ಮೂತ್ರನಾಳದಲ್ಲಿ ಮಲ, ಅಪರೂಪದ ರೆಕ್ಟೊವೆಜೈನಲ್‌ ಫಿಸ್ತುಲಾದಿಂದ ಬಳಲುತ್ತಿದ್ದ 30 ವರ್ಷದ ಮಹಿಳೆಗೆ ಚಿಕಿತ್ಸೆ ನೀಡಿದ ಬೆಂಗಳೂರು ಡಾಕ್ಟರ್‌
ಕನ್ನಡ ಸುದ್ದಿ  /  ಜೀವನಶೈಲಿ  /  ಮೂತ್ರನಾಳದಲ್ಲಿ ಮಲ, ಅಪರೂಪದ ರೆಕ್ಟೊವೆಜೈನಲ್‌ ಫಿಸ್ತುಲಾದಿಂದ ಬಳಲುತ್ತಿದ್ದ 30 ವರ್ಷದ ಮಹಿಳೆಗೆ ಚಿಕಿತ್ಸೆ ನೀಡಿದ ಬೆಂಗಳೂರು ಡಾಕ್ಟರ್‌

ಮೂತ್ರನಾಳದಲ್ಲಿ ಮಲ, ಅಪರೂಪದ ರೆಕ್ಟೊವೆಜೈನಲ್‌ ಫಿಸ್ತುಲಾದಿಂದ ಬಳಲುತ್ತಿದ್ದ 30 ವರ್ಷದ ಮಹಿಳೆಗೆ ಚಿಕಿತ್ಸೆ ನೀಡಿದ ಬೆಂಗಳೂರು ಡಾಕ್ಟರ್‌

Rectovaginal fistula: ಗುದನಾಳದ ರಕ್ತಸ್ರಾವ, ಕೀವು ವಿಸರ್ಜನೆ ಮತ್ತು ಯೋನಿ ದ್ವಾರದ ಮೂಲಕ ಮಲ ಹಾದುಹೋಗುವಂಥ ತೀವ್ರ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದ ರೋಗಿಗೆ ಬೆಂಗಳೂರು ವೈದ್ಯಕೀಯ ತಂಡವೊಂದು ಯಶಸ್ವಿ ಚಿಕಿತ್ಸೆ ನೀಡಿದೆ.

ಅಪರೂಪದ ರೆಕ್ಟೊವೆಜೈನಲ್‌ ಫಿಸ್ತುಲಾ ಮಾಹಿತಿ
ಅಪರೂಪದ ರೆಕ್ಟೊವೆಜೈನಲ್‌ ಫಿಸ್ತುಲಾ ಮಾಹಿತಿ

Rectovaginal fistula: ಗುದನಾಳ ಮತ್ತು ಯೋನಿಯ ನಡುವಿನ ಅಸಹಜ ಸಂಪರ್ಕದಿಂದಾಗಿ ಉಂಟಾಗುವ ರೆಕ್ಟೊವೆಜೈನಲ್‌ ಫಿಸ್ತುಲಾದ ಅತ್ಯಂತ ಸವಾಲಿನ ಆರೋಗ್ಯ ಸಮಸ್ಯೆಯೊಂದಕ್ಕೆ ಬೆಂಗಳೂರಿನ ಹೀಲಿಂಗ್ ಹ್ಯಾಂಡ್ಸ್ ಕ್ಲಿನಿಕ್‌ನ ತಜ್ಞರ ತಂಡವು ಯಶಸ್ವಿ ಚಿಕಿತ್ಸೆ ನಡೆಸಿದೆ. ಮೈಸೂರಿನ 30 ವರ್ಷದ ಶಿಕ್ಷಕಿ ನೇಹಾ (ಹೆಸರು ಬದಲಾಯಿಸಲಾಗಿದೆ) ಅವರು ವಿಫಲ ಶಸ್ತ್ರಚಿಕಿತ್ಸೆಗಳಿಂದ ಏಳು ವರ್ಷಗಳ ಕಾಲ ಅನುಭವಿಸಿದ ನೋವಿಗೆ ಇದೀಗ ಪರಿಹಾರ ಕಂಡುಕೊಂಡಿದ್ದಾರೆ.

ನೇಹಾ ಅವರ ಸಂಕೀರ್ಣ ಸ್ಥಿತಿಗೆ ಅನೇಕ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದರು. ಹೀಗಾಗಿ ಅವರನ್ನು ಆಗಸ್ಟ್ 2023 ರಲ್ಲಿ ಬೆಂಗಳೂರಿನ ಹೀಲಿಂಗ್ ಹ್ಯಾಂಡ್ಸ್ ಕ್ಲಿನಿಕ್‌ಗೆ ಕರೆತರಲಾಗಿತ್ತು. ನೇಹಾ ಅವರಿಗೆ ಸಮಸ್ಯೆ ಶುರುವಾಗಿದ್ದು 2017ರಲ್ಲಿ, ಗುದನಾಳದಲ್ಲಿ ರಕ್ತಸ್ರಾವ ಜತೆಗೆ ಮಲ ಯೋನಿ ದ್ವಾರದ ಮೂಲಕ ಹಾದುಹೋಗಲು ಪ್ರಾರಂಭಿಸಿತ್ತು. ನಾಲ್ಕು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರೂ ಮುಂದಿನ ವರ್ಷಗಳಲ್ಲಿ ಅವರ ಆರೋಗ್ಯ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿತ್ತು.

"ನೇಹಾ ಅವರ ಸ್ಥಿತಿಯ ತೀವ್ರತೆ ಮತ್ತು ಅವರು ಅನುಭವಿಸುತ್ತಿರುವ ನೋವನ್ನು ನಾವು ಕಂಡುಕೊಂಡೆವು. ಅನೇಕ ವಿಫಲ ಶಸ್ತ್ರಚಿಕಿತ್ಸೆಗಳು ಅವಳ ಗುದದ ಸ್ಪಿಂಕ್ಟರ್ ಸ್ನಾಯುಗಳನ್ನು ದುರ್ಬಲಗೊಳಿಸಿದ್ದವು. ಪರಿಣಾಮವಾಗಿ ಸಂಯಮ ಶಕ್ತಿ ಕಡಿಮೆಯಾಗಿತ್ತು. ಒಳಗಿನ ಹುಣ್ಣುಗಳು ಮತ್ತು ಸಂಕೀರ್ಣಗೊಂಡಿದ್ದ ಫಿಸ್ತುಲಾ ನಾಳಗಳು ಅವರ ಪ್ರಕರಣವನ್ನು ಹೆಚ್ಚು ಸವಾಲಿನದ್ದಾಗಿಸಿದವು. ಸುಧಾರಿತ 3ಡಿ ಎಂಡೋ ಅನಲ್ ಇಮೇಜಿಂಗ್ ಮತ್ತು ವಿಶೇಷ ಶಸ್ತ್ರಚಿಕಿತ್ಸಾ ತಂತ್ರಗಳ ಸಹಾಯದಿಂದ ನೇಹಾ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಈ ವೈದ್ಯಕೀಯ ಕಾರ್ಯವಿಧಾನ ಯಶಸ್ವಿಯಾಯಿತು, ನೇಹಾಗೆ ಅವರು ಅನೇಕ ವರ್ಷಗಳಿಂದ ಹುಡುಕುತ್ತಿದ್ದ ಸಮಸ್ಯೆಗೆ ಪರಿಹಾರ ಸಿಕ್ಕಿತು,'' ಎಂದು ಹೀಲಿಂಗ್ ಹ್ಯಾಂಡ್ಸ್ ಕ್ಲಿನಿಕ್‌ನ ಕನ್ಸಲ್ಟೆಂಟ್ ಪ್ರೊಕ್ಟೋಸರ್ಜನ್ ಡಾ.ವೆಂಕಟೇಶನ್ ಮಾಹಿತಿ ನೀಡಿದ್ದಾರೆ.

"ಫಿಸ್ತುಲಾಗಳು ಸೂಕ್ಷ್ಮ ಮತ್ತು ಸಂಕೀರ್ಣವಾದಾಗ, ಒಳಗಿನ ನಾಳಗಳು ಮತ್ತು ಸೂಕ್ಷ್ಮ ಗುಳ್ಳೆಗಳನ್ನು ಗುರುತಿಸುವುದು ನಿರ್ಣಾಯಕ ಸಂಗತಿಯಾಗಿರುತ್ತದೆ. ಸರಿಯಾದ ರೋಗನಿರ್ಣಯವಿಲ್ಲದಿದ್ದರೆ ಅವುಗಳು ಪುನರಾವರ್ತನೆಯಾಗುತ್ತಲೇ ಇರುತ್ತವೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸ್ಪಿಂಕ್ಟರ್ ಸ್ನಾಯುವಿಗೆ ಹಾನಿಯಾಗುವುದನ್ನು ತಪ್ಪಿಸುವುದೇ ದೀರ್ಘಕಾಲೀನ ಯಶಸ್ಸಿಗೆ ಪ್ರಮುಖ ಅಂಶ " ಎಂದು ಡಾ. ಸೇಥ್ ಹೇಳಿದ್ದಾರೆ.

“ನೇಹಾ ಸೆಪ್ಟೆಂಬರ್ 16, 2024ರಂದು ಅಂತಿಮ ಪರೀಕ್ಷೆಗಾಗಿ ಹೀಲಿಂಗ್ ಹ್ಯಾಂಡ್ಸ್ ಕ್ಲಿನಿಕ್‌ಗೆ ಬಂದಿದ್ದರು. ಆಕೆಯ ವೈದ್ಯರು ಅವಳ ಪ್ರಗತಿ ಪರಿಶೀಲಿಸಿದರು ಮತ್ತು ಅವರು ಈಗ ತನ್ನ ಹಿಂದಿನ ಸ್ಥಿತಿಯಿಂದ ಸಂಪೂರ್ಣವಾಗಿ ಪರಿಹಾರ ಪಡೆದುಕೊಂಡಿದ್ದಾರೆ” ಎಂದು ಅವರು ಮಾಹಿತಿ ನೀಡಿದ್ದಾರೆ.

Whats_app_banner