ಶ್ರೀಮುರಳಿ ಬಘೀರ ಚಿತ್ರದ ರುಧಿರ ಧಾರಾ ವಿಡಿಯೋ ಹಾಡು ರಿಲೀಸ್‌; 100 ಬಾರಿ ಕೇಳಿದ್ರೂ ಕೇಳ್ತಾನೆ ಇರಬೇಕು ಅನ್ನಿಸುತ್ತೆ ಎಂದ ಫ್ಯಾನ್ಸ್
ಕನ್ನಡ ಸುದ್ದಿ  /  ಮನರಂಜನೆ  /  ಶ್ರೀಮುರಳಿ ಬಘೀರ ಚಿತ್ರದ ರುಧಿರ ಧಾರಾ ವಿಡಿಯೋ ಹಾಡು ರಿಲೀಸ್‌; 100 ಬಾರಿ ಕೇಳಿದ್ರೂ ಕೇಳ್ತಾನೆ ಇರಬೇಕು ಅನ್ನಿಸುತ್ತೆ ಎಂದ ಫ್ಯಾನ್ಸ್

ಶ್ರೀಮುರಳಿ ಬಘೀರ ಚಿತ್ರದ ರುಧಿರ ಧಾರಾ ವಿಡಿಯೋ ಹಾಡು ರಿಲೀಸ್‌; 100 ಬಾರಿ ಕೇಳಿದ್ರೂ ಕೇಳ್ತಾನೆ ಇರಬೇಕು ಅನ್ನಿಸುತ್ತೆ ಎಂದ ಫ್ಯಾನ್ಸ್

ಶ್ರೀ ಮುರಳಿ ಅಭಿನಯದ ಬಘೀರ ಚಿತ್ರದ ರುಧಿರ ಧಾರಾ ವಿಡಿಯೋ ಹಾಡು ರಿಲೀಸ್‌ ಆಗಿದೆ. ಹೊಂಬಾಳೆ ಫಿಲ್ಮ್‌ ಯೂಟ್ಯೂಬ್‌ನಲ್ಲಿ ಚಿತ್ರತಂಡ ಸೋಮವಾರ ರಾತ್ರಿ ವಿಡಿಯೋ ಹಂಚಿಕೊಂಡಿದ್ದು ಇದುವರೆಗೂ 95 ಸಾವಿರಕ್ಕೂ ಹೆಚ್ಚು ಮಂದಿ ಹಾಡು ನೋಡಿ ಖುಷಿಯಾಗಿದ್ದಾರೆ. 100 ಬಾರಿ ಕೇಳಿದ್ರೂ ಕೇಳ್ತಾನೇ ಇರಬೇಕು ಎಂದು ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.

ಶ್ರೀಮುರಳಿ ಅಭಿನಯದ ಬಘೀರ ಚಿತ್ರದ ರುಧಿರ ಧಾರಾ ವಿಡಿಯೋ ಹಾಡು ರಿಲೀಸ್‌
ಶ್ರೀಮುರಳಿ ಅಭಿನಯದ ಬಘೀರ ಚಿತ್ರದ ರುಧಿರ ಧಾರಾ ವಿಡಿಯೋ ಹಾಡು ರಿಲೀಸ್‌ (PC: Hombale Films YouTube)

ಅಕ್ಟೋಬರ್‌ 31 ರಂದು ತೆರೆ ಕಂಡಿದ್ದ ಶ್ರೀಮುರಳಿ ಅಭಿನಯದ ಬಘೀರ ಸಿನಿಮಾಗೆ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಶ್ರೀಮುರಳಿ ಪೊಲಿಸ್‌ ಅಧಿಕಾರಿಯಾರಿ ವೇದಾಂತ್‌ ಹಾಗೂ ತೆರೆಮರೆಯಲ್ಲಿ ದುಷ್ಟರನ್ನು ಹತ್ತಿಕ್ಕುವ ಬಘೀರನಾಗಿ ನಟಿಸಿ ಗಮನ ಸೆಳೆದಿದ್ದರು. ಬಿಡುಗಡೆಯಾದಾಗಿನಿಂದ ಸಿನಿಮಾ ಸುಮಾರು 25 ಕೋಟಿ ರೂ. ಲಾಭ ಮಾಡಿದೆ ಎನ್ನಲಾಗುತ್ತಿದೆ.

ರುಧಿರ ಧಾರಾ ಮಾಸ್‌ ವಿಡಿಯೋ ಹಾಡು ರಿಲೀಸ್‌

ಈ ನಡುವೆ ಬಘೀರ ಚಿತ್ರದ ರುಧಿರ ಧಾರಾ ವಿಡಿಯೋ ಹಾಡು ರಿಲೀಸ್‌ ಆಗಿದೆ. ಚಿತ್ರತಂಡ ಸಿನಿಮಾ ರಿಲೀಸ್‌ಗೆ ಮುನ್ನ ಹಾಡಿನ ಲಿರಿಕಲ್‌ ಹಾಡನ್ನು ಬಿಡುಗಡೆ ಮಾಡಿತ್ತು. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿದವರು ಮಾತ್ರ, ರುಧಿರಧಾರಾ ಪೂರ್ತಿ ಹಾಡನ್ನು ನೋಡಿದ್ದರು. ಇದೀಗ ಸಿನಿಮಾ ನೋಡದಿದ್ದವರು ಕೂಡಾ ಯೂಟ್ಯೂಬ್‌ನಲ್ಲಿ ಈ ಹಾಡನ್ನು ನೋಡಬಹುದು. ಸೋಮವಾರ ರಾತ್ರಿ, ಚಿತ್ರತಂಡ ರುಧಿರಧಾರಾ ಹಾಡನ್ನು ರಿಲೀಸ್‌ ಮಾಡಿದೆ. ಬಿಡುಗಡೆಯಾದಾಗಿನಿಂದ ಇದುವರೆಗೂ 95 ಸಾವಿರಕ್ಕೂ ಹೆಚ್ಚು ಮಂದಿ ಈ ಹಾಡನ್ನು ನೋಡಿ ಮೆಚ್ಚಿದ್ದಾರೆ. ಇದೊಂದು ಹಾಡು ನೋಡಲೆಂದೇ ನಾನು ಚಿತ್ರಮಂದಿರಕ್ಕೆ ಹೋಗಿದ್ದು ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.

ಅನ್ಯಾಯದ ವಿರುದ್ಧ ಹೋರಾಡುವ ಬಘೀರ

ನನ್ನ ಮಗಳಿಗೆ ಆಗಿರೋ ಅನ್ಯಾಯಕ್ಕೆ ಯಾರು ನ್ಯಾಯ ಮಾಡಲಿಲ್ಲ ಅಂದ್ರೂ ಆ ದೇವರು ನ್ಯಾಯ ಮಾಡಿದ್ದಾನೆ ಎಂದು ತಾಯಿಯೊಬ್ಬಳ ನೋವಿನ ಮಾತುಗಳಿಂದ ಈ ಹಾಡು ಆರಂಭವಾಗುತ್ತದೆ. ಹಾಡಿನ ಆರಂಭದಲ್ಲೇ ಶ್ರೀಮುರಳಿ ಎಂಟ್ರಿ ಕೊಡುತ್ತಾರೆ. ಯುವತಿಯೊಬ್ಬಳಿಗೆ ಆಸಿಡ್‌ ಎರಚಿದ ರೌಡಿಗೆ ಬಘೀರ ಆಸಿಡ್‌ ಎರಚುತ್ತಾನೆ. ಯಾವೆಲ್ಲಾ ಕೇಸ್‌ಗಳನ್ನು ಮುಚ್ಚಿ ಹಾಕಲು ಇನ್ಸ್‌ಪೆಕ್ಟರ್‌ ವೇದಾಂತ್‌ಗೆ ಅಪರಾಧಿಗಳು ಹಣ ನೀಡುವರೋ, ಬಘೀರನಾಗಿ ಅದೇ ಅನ್ಯಾಯವನ್ನು ಮೆಟ್ಟಿ ನಿಲ್ಲುತ್ತಾನೆ. ಒಟ್ಟಿನಲ್ಲಿ ಪೊಲೀಸ್‌ ಅಧಿಕಾರಿಯಾಗಿ ಸಮಾಜದಲ್ಲಿ ಆಗುತ್ತಿರುವ ಅನ್ಯಾಯವನ್ನು ತಡೆಯಲು ಸಾಧ್ಯವಾಗದೆ, ಬಘೀರನಾಗಿ ತಡೆಯುತ್ತಾನೆ.

ಅನಿರುದ್ಧ್‌ ಶಾಸ್ತ್ರಿ ಸಾಹಿತ್ಯ ಬರೆದು ಹಾಡಿರುವ ಹಾಡು

ಬಘೀರ ಸಿನಿಮಾ ಹಾಡುಗಳಿಗೆ ಅಜನೀಶ್‌ ಲೋಕನಾಥ್‌ ಸಂಗೀತ ನೀಡಿದ್ದಾರೆ. ರುಧಿರಧಾರಾ ಹಾಡಿಗೆ ಅನಿರುದ್ಧ್‌ ಶಾಸ್ತ್ರಿ ಸಾಹಿತ್ಯ ಬರೆದಿದ್ದು ಸಂಗಡಿಗರೊಂದಿಗೆ ಹಾಡಿದ್ದಾರೆ. ಬಘೀರ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ ಅಡಿಯಲ್ಲಿ ವಿಜಯ್‌ ಕಿರಗಂದೂರು ನಿರ್ಮಿಸಿದ್ದು ಡಾ ಸೂರಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಶ್ರೀಮುರಳಿಗೆ ರುಕ್ಮಿಣಿ ವಸಂತ್‌ ಜೋಡಿಯಾಗಿದ್ದಾರೆ. ಪ್ರಕಾಶ್‌ ರಾಜ್‌, ಸುಧಾರಾಣಿ, ಅಚ್ಯುತ್‌ ಕುಮಾರ್‌, ರಂಗಾಯಣ ರಘು ಹಾಗೂ ಇತರರು ಸಿನಿಮಾದಲ್ಲಿ ನಟಿಸಿದ್ದಾರೆ.

ಫುಲ್‌ ವಿಡಿಯೋ ಹಾಡನ್ನು ನೋಡಿ ರೋರಿಂಗ್‌ ಸ್ಟಾರ್‌ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಹಾಡು ನೋಡುವ ಸಲುವಾಗಿ ನಾನು ಥಿಯೇಟರ್‌ಗೆ ಹೋಗಿದ್ದು. ಆದ್ರೂ ಈ ಹಾಡನ್ನು ಥಿಯೇಟರ್‌ನಲ್ಲಿ ನೋವು ಮಜಾನೇ ಬೇರೆ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆಗ ಉಗ್ರಂ ವೀರಂ , ಈಗ ರುಧಿರ ಧಾರಾ, ಈ ಹಾಡು ಶ್ರೀಮುರಳಿ ಹೈಟು, ಪರ್ಸನಾಲಿಟಿಗೆ ಹೇಳಿ ಮಾಡಿಸಿದಂತೆ ಇದೆ. ಹಾಡನ್ನು 100 ಬಾರಿ ಕೇಳಿದರೂ ಬೇಸರವಾಗುವುದಿಲ್ಲ ಎಂದೆಲ್ಲಾ ಅಭಿಮಾನಿಗಳು ಹಾಡಿನ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

Whats_app_banner