ತೆಲುಗಿನ ಅರುಂಧತಿ ಚಿತ್ರದ ಈ ಬಾಲನಟಿ ನೆನಪಿದ್ದಾರಾ? ಗುರುತೇ ಸಿಗದಷ್ಟು ಬದಲಾಗಿದ್ದಾರೆ ಅಂದಿನ ಪುಟ್ಟ ಪೋರಿ
ಕನ್ನಡ ಸುದ್ದಿ  /  ಮನರಂಜನೆ  /  ತೆಲುಗಿನ ಅರುಂಧತಿ ಚಿತ್ರದ ಈ ಬಾಲನಟಿ ನೆನಪಿದ್ದಾರಾ? ಗುರುತೇ ಸಿಗದಷ್ಟು ಬದಲಾಗಿದ್ದಾರೆ ಅಂದಿನ ಪುಟ್ಟ ಪೋರಿ

ತೆಲುಗಿನ ಅರುಂಧತಿ ಚಿತ್ರದ ಈ ಬಾಲನಟಿ ನೆನಪಿದ್ದಾರಾ? ಗುರುತೇ ಸಿಗದಷ್ಟು ಬದಲಾಗಿದ್ದಾರೆ ಅಂದಿನ ಪುಟ್ಟ ಪೋರಿ

ಸ್ಟಾರ್‌ ನಿರ್ದೇಶಕ ಕೋಡಿ ರಾಮಕೃಷ್ಣ ನಿರ್ದೇಶನದ ಅರುಂಧತಿ ಸಿನಿಮಾ, ವಿಮರ್ಶೆ ದೃಷ್ಟಿಯಿಂದ ಮಾತ್ರವಲ್ಲದೆ, ಕಲೆಕ್ಷನ್‌ ವಿಚಾರದಲ್ಲಿಯೂ ಒಳ್ಳೆಯ ಕಮಾಯಿ ಮಾಡಿತ್ತು. ಆ ಚಿತ್ರದಲ್ಲಿ ನಟಿಸಿದ್ದ ಬಾಲನಟಿ ಈಗ ಹೇಗಾಗಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ಫೋಟೋಗಳು.

ಅರುಂಧತಿ ಚಿತ್ರದ ಈ ಬಾಲನಟಿ ನೆನಪಿದ್ದಾರಾ? ಇಲ್ಲಿದೆ ನೋಡಿ ಫೋಟೋ
ಅರುಂಧತಿ ಚಿತ್ರದ ಈ ಬಾಲನಟಿ ನೆನಪಿದ್ದಾರಾ? ಇಲ್ಲಿದೆ ನೋಡಿ ಫೋಟೋ

ತೆಲುಗಿನ ಸಿನಿಮಾ ಪ್ರೇಕ್ಷಕರ ಜತೆಗೆ ಸೌತ್‌ ಚಿತ್ರರಂಗದಲ್ಲಿ ಮೋಡಿ ಮಾಡಿದ್ದ ಸಿನಿಮಾಗಳಲ್ಲಿ ಅರುಂಧತಿ ಸಹ ಒಂದು. ಸ್ಟಾರ್‌ ನಿರ್ದೇಶಕ ಕೋಡಿ ರಾಮಕೃಷ್ಣ ನಿರ್ದೇಶನದ ಅರುಂಧತಿ ಸಿನಿಮಾ, ವಿಮರ್ಶೆ ದೃಷ್ಟಿಯಿಂದ ಮಾತ್ರವಲ್ಲದೆ, ಕಲೆಕ್ಷನ್‌ ವಿಚಾರದಲ್ಲಿಯೂ ಒಳ್ಳೆಯ ಕಮಾಯಿ ಮಾಡಿತ್ತು. 2009ರಲ್ಲಿ ತೆರೆಕಂಡಿದ್ದ ಈ ಸಿನಿಮಾ ನಟಿ ಅನುಷ್ಕಾ ಶೆಟ್ಟಿಗೂ ದೊಡ್ಡ ಯಶಸ್ಸು ತಂದುಕೊಟ್ಟಿತ್ತು. ಇದೀಗ ಅಂದಿನ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ ಪೋರಿ ಇದೀಗ ಗುರುತೇ ಸಿಗದಷ್ಟು ಬದಲಾಗಿದ್ದಾರೆ.

ಟಾಲಿವುಡ್‌ನಲ್ಲಿ 2009ರಲ್ಲಿ ಬಿಡುಗಡೆಯಾದ ಅರುಂಧತಿ ಸಿನಿಮಾ ಬ್ಲಾಕ್‌ಬಸ್ಟರ್‌ ಹಿಟ್ ಆಗಿ, ಏಳು ವಿಭಾಗಗಳಲ್ಲಿ ಆಂಧ್ರ ಸರ್ಕಾರ ನೀಡುವ ನಂದಿ ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು. ಈ ಚಿತ್ರದ ಬಳಿಕ ಅನುಷ್ಕಾ ಶೆಟ್ಟಿ ಸಹ ಸ್ಟಾರ್‌ ನಾಯಕಿಯಾಗಿ ಮತ್ತಷ್ಟು ಬೆಳೆದರು. ಅರುಂಧತಿ ಚಿತ್ರದಲ್ಲಿ ಒಟ್ಟು ಎರಡು ಶೇಡ್‌ಗಳಲ್ಲಿ ನಾಯಕಿಯ ಎಂಟ್ರಿಯಿತ್ತು. ಬಾಲಕಿಯಾಗಿ ಮತ್ತು ಯುವತಿಯಾಗಿ. ಆ ಪೈಕಿ ಬಾಲ್ಯದ ಅರುಂಧತಿ ಪಾತ್ರ ಮಾಡಿದ್ದ ಚಿನ್ನಾರಿ ಯಾರಿರಬಹುದು? ಈಗ ಅವರು ಹೇಗಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ಫೋಟೋ.̧

ನಾಯಕಿಯಾಗಿಯೂ ನಟಿಸಿದ್ದ ದಿವ್ಯಾ

ಟಿವಿಯಲ್ಲಿ ಈಗಲೂ ಅರುಂಧತಿ ಸಿನಿಮಾ ಬಂದರೆ ನೋಡುವವರೇ ಹೆಚ್ಚು. ಅರುಂಧತಿ ಚಿತ್ರದಲ್ಲಿ ಬಾಲ ನಟಿಯಾಗಿ ನಟಿಸಿರುವ ಬಾಲಕಿ ಹೆಸರು ದಿವ್ಯಾ ನಾಗೇಶ್. ಅರುಂಧತಿ ಚಿತ್ರದ ಮೂಲಕ ದಿವ್ಯಾಗೆ ಒಳ್ಳೆಯ ಮನ್ನಣೆ ಸಿಕ್ಕಿತ್ತು. ಈಗ ಈ ಪುಟ್ಟ ಹುಡುಗಿ ನಾಯಕಿಯಾಗಿ ಅರಳಿದ್ದಾರೆ. ದಿವ್ಯಾ ನಾಗೇಶ್ ಹಲವು ಮಲಯಾಳಂ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ತೆಲುಗಿನಲ್ಲಿ ನೇನು ನಾನ್ನ ಅಬದ್ಧಂ ಚಿತ್ರದ ಮೂಲಕ ನಾಯಕಿಯಾಗಿ ಪದಾರ್ಪಣೆ ಮಾಡಿ ಸೈ ಎನಿಸಿಕೊಂಡರು.

ಸದ್ಯ ಚಿತ್ರಗಳಿಂದ ದೂರ ದೂರ

ಆದರೆ, ಆ ಸಿನಿಮಾ ಹೇಳಿಕೊಳ್ಳುವಂತ ಯಶಸ್ಸು ತಂದುಕೊಡಲಿಲ್ಲ. ಅದಾದ ಬಳಿಕ ಬೇರೆ ಸಿನಿಮಾ ಅವಕಾಶಗಳು ಬಂದರೂ, ಒಳ್ಳೆಯ ಪಾತ್ರ ದಕ್ಕಲಿಲ್ಲ. ಸದ್ಯ ದಿವ್ಯಾ ನಾಗೇಶ್ ಸಿನಿಮಾದಿಂದ ದೂರವೇ ಉಳಿದಿದ್ದಾರೆ. ಆದರೆ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಿರುವ ಈ ಬೆಡಗಿ ಸದಾ ಒಂದಿಲ್ಲೊಂದು ಪೋಸ್ಟ್‌ ಹಂಚಿಕೊಳ್ಳುತ್ತಲೇ ಇರುತ್ತಾರೆ.

Whats_app_banner