‘ತೆರಿಗೆದಾರರ ಕೋಟಿ ಕೋಟಿ ಹಣ ಅಂಬರೀಶ್‌ ಸ್ಮಾರಕಕ್ಕೆ ಹೋಯ್ತು!’ ಸುಮಲತಾ ವಿರುದ್ಧ ಮತ್ತೆ ಚೇತನ್‌ ಅಹಿಂಸಾ ಮಾತು-sandalwood news mp sumalatha took crores of taxpayer money for ambareesh memorial during corona says chetan ahimsa mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ‘ತೆರಿಗೆದಾರರ ಕೋಟಿ ಕೋಟಿ ಹಣ ಅಂಬರೀಶ್‌ ಸ್ಮಾರಕಕ್ಕೆ ಹೋಯ್ತು!’ ಸುಮಲತಾ ವಿರುದ್ಧ ಮತ್ತೆ ಚೇತನ್‌ ಅಹಿಂಸಾ ಮಾತು

‘ತೆರಿಗೆದಾರರ ಕೋಟಿ ಕೋಟಿ ಹಣ ಅಂಬರೀಶ್‌ ಸ್ಮಾರಕಕ್ಕೆ ಹೋಯ್ತು!’ ಸುಮಲತಾ ವಿರುದ್ಧ ಮತ್ತೆ ಚೇತನ್‌ ಅಹಿಂಸಾ ಮಾತು

ಲೋಕಸಭೆ ಚುನಾವಣೆ ಕಾವಿನಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಬಗ್ಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಪೋಸ್ಟ್‌ ಹಂಚಿಕೊಂಡಿದ್ದಾರೆ. ತೆರಿಗೆದಾರರ ಕೋಟಿ ಕೋಟಿ ಹಣ ಅಂಬರೀಶ್‌ ಸ್ಮಾರಕ ನಿರ್ಮಾಣಕ್ಕೆ ಹೋಯ್ತು ಎಂದಿದ್ದಾರೆ.

‘ತೆರಿಗೆದಾರರ ಕೋಟಿ ಕೋಟಿ ಹಣ ಅಂಬರೀಶ್‌ ಸ್ಮಾರಕಕ್ಕೆ ಹೋಯ್ತು!’ ಸುಮಲತಾ ವಿರುದ್ಧ ಮತ್ತೆ ಚೇತನ್‌ ಅಹಿಂಸಾ ಮಾತು
‘ತೆರಿಗೆದಾರರ ಕೋಟಿ ಕೋಟಿ ಹಣ ಅಂಬರೀಶ್‌ ಸ್ಮಾರಕಕ್ಕೆ ಹೋಯ್ತು!’ ಸುಮಲತಾ ವಿರುದ್ಧ ಮತ್ತೆ ಚೇತನ್‌ ಅಹಿಂಸಾ ಮಾತು

Chetan Ahimsa on Sumalatha Ambareesh: ಲೋಕಸಭಾ ಚುನಾವಣೆ ಕಾವು ಜೋರಾಗಿದೆ. ಕಣದಲ್ಲಿನ ಸ್ಪರ್ಧಿಗಳು ಈಗಾಗಲೇ ಪ್ರಚಾರ ಕೆಲಸಕ್ಕೆ ಇಳಿದಿದ್ದಾರೆ. ಈ ನಡುವೆ ಟಿಕೆಟ್‌ ಸಿಗದ ಕೆಲವರು ಬಂಡಾಯವೆದ್ದು ಪಕ್ಷೇತರರಾಗಿ ಕಣಕ್ಕೆ ಇಳಿಯುತ್ತಿದ್ದರೆ, ಇನ್ನು ಕೆಲವರು ಹೈಕಮಾಂಡ್‌ ಆದೇಶದ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧಿಸುವುದನ್ನೇ ಕೈ ಬಿಟ್ಟು ಕ್ಷೇತ್ರ ತ್ಯಾಗಮಾಡಿದ್ದಾರೆ. ಒಟ್ಟಾರೆಯಾಗಿ ಈ ಬಾರಿಯ ಲೋಕಸಭಾ ಚುನಾವಣೆ ಒಂದಷ್ಟು ಕುತೂಹಲಕ್ಕಂತೂ ಎಡೆ ಮಾಡಿಕೊಟ್ಟಿದೆ. ಆ ಪೈಕಿ ಸುಮಲತಾ ಅಂಬರೀಶ್‌ ಅವರ ಮುಂದಿನ ನಡೆ ಅಧಿಕೃತವಾಗಿದೆ. ಶನಿವಾರ ಬಿಜೆಪಿ ಪಕ್ಷ ಸೇರ್ಪಡೆಯಾಗಲಿದ್ದಾರವರು. ಈಗ ಇದೇ ಸುಮಲತಾ ಬಗ್ಗೆ ಚೇತನ್‌ ಅಹಿಂಸಾ ಮತ್ತೆ ಮಾತನಾಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ. ನಿತ್ಯದ ಬೆಳವಣಿಗೆಗಳ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸಿನಿಮಾ, ರಾಜಕೀಯ ಸೇರಿ ತಮ್ಮ ಗಮನಕ್ಕೆ ಬಂದ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಿರುತ್ತಾರೆ. ಈ ಹಿಂದೆ ಅಂಬರೀಶ್‌ ಸ್ಮಾರಕದ ವಿಚಾರವನ್ನು ಟೀಕಿಸಿ, ಅದಕ್ಕೆ ಬಳಸಿಕೊಂಡ ಅನುದಾನದ ಬಗ್ಗೆ ಕಾಮೆಂಟ್‌ ಮಾಡಿದ್ದ ಚೇತನ್‌ ಅಹಿಂಸಾ, ಇದೀಗ ಮತ್ತೆ ಸುಮಲತಾ ಅವರ ರಾಜಕೀಯ ಮತ್ತು ಅಂಬರೀಶ್‌ ಸ್ಮಾರಕದ ಬಗ್ಗೆಯೇ ಮಾತನಾಡಿದ್ದಾರೆ.

ಕೋಟ್ಯಂತರ ಹಣ ಸ್ಮಾರಕಕ್ಕೆ ಹೋಯ್ತು..

ಈಗ ಇದೇ ಸುಮಲತಾ ಅವರ ಬಗ್ಗೆ ತಮ್ಮ ಅಭಿಪ್ರಾಯವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಚೇತನ್‌ ಅಹಿಂಸಾ, ಕೋವಿಡ್ ಸಮಯದಲ್ಲಿ ಅಂಬರೀಶ್ ಸ್ಮಾರಕಕ್ಕಾಗಿ ಕೋಟ್ಯಂತರ ತೆರಿಗೆದಾರರ ಹಣವನ್ನು ತೆಗೆದುಕೊಂಡರು ಎಂದಿದ್ದಾರೆ. ಖಾಸಗಿ ಪಿಎಂ ಕೇರ್ಸ್‌ಗೆ ಮಂಡ್ಯದ ಎಂಪಿ ಲಾಡ್ಸ್ ನಿಧಿಯನ್ನು ನೀಡಿದ್ದರು. ಈಗ, ಮಂಡ್ಯ ಎಂಪಿ ಟಿಕೆಟ್ 100% ಎಂದು ತಪ್ಪಾಗಿ ಖಾತರಿಪಡಿಸಿಕೊಂಡ ನಂತರ, ಅವರು ನಾನ್ ಫ್ಯಾಕ್ಟರ್ ಆಗಿದ್ದಾರೆ. 5 ವರ್ಷಗಳಲ್ಲಿ, ಸುಮಲತಾ ಅವರು ಅತ್ಯಲ್ಪ, ಪ್ಲೇಸ್‌ ಹೋಲ್ಡರ್‌ ಸಂಸದರಾಗಿದ್ದರು ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಮಂಡ್ಯ ಸಂಸದೆ ಸುಮಲತಾ ಅವರು

1. ಕೋವಿಡ್ ಸಮಯದಲ್ಲಿ ಅಂಬರೀಶ್ ಸ್ಮಾರಕಕ್ಕಾಗಿ ಕೋಟ್ಯಂತರ ತೆರಿಗೆದಾರರ ಹಣವನ್ನು ತೆಗೆದುಕೊಂಡರು.

2. ಖಾಸಗಿ ಪಿಎಂ ಕೇರ್ಸ್‌ಗೆ ಮಂಡ್ಯದ ಎಂಪಿ ಲಾಡ್ಸ್ ನಿಧಿಯನ್ನು ನೀಡಿದ್ದರು.

ಈಗ, ಮಂಡ್ಯ ಎಂಪಿ ಟಿಕೆಟ್ '100%' ಎಂದು ತಪ್ಪಾಗಿ ಖಾತರಿಪಡಿಸಿಕೊಂಡ ನಂತರ, ಅವರು ನಾನ್- ಫ್ಯಾಕ್ಟರ್ ಆಗಿದ್ದಾರೆ.

5 ವರ್ಷಗಳಲ್ಲಿ, ಸುಮಲತಾ ಅವರು ಅತ್ಯಲ್ಪ, ಪ್ಲೇಸ್‌ ಹೋಲ್ಡರ್ ಸಂಸದರಾಗಿದ್ದರು.

ಕಳೆದ ವರ್ಷವೂ ಸ್ಮಾರಕ ವಿಚಾರಕ್ಕೆ ಟೀಕೆ

ಕಳೆದ ವರ್ಷದ ಮಾರ್ಚ್‌ ತಿಂಗಳಲ್ಲಿ ರೆಬೆಲ್‌ಸ್ಟಾರ್‌ ಅಂಬರೀಶ್‌ ಅವರ ಸ್ಮಾರಕ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಲೋಕಾರ್ಪಣೆಯಾಗಿತ್ತು. ಹಾಗೇ ಲೋಕಾರ್ಪಣೆಯಾಗಿದ್ದೇ ತಡ, ತೆರಿಗೆದಾರರ ಹಣವನ್ನು ದುರುಪಯೋಗಪಡಿಸಿಕೊಳ್ಳುವುದು ಎಷ್ಟು ಸರಿ, ಎಲ್ಲ ಉಳ್ಳವರಿಗೆ ಮತ್ತೆ ಸವಲತ್ತು ಒದಗಿಸುವುದು ನ್ಯಾಯವೇ? ಎಂದು ಸಮುಲತಾ ಅಂಬರೀಶ್‌ ವಿರುದ್ಧ ಚೇತನ್‌ ಅಹಿಂಸಾ ಪ್ರಶ್ನೆ ಮಾಡಿದ್ದರು.

ಅಂಬರೀಶ್‌ ಬದುಕಿದ್ದಷ್ಟು ದಿನ ಯಾರ ಬಳಿಯೂ ಕೈ ಚಾಚಿದವರಲ್ಲ. ಆದರೆ, ಸುಮಲತಾ ಅವರು ಸರ್ಕಾರದ ಬಳಿ ಕೈ ಚಾಚಿ 12 ಕೋಟಿ ಅನುದಾನ, ಎರಡು ಎಕರೆ ಜಾಗವನ್ನು ಪಡೆದಿದ್ದು ಮಾತ್ರ ವಿಪರ್ಯಾಸ. ತೆರಿಗೆದಾರರ ಹಣ ಬಳಸಿಕೊಳ್ಳುವ ಬದಲು 23 ಕೋಟಿ ಹಣವನ್ನು ಅವರೇ ಭರಿಸಲು ಸಾಧ್ಯವಾಗಲಿಲ್ಲವೇ ಎಂದು ಟೀಕಿಸಿದ್ದರು. ಈ ಮೂಲಕ ಸಾರ್ವಜನಿಕರ ಹಣವನ್ನು ಬಳಸಿಕೊಳ್ಳುವ ಜರೂರತ್ತು ಏನಿದೆ ಎಂದಿದ್ದರು. ಈಗ ಮತ್ತೆ ಅದೇ ವಿಚಾರ ಮುನ್ನೆಲೆಗೆ ತಂದಿದ್ದಾರೆ.

 

mysore-dasara_Entry_Point