ದರ್ಶನ್‌ ಭೇಟಿ ಬಳಿಕ ರೇಣುಕಾಸ್ವಾಮಿ ಕುಟುಂಬ ಸಂತೈಸಿದ ವಿನೋದ್‌ ರಾಜ್;‌ ಹುಟ್ಟೋ ಮಗುವಿಗಾಗಿ ಹಣಕಾಸಿನ ನೆರವು
ಕನ್ನಡ ಸುದ್ದಿ  /  ಮನರಂಜನೆ  /  ದರ್ಶನ್‌ ಭೇಟಿ ಬಳಿಕ ರೇಣುಕಾಸ್ವಾಮಿ ಕುಟುಂಬ ಸಂತೈಸಿದ ವಿನೋದ್‌ ರಾಜ್;‌ ಹುಟ್ಟೋ ಮಗುವಿಗಾಗಿ ಹಣಕಾಸಿನ ನೆರವು

ದರ್ಶನ್‌ ಭೇಟಿ ಬಳಿಕ ರೇಣುಕಾಸ್ವಾಮಿ ಕುಟುಂಬ ಸಂತೈಸಿದ ವಿನೋದ್‌ ರಾಜ್;‌ ಹುಟ್ಟೋ ಮಗುವಿಗಾಗಿ ಹಣಕಾಸಿನ ನೆರವು

Chitradurga Renukaswamy Murder: ನಟ ವಿನೋದ್‌ ರಾಜ್‌ ಮೃತ ರೇಣುಕಾಸ್ವಾಮಿ ಕುಟುಂಬದವರನ್ನು ಭೇಟಿಯಾಗಿದ್ದಾರೆ. ಇಂದು ರೇಣುಕಸ್ವಾಮಿ ಪೋಷಕರನ್ನು ಭೇಟಿಯಾಗಿದ್ದು, ಸಾಂತ್ವನ ಹೇಳಿದ್ದಾರೆ. ಇದೇ ಸಮಯದಲ್ಲಿ ಆ ಕುಟುಂಬಕ್ಕೆ 1 ಲಕ್ಷ ರೂಪಾಯಿ ನೀಡಿದ್ದಾರೆ.

ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ 1 ಲಕ್ಷ ರೂಪಾಯಿ ನೀಡಿದ ವಿನೋದ್‌ ರಾಜ್‌
ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ 1 ಲಕ್ಷ ರೂಪಾಯಿ ನೀಡಿದ ವಿನೋದ್‌ ರಾಜ್‌

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಮತ್ತು ಇತರರು ನ್ಯಾಯಾಂಗ ಬಂಧನದಲ್ಲಿದ್ದು, ಪರಪ್ಪನ ಅಗ್ರಹಾರದಲ್ಲಿದ್ದಾರೆ. ಇದೇ ಸಮಯದಲ್ಲಿ ನಟ ವಿನೋದ್‌ ರಾಜ್‌ ಮೃತ ರೇಣುಕಾಸ್ವಾಮಿ ಕುಟುಂಬದವರನ್ನು ಭೇಟಿಯಾಗಿದ್ದಾರೆ. ಇಂದು ರೇಣುಕಸ್ವಾಮಿ ಪೋಷಕರನ್ನು ಭೇಟಿಯಾಗಿದ್ದು, ಸಾಂತ್ವನ ಹೇಳಿದ್ದಾರೆ. ಇದೇ ಸಮಯದಲ್ಲಿ ಆ ಕುಟುಂಬಕ್ಕೆ 1 ಲಕ್ಷ ರೂಪಾಯಿ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ವಿನೋದ್‌ ರಾಜ್‌ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದು, ನಟ ದರ್ಶನ್‌ರನ್ನು ಭೇಟಿ ಮಾಡಿದ್ದರು.

"ರೇಣುಕಾಸ್ವಾಮಿ ಕುಟುಂಬದಲ್ಲಿ ಸಂಪಾದನೆ ಮಾಡುವವರು ಯಾರೂ ಇಲ್ಲ. ವಯಸ್ಸಾದ ಅಜ್ಜಿ, ಅವರನ್ನು ನೋಡಿಕೊಳ್ಳಲು ಯಾರಿಲ್ಲ. ರೇಣುಕಾಸ್ವಾಮಿ ಈ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದರು" ಎಂದು ನಟ ವಿನೋದ್‌ ರಾಜ್‌ ಹೇಳಿದ್ದಾರೆ. "ನಾವು ಜೀವನವಿಡಿ ಹಣ ಸಂಪಾದನೆ ಮಾಡುತ್ತೇವೆ. ಹೆಸರು ಸಂಪಾದನೆ ಮಾಡುತ್ತೇವೆ. ಇದು ಮಾತ್ರ ಸಾಕಾಗದು. ಒಳ್ಳೆಯದನ್ನು ಮಾಡಬೇಕು ಕಲಾವಿದರಾಗಿ ಒಳ್ಳೆಯದನ್ನು ಮಾಡುವುದು ಕೂಡ ನಮ್ಮ ಕೆಲಸ" ಎಂದು ವಿನೋದ್‌ ರಾಜ್‌ ಹೇಳಿದ್ದಾರೆ.

"ಕಲಾವಿದರಾದ ನಾವು ಸಮಾಜದಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ನಮಗೂ ಜನ ಸಾಮಾನ್ಯರಿಗೂ ಯಾವುದೇ ವ್ಯತ್ಯಾಸ ಇಲ್ಲ. ಆದರೆ, ನಾವು ಮಾತನಾಡಿದರೆ ದೊಡ್ಡದಾಗಿ ಕಾಣಿಸುತ್ತದೆ. ನಮಗೆ ಸಮಾಜ ಗೌರವ, ಜವಾಬ್ದಾರಿ ನೀಡಿರುವ ಕಾರಣ ಎಚ್ಚರಿಕೆಯಿಂದ ರೀತಿ ಇರಬೇಕು. ಮಾಧ್ಯಮಗಳ ಜತೆಯೂ ನಾವು ಚೆನ್ನಾಗಿರಬೇಕು. ಒಳ್ಳೆಯ ರೀತಿ ನಡೆದುಕೊಳ್ಳಬೇಕು. ಮಾಧ್ಯಮದವರು ನಮ್ಮ ಶತ್ರುಗಳಲ್ಲ. ನಮಗೆ ಅನೇಕ ಬಾರಿ ಮಾಧ್ಯಮಗಳೇ ಬುದ್ದಿ ಹೇಳುತ್ತವೆ. ನಾವು ಒಳ್ಳೆಯ ರೀತಿ ಇರಬೇಕು. ಇಲ್ಲವಾದರೆ ಇಂತಹ ಅಚಾತುರ್ಯ ಘಟನೆಗಳು ಸಂಭವಿಸುತ್ತವೆ" ಎಂದು ವಿನೋದ್‌ ರಾಜ್‌ ಹೇಳಿದ್ದಾರೆ.

ರೇಣುಕಾಸ್ವಾಮಿ ಕುಟುಂಬಕ್ಕೆ ಅವರೇ ಆಧಾರವಾಗಿದ್ದರು. ಇದೇ ಕಾರಣಕ್ಕೆ ಇತ್ತೀಚೆಗೆ ರೇಣುಕಾಸ್ವಾಮಿ ಪತ್ನಿ ಜಿಎಸ್‌ ಸಹನಾ ಅವರು ಚಿತ್ರದುರ್ಗದ ಜಿಲ್ಲಾಧಿಕಾರಿಯನ್ನು ಭೇಟಿಯಾಗಿದ್ದರು. ತನಗೆ ಅನುಕಂಪದ ಆಧಾರದಲ್ಲಿ ಕೆಲಸ ಮಾಡುವಂತೆ ಮನವಿ ಮಾಡಿದ್ದಾರೆ. "ನಾನು ಅತ್ತೆ, ಮಾವ, ಮಾವನ ತಾಯಿ ಮನೆಯಲ್ಲಿದ್ದಾರೆ. ನಾನು ಆರು ತಿಂಗಳ ಗರ್ಭಿಣಿ. ಜೀವನ ನಡೆಸಲು ಕಷ್ಟವಾಗುತ್ತಿದೆ. ನಾನು ದ್ವಿತೀಯ ಪಿಯುಸಿ ಓದಿದ್ದೇನೆ. ಅದಕ್ಕೆ ತಕ್ಕಂತೆ ಕೆಲಸ ನೀಡಿ ಎಂದು ಜಿಲ್ಲಾಧಿಕಾರಿಯವರನ್ನು ಕೇಳಿಕೊಂಡಿದ್ದಾರೆ.

ಸದ್ಯ ನಟ ದರ್ಶನ್‌ ಮನೆ ಊಟಕ್ಕೆ ಸಂಬಂಧಪಟ್ಟಂತೆ ಕೋರ್ಟ್‌ ತೀರ್ಪು ಹೊರಬಿದ್ದಿದೆ. ಇನ್ನೊಂದೆಡೆ ಚಾರ್ಜ್‌ ಶೀಟ್‌ ಸಲ್ಲಿಸಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ವಿಜಯಲಕ್ಷ್ಮಿ ಅವರು ದರ್ಶನ್‌ ಬಿಡುಗಡೆಗೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ ದರ್ಶನ್‌ಗೆ ಸದ್ಯ ಜಾಮೀನು ದೊರಕುವುದು ಕಷ್ಟ ಎನ್ನಲಾಗುತ್ತಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣವಾಗಿ ಜೈಲು ಪಾಲಾಗಿರುವ ದರ್ಶನ್‌ ಅವರನ್ನು ತರುಣ್‌ ಸುಧೀರ್‌ ಕೂಡ ಭೇಟಿ ನೀಡಿದ್ದರು. ಕಾಟೇರ ನಿರ್ದೇಶಕ ಕಾಟೇರ ನಟನನ್ನು ಭೇಟಿಯಾಗಿ ತನ್ನ ಮದುವೆ ಆಮಂತ್ರಣ ನೀಡಿದ್ದರು. ಇದಾದ ಬಳಿಕ ವಿನೋದ್‌ ರಾಜ್‌ ಕೂಡ ದರ್ಶನ್‌ನನ್ನು ಜೈಲಿನಲ್ಲಿ ಭೇಟಿಯಾಗಿದ್ದಾರೆ.

Whats_app_banner