Ramachari Serial: ಜಾನಕಿಗೆ ಕೃಷ್ಣನ ಪ್ರೀತಿ ವಿಚಾರ ತಿಳಿಸಿದ ರಾಮಾಚಾರಿ; ಚಾರು ಹೋಗಿದ್ದು ರುಕ್ಕುಗಾಗಿ
ಕನ್ನಡ ಸುದ್ದಿ  /  ಮನರಂಜನೆ  /  Ramachari Serial: ಜಾನಕಿಗೆ ಕೃಷ್ಣನ ಪ್ರೀತಿ ವಿಚಾರ ತಿಳಿಸಿದ ರಾಮಾಚಾರಿ; ಚಾರು ಹೋಗಿದ್ದು ರುಕ್ಕುಗಾಗಿ

Ramachari Serial: ಜಾನಕಿಗೆ ಕೃಷ್ಣನ ಪ್ರೀತಿ ವಿಚಾರ ತಿಳಿಸಿದ ರಾಮಾಚಾರಿ; ಚಾರು ಹೋಗಿದ್ದು ರುಕ್ಕುಗಾಗಿ

ರಾಮಾಚಾರಿ ತನ್ನ ಅಮ್ಮ ಜಾನಕಿಗೆ ಎಲ್ಲ ಸತ್ಯವನ್ನು ಹೇಳಿದ್ದಾನೆ. ಕೃಷ್ಣನ ಪ್ರೀತಿ ವಿಚಾರ ಹಂಚಿಕೊಳ್ಳುವಾಗ ಅಲ್ಲಿ ಕೋದಂಡ ಕೂಡ ಜೊತೆಗಿರುತ್ತಾನೆ. ರುಕ್ಕುಗಾಗಿ ಚಾರು ಎಷ್ಟು ಕಷ್ಟಪಡುತ್ತಿದ್ದಾಳೆ ಎನ್ನುವುದನ್ನು ರಾಮಾಚಾರಿ ಎಲ್ಲರಿಗೂ ತಿಳಿಸಿದ್ದಾನೆ.

ಜಾನಕಿಗೆ ಕೃಷ್ಣನ ಪ್ರೀತಿ ವಿಚಾರ ತಿಳಿಸಿದ ರಾಮಾಚಾರಿ
ಜಾನಕಿಗೆ ಕೃಷ್ಣನ ಪ್ರೀತಿ ವಿಚಾರ ತಿಳಿಸಿದ ರಾಮಾಚಾರಿ (ಕಲರ್ಸ್‌ ಕನ್ನಡ)

ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಈಗ ತನ್ನ ಮನೆಯ ಎಲ್ಲರಿಗೂ ಸತ್ಯವನ್ನು ಹೇಳುತ್ತಿದ್ದಾನೆ. ರುಕ್ಕುವನ್ನು ಕೃಷ್ಣ ಪ್ರೀತಿಸುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾನೆ. ಜಾನಕಿ ಈ ವಿಷಯವನ್ನು ಕೇಳಿ ತುಂಬಾ ಖುಷಿಯಾಗಿದ್ದಾಳೆ. ರಾಮಾಚಾರಿ ಒಂದು ಹುಡುಗಿಯನ್ನು ಪ್ರೀತಿಸಿದ ಅವಳನ್ನು ಮನೆತುಂಬಿಸಿಕೊಂಡಾಯ್ತು. ಈಗ ನಮ್ಮ ಕೃಷ್ಣ ಒಂದು ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದಾನೆ ಅಂದಮೇಲೆ ನಾವು ಅವಳನ್ನೂ ಮನೆತುಂಬಿಸಿಕೊಳ್ಳಲೇ ಬೇಕು ಎಂದು ಹೇಳುತ್ತಾರೆ. ಆಗ ರಾಮಾಚಾರಿ ಹೇಳುತ್ತಾನೆ ಅದು ನಾವು ಅಂದುಕೊಂಡಷ್ಟು ಸುಲಭವಿಲ್ಲ. ಅವನಿಗೆ ಇಷ್ಟ ಎಂದು ನಾವು ಅವಳನ್ನು ಮದುವೆ ಮಾಡಿಕೊಂಡು ಬರುವುದು ಸುಲಭವಲ್ಲ ಎಂದು ಹೇಳಿದ್ದಾನೆ.

ಯಾಕೆ ಎಂದು ಕೇಳಿದಾಗ ರಾಮಾಚಾರಿ ಈ ಹಿಂದೆ ಏನೆಲ್ಲ ನಡೆಯಿತು ಎನ್ನುವುದುನ್ನು ವಿವರಿಸುತ್ತಾನೆ. ರಾಮಾಚಾರಿ ಹಾಗೂ ಚಾರು ಇಬ್ಬರೂ ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ರುಕ್ಕು ಅವರನ್ನು ನೋಡಿ ರಾಮಾಚಾರಿನೇ ಕಿಟ್ಟಿ ಅಂದುಕೊಂಡದ್ದರ ಬಗ್ಗೆ ಹಾಗೂ ಕಿಟ್ಟಿ ಈಗ ಚಾರುನಾ ಮದುವೆ ಆಗಿದ್ದಾನೆ ಎಂದು ಗೊಂದಲ ಮಾಡಿಕೊಂಡು ಬೇಸರ ಮಾಡಿಕೊಂಡು ಹೋಗಿದ್ದರ ಬಗ್ಗೆಯೂ ಹೇಳುತ್ತಾನೆ. ಆಗ ಜಾನಕಿಗೆ ಬೇಸರವಾಗುತ್ತದೆ. ಅಯ್ಯೋ ಪಾಪ ಆ ಹುಡುಗಿ ಎಂದು ಅಂದುಕೊಳ್ಳುತ್ತಾರೆ.

ನಂತರ ಈಗಲೂ ಕಾಲ ಮಿಂಚಿಲ್ಲ ನೀವು ಸತ್ಯ ಹೇಳಿ ಅವಳನ್ನು ಕರೆದುಕೊಂಡು ಬನ್ನಿ ಎಂದು ಹೇಳುತ್ತಾಳೆ. ಆಗ ಕೋದಂಡ ಕೂಡ ಅಲ್ಲೇ ಇರುತ್ತಾನೆ. ಅವನಿಗೂ ಈ ವಿಚಾರ ಗೊತ್ತಾಗುತ್ತದೆ. ಆಗ ರಾಮಾಚಾರಿ ಹೇಳುತ್ತಾನೆ. ಅವಳ ಊರು ತುಂಬಾ ದೂರ ಅವಳು ಉತ್ತರ ಕರ್ನಾಟಕದ ರಾಮದುರ್ಗದಲ್ಲಿ ಈಗ ಇದ್ದಾಳೆ. ಅವಳನ್ನು ಹುಡುಕಿಕೊಂಡು ಚಾರು ಹೋಗಿದ್ದಾಳೆ ಎಂದು ರಾಮಾಚಾರಿ ಹೇಳುತ್ತಾನೆ. ನಾವೆಲ್ಲರೂ ಹೋಗಬಹುದಿತ್ತು ಎಂದು ಜಾನಕಿ ಹೇಳಿದಾಗ ಇಲ್ಲ ಅವಳು ದುಷ್ಟರ ನಡುವೆ ಇದ್ದಾಳೆ ಎಂದು ಹೇಳುತ್ತಾನೆ.

ಮುರಾರಿ ಹಾಗೂ ಚಾರು ಇನ್ನು ಮುಂದೆ ಏನು ಮಾಡುತ್ತಾರೆ. ರುಕ್ಕು ಮರಳಿ ಬರ್ತಾಳಾ? ಈ ಎಲ್ಲ ಪ್ರಶ್ನೆಗಳಿಗೆ ಮುಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

ರಾಮಾಚಾರಿ ಧಾರಾವಾಹಿ

ರಾಮಾಚಾರಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.

ರಾಮಾಚಾರಿ ಧಾರಾವಾಹಿ ಪಾತ್ರವರ್ಗ

ಮೌನ ಗುಡ್ಡೆ ಮನೆ - ಚಾರು

ರಿತ್ವಿಕ್ ಕ್ರಪಾಕರ್ - ರಾಮಾಚಾರಿ

ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)

ಚಿ ಗುರುದತ್ - ಜಯಶಂಕರ್

ಶಂಕರ್ ಅಶ್ವಥ್‌ - ನಾರಾಯಣಾಚಾರಿ

ಐಶ್ವರ್ಯ ವಿನಯ್‌ - ವೈಶಾಖ

ಅಂಜಲಿ ಸುಧಾಕರ್ - ಜಾನಕಿ

Whats_app_banner