ನಟ ದರ್ಶನ್‌ ಇಂದು ಆಸ್ಪತ್ರೆಗೆ ದಾಖಲು, ಬೆನ್ನು ಹುರಿ ಚಿಕಿತ್ಸೆಗೆ 6 ವಾರದ ಜಾಮೀನು ಅವಧಿ ಸಾಕಾಗುವುದೇ? ಚಿಕಿತ್ಸೆ ವಿವರ ಹಂಚಿಕೊಂಡ ಡಾಕ್ಟರ್‌
ಕನ್ನಡ ಸುದ್ದಿ  /  ಮನರಂಜನೆ  /  ನಟ ದರ್ಶನ್‌ ಇಂದು ಆಸ್ಪತ್ರೆಗೆ ದಾಖಲು, ಬೆನ್ನು ಹುರಿ ಚಿಕಿತ್ಸೆಗೆ 6 ವಾರದ ಜಾಮೀನು ಅವಧಿ ಸಾಕಾಗುವುದೇ? ಚಿಕಿತ್ಸೆ ವಿವರ ಹಂಚಿಕೊಂಡ ಡಾಕ್ಟರ್‌

ನಟ ದರ್ಶನ್‌ ಇಂದು ಆಸ್ಪತ್ರೆಗೆ ದಾಖಲು, ಬೆನ್ನು ಹುರಿ ಚಿಕಿತ್ಸೆಗೆ 6 ವಾರದ ಜಾಮೀನು ಅವಧಿ ಸಾಕಾಗುವುದೇ? ಚಿಕಿತ್ಸೆ ವಿವರ ಹಂಚಿಕೊಂಡ ಡಾಕ್ಟರ್‌

ಕನ್ನಡ ನಟ ದರ್ಶನ್‌ಗೆ ಇತ್ತೀಚೆಗೆ ಕೋರ್ಟ್‌ ಮಧ್ಯಂತರ ಜಾಮೀನು ನೀಡಿದೆ. ಬೆನ್ನು ನೋವಿಗೆ ಚಿಕಿತ್ಸೆ ನೀಡುವ ವಿಧಾನ, ಬೆನ್ನು ನೋವಿನ ವಿವರಗಳನ್ನು ಆರ್ಥೋಪೆಡಿಕ್ ಸರ್ಜನ್ ಡಾ. ವಾಸುದೇವ್‌ ಪ್ರಭು ಹಂಚಿಕೊಂಡಿದ್ದಾರೆ. ಬೆನ್ನು ನೋವಿನ ಚಿಕಿತ್ಸೆಗೆ 6 ವಾರಗಳ ಅವಧಿ ಸಾಕಾಗುವುದೇ ಎನ್ನುವ ಪ್ರಶ್ನೆ ಉಂಟಾಗಿದೆ.

6 ವಾರಗಳ ಮಧ್ಯಂತರ ಜಾಮೀನು ಅವಧಿ ನಟ ದರ್ಶನ್‌ ಶಸ್ತ್ರಚಿಕಿತ್ಸೆಗೆ ಸಾಕಾಗದು ಎಂದ ಡಾಕ್ಟರ್‌
6 ವಾರಗಳ ಮಧ್ಯಂತರ ಜಾಮೀನು ಅವಧಿ ನಟ ದರ್ಶನ್‌ ಶಸ್ತ್ರಚಿಕಿತ್ಸೆಗೆ ಸಾಕಾಗದು ಎಂದ ಡಾಕ್ಟರ್‌

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಿಂದ ಮಧ್ಯಂತರ ಜಾಮೀನು ಪಡೆದಿರುವ ನಟ ದರ್ಶನ್‌ ಇಂದು ಆಸ್ಪತ್ರಗೆ ದಾಖಲಾಗಿ ಚಿಕಿತ್ಸೆ ಪಡೆಯಲಿದ್ದಾರೆ. ಕನ್ನಡ ನಟ ದರ್ಶನ್‌ಗೆ ಬೆನ್ನು ನೋವು ಇರುವ ಕಾರಣ ಬೆನ್ನಿನ ತಪಾಸಣೆ ನಡೆಸಬೇಕಿದೆ. ಬೆಳಗ್ಗೆ ಮತ್ತು ಸಂಜೆ ಫಿಜಿಯೋಥೆರಪಿ ನಡೆಸಲಾಗುತ್ತದೆ. ಅದು ಪ್ರಯೋಜನವಾಗಿಲ್ಲ. ಆಲ್ಟ್ರಾಸೌಂಡ್‌ ಥೆರಪಿ ಮತ್ತು ಐಎಫ್‌ಡಿ ಥೆರಪಿಯನ್ನು ಬಳ್ಳಾರಿ ಜೈಲಿನಲ್ಲಿ ಕೊಡಲಾಗಿರಲಿಲ್ಲ. ಅದನ್ನು ಈಗ ಕೊಡಬೇಕಾಗುತ್ತದೆ. ಸ್ಟ್ರೆಚ್ಚಿಂಗ್‌ ವ್ಯಾಯಾಮ ಮಾಡಬೇಕಾಗುತ್ತದೆ. ಇದನ್ನು ಈಗಾಗಲೇ ಫಿಜಿಯೋಥೆರಪಿಯವರೇ ಮಾಡಿಸಿದ್ದಾರೆ. ಬೆನ್ನು ನೋವು ಮತ್ತು ನರಗಳು ರಿಲಾಕ್ಸ್‌ ಆಗಲು ಮಾತ್ರೆ ನೀಡುತ್ತಾರೆ. ಫಿಜಿಯೋಥೆರಪಿಯಲ್ಲಿ ಕಡಿಮೆಯಾಗದೆ ಇದ್ದರೆ ಆಪರೇಷನ್‌ಗೆ ಸಲಹೆ ನೀಡಲಾಗುತ್ತದೆ. ಈಗ ಫಿಜಿಯೋಥೆರಪಿ ವರ್ಕ್‌ ಆಗಿಲ್ಲ ಎಂದು ಆಪರೇಷನ್‌ಗೆ ಸಲಹೆ ನೀಡಲಾಗಿದೆ. ಆಪರೇಷನ್‌ ಆದ ಬಳಿಕ ಕೆಲವು ದಿನ ವಿಶ್ರಾಂತಿ ನೀಡಬೇಕಾಗುತ್ತದೆ. ಎಷ್ಟು ದಿನ ವಿಶ್ರಾಂತಿ ಬೇಕು ಎನ್ನುವುದನ್ನು ಕೋರ್ಟಿಗೆ ಸಲ್ಲಿಸಬೇಕಾಗುತ್ತದೆ. ಇದಾದ ಬಳಿಕ ಆರು ವಾರ ಮಧ್ಯಂತರ ಜಾಮೀನು ಸಾಕಾಗುತ್ತದೆಯೇ, ಇನ್ನೂ ಹೆಚ್ಚಿನ ದಿನ ಬೇಕಾಗುತ್ತದೆಯೇ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ ಎಂದು ಪಬ್ಲಿಕ್‌ ಟಿವಿ ವರದಿ ಮಾಡಿದೆ.

ಬೆನ್ನು ನೋವಿನ ಚಿಕಿತ್ಸೆ ಕುರಿತು ಆರ್ಥೋಪೆಡಿಕ್ ಸರ್ಜನ್ ಅಭಿಪ್ರಾಯ

ಈ ಸಮಯದಲ್ಲಿ ಆರ್ಥೋಪೆಡಿಕ್ ಸರ್ಜನ್ ಡಾ. ವಾಸುದೇವ್‌ ಪ್ರಭು ಅವರ ಅಭಿಪ್ರಾಯವನ್ನು ವಾಹಿನಿ ಪಡೆದುಕೊಂಡಿದೆ. ಡಾಕ್ಟರ್‌ ಈ ಕುರಿತು ಹೀಗೆ ಮಾಹಿತಿ ನೀಡಿದ್ದಾರೆ. “ಸಾಮಾನ್ಯವಾಗಿ 45 ವರ್ಷದವರಲ್ಲಿ ಮೂರು ರೀತಿಯ ಬೆನ್ನು ನೋವು ಇರುತ್ತದೆ. ಒಂದು ಡಿಸ್ಕ್‌, ಎರಡು ಲಿಸ್ತಾನಿಸಿಸ್‌, ಮೂರನೆಯದ್ದು ಸ್ಟಿನೋಸಿಸ್‌. ಇದರಲ್ಲಿ ಸಿಂಪಲ್‌ ಆಗಿರೋದು ಡಿಸ್ಕ್‌ ಅಂದರೆ ಬೆನ್ನು ಮೂಳೆಯಲ್ಲಿನ ಒತ್ತಡದಿಂದ ಬರುವಂತಹ ನೋವು. ಸ್ಟಿನೋಸಿಸ್‌ ಅಂದರೆ ಬೆನ್ನು ಮೂಳೆಯಲ್ಲಿ ನೀರಿನಾಂಶ ಕಡಿಮೆಯಾಗಿ ಮೂಳೆ ಜರುಗುವುದು. ಲಿಸ್ಟನಿಸಿಸ್‌ ಅಂದರೆ ಬೆನ್ನು ಬಾಗುವುದು, ಒಂದು ಮೂಳೆ ಮತ್ತೊಂದು ಮೂಳೆ ಮೇಲೆ ಜರುಗುವುದು. ಇದರಿಂದಲೂ ನರದ ಮೇಲೆ ಒತ್ತಡ ಉಂಟಾಗುತ್ತದೆ.” ಎಂದು ಡಾಕ್ಟರ್‌ ವಿವರಿಸಿದ್ದಾರೆ.

"ದರ್ಶನ್‌ ಅವರ ಬೆನ್ನಿನ ಸ್ಥಿತಿಗೆ ಏನು ಕಾರಣ ಎಂದು ತಿಳಿಯಬೇಕು. ಅದಕ್ಕೆ ತಕ್ಕಂತೆ ಚಿಕಿತ್ಸೆ ಇರುತ್ತದೆ. ವ್ಯಾಯಾಮ ಶುರು ಮಾಡಿದ ನಂತರ ಇಂಪ್ರೂವ್‌ಮೆಂಟ್‌ ನೋಡಲು ಆರು ವಾರ ಬೇಕಾಗಬಹುದು. ಎಲ್ಲಾ ಪೇಷೆಂಟ್‌ಗೂ ನಾವು ಮೊದಲ ಕನ್ವರ್ವೇಟಿವ್‌ ಟ್ರೀಟ್‌ಮೆಂಟ್‌ ಟ್ರೈ ಮಾಡ್ತೀವಿ. ಇದು ವರ್ಕ್‌ ಆಗಿಲ್ಲ ಎಂದಾದರೆ ಮಾತ್ರ ನಾವು ಶಸ್ತ್ರಚಿಕಿತ್ಸೆ ಮಾಡುತ್ತೇವೆ. ಎಲ್ಲದಕ್ಕೂ ಶಸ್ತ್ರಚಿಕಿತ್ಸೆಯೇ ಉತ್ತರವಲ್ಲ. ಕಾರಣ ಏನೆಂದು ತಿಳಿದು ಅದಕ್ಕೆ ತಕ್ಕಂತೆ ಟ್ರೀಟ್‌ಮೆಂಟ್‌ ನೀಡಲಾಗುತ್ತದೆ" ಎಂದು ಆರ್ಥೋಪೆಡಿಕ್ ಸರ್ಜನ್ ಡಾ. ವಾಸುದೇವ್‌ ಪ್ರಭು ಹೇಳಿದ್ದಾರೆ.

Whats_app_banner