Ramachari Serial: ನಾಳೆಯೇ ಬಿಡುಗಡೆಯಾಗ್ತಿದ್ದಾಳೆ ವೈಶಾಖಾ; ಮತ್ತೆ ರಾಮಾಚಾರಿ ಮನೆಯಲ್ಲಿ ಕುರುಕ್ಷೇತ್ರ
ಕನ್ನಡ ಸುದ್ದಿ  /  ಮನರಂಜನೆ  /  Ramachari Serial: ನಾಳೆಯೇ ಬಿಡುಗಡೆಯಾಗ್ತಿದ್ದಾಳೆ ವೈಶಾಖಾ; ಮತ್ತೆ ರಾಮಾಚಾರಿ ಮನೆಯಲ್ಲಿ ಕುರುಕ್ಷೇತ್ರ

Ramachari Serial: ನಾಳೆಯೇ ಬಿಡುಗಡೆಯಾಗ್ತಿದ್ದಾಳೆ ವೈಶಾಖಾ; ಮತ್ತೆ ರಾಮಾಚಾರಿ ಮನೆಯಲ್ಲಿ ಕುರುಕ್ಷೇತ್ರ

Ramachari Serial: ರಾಮಾಚಾರಿ ಮನೆಯಲ್ಲಿ ಅಹಿತಕರ ವಾತಾವರಣ ಸೃಷ್ಟಿ ಆಗುವ ಎಲ್ಲಾ ಸಾಧ್ಯತೆಗಳು ಎದ್ದು ಕಾಣುತ್ತಿದೆ. ಹೀಗಿರುವಾಗ ಮುಂದೇನು ಮಾಡಬೇಕು ಎಂದು ಚಾರು ಆಲೋಚನೆ ಮಾಡಬೇಕಿದೆ. ಆದರೆ ಅವಳಿಗೆ ಈಗ ಬೇರೆ ಮಾರ್ಗವೇ ಇಲ್ಲ. ವೈಶಾಖಾಳನ್ನು ಜೈಲಿಂದ ತರಲೇಬೇಕು.

 ನಾಳೆಯೇ ಬಿಡುಗಡೆಯಾಗ್ತಿದ್ದಾಳೆ ವೈಶಾಖಾ
ನಾಳೆಯೇ ಬಿಡುಗಡೆಯಾಗ್ತಿದ್ದಾಳೆ ವೈಶಾಖಾ

ರಾಮಾಚಾರಿ ಮನೆಯಲ್ಲಿ ಕೋದಂಡನಿಂದ ಅವಾಂತರ ಆಗಿದೆ. ಅವನು ಹೆಂಡತಿ ಇಲ್ಲ ಎಂಬ ಕೊರಗಿನಲ್ಲಿ ನಿತ್ಯವೂ ಕುಡಿದುಕೊಂಡು ಮನೆಗೆ ಬರಲು ಆರಂಭಿಸಿದ್ದಾನೆ. ಅವನಿಗೆ ಇದೆಲ್ಲ ಅಭ್ಯಾಸ ಆಗಿದ್ದು ರುಕ್ಕು ಮಾಡಿದ ಕಿತಾಪತಿಯಿಂದ. ರುಕ್ಕು ಮನೆ ನೆಮ್ಮದಿ ಕೆಡಿಸಬೇಕು ಎಂದು ಕಿಟ್ಟಿಯನ್ನು ಮದುವೆಯಾಗಿ ಬಂದಿದ್ದಾಳೆ, ಬಂದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಅತಿ ವೇಗವಾಗಿ ಮನೆಯ ನೆಮ್ಮದಿಯನ್ನು ಕೆಡಿಸಿಬಿಟ್ಟಿದ್ದಾಳೆ. ಹೀಗಿರುವಾಗ ಇದೆಲ್ಲ ರುಕ್ಕುನಿಂದ ಆಗುತ್ತಿದೆ ಎಂದು ಯಾರಿಗೂ ಗೊತ್ತಿಲ್ಲ.

ಧೈರ್ಯತುಂಬಿದ ರಾಮಾಚಾರಿ

ರುಕ್ಕುಗೆ ಚಾರು ಮೇಲೆ ಮಾತ್ರ ಕೋಪ ಇದ್ದರೂ ಇದು ಇಡೀ ಮನೆಮೇಲೆ ಪರಿಣಾಮ ಬೀರುತ್ತಿದೆ. ರಾಮಾಚಾರಿ ಚಾರು ತ್ಯಾಗವನ್ನು ನೆನಪು ಮಾಡಿಕೊಳ್ಳುತ್ತಿದ್ದಾನೆ. ಈ ಮನೆಯಲ್ಲಿ ಯಾರಿಗೇ ಸಮಸ್ಯೆ ಆದರೂ ನೀವು ನಿಂತು ಪರಿಹರಿಸುತ್ತೀರಾ. ಯಾರಿಗೆ ಏನೇ ಕಷ್ಟ ಆದ್ರೂ ನೀವು ಅಲ್ಲಿರ್ತೀರಾ. ಈಗ ಅಣ್ಣನಿಗೆ ಅತ್ಗೆ ಅವಶ್ಯಕತೆ ಇದೆ ಅಂತ ಹೋಗಿ ಅವರನ್ನು ಬಿಡಿಸಿಕೊಂಡು ಬರಲು ಸಿದ್ಧರಾಗಿದ್ದೀರಾ ಎಂದು ಹೇಳುತ್ತಾನೆ. ಇದೆಲ್ಲವನ್ನು ಗುರುತಿಸಿದ್ದಕ್ಕೆ ಚಾರುಗೆ ಸಂತೋಷವಾಗಿದೆ. ನಾನೂ ನಿಮ್ಮ ಜೊತೆ ಇರ್ತೀನಿ. ನೀವು ಏನು ಕೇಳಿದ್ರೂ ಮಾಡಿಕೊಡ್ತೀನಿ ಎಂದು ಧೈರ್ಯ ಹೇಳಿದ್ದಾನೆ.

ರುಕ್ಕು ಕುತಂತ್ರ
ರುಕ್ಕು ಇಲ್ಲಿಂದಲೇ ವೈಶಾಖಳಿಗೆ ಎಲ್ಲ ಮಾಹಿತಿ ನೀಡುತ್ತಿದ್ದಾಳೆ. ನಾಳೆ ನೀನು ಜೈಲಿನಿಂದ ಹೊರಗಡೆ ಬರ್ತಾ ಇದ್ದೀಯ ಎಂಬ ಮಾಹಿತಿಯನ್ನೂ ಅವಳು ಈಗ ಹೇಳಿಯಾಗಿದೆ. ವೈಶಾಖಾ ತುಂಬಾ ಖುಷಿಯಲ್ಲಿದ್ದಾಳೆ. ಮತ್ತೆ ಆ ಮನೆಗೆ ಹೋಗಿ ನನ್ನ ಶತ್ರುಗಳ ಸಮಾಧಿ ಮೇಲೆ ನಾನು ಎಕ್ಕದ ಗಿಡ ನೆಡ್ತೀನಿ ಎಂದು ಹೇಳುತ್ತಿದ್ದಾಳೆ.

ಹೇಗಿದೆ ಜನಾಭಿಪ್ರಾಯ
ದಿನೇ ದಿನೇ ಧಾರಾವಾಹಿ ಕಥೆಯು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದರೂ ಜನರು ಮೊದಲೇ ಎಲ್ಲವನ್ನೂ ಊಹೆ ಮಾಡುತ್ತಿದ್ದಾರೆ. ಬರಿ ದ್ವೇಷ ಹಾಗೂ ಸೇಡಿನ ಕಥೆಗಳೇ ಹೆಚ್ಚಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಮನೆಗೆ ಬರುವ ಎಲ್ಲಾ ಸೊಸೆಗಳು ಹೀಗೆ ಆಗ್ತಾರಾ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ನೆಕ್ಸ್ಟ್ ಮುರಾರಿ ಮದುವೆ ಅವನು ಮದುವೆ ಆಗೋ ಹುಡುಗಿ ಗು ಒಂದು ಸೇಡು ಇರುತ್ತೆ ಎಂದು ಅನಿಲ್ ಕಾಮೆಂಟ್ ಮಾಡಿದ್ದಾರೆ.

ರಾಮಾಚಾರಿ ಧಾರಾವಾಹಿ

ರಾಮಾಚಾರಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.

ರಾಮಾಚಾರಿ ಧಾರಾವಾಹಿ ಪಾತ್ರವರ್ಗ

ಮೌನ ಗುಡ್ಡೆ ಮನೆ - ಚಾರು

ರಿತ್ವಿಕ್ ಕ್ರಪಾಕರ್ - ರಾಮಾಚಾರಿ

ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)

ಚಿ ಗುರುದತ್ - ಜಯಶಂಕರ್

ಶಂಕರ್ ಅಶ್ವಥ್‌ - ನಾರಾಯಣಾಚಾರಿ

ಐಶ್ವರ್ಯ ವಿನಯ್‌ - ವೈಶಾಖ

ಅಂಜಲಿ ಸುಧಾಕರ್ - ಜಾನಕಿ

Whats_app_banner