ಕಾಂತಾರದಲ್ಲಿ ರಜನಿಕಾಂತ್‌ ಸ್ಟೈಲ್‌ ಅನುಕರಣೆ ಮಾಡಿದ್ರ ರಿಷಬ್‌ ಶೆಟ್ಟಿ; ಯಕ್ಷಗಾನದಲ್ಲಿ ಅಭಿನಯಿಸುತ್ತಿದ್ದ ನೆನಪಿನ ಕನವರಿಕೆ-sandalwood news rajinikanth inspiration to rishab shetty copied his style in kannada bell bottom movie ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಕಾಂತಾರದಲ್ಲಿ ರಜನಿಕಾಂತ್‌ ಸ್ಟೈಲ್‌ ಅನುಕರಣೆ ಮಾಡಿದ್ರ ರಿಷಬ್‌ ಶೆಟ್ಟಿ; ಯಕ್ಷಗಾನದಲ್ಲಿ ಅಭಿನಯಿಸುತ್ತಿದ್ದ ನೆನಪಿನ ಕನವರಿಕೆ

ಕಾಂತಾರದಲ್ಲಿ ರಜನಿಕಾಂತ್‌ ಸ್ಟೈಲ್‌ ಅನುಕರಣೆ ಮಾಡಿದ್ರ ರಿಷಬ್‌ ಶೆಟ್ಟಿ; ಯಕ್ಷಗಾನದಲ್ಲಿ ಅಭಿನಯಿಸುತ್ತಿದ್ದ ನೆನಪಿನ ಕನವರಿಕೆ

Rishab Shetty Interview: “ಕಡಕ್‌ ಸಿನಿಮಾ” ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಕಾಂತಾರ ನಟ ರಿಷಬ್‌ ಶೆಟ್ಟಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇವರು ನಟನೆಯಲ್ಲಿ ಹಲವು ಬಾರಿ ರಜನಿಕಾಂತ್‌ರ ಸ್ಟೈಲ್‌ ಅನುಕರಣೆ ಮಾಡಿದ್ದರಂತೆ.

ಕಾಂತಾರದಲ್ಲಿ ರಜನಿಕಾಂತ್‌ ಸ್ಟೈಲ್‌ ಕಾಪಿ ಮಾಡಿದ್ರ ರಿಷಬ್‌ ಶೆಟ್ಟಿ
ಕಾಂತಾರದಲ್ಲಿ ರಜನಿಕಾಂತ್‌ ಸ್ಟೈಲ್‌ ಕಾಪಿ ಮಾಡಿದ್ರ ರಿಷಬ್‌ ಶೆಟ್ಟಿ

ಬೆಂಗಳೂರು: ಕಡಕ್‌ ಸಿನಿಮಾ” ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ (Rishab Shetty Interview) ಕಾಂತಾರ ನಟ ರಿಷಬ್‌ ಶೆಟ್ಟಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.  ಸಂದರ್ಶನದಲ್ಲಿ ನಿರೂಪಕ ಮೊದಲು ರಜನಿಕಾಂತ್‌ ಜತೆ ರಿಷಬ್‌ ಶೆಟ್ಟಿ ನಿಂತಿದ್ದ ಫೋಟೋವನ್ನು ತೋರಿಸಿದ್ದಾರೆ. ಈ ಫೋಟೋ ನೋಡಿದಾಗ ನಿಮಗೆ ಏನು ನೆನಪಾಗುತ್ತದೆ ಎಂದು ಕೇಳಿದ್ದಾರೆ. ಈ ಸಂದರ್ಭದಲ್ಲಿ ನನ್ನ ನಟನೆಯ ಹಲವು ಕಡೆ ರಜನಿಕಾಂತ್‌ ಅವರ ಪ್ರಭಾವ ಕಾಣಿಸಿಕೊಂಡಿದೆ ಎಂದಿದ್ದಾರೆ. ಈ ಹಿಂದೆ ಬೆಲ್‌ ಬಾಟಮ್‌ನಲ್ಲಿ ಹಲವು ಬಾರಿ ಅವರಂತೆಯೇ ತಲೆಕೂದಲು, ಕೈ ಚಲನೆ ಮಾಡಲು ಪ್ರಯತ್ನಿಸಿದ್ದೆ. ಕಾಂತಾರ ಸಿನಿಮಾದಲ್ಲೂ ಸಿಂಗಾರ ಸಿರಿಯೇ ಹಾಡಿನಲ್ಲಿ ಲೀಲಾಳ ಮುಂದೆ ಇದೇ ರೀತಿ ರಜನಿಕಾಂತ್‌ರ ಅನುಕರಣೆ ನನ್ನಿಂದ ಸಹಜವಾಗಿ ಬಂದಿತ್ತು ಎಂದು ರಿಷಬ್‌ ಶೆಟ್ಟಿ ಹೇಳಿದ್ದಾರೆ.

ರಕ್ಷಿತ್‌ ಶೆಟ್ಟಿ ಜತೆ ಟಿವಿಎಸ್‌ ವಿಕ್ಟರ್‌ನಲ್ಲಿ ಸುತ್ತಾಟ

ಇದೇ ಸಂದರ್ಭದಲ್ಲಿ ರಿಷಬ್‌ ಶೆಟ್ಟಿ ಮತ್ತು ರಕ್ಷಿತ್‌ ಶೆಟ್ಟಿ ಜತೆಗಿರರುವ ಫೋಟೋವನ್ನು ತೋರಿಸಿದ್ದಾರೆ. ಈ ಫೋಟೋ ನೋಡಿ ಸಾಕಷ್ಟು ನೆನಪುಗಳನ್ನು ರಿಷಬ್‌ ಶೆಟ್ಟಿ ಹಂಚಿಕೊಂಡಿದ್ದಾರೆ. ಈ ಹಿಂದೆ ನಾವಿಬ್ಬರು ಅದೇ ಟಿವಿಎಸ್‌ ವಿಕ್ಟರ್‌ ಬೈಕ್‌ನಲ್ಲಿ ಎಲ್ಲಾ ಕಡೆ ಸುತ್ತಾಡುತ್ತಿದ್ದೇವು ಎಂದಿದ್ದಾರೆ. ಇದಾದ ಬಳಿಕ ರಿಕ್ಕಿ ಸಿನಿಮಾಕ್ಕೆ ಥಿಯೇಟರ್‌ನಲ್ಲಿ ಭೇಟಿಯಾದೆವು ಎಂದಿದ್ದಾರೆ. ಇದಾದ ಬಳಿಕ ನಿರೂಪಕರು ಯಕ್ಷಗಾನ ವೇಷ ಧರಿಸಿದ ಫೋಟೋ ತೋರಿಸಿದ್ದಾರೆ.

ಯಕ್ಷಗಾನ ಪಾತ್ರದಲ್ಲಿ ಮಿಂಚಿದ್ರು ರಿಷಬ್‌

"ಮೊದಲು ನಾನು ಆರನೇ ತರಗತಿಯಲ್ಲಿ ಮೀನಾಕ್ಷಿ ಕಲ್ಯಾಣ ಎಂಬ ಯಕ್ಷಗಾನದಲ್ಲಿ ಅಭಿನಯಿಸಿದ್ದೆ. ಆಗ ಷಣ್ಮುಗನ ಪಾತ್ರ ಮಾಡಿದ್ದೆ. ಏಳನೇ ತರಗತಿಯಲ್ಲಿ ದೇವಿಯ ಪಾತ್ರದಲ್ಲಿ ಅಭಿನಯಿಸಿದ್ದೆ. ದೇವಿಯ ವೇಷವನ್ನು ನೋಡಿ ನನ್ನ ಊರವರೆಲ್ಲ ನನ್ನ ಅಮ್ಮನ ರೀತಿಯೇ ಕಾಣಿಸ್ತಾ ಇದ್ದೀನಿ ಅಂದಿದ್ರಂತೆ. ಪಿಯುಸಿಯಲ್ಲಿ ಧರ್ಮರಾಯನ ಪಾತ್ರ ಮಾಡಿದ್ದೆ. ಸಣ್ಣ ಸಣ್ಣ ಕ್ಯಾರೆಕ್ಟರ್‌ಗಳನ್ನು ಯಕ್ಷಗಾನದಲ್ಲಿ ಮಾಡುತ್ತಿದ್ದೆ. ಜೀವನದಲ್ಲಿ ಮೊದಲ ಬಾರಿಗೆ ಅಭಿನಯಿಸಿದ ಸಮಯವದು. ನಾವೇನೋ ಮಾಡಿದಾಗ ಜನರು ನೋಡಿ ಅಭಿನಂದಿಸುತ್ತಿದ್ದ ಸಮಯವದು. ತುಂಬಾ ಖುಷಿ ನೀಡುತ್ತಿತ್ತು" ಎಂದು ರಿಷಬ್‌ ಶೆಟ್ಟಿ ನೆನಪಿಸಿಕೊಂಡಿದ್ದಾರೆ.

ಈ ಯೂಟ್ಯೂಬ್‌ ಚಾನೆಲ್‌ ಸಂದರ್ಶನಕ್ಕೆ ಅಭಿಮಾನಿಗಳು ನಾನಾ ಬಗೆಯ ಕಾಮೆಂಟ್‌ ಮಾಡಿದ್ದಾರೆ. ರಿಷಬ್‌ ಶೆಟ್ಟಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ವಜ್ರದಂತಹ ವ್ಯಕ್ತಿ ಎಂದು ಕೆಲವರು ಹೇಳಿದ್ದಾರೆ. ಇವರು ಕಿಚ್ಚ ಸುದೀಪ್‌ ಫ್ಯಾನ್‌ ಎಂದೂ ಹೇಳಿಕೊಂಡಿದ್ದಾರೆ. ಸರ್‌ ದಯವಿಟ್ಟು ಸುದೀಪ್‌ ಜತೆಗೂ ಒಂದು ಸಿನಿಮಾ ಮಾಡಿ ಎಂದು ಕೆಲವರು ಕೇಳಿಕೊಂಡಿದ್ದಾರೆ. ಕಾಂತಾರ ಸಿನಿಮಾದ ಬಳಿಕ ಕನ್ನಡದ ಬಾಕ್ಸ್‌ ಆಫೀಸ್‌ ವಿಸ್ತಾರಗೊಳಿಸಿದ್ದಾರೆ ಎಂದು ಇನ್ನು ಕೆಲವರು ನೆನಪಿಸಿಕೊಂಡಿದ್ದಾರೆ.

ಕಾಂತಾರ ಚಾಪ್ಟರ್‌ 1 ಸಿನಿಮಾದ ಕುರಿತು

ರಿಷಬ್‌ ಶೆಟ್ಟಿ ಸದ್ಯ ಕಾಂತಾರ ಚಾಪ್ಟರ್‌ 1 ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿಯಾಗಿದ್ದಾರೆ. ಇತ್ತೀಚೆಗೆ ಪ್ರಮೋದ್‌ ಶೆಟ್ಟಿ ನಟನೆಯ ಲಾಫಿಂಗ್‌ ಬುದ್ಧ ಸಿನಿಮಾದ ಕಾರ್ಯಕ್ರಮದಲ್ಲಿ ರಿಷಬ್‌ ಶೆಟ್ಟಿ ಆಗಮಿಸಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಲಾಫಿಂಗ್‌ ಬುದ್ಧ ಸಿನಿಮಾವು ರಿಷಬ್‌ ನಿರ್ಮಾಣದ ಸಿನಿಮಾ. ಈ ಸಿನಿಮಾದಲ್ಲಿ ಸಣ್ಣ ಪಾತ್ರವೊಂದರಲ್ಲೂ ಕಾಣಿಸಿಕೊಂಡಿದ್ದಾರೆ. ಸದ್ಯ ಕುಂದಾಪುರದಲ್ಲಿ ಹಾಕಿರುವ ಬೃಹತ್‌ ಸೆಟ್‌ನಲ್ಲಿ ಕಾಂತಾರ ಸಿನಿಮಾದ ಶೂಟಿಂಗ್‌ ನಡೆಯುತ್ತಿದೆ. ಇತ್ತೀಚೆಗೆ ಮಳೆ ಹೆಚ್ಚಿದ್ದಾಗ ಶೂಟಿಂಗ್‌ಗೆ ಬ್ರೇಕ್‌ ನೀಡಲಾಗಿತ್ತು. ಈ ಸಿನಿಮಾದಲ್ಲಿ ಕಾಡುಬೆಟ್ಟು ಶಿವನಾಗಿ ರಿಷಬ್‌ ಶೆಟ್ಟಿ ನಟಿಸಿದ್ದಾರೆ. ಹೊಂಬಾಳೆ ಫಿಲಂಸ್‌ನಡಿ ವಿಜಯ್‌ ಕಿರಗುಂದೂರು ನಿರ್ಮಿಸಿದ ಸಿನಿಮಾ ಪ್ಯಾನ್‌ ಇಂಡಿಯಾದ ಬಹುನಿರೀಕ್ಷಿತ ಚಿತ್ರವಾಗಿದೆ. ಮುಂದಿನ ವರ್ಷ ಕಾಂತಾರ ಚಾಪ್ಟರ್‌ 1 ಬಿಡುಗಡೆಯಾಗಲಿದೆ. ಈ ಸಿನಿಮಾದ ಪಾತ್ರವರ್ಗದ ಕುರಿತು ಇನ್ನೂ ಚಿತ್ರತಂಡ ಮಾಹಿತಿ ಹಂಚಿಕೊಂಡಿಲ್ಲ.