Amruthadhaare: ಮಂದಾಕಿನಿ ಮನೆಗೆ ಹೆಣ್ಣು ಕೇಳಲು ಬಂದ್ರು ಶಕುಂತಲಾದೇವಿ; ಪರೀಕ್ಷೆ ಬರೆಯೋ ಮುನ್ನ ಶಾಲಾ ಮಕ್ಕಳನ್ನ ರೊಚ್ಚಿಗೆಬ್ಬಿಸಿದ ಪಾರ್ಥ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಮಂದಾಕಿನಿ ಮನೆಗೆ ಹೆಣ್ಣು ಕೇಳಲು ಬಂದ್ರು ಶಕುಂತಲಾದೇವಿ; ಪರೀಕ್ಷೆ ಬರೆಯೋ ಮುನ್ನ ಶಾಲಾ ಮಕ್ಕಳನ್ನ ರೊಚ್ಚಿಗೆಬ್ಬಿಸಿದ ಪಾರ್ಥ

Amruthadhaare: ಮಂದಾಕಿನಿ ಮನೆಗೆ ಹೆಣ್ಣು ಕೇಳಲು ಬಂದ್ರು ಶಕುಂತಲಾದೇವಿ; ಪರೀಕ್ಷೆ ಬರೆಯೋ ಮುನ್ನ ಶಾಲಾ ಮಕ್ಕಳನ್ನ ರೊಚ್ಚಿಗೆಬ್ಬಿಸಿದ ಪಾರ್ಥ

Amruthadhaare serial Yesterday Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಶಕುಂತಲಾದೇವಿ ನಾಟಕ ಮುಂದುವರೆದಿದೆ. ಪಾರ್ಥ ಮತ್ತು ಅಪೇಕ್ಷಾರ ಮದುವೆ ಮಾಡಿಸಲು ಮುಂದಾಗಿದ್ದಾರೆ. ಇನ್ನೊಂದೆಡೆ ಪರೀಕ್ಷೆ ಬರೆಯುವ ಮುನ್ನ ಆಶೀರ್ವಾದ ಪಡೆಯಲು ಕಾಯುತ್ತಿದ್ದ ಶಾಲಾ ಮಕ್ಕಳನ್ನು ಪಾರ್ಥ ರೊಚ್ಚಿಗೆಬ್ಬಿಸಿದ್ದಾನೆ.

Amruthadhaare: ಮಂದಾಕಿನಿ ಮನೆಗೆ ಹೆಣ್ಣು ಕೇಳಲು ಬಂದ್ರು ಶಕುಂತಲಾದೇವಿ
Amruthadhaare: ಮಂದಾಕಿನಿ ಮನೆಗೆ ಹೆಣ್ಣು ಕೇಳಲು ಬಂದ್ರು ಶಕುಂತಲಾದೇವಿ

Amruthadhaare serial: ಒಂದೆಡೆ ಭೂಮಿಕಾ ಬೇಸರದಲ್ಲಿ ಕುಳಿತುಕೊಂಡಿದ್ದಾರೆ. ಅಲ್ಲಿಗೆ ಮಲ್ಲಿ ಬಂದು ಸಮಧಾನ ಹೇಳುತ್ತಿದ್ದಾಳೆ. "ನೀವ್ಯಾಕೆ ಬೇಸರದಲ್ಲಿದ್ದೀರಿ" ಎಂದು ಮಲ್ಲಿ ಕೇಳಿದರೂ ಹೇಳುವುದಿಲ್ಲ. "ಪಾರ್ಥ ಭಾವನ ಮದುವೆ ಮಾತುಕತೆ ಆರಂಭವಾದ ಬಳಿಕ ನೀವು ಮೊದಲಿನಂತೆ ಇಲ್ಲ" ಎನ್ನುತ್ತಾಳೆ. ಆದರೆ, ಭೂಮಿಕಾ ಹೇಳುವುದಿಲ್ಲ. "ನನಗೆ ಈ ವಿಷಯನ ನಿನ್ನ ಜತೆ ಶೇರ್‌ ಮಾಡಿಕೊಳ್ಳಲು ಆಗುತ್ತಿಲ್ಲ. ಸಮಯ ಸಂದರ್ಭ ನನ್ನನ್ನು ಕಟ್ಟಿ ಹಾಕಿದೆ" ಎಂದು ಭೂಮಿಕಾರ ಸ್ವಗತ ಇರುತ್ತದೆ.

ಇನ್ನೊಂದೆಡೆ ಪಾರ್ಥ ಬೇಸರದಲ್ಲಿದ್ದಾನೆ. ಏನಾದರೂ ಮಾಡಬೇಕು. ಇಲ್ಲವಾದರೆ ಪ್ರೀತಿನ ಕಳೆದುಕೊಳ್ಳಬೇಕಾಗುತ್ತದೆ ಎಂದುಕೊಳ್ಳುತ್ತಾನೆ. ಆಗ ಅವನಿಗೆ ದೂರದಲ್ಲಿರುವ ಮಾಮ್‌ ಕಾಣಿಸುತ್ತಾರೆ. ಅಲ್ಲಿಗೆ ಹೋಗುತ್ತಾನೆ. ಹೋಗಿ ತಾಯಿಯನ್ನು ಪ್ರೀತಿಯಿಂದ ದುಃಖದಿಂದ ಅಪ್ಪಿಕೊಳ್ಳುತ್ತಾನೆ. "ಪಾರ್ಥ ಅಳ್ತಾ ಇದ್ದೀಯ. ಏನಾಯ್ತು" ಎಂದು ಕೇಳುತ್ತಾನೆ. "ಮಾಮ್‌, ನನಗೆ ಈ ಮದುವೆ ಇಷ್ಟ ಇಲ್ಲ" ಎನ್ನುತ್ತಾನೆ. "ನನಗೆ ಗೊತ್ತಿತ್ತು ಪಾರ್ಥ ಇದನ್ನೇ ಹೇಳ್ತಾ ಇದ್ದೀಯ ಅಂತ" ಎಂದು ಮನಸ್ಸಲ್ಲಿ ಅಂದುಕೊಳ್ಳುತ್ತಾಳೆ. "ಯಾಕೆ ಬೇಡ, ಒಳ್ಳೆ ಹುಡುಗಿ, ಚೆನ್ನಾಗಿ ಓದಿದ್ದಾಳೆ. ಯಾರನ್ನಾದರೂ ಲವ್‌ ಮಾಡ್ತಾ ಇದ್ದೀಯ" ಎಂದು ಕೇಳುತ್ತಾಳೆ. ಒಟ್ಟಾರೆ, ಎಲ್ಲಾ ಗೊತ್ತಿದ್ದು ಕೇಳುತ್ತಾಳೆ.

"ಮಾಮ್‌ ಅಪೇಕ್ಷಾಳನ್ನ ಪ್ರೀತಿಸ್ತಾ ಇದ್ದೀನಿ" ಎನ್ನುತ್ತಾನೆ.

"ಅಪೇಕ್ಷಾ ಅಂದ್ರೆ, ಭೂಮಿಕಾನ ತಂಗಿಯಾ" ಎಂದು ನಾಟಕೀಯವಾಗಿ ಕೇಳುತ್ತಾಳೆ.

ಈ ಸಂದರ್ಭದಲ್ಲಿ ಎಲ್ಲಾ ವಿಷಯವನ್ನು ಹೇಳುತ್ತಾನೆ. "ಎಲ್ಲರೂ ಸೇರಿ ನನ್ನನ್ನು ದೂರ ಮಾಡಬೇಡಿ. ನಾನು ಮದುವೆ ಅಂತಾದ್ರೆ ಅವಳನ್ನೇ. ನೀನು ಏನಾದ್ರೂ ಮಾಡಬೇಕು" ಎಂದು ಹೇಳುತ್ತಾನೆ.

"ಈ ವಿಷಯ ಬೇರೆ ಯಾರಿಗಾದ್ರೂ ಹೇಳಿದ್ಯ. ನನ್ನನ್ನು ಬಿಟ್ಟು ಬೇರೆ ಯಾರಿಗಾದರೂ ಗೊತ್ತಿದೆಯ" ಎಂದು ಕೇಳುತ್ತಾಳೆ.

"ಭೂಮಿಕಾಗೆ ಗೊತ್ತು. ಅಪೇಕ್ಷಾಳ ಅಪ್ಪನಿಗೆ ಗೊತ್ತು" ಎಂದು ಹೇಳುತ್ತಾನೆ.

ಒಟ್ಟಾರೆ ಈ ವಿಷಯದ ಕುರಿತು ಏನೂ ಗೊತ್ತಿಲ್ಲದಂತೆ ಅಚ್ಚರಿ ವ್ಯಕ್ತಪಡಿಸುತ್ತಾಳೆ. ಅವಳ ಮನಸ್ಸಿಗೆ ಖುಷಿಯೋ ಖುಷಿ. "ನಾನು ಇದನ್ನು ನನ್ನ ಲಾಭಕ್ಕೆ ಹೇಗೆ ಬಳಸಿಕೊಳ್ತಿನಿ ಅಂತ ನೋಡ್ತಾ ಇರು" ಎಂದು ಮನಸ್ಸಲ್ಲಿ ಅಂದುಕೊಳ್ಳುತ್ತಾರೆ ಶಕುಂತಲಾದೇವಿ. "ಸರಿ ಏನಾದ್ರೂ ಮಾಡ್ತಿನಿ" ಎನ್ನುತ್ತಾಳೆ. "ನಾನು ಏನು ಮಾಡಬೇಕು ಅಂದುಕೊಂಡಿದ್ದೇನೋ ಅದೇ ನಡೆಯುತ್ತಿದೆ" ಎಂದುಕೊಳ್ಳುತ್ತಾಳೆ.

ಮುಂದುವರೆದ ಶಕುಂತಲಾದೇವಿಯ ನಾಟಕ

ಶಕುಂತಲಾದೇವಿಯನ್ನು ಸಹೋದರ ಭೇಟಿಯಾಗುತ್ತಾನೆ. "ಎಲ್ಲಿಗೆ ಹೊರಟಿರುವೆ" ಎಂದು ಕೇಳಿದಾಗ "ಬೀಗರ ಮನೆಗೆ" ಎನ್ನುತ್ತಾಳೆ. "ನಿನ್ನೆ ಬಂದವರ ಮನೆಗಾ" ಎಂದಾಗ "ಇಲ್ಲಾ ನಾನು ಅವರ ಮನೆಗೆ ಹೋಗುತ್ತಿಲ್ಲ" ಎನ್ನುತ್ತಾರೆ. "ಮಂದಾಕಿನಿ ಮನೆಗೆ ಹೋಗುತ್ತಿದ್ದೇನೆ" ಎಂದಾಗ ಮನೆಹಾಳ ಮಾವನಿಗೆ ಶಾಕ್‌. "ಅವರೂ ಬೀಗರೇ ಅಲ್ವಾ ಅಣ್ಣಾ. ಮತ್ತೆ ಹೊಸ ಬೀಗರಾಗುತ್ತಿದ್ದಾರೆ ಅಷ್ಟೇ" ಎನ್ನುತ್ತಾರೆ ಶಕುಂತಲಾ. ಒಟ್ಟಾರೆ ನಾನು ಅಂದುಕೊಂಡಂತೆ ಎಲ್ಲವೂ ಆಗುತ್ತಿದೆ ಎಂದು ಶಕುಂತಲಾ ಹೇಳುತ್ತಾರೆ. "ಅಪೇಕ್ಷಾಳನ್ನು ನಮ್ಮ ಮನೆಯ ಸೊಸೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೇನೆ" ಎನ್ನುತ್ತಾಳೆ. "ಮಕ್ಕಳ ವಿಷಯದಲ್ಲಿ ಪ್ರತಿಯೊಂದು ನಿರ್ಧಾರ ನಾನೇ ತೆಗೆದುಕೊಳ್ತಾ ಇದ್ದೆ. ಪಾರ್ಥನ ವಿಷಯದಲ್ಲಿ ಅದೇ ಆಗಬೇಕು. ಭೂಮಿಕಾನ ಬೆಂಬಲ ಇಲ್ಲದೆ ಈಗ ನನ್ನ ಕಡೆಯಿಂದ ಮದುವೆ ನಡೆಯಬೇಕು. ಈಗ ಅವನು ನನಗೆ ಸರೆಂಡರ್‌ ಆಗಿದ್ದಾನೆ" ಎಂದೆಲ್ಲ ಹೇಳುತ್ತಾರೆ. "ಕೊನೆಗೂ ನನ್ನ ಮಗ ನನಗೆ ಸಿಕ್ಕಿದ್ದಾನೆ" ಎನ್ನುತ್ತಾಳೆ.

ಪಾರ್ಥ ಚಿಂತೆಯಲ್ಲಿರುವಾಗ ಗೌತಮ್‌ ಬರುತ್ತಾರೆ. "ಯಾಕೋ ಹೀಗಿದ್ದೀಯಾ" ಎನ್ನುತ್ತಾರೆ. ಹುಡುಗಿ ಮನೆಯಲ್ಲಿ ಹೇಳಿ ಬರುವೆ ಎಂದಾಗ ಪಕ್ಕದಲ್ಲಿರುವ ಶಕುಂತಲಾದೇವಿ "ಈಗಲೇ ಹೇಳೋದು ಬೇಡ. ಇನ್ನೊಮ್ಮೆ ಡಿಸ್ಕಷನ್‌ ಮಾಡೋಣ" ಎನ್ನುತ್ತಾರೆ. ಇದೇ ವಿಷಯವನ್ನು ಭೂಮಿಕಾಳಿಗೆ ಹೇಳುತ್ತಾನೆ ಗೌತಮ್‌. "ಸೆಕೆಂಡ್‌ ಒಪಿನಿಯನ್‌ ತೆಗೆದುಕೊಳ್ಳೋಣ ಅಂದ್ರು" ಎನ್ನುತ್ತಾನೆ. "ಇನ್ನೊಬ್ಬರ ಮನಸ್ಸನ್ನು ಹೇಗೆ ಅರ್ಥ ಮಾಡಿಕೊಳ್ಳೋದು" ಎನ್ನುತ್ತಾಳೆ.

ಶಕುಂತಲಾದೇವಿ ಮಂದಾಕಿನಿ ಮನೆಗೆ ಬರುತ್ತಾಳೆ. ಮಂದಾಕಿನಿ ತಲೆ ನೋವಲ್ಲಿ ಇರುತ್ತಾಳೆ. ಇಬ್ಬರೂ ಮಾತನಾಡುತ್ತಾರೆ. "ಈಕಡೆಯಿಂದ ಹೋಗ್ತಾ ಇದ್ದೆ. ಹಾಗೆ ಬಂದೆ" ಎನ್ನುತ್ತಾಳೆ. "ಅಪ್ಪಿ ಮೂರ್ನಾಲ್ಕು ದಿನದಿಂದ ತುಂಬಾ ಡಲ್‌ ಆಗಿದ್ದಾಳೆ. ಅದೇ ಚಿಂತೆ" ಎನ್ನುತ್ತಾರೆ ಮಂದಾಕಿನಿ. ನಾನು ಅಪ್ಪಿನ ಮಾತನಾಡಿಸಿಕೊಂಡು ಬರ್ತಿನಿ ಎನ್ನುತ್ತಾರೆ ಶಕುಂತಲಾ.

ಇನ್ನೊಂದೆಡೆ ಶಾಲಾ ಮಕ್ಕಳು ಪಾರ್ಥನಿಗೆ ಕಾಯುತ್ತಿದ್ದಾರೆ. ತಡವಾಗಿ ಪಾರ್ಥ ಬರುತ್ತಾನೆ. "ಪರೀಕ್ಷೆ ಬರೆಯೋ ಮೊದಲು ಆಶೀರ್ವಾದ ಪಡೆಯೋಣ" ಅಂತ ಕಾಯ್ತಾ ಇದ್ವಿ ಎನ್ನುತ್ತಾರೆ. "ನಿಮ್ಮ ಟ್ಯಾಲೆಂಟ್‌, ಬುದ್ಧಿ ಬಳಸಿ ಎಕ್ಸಾಂ ಬರೆಯಿರಿ" ಎನ್ನುತ್ತಾನೆ. "ಇನ್ನು ನೀವುಂಟು ನಿಮ್ಮ ಎಕ್ಸಾಂ ಉಂಟು" ಎನ್ನುತ್ತಾರೆ. "ನನ್ನ ಆಶೀರ್ವಾದ ಯಾಕೆ. ನಿಮ್ಮ ಮೇಲೆ ನಂಬಿಕೆ ಇಲ್ವ. ನಿಮಗೆ ದೇವರು ತಲೆ ಕೊಟ್ಟಿದ್ದಾರೆ. ಬ್ರೇನ್‌ ಕೊಟ್ಟಿದ್ದಾನೆ ಅಲ್ವ. ಅದನ್ನು ಬಳಸಿ" ಎಂದು ಬುದ್ಧಿ ಹೇಳುತ್ತಾನೆ. "ನಿಮ್ಮ ಕೋಪ ಆವೇಶವನ್ನು ಎಕ್ಸಾಂ ಮುಂದೆ ತೋರಿಸಿ" ಎಂದು ಜೋರಾಗಿ ಹೇಳುತ್ತಾರೆ. "ಎಲ್ಲರೂ ಬನ್ರೋ ಹೋಗೋಣ" ಎಂದು ಹುಡುಗರು ಕೋಪದಲ್ಲಿ ಹೋಗುತ್ತಾರೆ. ಸೀರಿಯಲ್‌ ಮುಂದುವರೆಯುತ್ತದೆ. ಮಕ್ಕಳು ಎಕ್ಸಾಂನಲ್ಲಿ ಪಾಸ್‌ ಆಗ್ತಾರ? ಪಾರ್ಥ ಲವ್‌ ಎಕ್ಸಾಂನಲ್ಲಿ ಪಾಸ್‌ ಆಗ್ತಾರ ಕಾದು ನೋಡಬೇಕಿದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

Whats_app_banner