ಕನ್ನಡ ಸುದ್ದಿ  /  ಮನರಂಜನೆ  /  Salaar: ಟಿವಿ ವೀಕ್ಷಕರಿಗೆ ಸೂಪರ್‌ ಸುದ್ದಿ; ಈ ಭಾನುವಾರ ಸಲಾರ್‌ ಸಿನಿಮಾ ಟಿವಿಯಲ್ಲಿ ಪ್ರಸಾರ, ಯಾವ ಚಾನೆಲ್‌, ಎಷ್ಟು ಗಂಟೆಗೆ? ಇಲ್ಲಿದೆ ವಿವರ

Salaar: ಟಿವಿ ವೀಕ್ಷಕರಿಗೆ ಸೂಪರ್‌ ಸುದ್ದಿ; ಈ ಭಾನುವಾರ ಸಲಾರ್‌ ಸಿನಿಮಾ ಟಿವಿಯಲ್ಲಿ ಪ್ರಸಾರ, ಯಾವ ಚಾನೆಲ್‌, ಎಷ್ಟು ಗಂಟೆಗೆ? ಇಲ್ಲಿದೆ ವಿವರ

Salaar movie television premiere date: ಪ್ರಶಾಂತ್‌ ನೀಲ್‌ ನಿರ್ದೇಶನದ ಬ್ಲಾಕ್‌ಬಸ್ಟರ್‌ ಸಿನಿಮಾ "ಸಲಾರ್‌" ಈ ಭಾನುವಾರ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಭಾನುವಾರ ರಾತ್ರಿ 7 ಗಂಟೆಗೆ ಸಲಾರ್‌ ಸಿನಿಮಾವನ್ನು ಕಿರುತೆರೆ ವೀಕ್ಷಕರು ಟಿವಿಯಲ್ಲಿ ವೀಕ್ಷಿಸಬಹುದಾಗಿದೆ.

ಈ ಭಾನುವಾರ ಸಲಾರ್‌ ಸಿನಿಮಾ ಟಿವಿಯಲ್ಲಿ ಪ್ರಸಾರ
ಈ ಭಾನುವಾರ ಸಲಾರ್‌ ಸಿನಿಮಾ ಟಿವಿಯಲ್ಲಿ ಪ್ರಸಾರ

ಬೆಂಗಳೂರು: ಕೆಲವು ತಿಂಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಬಳಿಕ ಒಟಿಟಿಗೆ ಲಗ್ಗೆಯಿಟ್ಟ ಪ್ರಭಾಸ್‌ ಅಭಿನಯದ ಸಲಾರ್‌ ಸಿನಿಮಾವು ಇದೀಗ ಟಿವಿಯಲ್ಲಿ ಪ್ರಸಾರಗೊಳ್ಳಲು ಸಜ್ಜಾಗಿದೆ. ಇದೇ ಭಾನುವಾರ ಸುವರ್ಣ ವಾಹಿನಿಯಲ್ಲಿ ಸಲಾರ್‌ ಸಿನಿಮಾ ಬಿಡುಗಡೆಯಾಗಲಿದೆ. ಪ್ರಭಾಸ್‌ ಅಭಿನಯದ ಮತ್ತು ಪ್ರಶಾಂತ್‌ ನೀಲ್‌ ನಿರ್ದೇಶನದ ಸಿನಿಮಾವು ಚಿತ್ರಮಂದಿರಗಳಲ್ಲಿ ಸೂಪರ್‌ಹಿಟ್‌ ಆಗಿತ್ತು.

ಟ್ರೆಂಡಿಂಗ್​ ಸುದ್ದಿ

ಕನ್ನಡಿಗರಿಗೆ ಸ್ಟಾರ್ ಸುವರ್ಣ ವಾಹಿನಿಯು ಅನೇಕ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು, ಧಾರಾವಾಹಿಗಳನ್ನು, ಸಿನಿಮಾಗಳನ್ನು ನೀಡುತ್ತಾ ಬಂದಿದೆ. ವಿಶ್ವ-ವಿಖ್ಯಾತಿ ಪಡೆದ ಕಾಂತಾರ, ಹೊಯ್ಸಳ, ಜೇಮ್ಸ್‌ನಂತಹ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ಟಿವಿಯಲ್ಲಿ ಪ್ರಸಾರ ಮಾಡಿ ಪ್ರೇಕ್ಷಕರ ಮನಗೆದ್ದಿತ್ತು. ಇದೀಗ ಸುವರ್ಣ ವಾಹಿನಿಯಲ್ಲಿ ಇದೀಗ 2023ರ ಬ್ಲಾಕ್ ಬಸ್ಟರ್ ಹಿಟ್ "ಸಲಾರ್" ಸಿನಿಮಾ ಪ್ರಸಾರವಾಗಲಿದೆ. ಜೊತೆಗೆ ವೀಕ್ಷಕರಿಗೆ ಬೈಕ್ ಗೆಲ್ಲುವ ಅವಕಾಶವನ್ನು ಸುವರ್ಣ ವಾಹಿನಿಯು ನೀಡುತ್ತಿದೆ.

ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಗಳಿಕೆ

ರೆಬಲ್ ಸ್ಟಾರ್ ಪ್ರಭಾಸ್ ಅಭಿನಯದ 'ಸಲಾರ್' ಸಿನಿಮಾವು ಬಾಕ್ಸ್ ಆಫೀಸ್​ನಲ್ಲಿ 700 ಕೋಟಿ ರೂಪಾಯಿ ಕೊಳ್ಳೆ ಹೊಡೆದಿತ್ತು. ಈ ಸಿನಿಮಾದಲ್ಲಿ ವೀಕ್ಷಕರಿಗೆ ಪ್ರಭಾಸ್ ಅವರ ಲುಕ್ ಜೊತೆಗೆ ಸಿನಿಮಾದಲ್ಲಿ ಬಳಸಲಾಗಿದ್ದ ಬೈಕ್ ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿ ಮಾಡಿತ್ತು. ಇದೀಗ ಆ ಬೈಕ್ ಗೆಲ್ಲೋ ಅವಕಾಶವನ್ನು ನೋಡುಗರಿಗೆ ಹೊಂಬಾಳೆ ಫಿಲಂಸ್ ನಿರ್ಮಾಣ ಸಂಸ್ಥೆಯು ನೀಡುತ್ತಿದೆ. 'ಸಲಾರ್' ಸಿನಿಮಾ ನೋಡ್ತಾ ನೋಡ್ತಾ, ಅಲ್ಲಿ ಕೇಳೊ ಪ್ರಶ್ನೆಗಳಿಗೆ ಆದಷ್ಟು ಬೇಗ ಸರಿಯಾದ ಉತ್ತರ ಕೊಟ್ರೆ, ಅದೃಷ್ಟಶಾಲಿ ವಿಜೇತರಿಗೆ 'ಸಲಾರ್' ನಲ್ಲಿ ಪ್ರಭಾಸ್ ಬಳಸಿರೋ ಬೈಕ್ ಬಹುಮಾನವಾಗಿ ಸಿಗಲಿದೆ.

ಸ್ಯಾಂಡಲ್‌ವುಡ್‌ನ ಜನಪ್ರಿಯ ನಿರ್ದೇಶಕ ಪ್ರಶಾಂತ್ ನೀಲ್ 'ಸಲಾರ್' ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಹೊಂಬಾಳೆ ಫಿಲಂಸ್ ಈ ಸಿನಿಮಾವನ್ನು ನಿರ್ಮಿಸಿದೆ. ಇನ್ನು ಈ ಸಿನಿಮಾದ ಹಾಡುಗಳು ಅದ್ಭುತ ರೀತಿಯಲ್ಲಿ ಮೂಡಿ ಬಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್‌ ಸೃಷ್ಟಿಸಿತ್ತು.

ಈಗಾಗಲೇ ಕೆಜಿಎಫ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ನಿರ್ದೇಶನದ ಸಲಾರ್‌ ಸಿನಿಮಾವು ಗಳ್ಳಾಪೆಟ್ಟಿಗೆಯಲ್ಲಿ ದಾಖಲೆಯಷ್ಟು ಹಣ ಸಂಗ್ರಹಿಸಿದೆ. ಈ ಸಿನಿಮಾದ ಕಥೆ ಮತ್ತು ಸಾಹಸವು ಸಿನಿಪ್ರೇಕ್ಷಕರಿಗೆ ಉತ್ತಮ ಮನರಂಜನೆ ನೀಡಿದೆ. ಚಿತ್ರಮಂದಿರಗಳಲ್ಲಿ ಮತ್ತು ಒಟಿಟಿಯಲ್ಲಿ ಸಲಾರ್‌ ವೀಕ್ಷಿಸದೆ ಇರುವವರು ಈ ಸಿನಿಮಾವನ್ನು ಈ ಭಾನುವಾರ ಟಿವಿಯಲ್ಲಿ ನೋಡಬಹುದಾಗಿದೆ.

ಹೊಂಬಾಳೆ ಫಿಲ್ಮ್ಸ್‌ ಹೊರತಂದ ಸಲಾರ್‌ ಸಿನಿಮಾವು ಖಾನ್ಸರ್‌ ಎಂಬ ಕಾಲ್ಪನಿಕ ಭೂಮಿಯಲ್ಲಿ ಕ್ರೌರ್ಯ ನಡೆಯುವ ಕಥಾನಕ. ಆದರೆ, ಕ್ರೂರತನವನ್ನು ತೋರಿಸುವ ಉದ್ದೇಶ ಸಿನಿಮಾದಲ್ಲಿ ಇರಲಿಲ್ಲ. ಎರಡು ಬಾಲ್ಯ ಸ್ನೇಹಿತರ ಕಥೆಯನ್ನು ಹೇಳಲಾಗಿದೆ. "ಇದು ದೇವ ಮತ್ತು ವರದಾ ಎಂಬ ಇಬ್ಬರು ಸ್ನೇಹಿತರ ಕಥೆ. ಇದು ಈ ಸಿನಿಮಾದ ತಿರುಳಾಗಿದೆ" ಎಂದು ಪ್ರಶಾಂತ್‌ ನೀಲ್‌ ಹೇಳಿದ್ದಾರೆ. ಬಹುನಿರೀಕ್ಷಿತ ಸಲಾರ್‌ ಸಿನಿಮಾವು ಡಿಸೆಂಬರ್‌ 22ರಂದು ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್‌ ಆಗಿತ್ತು.

IPL_Entry_Point