ಜಾನಿ ಮಾಸ್ಟರ್ ವಿರುದ್ಧ​ ಲೈಂಗಿಕ ಕಿರುಕುಳ ಪ್ರಕರಣ; ಸಂತ್ರಸ್ತೆಗೆ ನಾನಿದ್ದೇನೆಂದು ಬೆಂಬಲಕ್ಕೆ ನಿಂತ ಅಲ್ಲು ಅರ್ಜುನ್?-tollywood news jani master controversy allu arjun reportedly supporting victim and assures work in movies prs ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಜಾನಿ ಮಾಸ್ಟರ್ ವಿರುದ್ಧ​ ಲೈಂಗಿಕ ಕಿರುಕುಳ ಪ್ರಕರಣ; ಸಂತ್ರಸ್ತೆಗೆ ನಾನಿದ್ದೇನೆಂದು ಬೆಂಬಲಕ್ಕೆ ನಿಂತ ಅಲ್ಲು ಅರ್ಜುನ್?

ಜಾನಿ ಮಾಸ್ಟರ್ ವಿರುದ್ಧ​ ಲೈಂಗಿಕ ಕಿರುಕುಳ ಪ್ರಕರಣ; ಸಂತ್ರಸ್ತೆಗೆ ನಾನಿದ್ದೇನೆಂದು ಬೆಂಬಲಕ್ಕೆ ನಿಂತ ಅಲ್ಲು ಅರ್ಜುನ್?

Jani Master Controversy: ತೆಲುಗಿನ ಸ್ಟಾರ್​ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆಗೆ ನಟ ಅಲ್ಲು ಅರ್ಜುನ್ ಬೆಂಬಲ ನೀಡಿದ್ದಾರೆ ಎನ್ನಲಾದ ಸುದ್ದಿ ಹರಿದಾಡುತ್ತಿದೆ.

ಜಾನಿ ಮಾಸ್ಟರ್​ ಲೈಂಗಿಕ ಕಿರುಕುಳ ಪ್ರಕರಣ; ಸಂತ್ರಸ್ತೆಯ ಬೆಂಬಲಕ್ಕೆ ನಿಂತ ಅಲ್ಲು ಅರ್ಜುನ್
ಜಾನಿ ಮಾಸ್ಟರ್​ ಲೈಂಗಿಕ ಕಿರುಕುಳ ಪ್ರಕರಣ; ಸಂತ್ರಸ್ತೆಯ ಬೆಂಬಲಕ್ಕೆ ನಿಂತ ಅಲ್ಲು ಅರ್ಜುನ್

Allu Arjun: ಟಾಲಿವುಡ್​ನ​ ಖ್ಯಾತ ನಿರ್ದೇಶಕ ಜಾನಿ ಮಾಸ್ಟರ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಜಾನಿ ಮಾಸ್ಟರ್​ ತನಗೆ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆತನ ಅಸಿಸ್ಟೆಂಟ್ ನೃತ್ಯ ನಿರ್ದೇಶಕಿ ಪೊಲೀಸರಿಗೆ ದೂರು ನೀಡಿದ್ದಾರೆ. ಮತಾಂತರಗೊಂಡು ನನ್ನನ್ನು ಮದುವೆಯಾಗುವಂತೆ ಬಲವಂತ ಮಾಡಿದ್ದರು ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ. ಈಗಾಗಲೇ ಜಾನಿ ಬಂಧನವಾಗಿದ್ದು, ತನಿಖೆ ಚುರುಕುಗೊಂಡಿದೆ. ಈ ಸಂಬಂಧ ಟಾಲಿವುಡ್​​ ಸ್ಟಾರ್ ನಟ ಅಲ್ಲು ಅರ್ಜುನ್ ಸಂತ್ರಸ್ತೆ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾದ ಸುದ್ದಿ ಹರಿದಾಡುತ್ತಿದೆ.

ಟಾಲಿವುಡ್​, ಸ್ಯಾಂಡಲ್​ವುಡ್, ಕಾಲಿವುಡ್​ ಸೇರಿದಂತೆ ಹಲವು ಚಿತ್ರರಂಗಗಳಲ್ಲಿ ಪ್ರಮುಖ ನಟರ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿರುವ ಜಾನಿ ಮಾಸ್ಟರ್​, ಅನೇಕ ಬ್ಲಾಕ್​ಬಸ್ಟರ್​ ಹಾಡುಗಳಿಗೆ ಕೊರಿಯಾಗ್ರಾಫ್ ಮಾಡಿದ್ದಾರೆ. ಡಿ ಜೋಡಿ ಡ್ಯಾನ್ಸ್​​ ಶೋನಲ್ಲೂ ಅವರು ಜಡ್ಜ್​ ಆಗಿ ಕೆಲಸ ಮಾಡಿದ್ದರು. ಅಂತಹ ನೃತ್ಯ ನಿರ್ದೇಶಕನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿರುವುದು ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಆರಂಭಗೊಂಡಿವೆ. ಸಂತ್ರಸ್ತೆ ಡಿ ಜೋಡಿ ಶೋನಲ್ಲೆ ಸ್ಪರ್ಧಿಯಾಗಿದ್ದರು ಎಂದು ಹೇಳಲಾಗುತ್ತಿದೆ.

ಈ ಘಟನೆಗೆ ಸಂಬಂಧಿಸಿ ಸಂತ್ರಸ್ತೆ ಮಹಿಳಾ ನೃತ್ಯ ನಿರ್ದೇಶಕಿ ಪರ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಿಂತಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸಂತ್ರಸ್ತೆಯು ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಪುಷ್ಪಾ 2; ದಿ ರೂಲ್​ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ತನ್ನ ಚಿತ್ರಗಳ ಜೊತೆಗೆ ಗೀತಾ ಆರ್ಟ್ಸ್​ ಬ್ಯಾನರ್​​ನಡಿ ನಿರ್ಮಾಣವಾಗುವ ಚಿತ್ರಗಳಲ್ಲಿ ಸಂತ್ರಸ್ತೆ ಕೆಲಸ ಮಾಡಲು ಅವಕಾಶ ನೀಡುವುದಾಗಿ ಅಲ್ಲು ಅರ್ಜುನ್, ತಮ್ಮ ಮ್ಯಾನೇಜರ್​ ಮೂಲಕ ಹೇಳಿಕೆ ನೀಡಿದ್ದಾರೆ ಎನ್ನಲಾದ ಸುದ್ದಿ ಹರಿದಾಡುತ್ತಿದೆ. ಆದರೆ ಈ ವಿಷಯದ ಬಗ್ಗೆ ನಟ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

ನಟಿ ಝಾನ್ಸಿ ಹೇಳಿದ್ದೇನು?

ಜಾನಿ ಮಾಸ್ಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ಲೈಂಗಿಕ ಕಿರುಕುಳ ಪರಿಹಾರ ಸಮಿತಿಯ ಸದಸ್ಯೆ ಹಾಗೂ ಆ್ಯಂಕರ್ ಕಮ್ ನಟಿ ಝಾನ್ಸಿ ಅವರು ಕೆಲ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಒಬ್ಬರು ದೊಡ್ಡ ಹೀರೋ, ಸಂತ್ರಸ್ತೆಗೆ ಕೆಲಸದ ಬಗ್ಗೆ ಭರವಸೆ ನೀಡಿದ್ದಾರೆ. ತಮ್ಮ ಸಿನಿಮಾಗಳಲ್ಲಿ ಕೆಲಸ ಮಾಡಲು ಅವಕಾಶ ನೀಡುವುದಾಗಿ ಆ ಸಂತ್ರಸ್ತೆಗೆ ಭರವಸೆ ನೀಡಿದ್ದಾರೆ. ಅವರ ಮ್ಯಾನೇಜರ್​ ಮೂಲಕ ಈ ಮಾಹಿತಿ ನೀಡಿದ್ದಾರೆ ಎಂದು ಝಾನ್ಸಿ ತಿಳಿಸಿದ್ದಾರೆ. ಅವಕಾಶ ನೀಡುವುದರ ಜೊತೆಗೆ ಸಂತ್ರಸ್ತೆ ಜೊತೆಗೆ ನಿಲ್ಲುವುದಾಗಿ ತಿಳಿಸಿದ್ದಾರೆ. ಆದರೆ ಆಕೆ ಆ ಹೀರೋ ಯಾರೆಂದು ಬಹಿರಂಗಪಡಿಸಿಲ್ಲ. ಆದರೆ ಜಾಲತಾಣಗಳಲ್ಲಿ ಅಲ್ಲು ಅರ್ಜನ್ ಹೇಳಿರುವುದೆಂದು ವೈರಲ್ ಆಗುತ್ತಿದೆ.

ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ರಾಜಕೀಯ ನೇತೃತ್ವದ ಜನಸೇನಾ ಪಕ್ಷಕ್ಕೆ ಜಾನಿ ಮಾಸ್ಟರ್ ಸೇರಿದವರು. ಆದರೆ, ಈ ಪ್ರಕರಣ ದಾಖಲಾದ ಬೆನ್ನಲ್ಲೇ ಜನಸೇನಾ ಚಟುವಟಿಕೆಗಳಿಂದ ದೂರ ಇರುವಂತೆ ಜಾನಿಗೆ ಪಕ್ಷವು ಆದೇಶ ನೀಡಿದೆ. ಈ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಗೆ ಅಲ್ಲು ಅರ್ಜುನ್ ಬೆಂಬಲ ನೀಡಿರುವ ವೈರಲ್ ವಿಚಾರವಾಗಿ ಮೆಗಾ ಮತ್ತು ಅಲ್ಲು ಅಭಿಮಾನಿಗಳ ನಡುವೆ ಜಾಲತಾಣಗಳಲ್ಲಿ ಸಮರ ಶುರುವಾಗಿದೆ. ಎಪಿ ಚುನಾವಣೆಯಿಂದ ಮೆಗಾ ಮತ್ತು ಅಲ್ಲು ಕುಟುಂಬಗಳ ನಡುವೆ ಅಂತರ ಏರ್ಪಟ್ಟಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ವೈಸಿಪಿ ನಂದ್ಯಾಲದ ಅಭ್ಯರ್ಥಿಗೆ ಅಲ್ಲು ಅರ್ಜುನ್ ಬೆಂಬಲ ನೀಡಿದ ನಂತರ ಜಾಲತಾಣಗಳಲ್ಲಿ ಶುರುವಾದ ಮೆಗಾ ಅಲ್ಲು ಫ್ಯಾನ್ಸ್ ವಾರ್ ಇನ್ನೂ ಮುಂದುವರೆದಿದೆ.

ಪ್ರಸ್ತುತ ಅಲ್ಲು ಅರ್ಜುನ್ ಪುಷ್ಪ 2: ದಿ ರೂಲ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಬಹು ನಿರೀಕ್ಷಿತ ಸೀಕ್ವೆಲ್ ಡಿಸೆಂಬರ್ 6 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಆಗಸ್ಟ್​ 15ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಕೆಲವು ಕಾರಣಗಳಿಂದ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ. ಪುಷ್ಪ ಪಾರ್ಟ್ 1 ಚಿತ್ರವು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ಕಾರಣ, ಸೀಕ್ವೆಲ್​ಗೆ ನಿರೀಕ್ಷೆ ಹೆಚ್ಚಾಗಿದೆ.

mysore-dasara_Entry_Point