ಕನ್ನಡ ಸುದ್ದಿ  /  Entertainment  /  Television News Colors Kannada Brindavana Kannada Serial Today Episode 121 Mar 20th Aaksh Brings Pushpa Back Rst

Brundavana Serial: ಆಕಾಶ್‌ಗೆ ಪ್ರೇಮ ನಿವೇದನೆ ಮಾಡಲು ಸಹನಾ ರೆಡಿ, ಯಾರೀಕೆ ಬಿರುಗಾಳಿಯಂತೆ ಬೃಂದಾವನಕ್ಕೆ ಎಂಟ್ರಿ ಕೊಟ್ಟ ಭಾರ್ಗವಿ?

Brindavana Kannada Serial Today Episode Mar 20th: : ʼಬೃಂದಾವನʼ ಧಾರಾವಾಹಿಯ ಬುಧವಾರದ ಎಪಿಸೋಡ್‌ನಲ್ಲಿ ಪುಷ್ಪಾ ಕನಸಿನಲ್ಲೂ ಕಿಡ್ನಾಪರ್ಸ್‌ಗಳ ಬಗ್ಗೆ ಯೋಚಿಸಿ ಭಯ ಪಡುತ್ತಿದ್ದರೆ, ಇಂಥ ಬೃಂದಾವನವನ್ನೇ ಬುಡಮೇಲು ಮಾಡಲು ಬಿರುಗಾಳಿಯಂತೆ ಎಂಟ್ರಿ ಕೊಟ್ಟಿದ್ದಾಳೆ ಭಾರ್ಗವಿ. ಆಕಾಶ್‌ಗೆ ಪ್ರಪೋಸ್‌ ಮಾಡೋಕೆ ಸಹನಾ ತಯಾರಿ.

ಯಾರೀಕೆ ಬಿರುಗಾಳಿಯಂತೆ ಬೃಂದಾವನಕ್ಕೆ ಎಂಟ್ರಿ ಕೊಟ್ಟ ಭಾರ್ಗವಿ?
ಯಾರೀಕೆ ಬಿರುಗಾಳಿಯಂತೆ ಬೃಂದಾವನಕ್ಕೆ ಎಂಟ್ರಿ ಕೊಟ್ಟ ಭಾರ್ಗವಿ?

ಬೃಂದಾವನ ಧಾರಾವಾಹಿಯ ನಿನ್ನೆಯ (ಮಾರ್ಚ್‌ 20) ಸಂಚಿಕೆಯಲ್ಲಿ ನಿದ್ದೆಯಲ್ಲಿ ಕಿಡ್ನಾಪರ್ಸ್‌ಗಳನ್ನು ನೆನೆದು ಗಾಬರಿಗೊಳ್ಳುವ ಪುಷ್ಪಾ ಕಾಪಾಡಿ, ಕಾಪಾಡಿ... ಅಣ್ಣಾ ನಂಗೆ ಏನೂ ಮಾಡ್ಬೇಡಿ ಅಂತೆಲ್ಲಾ ಕೂಗಿಕೊಳ್ಳುತ್ತಾಳೆ. ತಕ್ಷಣಕ್ಕೆ ಎಚ್ಚರಗೊಳ್ಳುವ ಆಕಾಶ್‌ ಪುಷ್ಪಾಳನ್ನು ಎಬ್ಬಿಸಿ ಸಾಮಾಧಾನ ಮಾಡುತ್ತಾನೆ. ಈಗಲೂ ನನಗೆ ಕಿಡ್ನಾಪರ್ಸ್‌ಗಳ ಬಗ್ಗೆ ಭಯ ಆಗುತ್ತಿದೆ ಎಂದು ಆಕಾಶ್‌ ಬಳಿ ಅಳಲು ತೋಡಿಕೊಳ್ಳುವ ಪುಷ್ಪಾಳನ್ನು ನಿದ್ದೆ ಸಮಾಧಾನ ಮಾಡಿ ಮಲಗಿಸುತ್ತಾನೆ ಆಕಾಶ್‌.

ಬೆಳಿಗ್ಗೆ ಪುಷ್ಪಾ ಏಳುವ ಮೊದಲೇ ಎದ್ದು ಹೆಂಡತಿಗೆ ಸ್ನಾನಕ್ಕೆ ನೀರು, ಬ್ರಷ್‌ ಸೋಪು ಎಲ್ಲವನ್ನೂ ರೆಡಿ ಮಾಡುವ ಆಕಾಶ್‌, ಅವಳು ಸ್ನಾನ ಮಾಡಿ ಬರುವಷ್ಟರಲ್ಲಿ ಕಾಫಿ ತಂದು ನೀಡುತ್ತಾನೆ. ಪುಷ್ಪಾ ಕಾಫಿ ಕುಡಿಯಲು ಪರದಾಡುವಾಗ ತಾನೇ ಕುಡಿಸುವ ಆಕಾಶ್‌, ಆಕೆಗೆ ಜಡೆ ಹಾಕಲು ಸಹಾಯ ಮಾಡುತ್ತಾನೆ.

ಆಕಾಶ್‌ಗೆ ಕಾಲೇಜ್‌ನಲ್ಲೇ ಪ್ರಪೋಸ್‌ ಮಾಡಲು ಸಹನಾ ಸಿದ್ಧತೆ

ಆಕಾಶ್‌ ಜಪದಲ್ಲೇ ಮುಳುಗಿರುವ ಸಹನಾ ಮಿಂಚು ಹೇಳಿದಂತೆ ಅವನಿಗೆ ಪ್ರಪೋಸ್‌ ಮಾಡಲು ಸಿದ್ಧಳಾಗುತ್ತಾಳೆ. ಚೆಂದವಾಗಿ ಅಲಂಕರಿಸಿಕೊಂಡು ಕಾಲೇಜಿಗೆ ಬರುವ ಸಹನಾ ಆಕಾಶ್‌ನನ್ನು ಮನದಲ್ಲೇ ನೆನೆಯುತ್ತಾ ನೀವೇ ನನ್ನ ಬದುಕು, ನನ್ನ ಜೀವನವನ್ನು ನಿಮ್ಮೊಂದಿಗೆ ತಾನು ಮುಂದುವರಿಸಲು ಬಯಸುತ್ತೇನೆ, ಅವತ್ತು ನೀವು ಬಂದ ಕೂಡಲೇ ನಿಮಗೆ ಪ್ರಪೋಸ್‌ ಮಾಡುತ್ತಾನೆ, ನೀವು ಸದಾ ನನ್ನೊಂದಿಗೆ ಇರಬೇಕುʼ ಎಂದೆಲ್ಲಾ ಬಡಬಡಾಯಿಸುತ್ತಿರುತ್ತಾಳೆ.

ಆಕಾಶ್‌ನನ್ನ ಹೊಗಳುವ ಅಜ್ಜಮ್ಮ

ಪುಷ್ಪಾಗೆ ಡೊಂಕು ಡೊಂಕಾಗಿ ಜಡೆ ಹಾಕಿರುವ ಆಕಾಶ್‌ನಿಗೆ ಅನುಪಮಾ ಸೇರಿದಂತೆ ಮನೆಯವರು ರೇಗಿಸುತ್ತಾರೆ. ಆದರೆ ಅವರಿಗೆ ಗದರುವ ಅಜ್ಜಮ್ಮ (ಸುಧಾಮೂರ್ತಿ) ಗಂಡ-ಹೆಂಡತಿ ಸಂಬಂಧವನ್ನು ವಿವರಿಸುತ್ತಾರೆ. ಗಂಡನಾದವನು ಎಷ್ಟು ಶ್ರೀಮಂತಿಕೆಯಲ್ಲಿ ಹೆಂಡತಿಯನ್ನು ಮದುವೆ ಮಾಡಿಕೊಂಡ ಬಂದಿದ್ದಾನೆ ಎಂಬುದು ಮುಖ್ಯವಾಗುವುದಿಲ್ಲ. ಅವನು ಹೇಗೆ ರಾಣಿಯಂತೆ ಹೆಂಡತಿಯನ್ನು ನೋಡಿಕೊಳ್ಳುತ್ತಾನೆ ಎಂಬುದು ಮುಖ್ಯ. ಆ ವಿಷಯದಲ್ಲಿ ನಮ್ಮ ಆಕಾಶ್‌ ಪರಿಪೂರ್ಣನಾಗಿದ್ದಾನೆ. ಅವನು ಪುಷ್ಪಾಗೆ ತಕ್ಕ ಗಂಡ ಎಂದು ಮೊಮ್ಮಗನನ್ನು ಮನಸಾರೆ ಹೊಗಳುತ್ತಾಳೆ.

ಆಸ್ಪತ್ರೆಯಲ್ಲಿ ಸುಧಾಮೂರ್ತಿಗೆ ಎದುರಾಗುವ ಭಾರ್ಗವಿ

ಸುಧಾಮೂರ್ತಿಯವರ ಆರೋಗ್ಯ ತಪಾಸಣೆಗೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾರೆ ಆಕಾಶ್‌-ಪುಷ್ಪಾ. ಆಕಾಶ್‌ ಕಾರ್‌ ಪಾರ್ಕ್‌ ಮಾಡಿ ಬರುತ್ತೇನೆ ಎಂದು ಹೇಳಿ ಆಸ್ಪತ್ರೆಯ ಬಾಗಿಲಲ್ಲೇ ಪುಷ್ಪಾ ಹಾಗೂ ಸುಧಾಮೂರ್ತಿ ಅವರನ್ನು ಇಳಿಸಿ ಮುಂದೆ ಹೋಗುತ್ತಾನೆ. ಅವನು ಹೋದ ಮೇಲೆ ಪುಷ್ಪಾಳಿಗೆ ಫೈಲ್‌ ಕಾರ್‌ನಲ್ಲೇ ಇದೆ ಎನ್ನುವುದು ನೆನಪಾಗುತ್ತದೆ. ಫೈಲ್‌ ತರುತ್ತೇನೆ ಎಂದು ಹೋಗುವ ಪುಷ್ಪಾ ಸುಧಾಮೂರ್ತಿ ಅವರಿಗೆ ಇಲ್ಲೇ ಇರಿ ಅಜ್ಜಮ್ಮ, ಬೇಗ ಹೋಗಿ ಫೈಲ್‌ ತರ್ತೀನಿ ಅಂತ ಹೊರಟು ಬಿಡುತ್ತಾಳೆ. ಆಗ ಇದ್ದಕ್ಕಿದಂತೆ ಬಿರುಗಾಳಿ ಬೀಸಲು ಆರಂಭವಾಗುತ್ತದೆ. ಅಲ್ಲದೇ ಹೊಸ ಪಾತ್ರವೊಂದು ಎಂಟ್ರಿ ಕೂಡ ನೀಡುತ್ತದೆ. ಇತ್ತ ಬಿರುಗಾಳಿಗೆ ಅಜ್ಜಮ್ಮ ಭಯ ಪಡ್ತಾ ಇದ್ರೆ, ಅತ್ತ ಬೃಂದಾವನ ಕೂಡು ಕುಟುಂಬ ಫೋಟೊ ಬಿದ್ದು ಒಡೆದು ಹೋಗಿದ್ದು ನೋಡಿ ಮನೆಯವರೆಲ್ಲಾ ಗಾಬರಿಯಾಗುತ್ತಾರೆ. ಇದ್ದಕ್ಕಿದ್ದಂತೆ ಅಜ್ಜಮ್ಮನ ಮುಂದೆ ಮಹಿಳೆಯೊಬ್ಬರು ಬಂದು ನಿಲ್ತಾರೆ. ಅವಳನ್ನು ನೋಡಿ ಗಾಬರಿಯಾಗುವ ಅಜ್ಜಮ್ಮ ಭಾರ್ಗವಿ ಎಂದು ಉದ್ಗಾರ ತೆಗೆಯುತ್ತಾರೆ. ಅಲ್ಲದೇ ಅಜ್ಜಮ್ಮನ ಮನದಲ್ಲಿ ಹಿಂದಿನ ಘಟನೆಯೊಂದ ಸ್ಮೃತಿಪಟಲದಲ್ಲಿ ಹಾದು ಹೋಗುತ್ತದೆ.

ಬೃಂದಾವನದಲ್ಲಿ ಬಿರುಗಾಳಿ ಎಬ್ಬಿಸಲು ಬಂದಿರುವ ಈ ಭಾರ್ಗವಿ ಯಾರು, ಇವಳ ಉದ್ದೇಶವೇನು, ಇವಳನ್ನು ನೋಡಿ ಸುಧಾಮೂರ್ತಿ ಗಾಬರಿ ಪಟ್ಟಿದ್ದೇಕೆ, ಆಕಾಶ್‌ಗೆ ಮದುವೆಯಾಗಿದೆ ಎಂದು ತಿಳಿದರೆ ಸಹನಾ ಪ್ರತಿಕ್ರಿಯೆ ಹೇಗಿರಬಹುದು, ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

IPL_Entry_Point