ಕನ್ನಡ ಸುದ್ದಿ  /  ಮನರಂಜನೆ  /  ಅಮ್ಮ ಹುಡುಕಿದ ಹುಡುಗನನ್ನೇ ವರಿಸುತ್ತಿದ್ದಾರೆ ‘ಟಗರು ಪುಟ್ಟಿ’ ಮಾನ್ವಿತಾ ಕಾಮತ್;‌ ಹೀಗಿದೆ ಮದುವೆ ದಿನಾಂಕ, ಸ್ಥಳದ ಮಾಹಿತಿ

ಅಮ್ಮ ಹುಡುಕಿದ ಹುಡುಗನನ್ನೇ ವರಿಸುತ್ತಿದ್ದಾರೆ ‘ಟಗರು ಪುಟ್ಟಿ’ ಮಾನ್ವಿತಾ ಕಾಮತ್;‌ ಹೀಗಿದೆ ಮದುವೆ ದಿನಾಂಕ, ಸ್ಥಳದ ಮಾಹಿತಿ

ಸ್ಯಾಂಡಲ್‌ವುಡ್‌ ನಟಿ, ಟಗರು ಪುಟ್ಟಿ ಮಾನ್ವಿತಾ ಕಾಮತ್‌ ಒಂಟಿ ಬದುಕಿಗೆ ಬೈ ಬೈ ಹೇಳುವ ನಿರ್ಧಾರಕ್ಕೆ ಬಂದಿದ್ದಾರೆ. ಅಂದರೆ, ಅಮ್ಮ ನಿಶ್ಚಯ ಮಾಡಿದ ಹುಡುಗನನ್ನೇ ವರಿಸಲು ಸಿದ್ಧರಾಗಿದ್ದಾರೆ. ಇನ್ನೇನು ಮೇ 1ಕ್ಕೆ ಮದುವೆಯೂ ನೆರವೇರಲಿದೆ.

ಅಮ್ಮ ಹುಡುಕಿದ ಹುಡುಗನನ್ನೇ ವರಿಸುತ್ತಿದ್ದಾರೆ ‘ಟಗರು ಪುಟ್ಟಿ’ ಮಾನ್ವಿತಾ ಕಾಮತ್;‌ ಹೀಗಿದೆ ಮದುವೆ ದಿನಾಂಕ, ಸ್ಥಳದ ಮಾಹಿತಿ
ಅಮ್ಮ ಹುಡುಕಿದ ಹುಡುಗನನ್ನೇ ವರಿಸುತ್ತಿದ್ದಾರೆ ‘ಟಗರು ಪುಟ್ಟಿ’ ಮಾನ್ವಿತಾ ಕಾಮತ್;‌ ಹೀಗಿದೆ ಮದುವೆ ದಿನಾಂಕ, ಸ್ಥಳದ ಮಾಹಿತಿ

Manvita Kamat Wedding: ಸ್ಯಾಂಡಲ್‌ವುಡ್‌ ನಟಿ, ಟಗರು ಪುಟ್ ಮಾನ್ವಿತಾ ಕಾಮತ್‌ ಸದ್ಯ ಒಪ್ಪಿಕೊಂಡ ಸಿನಿಮಾಗಳ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಈ ನಡುವೆ ಬಾಳ ಬಂಧನಕ್ಕೆ ಬಲಗಾಲಿಡಲೂ ಸಿದ್ಧರಾಗಿದ್ದಾರೆ. ಅಷ್ಟೇ ಅಲ್ಲ ಈಗಾಗಲೇ ಮದುವೆ ದಿನಾಂಕವೂ ನಿಕ್ಕಿ ಆಗಿದ್ದು, ಆಪ್ತರಿಗೆ ಮದುವೆ ಊಟ ಹಾಕಿಸಲಿದ್ದಾರೆ ಮಾನ್ವಿತಾ. ಹಾಗಾದರೆ, ಮಾನ್ವಿತಾ ಮದುವೆ ಆಗುತ್ತಿರುವ ಹುಡುಗ ಯಾರು? ಈ ಪ್ರಶ್ನೆಗೆ ಸ್ವತಃ ಮಾನ್ವಿತಾ ಕಡೆಯಿಂದಲೇ ಉತ್ತರ ಹೊರಬಿದ್ದಿದೆ.

ಟ್ರೆಂಡಿಂಗ್​ ಸುದ್ದಿ

ಕಳೆದ ವರ್ಷವಷ್ಟೇ ಮಾನ್ವಿತಾ ಕಾಮತ್‌ ಅವರಿಗೆ ಮಾತೃ ವಿಯೋಗವಾಗಿತ್ತು. ತಾಯಿ ನಿಧನಕ್ಕೂ ಮುನ್ನ, ಮಗಳ ಮದುವೆಯನ್ನು ಕಣ್ತಂಬಿಕೊಳ್ಳುವ ಕನಸು ಕಂಡಿದ್ದರು. ಆದರೆ, ಅದು ಈಡೇರಲಿಲ್ಲ. ಈ ನಡುವೆ ತಾವು ಬದುಕಿದ್ದಾಗಲೇ, ಮಗಳಿಗೆಂದು ಒಳ್ಳೊಳ್ಳೆ ಗಂಡು ಹುಡುಕುವ ಕೆಲಸದಲ್ಲೂ ತೊಡಗಿಸಿಕೊಂಡಿದ್ದರು. ಹೀಗಿರುವಾಗಲೇ ಅರುಣ್‌ ಕುಮಾರ್‌ ಅವರ ತಾಯಿ ಶಾಲಿನಿ ಅವರ ಜತೆ ಮಾತನಾಡಿ, ವಾಟ್ಸಾಪ್‌ ಮೂಲಕ ಮಾನ್ವಿತಾ ಅವರ ಫೋಟೋ ರವಾನಿಸಿದ್ದರು. ಹಾಗೆ ಸಾಗಿದ ಮಾತುಕತೆ ಈಗ ಮದುವೆವರೆಗೆ ಬಂದು ನಿಂತಿದೆ.

ಮೇ. 1ಕ್ಕೆ ಮಂಗಳೂರಲ್ಲಿ ಮದುವೆ

ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ ಮ್ಯೂಸಿಕ್‌ ಪ್ರೊಡ್ಯೂಸರ್‌ ಆಗಿ ಗುರುತಿಸಿಕೊಂಡಿರುವ ಅರುಣ್‌ ಕುಮಾರ್‌ ಅವರ ಜತೆಗೆ ಮಾನ್ವಿತಾ ಮದುವೆ ನಿಶ್ಚಯವಾಗಿದೆ. ಹಾಗಾದರೆ ಮದುವೆ ಯಾವಾಗ? ಮೇ 1 ರಂದು ಗೌಡ ಸಾರಸ್ವತ ಬ್ರಾಹ್ಮಣ ಕೊಂಕಣಿ ಶೈಲಿಯಲ್ಲಿ ಈ ಜೋಡಿಯ ಕಲ್ಯಾಣ ಜರುಗಲಿದೆ. ಏ. 29ರಂದು ಅರಿಶಿಣ ಶಾಸ್ತ್ರ ನೆರವೇರಿದರೆ, ಏಪ್ರಿಲ್‌ 30ರಂದು ಸಂಗೀತ್‌ ಕಾರ್ಯಕ್ರಮ ಇರಲಿದೆ. ಇದಾದ ಬಳಿಕ ಮೇ 1ಕ್ಕೆ ಮಂಗಳೂರಿನಲ್ಲಿ ಮದುವೆ ನಡೆಯಲಿದೆ.

ಹಲವು ಸಿನಿಮಾಗಳಲ್ಲಿ ನಟನೆ

ಸ್ಯಾಂಡಲ್‌ವುಡ್‌ನಲ್ಲಿ ದುನಿಯಾ ಸೂರಿ ನಿರ್ದೇಶನದ ಕೆಂಡಸಂಪಿಗೆ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದ ಮಾನ್ವಿತಾ, ಅದಾದ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದರು. ಚೌಕ, ಕನಕ ಸಿನಿಮಾಗಳಲ್ಲಿ ನಟಿಸಿದರು. ಆ ಪೈಕಿ ಟಗರು ಸಿನಿಮಾದಿಂದ ಒಳ್ಳೆಯ ಬ್ರೇಕ್‌ ಪಡೆದುಕೊಂಡ ಮಾನ್ವಿತಾ, ಟಗರು ಪುಟ್ಟಿ ಎಂದೇ ಖ್ಯಾತಿ ಪಡೆದರು. ಅದಾದ ಬಳಿಕ ಹಲವು ಸಿನಿಮಾಗಳಲ್ಲೂ ಕಾಣಿಸಿಕೊಂಡರು. ಸದ್ಯ ಕನ್ನಡ ಮತ್ತು ಮರಾಠಿಯಲ್ಲಿ ನಿರ್ಮಾಣವಾಗಿರುವ ರಾಜಸ್ತಾನ ಡೈರೀಸ್‌ ಮತ್ತು ಹ್ಯಾಪಿಲಿ ಮ್ಯಾರೀಡ್‌ ಸಿನಿಮಾಗಳಲ್ಲಿಯೂ ನಟಿಸಿದ್ದು, ತೆರೆಗೆ ಬರಬೇಕಿದೆ.

IPL_Entry_Point