ಸಿಹಿ ಸಲುವಾಗಿ ಸೀತಾ ಪರ ಕೋರ್ಟ್‌ನಲ್ಲಿ ಸೂರ್ಯಪ್ರಕಾಶ್ ವಕಾಲತ್ತು! ಸೂರಿಯ ಲಾ ಪಾಯಿಂಟ್‌ಗೆ ನಡುಗಿದ ಶ್ಯಾಮ್- ಶಾಲಿನಿ
Seetha Rama Serial: ಸಿಹಿ ಸಲುವಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ ಸೀತಾ ಮತ್ತು ರಾಮ. ಇವರಿಬ್ಬರ ಪರವಾಗಿ ತಾತ ಸೂರ್ಯಪ್ರಕಾಶ್ ವಕಾಲತ್ತು ವಯಿಸಿದ್ದಾರೆ. ಇನ್ನೊಂದೆಡೆ ಸಿಹಿಯನ್ನು ಪಡೆದೇ ತೀರಬೇಕೆಂದು ವಕೀಲೆ ರಾಜೇಶ್ವರಿ ಪಾಟೀಲ್ ಜತೆಗೆ ಆಗಮಿಸಿದ್ದಾರೆ ಶ್ಯಾಮ್ -ಶಾಲಿನಿ.
Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಸಿಹಿ ಸಲುವಾಗಿ ಕಾನೂನು ಸಮರ ಮುಂದುವರಿದಿದೆ. ನಮ್ಮ ಮಗಳು ನಮ್ಮ ಜತೆಯಲ್ಲಿಯೇ ಇರಬೇಕು, ಶತಾಯಗತಾಯ ಸಿಹಿಯನ್ನು ನಾವೇ ಪಡೆದುಕೊಳ್ಳಬೇಕು ಎಂಬ ಕಾರಣಕ್ಕೆ ಕೋರ್ಟ್ ಮೊರೆ ಹೋಗಿದ್ದಾನೆ ರಾಮ್. ಅದರಂತೆ, ಈ ಕೇಸ್ ಕೋರ್ಟ್ ಅಂಗಳಕ್ಕೆ ಬಂದು ನಿಂತಿದೆ. ಶ್ಯಾಮ್ ಮತ್ತು ಶಾಲಿನಿ ತಮ್ಮ ಲಾಯರ್ ಜತೆಗೆ ನ್ಯಾಯಾಲಯಕ್ಕೆ ಆಗಮಿಸಿದ್ದಾರೆ. ಇತ್ತ ರಾಮ್ ಪರ ವಕೀಲರು ಯಾರು ಎಂಬ ಕೌತುಕ ಎಲ್ಲರಲ್ಲಿಯೂ ಇತ್ತು. ಅದರಂತೆ, ಬ್ಲಾಕ್ ಕೋಟ್ ಧರಿಸಿ ಸೂರ್ಯಪ್ರಕಾಶ್ ಎಂಟ್ರಿಯಾಗಿದೆ. ಮಾವಯ್ಯನ ಈ ಅವತಾರ ಕಂಡು ಭಾರ್ಗವಿ ಶಾಕ್ ಆಗಿದ್ದಾಳೆ.
ಸಿಹಿಯನ್ನು ಕರೆದುಕೊಂಡು ಕೆನಡಾಕ್ಕೆ ಹೋಗುವ ತರಾತುರಿಯಲ್ಲಿದ್ದಾನೆ ಶ್ಯಾಮ್. ಆದರೆ, ಆತನ ಆ ಕೆಲಸಕ್ಕೆ ರಾಮ್ ಕೋರ್ಟ್‌ನಿಂದ ನೋಟಿಸ್ ತಂದಿದ್ದಾನೆ. ಸಿಹಿಯನ್ನು ಯಾವುದೇ ಕಾರಣಕ್ಕೂ ಸೀತಾಳಿಂದ ದೂರ ಮಾಡುವುದಿಲ್ಲ ಎಂದು ಪಣತೊಟ್ಟಿರುವ ರಾಮ್, ಕೋರ್ಟ್ ಮೂಲಕವೇ ತಕ್ಕ ಉತ್ತರ ನೀಡುವುದಾಗಿ ಹೇಳಿದ್ದಾನೆ. ಅದರಂತೆ, ಕೋರ್ಟ್‌ನಲ್ಲಿ ವಾದ ವಿವಾದಗಳು ನಡೆದಿವೆ. ಸೀತಾ ಪರವಾಗಿ ಸೂರ್ಯಪ್ರಕಾಶ್ ವಕಾಲತ್ತು ವಹಿಸಿದ್ದಾರೆ. ಇತ್ತ ಶ್ಯಾಮ್ ಶಾಲಿನಿ ಪರವಾಗಿ
ಸೀತಾಳ ವಾದವೇನು?: ಆಗಷ್ಟೇ ಹುಟ್ಟಿದ ಮಗುಗೇ ಅಳುವುದಷ್ಟೇ ಕೆಲಸ. ನನ್ನ ಮಗು ಅಂತ, ಅಪ್ಪಿಕೊಳ್ಳಬೇಕಾದವರು, ಮುದ್ದು ಮಾಡಬೇಕಿರುವವರು ಆವತ್ತು ಅಲ್ಲಿಗೆ ಬರಲೇ ಇಲ್ಲ. ಅವರು ಬಾರದಿದ್ದಕ್ಕೆ, ಮಗುವನ್ನು ಅನಾಥಾಶ್ರಮಕ್ಕೆ ಸೇರಿಸುವುದಾಗಿ ಮಾತನಾಡಿದ್ರು. ಆ ಮಾತಿಗೆ ನನಗೆ ಒಪ್ಪಿದೇ, ಆ ಮಗುಗೆ ನಾನೇ ತಾಯಿಯಾದೆ. ನನ್ನ ಮಗಳು ಸಿಹಿಯನ್ನು ನಾನೇ ಬೆಳೆಸಿದೆ ಎನ್ನುತ್ತಾಳೆ ಸೀತಾ.
ಶಾಲಿನಿ ವಾದವೇನು?: ಸೀತಾ ಹೇಳುತ್ತಿರುವುದು ಸುಳ್ಳು. ನಿತ್ಯ ಮಗುವಿನ ಬಗ್ಗೆ ನಾವು ಮಾಹಿತಿಯನ್ನು ಪಡೆಯುತ್ತಿದ್ದೆವು. ಡಾ. ಅನಂತಲಕ್ಷ್ಮೀ ಅವರಿಗೂ ಕಾಲ್ ಮಾಡಿದ್ರೂ, ಅವರನ್ನು ಭೇಟಿಯಾಗೋಕೆ ಹೋದರೂ ಅವರು ಸಿಕ್ಕಿಲ್ಲ. ಮಗು ಸತ್ತೋಗಿದೆ ಅನ್ನೋ ಇಲ್ಲ ಸಲ್ಲದ ಸುಳ್ಳನ್ನು ಸೃಷ್ಟಿ ಮಾಡಿ, ನಮ್ಮಿಂದ ಮಗು ಪಡೆದುಕೊಂಡಿದ್ದಾಳೆ ಎಂದಿದ್ದಾಳೆ ಶಾಲಿನಿ. ಇತ್ತ ಶ್ಯಾಮ್ ಮತ್ತು ಶಾಲಿನಿ ಮಗುವನ್ನು ಬೇಕು ಅಂತ ಬಿಟ್ಟು ಹೋಗಿಲ್ಲ. ಮಗು ಸತ್ತು ಹೋಗಿದೆ ಅನ್ನೋ ಕಾರಣಕ್ಕೆ ಹೋಗಿದ್ದಾರೆ. ಹಾಗಾಗಿ ಅವರಿಗೇ ಈ ಮಗು ಸಲ್ಲಬೇಕು ಎಂಬುದು ಶ್ಯಾಮ್ ಪರ ವಕೀಲರ ವಾದ.
ಲಾಯರ್ ಸೂರ್ಯಪ್ರಕಾಶ್: ಮಹಾಸ್ವಾಮಿ, ಡಾಕ್ಟರ್ ಅನಂತಲಕ್ಷ್ಮೀ ಅವರ ಸ್ಟೇಟ್‌ಮೆಂಟ್ ಅನ್ನು ನಿಮ್ಮ ಮುಂದಿಟ್ಟಿದ್ದೇನೆ. ಜತೆಗೆ ಮಗುವನ್ನು ಕರೆದುಕೊಂಡು ಹೋಗಿ ಎಂದು ಆವತ್ತು ಶ್ಯಾಮ್ ಮತ್ತು ಶಾಲಿನಿ ದಂಪತಿಗೆ ಸೀತಾ ಬರೆದ ಪತ್ರಗಳೂ ನಿಮ್ಮ ಮುಂದಿವೆ ಎಂದಿದ್ದಾರೆ ಸೂರ್ಯಪ್ರಕಾಶ್. ಅಧಿಕಾರ ಮತ್ತು ಮಮಕಾರದ ನಡುವೆ ಯುದ್ಧ ನಡೆಯುತ್ತಿದೆ. ಹಾಗಾಗಿ ಮಮಕಾರವೇ ಇಲ್ಲಿ ಯೋಗ್ಯ ಎಂದು ವಾದ ಮಂಡಿಸಿದ್ದಾರೆ ಸೂರ್ಯಪ್ರಕಾಶ್.
ಅವಳಿ ಜವಳಿ ಮಕ್ಕಳ ವಿಚಾರ ಮುನ್ನೆಲೆಗೆ
ಆ ಮಗುವನ್ನು ಆರು ವರ್ಷಗಳ ಕಾಲ ನಾನೇ ಸಾಕಿದ್ದೇನೆ. ಆ ಮಗುವಿನ ದೃಷ್ಟಿಯಿಂದ ಅವಳು ನನ್ನ ಜತೆಗೇ ಇರಲಿ ಎಂದು ಸೀತಾ ಕೋರ್ಟ್ ಮುಂದೆ ಅಂಗಲಾಚಿದ್ದಾಳೆ. ಇತ್ತ ಕೇಸ್ ಸೀತಾಳತ್ತ ಹೊರಳುತ್ತಿದ್ದಂತೆ, ಭಾರ್ಗವಿ ಕುಪಿತಳಾಗಿದ್ದಾಳೆ. ನೇರವಾಗಿ ಶಾಲಿನಿಗೆ ವಾಯ್ಸ್ ನೋಟ್ ಕಳಿಸಿದ್ದಾಳೆ. ಒಬ್ಬ ತಾಯಿಯಾಗಿ ಮಾತನಾಡು ಎಂದಿದ್ದಾಳೆ. ಹೀಗಿರುವಾಗಲೇ ಅವಳಿ ಜವಳಿ ಮಕ್ಕಳಿದ್ದ ವಿಚಾರವೂ ಮುನ್ನೆಲೆಗೆ ಬಂದಿದೆ. ಸೀತಾಗೆ ಮತ್ತೆ ಸಂಕಷ್ಟ ಶುರುವಾಗಿದೆ. ಎರಡು ಮಕ್ಕಳಿದ್ದ ವಿಚಾರ ನಮಗೆ ಗೊತ್ತಿಲ್ಲ. ಒಂದು ಮಗು ಸತ್ತಿದೆ ಎಂದು ತಿಳಿದು ನಾವು ಅಲ್ಲಿಂದ ಹೊರಟೆವು. ಈಗ ಆ ಮಗುವನ್ನು ನಮಗೆ ಕೊಡಿಸಿ ಎಂದಿದ್ದಾಳೆ ಶಾಲಿನಿ.
ಕೋರ್ಟ್‌ನಲ್ಲಿ ಕಣ್ಣೀರ ನಾಟಕವಾಡಿದ ಶಾಲಿನಿ
ಅಲ್ಲಿಗೆ ಮಗುವಿನ ಅಭಿಪ್ರಾಯಕ್ಕೆ ಕೋರ್ಟ್ ಆದೇಶಿಸಿದೆ. ಅದರಂತೆ ಸಿಹಿ ಎಲ್ಲರ ಮುಂದೆ ಬಂದು, ನಾನು ಸಿಹಿ ಸೀತಾ ಶ್ರೀರಾಮ್ ದೇಸಾಯಿ ಎಂದು ಪರಿಚಯಿಸಿಕೊಂಡಿದ್ದಾಳೆ. ನೀನು ಯಾರ ಜೊತೆ ಇರಲು ಬಯಸ್ತಿಯಾ ಎಂದು ಪ್ರಶ್ನೆ ಮಾಡಿದ್ದಾರೆ ಜಡ್ಜ್. ಆಗ. ಸೀತಮ್ಮ ರಾಮ್ ಅವರೇ ನನ್ನ ಅಪ್ಪ ಅಮ್ಮ. ಶಾಲಿನಿ ಶ್ಯಾಮ್ ಅಪ್ಪ ಅಮ್ಮ ಅಲ್ಲ ಎಂದಿದ್ದಾಳೆ. ಅಲ್ಲಿಗೆ ಬಾಡಿದ್ದ ಸೀತಾ ಮೊಗದಲ್ಲಿ ಮತ್ತೆ ನಗು ಮೂಡಿದೆ. ಇತ್ತ ನಾಟಕ ಮುಂದುವರಿಸಿದ ಶಾಲಿನಿ, ಮಗುಗೋಸ್ಕರ ನಾವು ತುಂಬ ಕಷ್ಟಪಟ್ಟಿದ್ದೇವೆ. ನಾನು ಈಗ ಗರ್ಭ ಧರಿಸಲು ಸಾಧ್ಯವಿಲ್ಲ. ಸೀತಾ ಈಗ ಮದುವೆ ಆಗಿದ್ದಾಳೆ. ಅವಳು ಮತ್ತೊಂದು ಮಗು ಪಡೆಯಬಹುದು. ಆದರೆ, ಅದು ನನ್ನಿಂದ ಆಗದು ಎಂದು ಹೇಳಿದ್ದಾಳೆ.
ಸೀತಾಳೇ ನಿಜವಾದ ತಾಯಿ..
ವಾದ ವಿವಾದಗಳನ್ನು ಆಲಿಸಿದ ಕೋರ್ಟ್, ಈ ಮಗು ತನ್ನ ಬಯಾಲಜಿಕಲ್ ಪೇರೆಂಟ್ಸ್ ಜತೆಗೇ ಇರಬೇಕು ಎಂದಿದೆ. ಅಲ್ಲಿಗೆ ಸೀತಾ ಮತ್ತು ರಾಮ್ ಕಣ್ಣೀರಾಗಿದ್ದಾರೆ. ಸಿಹಿ ಕಣ್ಣೀರಿಡುತ್ತಲೇ ನಾನು ನಿಮ್ಮಿಬ್ಬರ ಜತೆಯಲ್ಲಿಯೇ ಇರುತ್ತೇನೆ ಎಂದು ಹೇಳಿ ಸೀತಾಳನ್ನು ಅಪ್ಪಿಕೊಂಡಿದ್ದಾಳೆ. ಇತ್ತ ಅದೇ ಸಿಹಿಯನ್ನು ಜೋರಾಗಿ ಎಳೆದಿದ್ದಾಳೆ. ಸಿಹಿಯ ಜತೆಗೆ ಕಟುವಾಗಿ ವರ್ತಿಸಿದ್ದಾಳೆ. ಇದು ಎಲ್ಲರ ಗಮನಕ್ಕೆ ಬಂದಿದೆ. ಸಿಹಿಗೆ ನಿಜವಾದ ಅಮ್ಮ ನಾನೇ ಎಂದು ಜೋರಾಗಿ ಶಾಲಿನಿ ಹೇಳಿದ್ದಾಳೆ. ಕೊನೆಗೂ ನಾನೇ ಗೆದ್ದಿದ್ದು ಎಂದಿದ್ದಾಳೆ. ಅಷ್ಟರಲ್ಲಿ, ಶಾಲಿನಿ ಪರ ಲಾಯರ್, ಗೆದ್ದಿದ್ದು ನೀನಲ್ಲ. ಸೀತಾಳ ಮಮತೆ. ಶಾಲಿನಿಗಿಂತ ಸೀತಾಗೇ ತಾಯಿಯಾಗೋ ಅರ್ಹತೆ ಹೆಚ್ಚಿದೆ ಎಂದಿದ್ದಾರೆ. ಅಲ್ಲಿಗೆ ಏಪಿಸೋಡ್ ಅಂತ್ಯವಾಗಿದೆ. ಹಾಗಾದರೆ ಕೋರ್ಟ್ ತೀರ್ಪು ಏನು? ಅದನ್ನು ಇಂದಿನ ಏಪಿಸೋಡ್‌ನಲ್ಲಿಯೇ ನೋಡಿ ತಿಳಿಯಬೇಕು.
ವಿಭಾಗ