Darshan: ದಯಮಾಡಿ ಕೈ ಮುಗಿದು ಕಾಲಿಗೆ ಬಿದ್ದು ಕೇಳ್ತಿನಿ… ಯಶ್‌ ಅಭಿಮಾನಿಗಳ ಸಾವಿನ ಸಂದರ್ಭದಲ್ಲಿ ಕಾಟೇರ ನಟ ದರ್ಶನ್‌ ಹೇಳಿಕೆ ವೈರಲ್‌
ಕನ್ನಡ ಸುದ್ದಿ  /  ಮನರಂಜನೆ  /  Darshan: ದಯಮಾಡಿ ಕೈ ಮುಗಿದು ಕಾಲಿಗೆ ಬಿದ್ದು ಕೇಳ್ತಿನಿ… ಯಶ್‌ ಅಭಿಮಾನಿಗಳ ಸಾವಿನ ಸಂದರ್ಭದಲ್ಲಿ ಕಾಟೇರ ನಟ ದರ್ಶನ್‌ ಹೇಳಿಕೆ ವೈರಲ್‌

Darshan: ದಯಮಾಡಿ ಕೈ ಮುಗಿದು ಕಾಲಿಗೆ ಬಿದ್ದು ಕೇಳ್ತಿನಿ… ಯಶ್‌ ಅಭಿಮಾನಿಗಳ ಸಾವಿನ ಸಂದರ್ಭದಲ್ಲಿ ಕಾಟೇರ ನಟ ದರ್ಶನ್‌ ಹೇಳಿಕೆ ವೈರಲ್‌

ಯಶ್‌ ಹುಟ್ಟುಹಬ್ಬದ ಸಂಭ್ರಮವನ್ನು ರಾಜ್ಯದಲ್ಲಿ ನಡೆದ ನಾಲ್ಕು ಅಭಿಮಾನಿಗಳ ಸಾವು ಮರೆಯಾಗಿಸಿದೆ. ವಿದ್ಯುತ್‌ ಅಪಘಾತದಲ್ಲಿ ಮೃತಪಟ್ಟ ಮೂವರು ಅಭಿಮಾನಿಗಳು ಮತ್ತು ಯಶ್‌ ಬೆಂಗಾವಲು ವಾಹನವನ್ನು ಚೇಸ್‌ ಮಾಡಿ ಪ್ರಾಣ ಕಳೆದುಕೊಂಡ ಅಭಿಮಾನಿಯ ಸಾವಿನ ಸಂದರ್ಭದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ದರ್ಶನ್‌ ಈ ಹಿಂದೆ ಮಾಡಿದ್ದ ವಿನಂತಿ ಮುನ್ನಲೆಗೆ ಬಂದಿದೆ.

ಯಶ್‌ ಅಭಿಮಾನಿಗಳ ಸಾವಿನ ಸಂದರ್ಭದಲ್ಲಿ ಕಾಟೇರ ನಟ ದರ್ಶನ್‌ ಹೇಳಿಕೆ ವೈರಲ್‌
ಯಶ್‌ ಅಭಿಮಾನಿಗಳ ಸಾವಿನ ಸಂದರ್ಭದಲ್ಲಿ ಕಾಟೇರ ನಟ ದರ್ಶನ್‌ ಹೇಳಿಕೆ ವೈರಲ್‌

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ ಹುಟ್ಟುಹಬ್ಬದ ಮುನ್ನದಿನ ರಾತ್ರಿ ತಮ್ಮ ನೆಚ್ಚಿನ ದೊಡ್ಡ ಕಟೌಟ್‌ ನಿಲ್ಲಿಸುತ್ತಿದ್ದ ವೇಳೆ ವಿದ್ಯುತ್‌ ತಂತಿಗೆ ತಗುಲಿ ವಿದ್ಯುತ್‌ ಪ್ರವಾಹಿಸಿ ಮೂರು ಅಭಿಮಾನಿಗಳು ಮೃತಪಟ್ಟಿದ್ದರು. ಮೃತಪಟ್ಟ ಕುಟುಂಬಕ್ಕೆ ಸಾಂತ್ವಾನ ಹೇಳಿ ಬಂದ ಯಶ್‌ ವಾಹನವನ್ನು ಹಿಂಬಾಲಿಸುತ್ತಿದ್ದ ಅಭಿಮಾನಿಯೊಬ್ಬರ ಸ್ಕೂಟರ್‌ ಬೆಂಗಾವಲು ಪಡೆಗೆ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡ ಆ ಅಭಿಮಾನಿಯೂ ಮೃತಪಟ್ಟ ಸುದ್ದಿ ಬಂದಿದೆ. ಇದೇ ಸಂದರ್ಭದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ "ಅಭಿಮಾನಿಗಳ ಈ ವರ್ತನೆ" ಕುರಿತು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ಮಾತನಾಡಿದ್ದ ವಿಡಿಯೋಗಳು ವೈರಲ್‌ ಆಗುತ್ತಿವೆ.

ಅಭಿಮಾನಿಗಳಿಗೆ ದರ್ಶನ್‌ ಮನವಿ

ದರ್ಶನ್‌ ಈ ಹಿಂದೆ ಹಲವು ಬಾರಿ ಅಭಿಮಾನಿಗಳಿಗೆ ಬೈಕ್‌ನಲ್ಲಿ ಚೇಸ್‌ ಮಾಡಬೇಡಿ ಎಂದು ಮನವಿ ಮಾಡಿದ್ದರು. ಈ ವಿಡಿಯೋಗಳು ಇಂದು ಟ್ವಿಟ್ಟರ್‌ನಲ್ಲಿ ವೈರಲ್‌ ಆಗುತ್ತಿದೆ.

"ದಯವಿಟ್ಟು ಕರ್ನಾಟಕದಲ್ಲಿರುವ ಎಲ್ಲಾ ನನ್ನ ಸೆಲೆಬ್ರಿಟಿಗಳಿಗೆ (ಅಭಿಮಾನಿಗಳಿಗೆ) ಒಂದು ಮೆಸೆಜ್‌ ಹೋಗಲಿ. ಇಲ್ಲಿ ನೀವು ಇಷ್ಟು ಜನ ಇದ್ದೀರಾ. ದಯಮಾಡಿ ನಾನು ಗಾಡಿ ಓಡಿಸುವಾಗ ಅಕ್ಕ ಪಕ್ಕ ಬೈಕ್‌ಗಳಲ್ಲಿ ಬರಬೇಡ್ರಿ. ನಿಮ್ಮ ಪಾದರವಿರಂದಗಳಿಗೆ ನಾನು ಕೇಳಿಕೊಳ್ಳುವುದು ಇಷ್ಟೇ. ಏನಕ್ಕೆ ಅಂತ ನಾನು ಹೇಳ್ತಿನಿ ಕೇಳಿ. ನೀವು ಬರೀ ಒಂದು ಮೊಬೈಲ್‌ ಹಿಡಿದುಕೊಂಡು ಲೈಕ್‌ ಕಮೆಂಟ್ಸ್‌ಗಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ. ನಾವು ನೂರರಲ್ಲಿ ನೂರ ಇಪ್ಪತ್ತರಲ್ಲಿ ಹೋಗ್ತ ಇರ್ತಿವಿ. ಈ ಸಂದರ್ಭದಲ್ಲಿ ಬೈಕ್‌ನಲ್ಲಿ ಅಕ್ಕಪಕ್ಕ ಬರ್ತೀರಾ.. ರೀ ಯೋಚನೆ ಮಾಡ್ರಯ್ಯ... ನನ್ನ ಇನ್ನು ಯಾವತ್ತು ಬೇಕಾದರೂ ನೋಡ್ತಿರಾ... ನನ್ನ ನೋಡದೆ ಇದ್ದರೂ ಪರವಾಗಿಲ್ಲ. ಮನೆಯಲ್ಲಿ ವಯಸ್ಸಾದ ತಂದೆ ತಾಯಿ ಇರ್ತಾರೆ. ಅವಾಗತಾನೇ ಮದುವೆಯಾದ ಹೊಸ ಗಂಡ ಹೆಂಡ್ತಿ ಆಗಿರ್ತೀರ. ಆಗ ತಾನೇ ಹುಟ್ಟಿದ ಮಗು ಮನೆಯಲ್ಲಿ ಇರುತ್ತೆ. ನಿಮಗೆ ಏನಾದರೂ ಹೆಚ್ಚು ಕಮ್ಮಿ ಆದರೆ, ನಿಮ್ಮ ಮನೆಯವರು ಸಾಯೋ ತನಕ ನನ್ನ ದೂಷಣೆ ಮಾಡ್ತಾರೆ. ಇದು ನಿಮಗೆ ಇಷ್ಟನಾ? ದಯಮಾಡಿ ಗಾಡಿಗಳ ಪಕ್ಕದಲ್ಲಿ ಬರಬೇಡಿ. ದಯಮಾಡಿ ನಿಮ್ಮ ಪಾದಗಳಿಂದ ಇಲ್ಲಿಂದಲೇ ಕೇಳಿಕೊಳ್ತಿನಿ" ಎಂದು ದರ್ಶನ್‌ ಮನವಿ ಮಾಡಿದ್ದರು.

ವೈರಲ್‌ ಆದ ಇನ್ನೊಂದು ವಿಡಿಯೋದಲ್ಲೂ ಇದೇ ರೀತಿ ದರ್ಶನ್‌ ಮನವಿ ಮಾಡಿದ್ದರು. "ದಯವಿಟ್ಟು ಚೇಸ್‌ ಮಾಡೋದು ಹಿಂಬಾಲಿಸೋದು ಮಾಡಬೇಡಿ. ಏನಾದರೂ ಹೆಚ್ಚು ಕಮ್ಮಿ ಆದರೆ ಮನೆಯಲ್ಲಿರುವ ತಂದೆ ತಾಯಿ ಬಂಧು ಬಳಗ ಅನಾಥರಾಗ್ತರೆ" ಎಂದು ದರ್ಶನ್‌ ಹೇಳಿದ್ದರು. ಇಂತಹ ಹಲವು ವಿಡಿಯೋಗಳನ್ನು ದರ್ಶನ್‌ ಬಾಸ್‌ಗಳು "ಡಿ ಬಾಸ್‌ ಒನ್ಸ್‌ ಸೆಡ್‌" ಎಂಬ ಕ್ಯಾಪ್ಷನ್‌ನಡಿ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಎಲ್ಲಾ ಸಿನಿಮಾ ನಟನಟಿಯರ ಅಭಿಮಾನಿಗಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಯಶ್‌ ಹುಟ್ಟುಹಬ್ಬ- ನಾಲ್ಕು ಅಭಿಮಾನಿಗಳ ಸಾವು

ಗದಗದ ಸೊರಣಗಿಯಲ್ಲಿ ಯಶ್‌ ಹುಟ್ಟುಹಬ್ಬದ ಹಿಂದಿನ ದಿನ ರಾತ್ರಿ ಯುವಕರು ಬ್ಯಾನರ್‌ ಕಟ್ಟುತ್ತಿದ್ದಾಗ ಬ್ಯಾನರ್‌ ವಿದ್ಯುತ್‌ ತಂತಿಗೆ ತಾಗಿತ್ತು. ಈ ಸಂದರ್ಭದಲ್ಲಿ ವಿದ್ಯುತ್‌ ಪ್ರವಹಿಸಿ ಮೂರು ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ನವೀನ್‌, ಹನುಮಂತ, ಮುರಳಿ ಎಂಬ ಯುವಕರು ಮೃತಪಟ್ಟಿದ್ದರು. ಮೃತಪಟ್ಟವರ ಮನೆಗೆ ಭೇಟಿ ನೀಡಿದ್ದ ಯಶ್‌ ಬಳಿಕ ಗಾಯಗೊಂಡ ಅಭಿಮಾನಿಗಳನ್ನು ಆಸ್ಪತ್ರೆಗೆ ಹೋಗಿ ನೋಡಿದ್ದರು. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಯಶ್‌ ಹೋಗುತ್ತಿರುವಾಗ ಇವರ ಬೆಂಗಾವಲು ವಾಹನಕ್ಕೆ ನಿಖಿಲ್‌ ಎಂಬ ಯುವಕ ಸ್ಕೂಟರ್‌ನಲ್ಲಿ ಡಿಕ್ಕಿ ಹೊಡೆದಿದ್ದ. ಯಶ್‌ರನ್ನು ನೋಡುವ ಕಾತರದಲ್ಲಿ ಸ್ಕೂಟರ್‌ ಓಡಿಸುತ್ತಿದ್ದ ಈತನ ಬೈಕ್‌ ಡಿಕ್ಕಿಯಾಗಿತ್ತು. ಆತನೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

Whats_app_banner