Bigg Boss Kannada: ತನಗೆ ತಾನೇ ಪೂಜೆ ಮಾಡಿಕೊಂಡ ಚೈತ್ರಾ ಕುಂದಾಪುರ; ಚೈತ್ರಾ, ಏನಿದು ವಿಚಿತ್ರ ಎಂದ ವೀಕ್ಷಕರು
ಬಿಗ್ ಬಾಸ್ ಸೀನನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ ಅವರ ವರ್ತನೆ ಎಲ್ಲರಿಗೂ ಆಶ್ಚರ್ಯವೆನಿಸಿದೆ. ತಮಗೆ ತಾವೇ ಪೂಜೆ ಮಾಡಿಕೊಂಡಿದ್ದಾರೆ. ಅವರು ತಮಗೆ ತಾವೇ ಪೂಜೆ ಮಾಡಿಕೊಳ್ಳುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಬಿಗ್ ಬಾಸ್ ಸೀಸನ್ 11ರ ಆಟ ದಿನೇ ದಿನೇ ಕಾವು ಪಡೆದುಕೊಳ್ಳುತ್ತಿದೆ. ಮನೆಯಲ್ಲಿನ ಸ್ಪರ್ಧಿಗಳು ತಮ್ಮ ಆಟವನ್ನು ತುಂಬಾ ಸೀರಿಯಸ್ ಆಗಿ ಆಡುತ್ತಿದ್ದಾರೆ. ಮನೆಯೊಳಗಡೆ ಯಾವಾಗಲೂ ಜಗಳ ನಡೆಯುತ್ತಿರುವ ಸಂದರ್ಭದಲ್ಲಿ ಎಲ್ಲರ ಮೊಗದಲ್ಲಿ ನಗು ತರಿಸಲೆಂದೇ ಹನುಮಂತ ಬಂದಂತಿದೆ. ಹೀಗಿರುವಾಗ ಚೈತ್ರಾ ಕುಂದಾಪುರ ಅವರು ತಮ್ಮ ಆಟವನ್ನು ಆಡುತ್ತಿದ್ದಾರೆ. ಆದರೆ ಇದರ ನಡುವೆ ಅವರ ಒಂದು ವರ್ತನೆ ಎಲ್ಲರಿಗೂ ವಿಚಿತ್ರ ಎಂದೆನಿಸಿದೆ. ಅವರು ತಮಗೆ ತಾವೇ ಪೂಜೆ ಮಾಡಿಕೊಂಡಿದ್ದಾರೆ. ಈ ದೃಶ್ಯವನ್ನು ನಾವು ಕಲರ್ಸ್ ಕನ್ನಡದಲ್ಲಿ ಬಿಡುಗಡೆಯಾದ ಪ್ರೋಮೋದಲ್ಲಿ ಕೂಡ ನೋಡಬಹುದು.
ಇನ್ನು ಮನೆಯಲ್ಲಿದ್ದ ಇತರ ಕೆಲ ಸದಸ್ಯರು ಕೂಡ ಅವರು ತಮಗೆ ತಾವೇ ಪೂಜೆ ಮಾಡಿಕೊಳ್ಳುತ್ತಿರುವುದನ್ನು ನೋಡಿ ಆಶ್ಚರ್ಯ ಪಟ್ಟಿದ್ದಾರೆ. ಯಾಕೆ ಇವರು ಈ ರೀತಿ ಮಾಡುತ್ತಿದ್ದಾರೆ ಎಂದು ಅವರೆಲ್ಲರ ಮನಸಿನೊಳಗಡೆ ಪ್ರಶ್ನೆ ಉದ್ಭವವಾಗಿದೆ. ಶಿಶಿರ್ ಆಗಷ್ಟೇ ಅಡುಗೆ ಮನೆಯಲ್ಲಿ ಏನೋ ಮಾಡುತ್ತಾ ಇರುತ್ತಾರೆ. ಅವರಿಗೆ ಚೈತ್ರಾ ಕುಂದಾಪುರ ತಮಗೆ ತಾವು ಪೂಜೆ ಮಾಡಿಕೊಳ್ಳುತ್ತಿರುವು ಕಣ್ಣಿಗೆ ಬೀಳುತ್ತದೆ.
ಇನ್ನು ಚೈತ್ರಾ ಕುಂದಾಪುರ ಅವರು ಊದುಕಡ್ಡಿ ತೆಗೆದುಕೊಂಡು ಇನ್ನೊಂದು ಕೈಯ್ಯಲ್ಲಿ ಗಂಟೆ ಹಿಡಿದುಕುಂಡು ಪೂಜೆ ಆರಂಭಿಸಿದ್ದಾರೆ. ತನ್ನ ಸುತ್ತಲೂ ತಾವೇ ಊದುಕಡ್ಡಿಯನ್ನು ತಿರುಗಿಸಿಕೊಂಡಿದ್ದಾರೆ. ನಂತರ ಆ ಕಡ್ಡಿಯನ್ನು ಮುರಿದು ಹಾಕಿದ್ದಾರೆ.
ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ ಎಂಬಂತೆ ಇವರು ತಮ್ಮಲ್ಲೇ ತಾವು ದೇವರನ್ನು ಕಂಡಿದ್ದಾರೆ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೊಂದಷ್ಟು ಜನ ಇವರು ಚೈತ್ರಾ ಅಲ್ಲ ವಿಚಿತ್ರ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ತಮಗೆ ತಾವೇ ದೃಷ್ಟಿ ತೆಗೆದುಕೊಂಡಿರಬಹುದು. ಯಾಕೆಂದರೆ ಅವರು ಪೂಜೆ ಮಾಡಿಕೊಂಡ ನಂತರದಲ್ಲಿ ಆ ಕಡ್ಡಿಗಳನ್ನು ಮುರಿದು ಹಾಕಿದ್ದಾರೆ ಎಂದು ಹೇಳುತ್ತಿದ್ದಾರೆ. ಅವರು ನಿಂತಲ್ಲೇ ಪಕ್ಕದಲ್ಲಿ ದೇವಿಯ ಮೂರ್ತಿ ಕೂಡ ಇತ್ತು. ಆದರೆ ಅವರು ತಮಗೆ ತಾವೇ ಪೂಜೆ ಮಾಡಿಕೊಂಡಿರುವುದು ಕಾಣಿಸುತ್ತದೆ.
ಇನ್ನು ಮನೆಯಲ್ಲಿ ಈ ವಾರದ ಕ್ಯಾಪ್ಟನ್ಸಿ ಆಟದಲ್ಲಿ ಎಲ್ಲರೂ ಭರ್ಜರಿ ಆಟ ಆಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ವಿಚಾರದಲ್ಲಿ ಸ್ಪರ್ಧಿಗಳು ಕೊಂಚ ಗರಂ ಆಗಿದ್ದಾರೆ. ಅರ್ಹರಲ್ಲದ ಸ್ಪರ್ಧಿಗಳ ಹೆಸರು ಸೂಚಿಸುವಂತೆ ಬಿಗ್ ಬಾಸ್ ಕೋರಿದ್ದಾರೆ. ಆ ಪೈಕಿ ಎಲ್ಲರೂ ಧನರಾಜ್ ಆಚಾರ್ ಹೆಸರನ್ನೇ ಹೇಳಿದ್ದಾರೆ.