Kannada News  /  Entertainment  /  Ramcharan Tej Is Busy With Series Of Movies
ಆರ್‌ಆರ್‌ಆರ್‌ ಸಿನಿಮಾ ಬಳಿಕ ಸಾಲು ಸಾಲು ಚಿತ್ರಗಳಲ್ಲಿ ರಾಮ್‌ಚರಣ್‌ ಬಿಜಿ..
ಆರ್‌ಆರ್‌ಆರ್‌ ಸಿನಿಮಾ ಬಳಿಕ ಸಾಲು ಸಾಲು ಚಿತ್ರಗಳಲ್ಲಿ ರಾಮ್‌ಚರಣ್‌ ಬಿಜಿ..

Ram charan Teja: ಆರ್‌ಆರ್‌ಆರ್‌ ಸಿನಿಮಾ ಬಳಿಕ ಸಾಲು ಸಾಲು ಚಿತ್ರಗಳಲ್ಲಿ ರಾಮ್‌ಚರಣ್‌ ಬಿಜಿ..

05 February 2023, 16:05 ISTHT Kannada Desk
05 February 2023, 16:05 IST

ಆರ್‌ಆರ್‌ಆರ್‌ ಯಶಸ್ಸಿನ ಬಳಿಕ ಸಾಲು ಸಾಲು ಚಿತ್ರಗಳಲ್ಲಿ ನಟ ರಾಮ್‌ಚರಣ್‌ ಬಿಜಿಯಾಗಿದ್ದಾರೆ. 

Ram charan Teja: ರಾಮ್ ಚರಣ್ ಕ್ರೇಜ್ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಎಸ್. ಎಸ್ ರಾಜಮೌಳಿ ನಿರ್ದೇಶನದ ‘RRR’ ಚಿತ್ರದ ಅಮೋಘ ಅಭಿನಯದ ಮೂಲಕ ರಾಮ್ ಚರಣ್ ಭಾರತವನ್ನು ಜಾಗತಿಕ ಮಟ್ಟದಲ್ಲಿ ಹೆಮ್ಮೆ ಪಡುವಂತೆ ಮಾಡಿದ್ದಾರೆ. RRR ನಂತರ ರಾಮ್ ಚರಣ್ ಕ್ರೇಜ್ ಹಾಗೂ ಅಭಿಮಾನಿ ಬಳಗ ಕೂಡ ದೊಡ್ಡದಾಗಿದ್ದು, ಅವರ ಮುಂದಿನ ಸಿನಿಮಾಗಳಿಗಾಗಿ ಎದುರು ನೋಡುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮೆಗಾ ಪವರ್ ಸ್ಟಾರ್ ಮುಂದಿನ ಸಿನಿಮಾ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿದೆ. ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ ಸಿನಿಮಾದಲ್ಲಿ ರಾಮ್ ಚರಣ್ ನಟಿಸುತ್ತಿದ್ದಾರೆ. ಇಬ್ಬರ ಕಾಂಬಿನೇಶನ್ ಮೇಲೆ ಮೆಗಾ ಫ್ಯಾಮಿಲಿ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಿಗ್ ಬಜೆಟ್ ನಲ್ಲಿ ಆಕ್ಷನ್ ಎಂಟರ್ಟೈನರ್ ಸಬ್ಜೆಕ್ಟ್ ಸಿನಿಮಾ ನಿರ್ಮಾಣವಾಗುತ್ತಿದೆ.

ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ರಾಮ್ ಚರಣ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಇದೇ ವರ್ಷ ಸಿನಿಮಾ ಬಿಡುಗಡೆಯಾಗುವ ಸಾದ್ಯತೆಯೂ ಇದೆ. ಸದ್ಯದ್ಲಲೇ ಈ ಚಿತ್ರದ ಟೈಟಲ್ ಕೂಡ ರಿವೀಲ್ ಆಗಲಿದೆ. ಖ್ಯಾತ ನಿರ್ಮಾಪಕ ದಿಲ್ ರಾಜು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ನಡಿ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

ಈ ಸಿನಿಮಾ ನಂತರ ಬುಚ್ಚಿ ಬಾಬು ಸನಾ ನಿರ್ದೇಶನದಲ್ಲಿ ವೆಂಕಟ ಸತೀಶ್ ಕಿಲಾರು ನಿರ್ಮಾಣದ ಚಿತ್ರದಲ್ಲಿ ರಾಮ್ ಚರಣ್ ನಟಿಸುತ್ತಿದ್ದಾರೆ. ಜೆರ್ಸಿ ಸಿನಿಮಾ ಖ್ಯಾತಿಯ ಗೌತಮ್ ತಿನ್ನನೂರಿ ಸಿನಿಮಾಗೂ ಮೆಗಾ ಪವರ್ ಸ್ಟಾರ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಒಟ್ನಲ್ಲಿ, ಆರ್ ಆರ್ ಆರ್ ಬಾಕ್ಸ್ ಆಫೀಸ್ ನಲ್ಲೂ ದಾಖಲೆ ಬರೆಯುವುದರ ಜೊತೆಗೆ ಮೆಗಾ ಪವರ್ ಸ್ಟಾರ್ ಕೆರಿಯರ್‌ಗೂ ಹೊಸ ಮೆರಗು ನೀಡಿದೆ.

ಈ ಸಿನಿಮಾ ಸುದ್ದಿಗಳನ್ನೂ ಓದಿ

ಮಗನಿಗೆ ತೋಳ್ಬಲ ತೋರಿಸಿದ ಯಶ್!; ನಾನೇನ್‌ ಕಮ್ಮೀನಾ ಎಂದ ಪುತ್ರ ಯಥರ್ವ ಸುಮ್ಮನಿರ್ತಾನಾ? VIDEO ನೋಡಿ

Yash playing with son: ಸ್ಯಾಂಡಲ್‌ವುಡ್‌ನ ರಾಕಿಂಗ್‌ ಸ್ಟಾರ್‌ ಯಶ್‌ ಸದ್ಯ ತೆರೆಮರೆಯಲ್ಲಿಯೇ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ತಾವೇನು ಮಾಡುತ್ತಿದ್ದೇನೆ ಎಂಬ ಗುಟ್ಟು ಬಿಟ್ಟುಕೊಡದ ಯಶ್‌, ಸದ್ಯ ಬೆಂಗಳೂರಿನಲ್ಲಿಯೇ ಇದ್ದಾರೆ. ಜಿಮ್‌, ವರ್ಕೌಟ್‌, ಫ್ಯಾಮಿಲಿ, ಮಕ್ಕಳೊಡನೆ ಕ್ವಾಲಿಟಿ ಟೈಮ್‌ ಕಳೆಯುತ್ತಿದ್ದಾರೆ. ಈ ನಡುವೆ ಮನೆ ಬಳಿ ತಮ್ಮನ್ನು ಹುಡುಕಿಕೊಂಡು ಬರುತ್ತಿರುವ ಸಾವಿರಾರು ಅಭಿಮಾನಿಗಳಿಗೆ ತಾಳ್ಮೆಯಿಂದಲೇ ಫೋಟೋಕ್ಕೆ ಪೋಸ್‌ ನೀಡುತ್ತಿದ್ದಾರೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ..

Dhananjaya Hoysala Glimpse: ಉತ್ತರ ಕರ್ನಾಟಕದ ಗತ್ತು, ಧನಂಜಯ್‌ ಗಮ್ಮತ್ತು; ಇದು ‘ಹೊಯ್ಸಳ’ ಗುರುದೇವನ ತಾಕತ್ತು.. ಹೀಗಿದೆ ಟೀಸರ್

Dhananjaya Hoysala Glimpse: ಸ್ಯಾಂಡಲ್‌ವುಡ್‌ನ ಡಾಲಿ ಧನಂಜಯ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ‘ಹೊಯ್ಸಳ’ ಚಿತ್ರದ ಪ್ರಚಾರ ಕಾರ್ಯಕ್ಕೆ ಚಿತ್ರತಂಡ ಚಾಲನೆ ನೀಡಿದೆ. ಮೊದಲಾರ್ಥವಾಗಿ ಚಿತ್ರದ ಕಿರು ವಿಡಿಯೋ ಗ್ಲಿಂಪ್ಸ್‌ ರಿಲೀಸ್‌ ಆಗಿದೆ. ಖಡಕ್‌ ಖಾಕಿ ತೊಟ್ಟು ಧನಂಜಯ್‌ ಅಬ್ಬರಿಸಿದ್ದಾರೆ. ಮಾಸ್‌ ಸೀನ್‌ಗಳ ಜತೆಗೆ ಉತ್ತರ ಕರ್ನಾಟಕದ ಝಲಕ್‌ ಕೂಡ ಗ್ಲಿಂಪ್ಸ್‌ನಲ್ಲಿ ಕಾಣಿಸುತ್ತಿದೆ. ವಿಶೇಷ ಏನೆಂದರೆ ಆ ಕಿರು ವಿಡಿಯೋವನ್ನು ದಕ್ಷಿಣದ ನಾಲ್ಕು ಸ್ಟೇಟ್‌ನ ಸೆಲೆಬ್ರಿಟಿ ಪೊಲೀಸ್‌ ಆಫೀಸರ್ಸ್‌ ರಿಲೀಸ್‌ ಮಾಡಿ ಕೈ ಜೋಡಿಸಿದ್ದಾರೆ! ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ..