ಮಿಸ್ಟರ್ ರಾಣಿ ಸಲುವಾಗಿ ಹುಡುಗಿಯಾಗಿ ಬದಲಾದ್ರಾ ಲಕ್ಷ್ಮೀ ನಿವಾಸ ಸೀರಿಯಲ್‌ನ ಸೈಕೋ ಜಯಂತ್‌? ಇಲ್ನೋಡಿ ಅವತಾರವಾ..-sandalwood news lakshmi nivasa serial jayanth aka deepak subramanya starrer mr rani movie first look released mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಮಿಸ್ಟರ್ ರಾಣಿ ಸಲುವಾಗಿ ಹುಡುಗಿಯಾಗಿ ಬದಲಾದ್ರಾ ಲಕ್ಷ್ಮೀ ನಿವಾಸ ಸೀರಿಯಲ್‌ನ ಸೈಕೋ ಜಯಂತ್‌? ಇಲ್ನೋಡಿ ಅವತಾರವಾ..

ಮಿಸ್ಟರ್ ರಾಣಿ ಸಲುವಾಗಿ ಹುಡುಗಿಯಾಗಿ ಬದಲಾದ್ರಾ ಲಕ್ಷ್ಮೀ ನಿವಾಸ ಸೀರಿಯಲ್‌ನ ಸೈಕೋ ಜಯಂತ್‌? ಇಲ್ನೋಡಿ ಅವತಾರವಾ..

ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತ್ ಪಾತ್ರದ ಮೂಲಕ‌ ಜನಮನ ಗೆದ್ದಿರುವ ದೀಪಕ್ ಸುಬ್ರಹ್ಮಣ್ಯ‌ ಇದೀಗ, ಮಿಸ್ಟರ್‌ ರಾಣಿ ಚಿತ್ರದ ಮೂಲಕ ಆಗಮಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಆ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ.

ಮಿಸ್ಟರ್ ರಾಣಿ ಸಿನಿಮಾ ಸಲುವಾಗಿ ಹುಡುಗಿಯಾಗಿ ಬದಲಾದ್ರಾ ಲಕ್ಷ್ಮೀ ನಿವಾಸ ಸೀರಿಯಲ್‌ನ ಸೈಕೋ ಜಯಂತ್‌
ಮಿಸ್ಟರ್ ರಾಣಿ ಸಿನಿಮಾ ಸಲುವಾಗಿ ಹುಡುಗಿಯಾಗಿ ಬದಲಾದ್ರಾ ಲಕ್ಷ್ಮೀ ನಿವಾಸ ಸೀರಿಯಲ್‌ನ ಸೈಕೋ ಜಯಂತ್‌

ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ತಮ್ಮ ವಿಭಿನ್ನ ಮ್ಯಾನರಿಸಂ ಮತ್ತು ಪಾತ್ರದ ಮೂಲಕವೇ ಗಮನ ಸೆಳೆಯುತ್ತಿದ್ದಾರೆ ಜಯಂತ್‌ ಪಾತ್ರಧಾರಿ ದೀಪಕ್ ಸುಬ್ರಮಣ್ಯ. ಹೆಂಡತಿಯನ್ನು ಅತಿಯಾಗಿ ಪ್ರಿತಿಸೋ ಪತಿಯಾಗಿ, ಆಕೆಯ ಮೇಲೆ ಯಾರ ಕಣ್ಣು ಬೀಳದಂತೆ ಮನೆಯಲ್ಲಿಯೇ ಬಂಧಿಯಾಗಿಸುವ ಗಂಡನಾಗಿ ಜಯಂತ್‌ ಪಾತ್ರ ಸಾಗುತ್ತಿದೆ. ಈ ನಡುವೆ ಇದೀಗ ಇದೇ ಸೈಕೋ ಜಯಂತ್‌ ಹುಡುಗಿಯಾಗಿ ಬದಲಾಗಿದ್ದಾರೆ. ಅರೇ ಇದೇನಿದು ಎಂದು ಅಚ್ಚರಿ ಪಡಬೇಡಿ. ಹುಡುಗಿಯಾಗಿ ಕಾಣಿಸಿಕೊಂಡಿದ್ದು ಮಿ‌ಸ್ಟರ್ ರಾಣಿ ಸಿನಿಮಾ ಸಲುವಾಗಿ!

ಈ ಹಿಂದೆ ಸ್ಯಾಂಡಲ್‌ವುಡ್‌ನಲ್ಲಿ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಚಿತ್ರ ನಿರ್ದೇಶಿಸಿದ್ದರು ನಿರ್ದೇಶಕ ಮಧುಚಂದ್ರ. ಆ ಚಿತ್ರದ ಮೂಲಕ ಸಮಾಜಕ್ಕೆ ಒಂದೊಳ್ಳೆ ‌ಸಂದೇಶ ನೀಡಿದ್ದರು ಮಧುಚಂದ್ರ. ಇದೀಗ ಇದೇ ನಿರ್ದೇಶಕರು, ಮಿ.ರಾಣಿ ಎಂಬ ವಿಭಿನ್ನ ಕಾಮಿಡಿ ಜಾನರ್‌ನ ಸಿನಿಮಾ ಜತೆಗೆ ಆಗಮಿಸಿದ್ದಾರೆ. ಈ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಸಹ ಗಮನ ಸೆಳೆಯುತ್ತಿದೆ.

ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ, ಜಯಂತ್ ಪಾತ್ರದ ಮೂಲಕ‌ ಜನಮನ ಗೆದ್ದಿರುವ ದೀಪಕ್ ಸುಬ್ರಹ್ಮಣ್ಯ‌, ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಸ್ತುತ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಪ್ರಚಾರದ ಮೊದಲ ಹೆಜ್ಜೆಯಾಗಿ ನಿರ್ದೇಶಕ ಮಧುಚಂದ್ರ ವಿನೂತನ ಪ್ರಚಾರಕ್ಕೆ ನಾಂದಿ ಹಾಡಿದ್ದಾರೆ.

ನಟ ದೀಪಕ್ ಸುಬ್ರಹ್ಮಣ್ಯ ಸಾಕಷ್ಟು ಮಂದಿ ಅಭಿಮಾನಿಗಳಿದ್ದಾರೆ. ಆ ಪೈಕಿ 108 ಜನ ಅಭಿಮಾನಿಗಳ ಮನೆಗೆ ಮಿ.ರಾಣಿ ಚಿತ್ರತಂಡ ಭೇಟಿ ನೀಡಿ, ಅವರ ಮನೆಯಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಗಣೇಶನ ದರ್ಶನ ಪಡೆದು, ಅವರ ಮೂಲಕ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿಸಿತ್ತು. ಈ ವಿನೂತನ ಪ್ರಚಾರಕ್ಕೆ ಸೀರಿಯಲ್‌ ವೀಕ್ಷಕರಿಂದಲೂ ಪ್ರಶಂಸೆ ಸಿಕ್ಕಿತ್ತು. 108 ಜನರ ಮನೆಗೆ ಭೇಟಿ ನೀಡಿದಾಗ ಅವರು ತೋರಿದ ಪ್ರೀತಿಗೆ ಮನತುಂಬಿ ಬಂದಿತ್ತು ಎಂದು ದೀಪಕ್‌ ಹೇಳಿಕೊಂಡಿದ್ದರು.

ಮಿ. ರಾಣಿ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ. ನವೆಂಬರ್‌ನಲ್ಲಿ ಈ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ಚಿತ್ರತಂಡದ್ದು. ಮಿ‌ಸ್ಟರ್ ರಾಣಿ ಚಿತ್ರದಲ್ಲಿ ದೀಪಕ್ ಸುಬ್ರಹ್ಮಣ್ಯ ಅವರಿಗೆ ನಾಯಕಿಯಾಗಿ ಪಾರ್ವತಿ ನಾಯರ್ ಜೋಡಿಯಾಗಿದ್ದಾರೆ. ಶ್ರೀವತ್ಸ, ರೂಪ ಪ್ರಭಾಕರ್, ಲಕ್ಷ್ಮೀ ಕಾರಂತ್, ಮಧುಚಂದ್ರ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಎಕ್ಸೆಲ್‌ ಆರ್ಬಿಟ್‌ ಕ್ರಿಯೇಷನ್‌ ಬ್ಯಾನರ್‌ನಲ್ಲಿ ನೂರಕ್ಕೂ ಅಧಿಕ ಮಂದಿ ಬಂಡವಾಳ ಹೂಡಿ ನಿರ್ಮಿಸಿರುವ ಈ ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದಾರೆ. ರವೀಂದ್ರನಾಥ್ ಛಾಯಾಗ್ರಹಣ ಹಾಗೂ ಮಧು ತುಂಬಕೆರೆ ಅವರ ಸಂಕಲನ ಈ ಚಿತ್ರಕ್ಕಿದೆ.

mysore-dasara_Entry_Point