ಟಾಗ್ರಾಂನಲ್ಲಿ ಮಿಂಚುತ್ತಿರುವ ಕರ್ನಾಟಕ ಜೋಡಿ ಇದೀಗ ರಿಯಾಲಿಟಿ ಶೋಗೆ ಆಗಮಿಸಿದೆ.

ರಾಜಾ ರಾಣಿ ಶೋನಲ್ಲಿ ಕರ್ನಾಟಕ ಜೋಡಿ

ಇನ್‌ಸ್ಟಾಗ್ರಾಂನಲ್ಲಿ ತಮ್ಮ ಡಾನ್ಸ್‌ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಗೋವಿಂದರಾಜ್‌ ಮತ್ತು ವೈಲಾ ದಂಪತಿ. ಕರ್ನಾಟಕ ಜೋಡಿ ಹೆಸರಿನ ಇನ್‌ಸ್ಟಾಗ್ರಾಂ ಹೊಂದಿರುವ ಗೋವಿಂದ್‌ರಾಜ್‌, ಪತ್ನಿ ವೈಲಾ ಅವರೊಂದಿಗೆ ಕನ್ನಡದ ಆಲ್‌ ಟೈಮ್‌ ಹಿಟ್ಸ್‌ ಹಾಡುಗಳಿಗೆ ರೀಲ್ಸ್‌ ಮಾಡಿ ಲಕ್ಷ ಲಕ್ಷ ಫಾಲೋವರ್ಸ್‌ ಗಳಿಸಿದ್ದಾರೆ. ವೃತ್ತಿಪರ ಕಲಾವಿದರೂ ನಾಚುವಷ್ಟು ಸಹಜ ಅಭಿನಯವನ್ನು ಗೋವಿಂದರಾಜ್‌ ದಂಪತಿ ನೀಡುತ್ತಿದ್ದು, ಈ ಜೋಡಿಯ ಈ ಪ್ರತಿಭೆಗೆ ನೆಟ್ಟಿಗರಿಂದಲೂ ಮೆಚ್ಚುಗೆಯೂ ವ್ಯಕ್ತವಾಗುತ್ತಲೇ ಬಂದಿದೆ. ಇದೀಗ ರಾಜಾ ರಾಣಿ ಶೋಗೂ ಆಗಮಿಸಿ, ನಾಡಿನ ಮೂಲೆ ಮೂಲೆಯನ್ನೂ ತಲುಪಲು ಆಗಮಿಸಿದ್ದಾರೆ.

ಕಲರ್ಸ್‌ ಕನ್ನಡದಲ್ಲಿ ರಾಜಾ ರಾಣಿ ರೀಲೋಡೆಡ್‌..

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ರಾಜಾ ರಾಣಿ ರಿಯಾಲಿಟಿ ಶೋನ ಹೊಸ ಸೀಸನ್‌ ಶುರುವಾಗುತ್ತಿದೆ. ಈ ಸಲದ ಶೋಗೆ ರಾಜಾ ರಾಣಿ ರೀಲೋಡೆಡ್‌ ಎಂದು ಹೆಸರಿಡಲಾಗಿದೆ. ಎಂದಿನಂತೆ, ಸೃಜನ್‌ ಲೋಕೇಶ್‌, ತಾರಾ ಅನುರಾಧಾ ಜತೆಗೆ ಅದಿತಿ ಪ್ರಭುದೇವ ತೀರ್ಪುಗಾರರ ಸ್ಥಾನದಲ್ಲಿದ್ದಾರೆ. ನಿರೂಪಣೆಯನ್ನು ಅನುಪಮಾ ವಹಿಸಿಕೊಂಡಿದ್ದಾರೆ. ಈಗಾಗಲೇ ಈ ಶೋನ ಹಲವು ಪ್ರೋಮೋಗಳು ರಿಲೀಸ್‌ ಆಗಿದ್ದು, ಮೆಚ್ಚುಗೆ ಪಡೆದುಕೊಂಡಿದೆ. ಈಗಾಗಲೇ ದಿವ್ಯಶ್ರೀ ಜಿಜಿ ದಂಪತಿ, ರಂಜಿತಾ ಸೀರುಂಡೆ ರಘು, ಬಿಗ್‌ ಬಾಸ್‌ ಖ್ಯಾತಿಯ ವಿನಯ್‌ ಗೌಡ ಮತ್ತು ಅಕ್ಷತಾ ಸೇರಿ ಇನ್ನೂ ಹಲವು ಜೋಡಿಗಳು ಈ ಸಲದ ಶೋನಲ್ಲಿರಲಿದ್ದಾರೆ. ಇವರ ಜತೆಗೆ ಕರ್ನಾಟಕ ಜೋಡಿಯೂ ಎಲ್ಲರ ಹೈಲೈಟ್.‌

ಹುಣಸೆ ಮರ ಮುಪ್ಪಾದರೆ, ಹುಳಿ ಮುಪ್ಪೇ..

“ನಮಗೆ 51 ವರ್ಷ ಆದಮೇಲೆ ಈ ಕೆಲಸ ಶುರುವಾಗಿದೆ. ಚಿಕ್ಕಚಿಕ್ಕದಾಗಿ ರೀಲ್ಸ್‌ ಮಾಡಿಕೊಂಡಿದ್ವಿ. ಇಲ್ಲಿಯವರೆಗೂ ಬರ್ತಿವಿ ಅಂತ ಅಂದುಕೊಂಡಿರಲಿಲ್ಲ” ಎಂದಿದೆ ಈ ಜೋಡಿ. ಈ ವಯಸ್ಸಲ್ಲೂ ಈ ರೊಮ್ಯಾನ್ಸ್‌ ಹೇಗೆ ಎಂಬ ನಿರೂಪಕಿ ಅನುಪಮಾ ಮಾತಿಗೆ, “ಹುಣಸೆ ಮರ ಮುಪ್ಪಾದರೆ ಹುಳೀ ಮುಪ್ಪೇ” ಎಂಬ ಗಾದೆ ಮಾತನ್ನು ಹೇಳಿ ಅಲ್ಲಿದ್ದವರನ್ನು ನಗಿಸಿದೆ ಈ ಜೋಡಿ. ಅಂದಹಾಗೆ, ಇದೇ ಜೂನ್‌ 8ರಿಂದ ಕಲರ್ಸ್‌ ಕನ್ನಡದಲ್ಲಿ ರಾಜಾ ರಾಣಿ ರೀಲೋಡೆಡ್‌ ರಿಯಾಲಿಟಿ ಶೋ ಶುರುವಾಗಲಿದೆ. ಈ ಮೂಲಕ ನಗುವಿನ ಕಚಗುಳಿ ಇಡುತ್ತ, ತಮ್ಮ ಜೀವನದ ಸಿಹಿ ಕಹಿ ವಿಚಾರಗಳನ್ನು ರಾಜಾ ರಾಣಿ ವೇದಿಕೆ ಮೇಲೆ ಹಂಚಿಕೊಳ್ಳಲಿವೆ ಹಲವು ಜೋಡಿಗಳು.

ಟಿ20 ವರ್ಲ್ಡ್‌ಕಪ್ 2024