BBK 11: ಬಿಗ್‌ಬಾಸ್‌ ಕನ್ನಡ ಸೀಸನ್‌ 11ಕ್ಕಾಗಿ ಮೂರು ಧಾರಾವಾಹಿಗಳು ಬಲಿ? ನಿಮ್ಮ ಅಚ್ಚುಮೆಚ್ಚಿನ ಸೀರಿಯಲ್ಸ್‌ ಇವೆಯಾ ನೋಡಿ-televison news bigg boss kannada season 11 three serials end before bbk 11 chukki taare kendasampige ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Bbk 11: ಬಿಗ್‌ಬಾಸ್‌ ಕನ್ನಡ ಸೀಸನ್‌ 11ಕ್ಕಾಗಿ ಮೂರು ಧಾರಾವಾಹಿಗಳು ಬಲಿ? ನಿಮ್ಮ ಅಚ್ಚುಮೆಚ್ಚಿನ ಸೀರಿಯಲ್ಸ್‌ ಇವೆಯಾ ನೋಡಿ

BBK 11: ಬಿಗ್‌ಬಾಸ್‌ ಕನ್ನಡ ಸೀಸನ್‌ 11ಕ್ಕಾಗಿ ಮೂರು ಧಾರಾವಾಹಿಗಳು ಬಲಿ? ನಿಮ್ಮ ಅಚ್ಚುಮೆಚ್ಚಿನ ಸೀರಿಯಲ್ಸ್‌ ಇವೆಯಾ ನೋಡಿ

Bigg boss kannada season 11: ಅಕ್ಟೋಬರ್‌ 3ನೇ ವಾರದಿಂದ ಕನ್ನಡ ಬಿಗ್‌ಬಾಸ್‌ ರಿಯಾಲಿಟಿ ಶೋನ 11ನೇ ಸೀಸನ್‌ ಆರಂಭವಾಗಲಿದೆ. ಈ ಸೀಸನ್‌ಗೆ ಸಮಯದ ಸ್ಲಾಟ್‌ ಮಾಡಿಕೊಡುವ ಸಲುವಾಗಿ ಕನ್ನಡದ ಮೂರು ಧಾರಾವಾಹಿಗಳನ್ನು ಮುಗಿಸುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.

BBK 11: ಬಿಗ್‌ಬಾಸ್‌ ಕನ್ನಡ ಸೀಸನ್‌ 11ಕ್ಕಾಗಿ ಮೂರು ಧಾರಾವಾಹಿಗಳು ಮುಕ್ತಾಯ
BBK 11: ಬಿಗ್‌ಬಾಸ್‌ ಕನ್ನಡ ಸೀಸನ್‌ 11ಕ್ಕಾಗಿ ಮೂರು ಧಾರಾವಾಹಿಗಳು ಮುಕ್ತಾಯ

ಬೆಂಗಳೂರು: ಕನ್ನಡ ಕಿರುತೆರೆ ಪ್ರೇಕ್ಷಕರು ಬಿಗ್‌ಬಾಸ್‌ ಸೀಸನ್‌ 11ಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಈ ಬಾರಿ ದೊಡ್ಮನೆಯೊಳಗೆ ಹೋಗುವ ಆಟಗಾರರು ಯಾರು? ಎನ್ನುವ ಕುತೂಹಲದ ಜತೆಗೆ ಈ ಬಾರಿ ಕಿಚ್ಚ ಸುದೀಪ್‌ ಹೋಸ್ಟ್‌ ಮಾಡೋಲ್ವ ಎನ್ನುವ ಪ್ರಶ್ನೆಯೂ ಮೂಡಿದೆ. ಸುದೀಪ್‌ ಮ್ಯಾಕ್ಸ್‌ ಸಿನಿಮಾದಲ್ಲಿ ಬಿಝಿಯಾಗಿರುವ ಕಾರಣ ಆ ಸಿನಿಮಾ ಬಿಡುಗಡೆಯಾಗದೆ ಬಿಗ್‌ಬಾಸ್‌ ಹೋಸ್ಟ್‌ ಮಾಡಲು ಕಿಚ್ಚ ಬಿಡುವಾಗುವುದು ಕಷ್ಟ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ, ಸುದೀಪ್‌ರನ್ನು ಬದಲಾಯಿಸುವ ಕುರಿತು ವದಂತಿಗಳು ಸತ್ಯಕ್ಕೆ ದೂರ ಎಂದು ಮೂಲಗಳು ತಿಳಿಸಿವೆ. ಇದೇ ಸಮಯದಲ್ಲಿ ಬಿಗ್‌ಬಾಸ್‌ ಕನ್ನಡ ರಿಯಾಲಿಟಿ ಶೋಗಾಗಿ ಮೂರು ಧಾರಾವಾಹಿಗಳನ್ನು ಮುಗಿಸಲಾಗುತ್ತದೆಯೇ? ಹೌದು ಎನ್ನುತ್ತಿವೆ ವರದಿಗಳು. ಆದರೆ, ಇವುಗಳಲ್ಲಿ ಹೊಸ ಧಾರಾವಾಹಿಗಳು ಇರುವ ಕಾರಣ ಕೆಲವು ಧಾರಾವಾಹಿಗಳನ್ನು ಮುಗಿಸುವ ಬದಲು ಬೇರೆ ಸಮಯ ಪ್ರಸಾರ ಮಾಡುವ ಸಾಧ್ಯತೆಯೂ ಇದೆ. ಆದರೆ, ಯಾವೆಲ್ಲ ಸೀರಿಯಲ್‌ಗಳು ಕೊನೆಗೊಳ್ಳಲಿವೆ ಎಂದು ಕಲರ್ಸ್‌ ವಾಹಿನಿ ಅಧಿಕೃತವಾಗಿ ಇನ್ನೂ ಪ್ರಕಟಿಸಿಲ್ಲ.

ಯಾವೆಲ್ಲ ಸೀರಿಯಲ್‌ಗಳು ಮುಕ್ತಾಯ?

ದೊಡ್ಡ ಮೀನು ಬಂದಾಗ ಚಿಕ್ಕ ಮೀನುಗಳು ಗುಳುಂ ಆಗೋದು ಪ್ರಕೃತಿದತ್ತ ವಿಚಾರ. ಬಿಗ್‌ಬಾಸ್‌ ಇತಿಹಾಸ ಗಮನಿಸಿದರೂ ಈ ರೀತಿ ಆಗುತ್ತದೆ. ಬಿಗ್‌ಬಾಸ್‌ ಶುರುವಾಗುವ ಸಮಯದಲ್ಲಿ ಒಂದೆರಡು ಮೂರು ಸೀರಿಯಲ್‌ಗಳು ಮುಕ್ತಾಯವಾಗುತ್ತವೆ. ಆ ಸೀರಿಯಲ್‌ಗಳನ್ನು ಇನ್ನೊಂದು ವರ್ಷ ಎಳೆಯುವ ಶಕ್ತಿ ನಿರ್ದೇಶಕರಿಗೆ ಇದ್ದರೂ ಬಿಗ್‌ಬಾಸ್‌ ಎಂಬ ದೊಡ್ಡ ರಿಯಾಲಿಟಿ ಶೋಗಾಗಿ ಈ ಸೀರಿಯಲ್‌ಗಳಿಗೆ ಬೇಗ ಮುಕ್ತಾಯ ಹಾಡಲಾಗುತ್ತದೆ. ಹಾಗಾದರೆ, ಈ ವರ್ಷ ಮುಕ್ತಾಯಗೊಳ್ಳುವ ಸಾಧ್ಯತೆಯಿರುವ ಮೂರು ಸೀರಿಯಲ್‌ಗಳು ಯಾವುದಿರಬಹುದು? ವಿಜಯ ಕರ್ನಾಟಕ ವರದಿ ಪ್ರಕಾರ ಚುಕ್ಕಿತಾರೆ, ಅಂತರಪಟ, ಕೆಂಡಸಂಪಿಗೆ ಸೀರಿಯಲ್‌ಗಳು ಮುಕ್ತಾಯವಾಗುವ ಸಾಧ್ಯತೆ ಹೆಚ್ಚಾಗಿದೆ.

ಚುಕ್ಕಿತಾರೆ ಮುಕ್ತಾಯ?: ವರದಿಗಳ ಪ್ರಕಾರ ಚುಕ್ಕಿತಾರೆ ಸೀರಿಯಲ್‌ ಈ ವರ್ಷ ಬಿಗ್‌ಬಾಸ್‌ ಸಮಯದಲ್ಲಿ ಮುಕ್ತಾಯಗೊಳ್ಳಲಿರುವ ಸೀರಿಯಲ್‌ಗಳಲ್ಲಿ ಹಿಟ್‌ಲಿಸ್ಟ್‌ನಲ್ಲಿದೆ. ನವೀನ್ ಸಜ್ಜು, ದಿವ್ಯಶ್ರೀ, ವಿಶಾಲ್, ಜಯಶ್ರೀ, ರಾಧಿಕಾ ಶ್ರವಂತ್ ಮುಂತಾದವರೂ ಈ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಪುಟಾಣಿ ಮಹಿತಾ ಈ ಸೀರಿಯಲ್‌ನ ಪ್ರಮುಖ ಆಕರ್ಷಣೆ.

ಅಂತರಪಟ: ಕೆಲವೇ ದಿನಗಳಲ್ಲಿ ಕೊನೆಗೊಳ್ಳುವ ಸೀರಿಯಲ್‌ಗಳಲ್ಲಿ ಅಂತರಪಟವೂ ಇದೆ. ಸ್ವಪ್ನಕೃಷ್ಣಾ ನಿರ್ದೇಶನದ ಈ ಸೀರಿಯಲ್‌ನಲ್ಲಿ ತನ್ವಿ ಬಾಲರಾಜ್‌, ಚಂದನ್‌ಗೌಡ, ಶರ್ಮಿಳಾ ಚಂದ್ರಶೇಖರ್‌, ಎಸ್‌ ನಾರಾಯಣ, ಮಂಜು ಪಾವಗಡ, ಜ್ಯೋತಿಕಿರಣ್‌ ಮುಂತಾದ ಕಲಾವಿದರು ನಟಿಸುತ್ತಿದ್ದಾರೆ.

ಕೆಂಡಸಂಪಿಗೆ ಸೀರಿಯಲ್‌ ಕೂಡ ಸದ್ಯದಲ್ಲಿಯೇ ಮುಕ್ತಾಯವಾಗಲಿದೆ ಎನ್ನಲಾಗುತ್ತಿದೆ. 2022ರಿಂದ ಈ ಸೀರಿಯಲ್‌ ಪ್ರಸಾರವಾಗುತ್ತಿದೆ.

ಹೀಗೆ, ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಆರಂಭದ ವೇಳೆ ಹಲವು ಸೀರಿಯಲ್‌ಗಳು ಮುಗಿಯುವ ಸೂಚನೆಯಿದೆ. ಇದೇ ಸಮಯದಲ್ಲಿ ಬಿಗ್‌ಬಾಸ್‌ ಕನ್ನಡದಲ್ಲಿ ಈ ಬಾರಿ ಯಾರೆಲ್ಲ ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲವೂ ಇದೆ. ಇತ್ತೀಚೆಗೆ ಈ ಶೋಗೆ ಜ್ಯೋತಿ ರೈ (ಜ್ಯೋತಿ ಪೂರ್ವಾಜ್‌)ರನ್ನು ವಾಹಿನಿ ಆಹ್ವಾನಿಸಿತ್ತು. ಆದರೆ, ನಾನು ಈ ಶೋನಲ್ಲಿ ಭಾಗವಹಿಸುವುದಿಲ್ಲ ಎಂದು ಇವರು ಪ್ರತಿಕ್ರಿಯೆ ನೀಡಿದ್ದರು. ಒಟ್ಟಾರೆ, ಈ ಬಾರಿಯ ಸ್ಪರ್ಧೆಗೆ ಘಟಾನುಘಟಿ ಸ್ಪರ್ಧಿಗಳನ್ನು ವಾಹಿನಿ ಹುಡುಕುತ್ತಿರುವ ಸೂಚನೆ ಇದಾಗಿದೆ.