ಕನ್ನಡ ಸುದ್ದಿ  /  Entertainment  /  Kannada Television News Lakshmi Nivasa Serial April 03rd Wednesday Episode Lakshmi Nivasa Serial Episode Highlights Mnk

Lakshmi Nivasa Serial: ಒಡೆದ ಜಾನು ಮನಸ್ಸಿಗೆ ಪ್ರೀತಿಯ ಮುಲಾಮು ಹಚ್ಚಿದ ಜಯಂತ್; ಅತಿಯಾದ ಪ್ರೀತಿ, ವಿಷವೂ ಆಗಬಹುದು!

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾನು ಜಯಂತ್‌ ಮದುವೆ ಬಳಿಕ ಒಂದಷ್ಟು ಅಚ್ಚರಿಯ ಗುಚ್ಛ ನೋಡುಗರನ್ನು ಸೆಳೆಯುತ್ತಿದೆ. ಈಗ ಮುನಿಸಿಕೊಂಡ ಪತ್ನಿಯ ಕೋಪ ಕಡಿಮೆ ಮಾಡಲು, ಪ್ರೀತಿಯ ಮದ್ದು ನೀಡಿದ್ದಾನೆ ಜಯಂತ್. ‌ಪರಸ್ಪರರು ಕ್ಷಮೆ ಕೇಳಿ, ಮತ್ತೆ ಇಬ್ಬರೂ ಮೊದಲಿನಂತಾಗಿದ್ದಾರೆ.

Lakshmi Nivasa Serial: ಒಡೆದ ಜಾನು ಮನಸ್ಸಿಗೆ ಪ್ರೀತಿಯ ಮುಲಾಮು ಹಚ್ಚಿದ ಜಯಂತ್; ಅತಿಯಾದ ಪ್ರೀತಿ, ವಿಷವೂ ಆಗಬಹುದು!
Lakshmi Nivasa Serial: ಒಡೆದ ಜಾನು ಮನಸ್ಸಿಗೆ ಪ್ರೀತಿಯ ಮುಲಾಮು ಹಚ್ಚಿದ ಜಯಂತ್; ಅತಿಯಾದ ಪ್ರೀತಿ, ವಿಷವೂ ಆಗಬಹುದು!

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತನ ಒಂದೊಂದೆ ಮುಖ ಬಯಲಾಗ್ತಿದೆ. ಸಣ್ಣ ಸಣ್ಣ ಅದಲು ಬದಲುಗಳಿಗೂ ಅಸಮಾಧಾನಗೊಳ್ಳುವ ಆತ, ಪತ್ನಿ ಮಾಡಿದ ಕೆಲಸಕ್ಕೂ ಸಮಾಧಾನವಿಲ್ಲ. ಯಾವುದು ಎಲ್ಲಿರಬೇಕೋ ಅದು ಅಲ್ಲಿಯೇ ಇರಬೇಕು. ಇಲ್ಲದಿದ್ದರೆ, ಅದು ನನಗೆ ಕಿರಿಕಿರಿ ಆಗುತ್ತೆ ಎಂದಿದ್ದಾನೆ. ಮನೆಯಲ್ಲಿ ಕೂತು ಬೇಸರದಲ್ಲಿದ್ದ ಜಾನು, ಒಂದಷ್ಟು ವಸ್ತುಗಳನ್ನು ಅದಲು ಬದಲು ಮಾಡಿದ್ದೇ ತಡ, ಜಯಂತ್‌ ತನ್ನೊಳಗಿನ ಇನ್ನೊಂದು ಮುಖವನ್ನು ಪತ್ನಿ ಮುಂದೆ ತೋರಿಸಿದ್ದಾನೆ. ಪತಿಯ ಈ ಬದಲಾವಣೆ, ಜಾನುಗೂ ಅಸಹನೀಯ ಎನಿಸತೊಡಗಿದೆ.

ಜಾಹ್ನವಿ ತುಂಬು ಕುಟುಂಬದಲ್ಲಿ ಬೆಳೆದವಳು. ಅಪ್ಪ, ಅಮ್ಮ, ಅಕ್ಕ, ಅಣ್ಣ ಎಲ್ಲರ ಜತೆಗೆ ಹುಡುಗಾಟಿಕೆಯಲ್ಲಿಯೇ ಕಾಲ ಕಳೆದವಳು. ಮದುವೆ, ಗಂಡನ ಬಗ್ಗೆ ಸಾಕಷ್ಟು ಕನಸನ್ನು ಕಟ್ಟಿಕೊಂಡಿದ್ದವಳು. ಆದರೆ, ಈಗ ಆ ಕನಸೇ ಆಕೆ ಪಾಲಿಗೆ ಕೊಂಚ ಅಡ್ಡಗಾಲಾಗುತ್ತಿದೆ. ಪತಿ ಜಯಂತ್‌ನ ಅತಿಯಾದ ಕಾಳಜಿ, ಎಲ್ಲೋ ಒಂದು ಕಡೆ ಆಕೆಯ ಸ್ವಾತಂತ್ರ್ಯಕ್ಕೂ ಭಂಗ ತರುತ್ತಿದೆ. ಅತಿಯಾದ ಕಾಳಜಿಗೆ ಸೋತು, ತನ್ನ ಸ್ವಾತಂತ್ರ್ಯವನ್ನೇ ಆಕೆ ಕಳೆದುಕೊಳ್ಳುತ್ತಿದ್ದಾಳೆ. ಚಿಕ್ಕ ಮನೆಯ ತುಂಬು ಕುಟುಂಬದಲ್ಲಿ ಬೆಳೆದ ಜಾನುಗೆ ಈಗ ದೊಡ್ಡ ಬಂಗಲೆ ಸಿಕ್ಕರೂ, ಅ ಬಂಗಲೆಯಲ್ಲಿ ಆಕೆ ಒಬ್ಬಂಟಿಯಾಗಿದ್ದಾಳೆ!

ಇಕ್ಕಟ್ಟಿಗೆ ಸಿಲುಕಿಸಿದ ಪತಿಯ ವರ್ತನೆ

ಖಾಲಿ ಕುಳಿತಿದ್ದಾಗ, ಮನೆಯಲ್ಲಿನ ವಸ್ತುಗಳನ್ನು ಆಚೀಚೆ ಮಾಡಿದ ಜಾನುಗೆ, ಪತಿ ಜಯಂತ್‌ ಕುಟುಕಿದ್ದಾನೆ. ನಿಮ್ಮಲ್ಲಿನ ವಸ್ತುಗಳನ್ನು ಯಾರಾದರೂ ಕಿತ್ತುಕೊಂಡ್ರೆ, ನಿಮ್ಗೆ ಸರಿ ಅನ್ಸುತ್ತಾ? ಇಲ್ಲ ತಾನೇ, ಇದೂ ಸಹ ಹಾಗೆಯೇ. ನಾಳೆ ಯಾರಾದರೂ ನಿಮ್ಮನ್ನು ಕಿತ್ತುಕೊಂಡು ಹೋಗ್ತಿನಿ ಅಂದರೆ, ಇದು ಚಿಕ್ಕ ವಿಷಯ ಅಂತ ನಾನು ಇಲ್ಲಿಗೆ ಬಿಟ್ಟು ಬಿಡಲೇ? ಅದು ಸಾಧ್ಯವಾ? ಈ ಮಾತುಬಾರದ ವಸ್ತುಗಳೇ ನನಗೆ ಇಷ್ಟು ಮುಖ್ಯ ಅಂದ ಮೇಲೆ, ನೀವು ಇನ್ನೆಷ್ಟು ಮುಖ್ಯ ಎಂಬುದನ್ನು ತಿಳಿದುಕೊಳ್ಳಿ ಎಂದಿದ್ದಾನೆ.

ಜಾನು ಕೋಪ ಕರಗಿಸಲು ಜಯಂತ್‌ ಸರ್ಕಸ್

ಕೋಪಿಸಿಕೊಂಡ ಜಾನು ಕೋಣೆ ಸೇರಿದ್ದಾಳೆ. ಬೆಳಗಾಗಿದೆ. ಗುಡ್‌ ಮಾರ್ನಿಂಗ್‌ ಹೇಳಿದ್ದಾನೆ. ಜಾನುಗೆ ಕೋಪ ಕಡಿಮೆಯಾಗಿಲ್ಲ ಎಂಬುದು ಗೊತ್ತಾಗಿದೆ. ಅದನ್ನು ಅರಿತು, ಪತ್ನಿಯ ಕೋಪ ತಣ್ಣಗಾಗಿಸಲು ತಾನೇ ಕಾಫಿ ಮಾಡಿಕೊಂಡು ಬಂದಿದ್ದಾನೆ ಜಯಂತ್. ಆಕೆಯ ಮುಂದೆ ರಾತ್ರಿ ನಡೆದ ಘಟನೆ ಬಗ್ಗೆ ಕ್ಷಮೆ ಕೇಳಿ ದೊಡ್ಡವನಾಗಿದ್ದಾನೆ. ಇಲ್ಲ ನಿಮ್ಮನ್ನು ನಾನೇ ಹರ್ಟ್‌ ಮಾಡಿದೆ, ಮನೆಯಲ್ಲಿ ಏನೂ ಕೆಲಸ ಇರಲಿಲ್ಲ. ಹಾಗಾಗಿ ನಾನೇ ವಸ್ತುಗಳನ್ನು ಆಚೀಚೆ ಮಾಡಿದೆ. ಇನ್ನೊಮ್ಮೆ ಹೀಗೆ ಮಾಡಲ್ಲ. ನನ್ನಿಂದ ನಿಮಗೆ ಹರ್ಟ್‌ ಆಗಿದ್ದರೆ ಕ್ಷಮಿಸಿ ಎಂದಿದ್ದಾಳೆ ಜಾನು.

ಡೋರ್‌ ಯಾಕೆ ಓಪನ್‌ ಮಾಡ್ತಿದ್ರಿ?

ಹೀಗೆ ಜಯಂತನ ಕಾಳಜಿಗೆ ಪ್ರೀತಿಗೆ ಜಾಹ್ನವಿಯ ಕೋಪ ಕರಗಿ ಹೋಗಿದೆ. ನೀವಿನ್ನು ಕಾಫಿನೇ ಕುಡಿದಿಲ್ಲ. ಕುಡೀರಿ, ನಾನು ಏನಾದ್ರೂ ಸ್ಪೇಷಲ್‌ ತಿಂಡಿ ಮಾಡಿ ತರ್ತೀನಿ ಎಂದಿದ್ದಾನೆ. ಅಯ್ಯೋ ನಾನೇ ಮಾಡ್ತೀನಿ ಎಂದ ಜಾನುಗೆ, ಬೇಡ ಬೇಡ ಇವತ್ತು ನಾನೇ ಮಾಡುವೆ ಎಂದು ಹೇಳಿದ್ದಾನೆ. ಹೀಗಿರುವಾಗಲೇ ಫ್ರೂಟ್ಸ್‌ ಸಲಾಡ್‌ ತಂದು ಪತ್ನಿಯ ಕೈಗಿಟ್ಟಿದ್ದಾನೆ. ಇದೇ ವೇಳೆ ನಿನ್ನೆ ನೀವು ಬಾಗಿಲು ತೆಗೆಯಲು ಪ್ರಯತ್ನ ಮಾಡ್ತಾ ಇದ್ರಿ ಎಂದು ಪ್ರಶ್ನೆ ಮಾಡಿದ್ದಾನೆ ಜಯಂತ್. ಮನೆಯಲ್ಲಿ ತರಕಾರಿ ಇರಲಿಲ್ಲ, ಹಾಗಾಗಿ ಹೊರಟಿದ್ದೆ ಎಂದಿದ್ದಾಳೆ. ಅಷ್ಟಕ್ಕೂ ನಾನು ಹೊರಗೆ ಹೋಗುವ ವಿಚಾರ ನಿಮಗೆ ಹೇಗೆ ಗೊತ್ತಾಯ್ತು ಎಂದಿದ್ದಾಳೆ. ಸುಮ್ನೆ ಗೆಸ್‌ ಮಾಡಿದೆ ಎಂದು ಕ್ಯಾಮರಾ ಇಟ್ಟ ವಿಚಾರವನ್ನು ಗೌಪ್ಯವಾಗಿಟ್ಟಿದ್ದಾನೆ. ಮುಂದಿನ ದಿನಗಳಲ್ಲಿ ಜಾನು ಬದುಕಲ್ಲಿ ಇನ್ನೂ ಏನೇನು ಕಾದಿದ್ಯೋ?