ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಪೊಲೀಸ್ ಅಧಿಕಾರಿ ನಡುವೆ ನಡೆದಿದೆ ಎನ್ನಲಾದ ಆಡಿಯೋ ಸಂಭಾಷಣೆ ವೈರಲ್
ಎಂಎಲ್‌ಸಿ ಸಿಟಿ ರವಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಪ್ರಯೋಗ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಸಿಟಿ ರವಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವೆ ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಪೊಲೀಸ್ ಅಧಿಕಾರಿಯೊಬ್ಬರೊಂದಿಗೆ ಮಾತನಾಡಿರುವ ಆಡಿಯೋ ಸಂಭಾಷಣೆಯೊಂದು ವೈರಲ್ ಆಗಿದೆ. ಈ ಆಡಿಯೋದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್, ಪಾಸ್ ಇದ್ದರೂ ಕೂಡಾ ಹೇಗೆ ವಾಹನಗಳನ್ನು ಹಿಡಿದಿದ್ದೀರಿ? ಪಿಎಸ್‌ಐ ಆಗಿ ಈ ರೀತಿ ಮಾಡುತ್ತಿದ್ದೀರಿ, ಇದರಿಂದ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ, ಯಾರ ಬಳಿ ಹೇಳಿಸಬೇಕೆಂದು ನನಗೆ ಗೊತ್ತು, ನೀವು ಬಂದು ನನ್ನನ್ನು ಭೇಟಿ ಮಾಡಿ ಎಂಧು ಧಮ್ಕಿ ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ, ಯಾರೂ ನಮಗೆ ಪಾಸ್ ತೋರಿಸಿಲ್ಲ, ನಮಗೆ ಡಿಸಿ ಆರ್ಡರ್ ಇತ್ತು ನೀವು ಅವರನ್ನು ಕೇಳಿಕೊಳ್ಳಿ, ಹಾಗೇ ನಿಮ್ಮನ್ನು ನಾನು ಏಕೆ ಭೇಟಿ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.