ಕನ್ನಡ ಸುದ್ದಿ  /  ಮನರಂಜನೆ  /  ಈ ಆಗಸ್ಟ್‌ನಲ್ಲಿ ಸೆಟ್ಟೇರಲಿದೆ ಪ್ರಶಾಂತ್‌ ನೀಲ್‌ ನಿರ್ದೇಶನದ ಜೂನಿಯರ್‌ ಎನ್‌ಟಿಆರ್‌ ಸಿನಿಮಾ; ಇದು ಹೇಗೆ ಸಾಧ್ಯ? ಅಭಿಮಾನಿಗಳಿಗೆ ಅಚ್ಚರಿ

ಈ ಆಗಸ್ಟ್‌ನಲ್ಲಿ ಸೆಟ್ಟೇರಲಿದೆ ಪ್ರಶಾಂತ್‌ ನೀಲ್‌ ನಿರ್ದೇಶನದ ಜೂನಿಯರ್‌ ಎನ್‌ಟಿಆರ್‌ ಸಿನಿಮಾ; ಇದು ಹೇಗೆ ಸಾಧ್ಯ? ಅಭಿಮಾನಿಗಳಿಗೆ ಅಚ್ಚರಿ

Jr NTR Upcoming Movie: ಪ್ರಶಾಂತ್‌ ನೀಲ್‌ ನಿರ್ದೇಶನದ ಜೂನಿಯರ್‌ ಎನ್‌ಟಿಆರ್‌ ನಟನೆಯ ಮುಂಬರುವ ಸಿನಿಮಾ ಇದೇ ಆಗಸ್ಟ್‌ನಲ್ಲಿ ಸೆಟ್ಟೇರಲಿದೆ. ಸಲಾರ್‌ 2 ಚಿತ್ರೀಕರಣದ ಜತೆಜತೆಗೆ ಜೂನಿಯರ್‌ ಎನ್‌ಟಿಆರ್‌ ಸಿನಿಮಾಕ್ಕೂ ಆಕ್ಷನ್‌ ಕಟ್‌ ಹೇಳಲಿದ್ದಾರೆಯೇ ಎಂಬ ಗೊಂದಲ ಜೂ. ಎನ್‌ಟಿಆರ್‌ ಅಭಿಮಾನಿಗಳಲ್ಲಿ ಮೂಡಿದೆ.

ಈ ಆಗಸ್ಟ್‌ನಲ್ಲಿ ಸೆಟ್ಟೇರಲಿದೆ ಪ್ರಶಾಂತ್‌ ನೀಲ್‌ ನಿರ್ದೇಶನದ ಜೂನಿಯರ್‌ ಎನ್‌ಟಿಆರ್‌ ಸಿನಿಮಾ
ಈ ಆಗಸ್ಟ್‌ನಲ್ಲಿ ಸೆಟ್ಟೇರಲಿದೆ ಪ್ರಶಾಂತ್‌ ನೀಲ್‌ ನಿರ್ದೇಶನದ ಜೂನಿಯರ್‌ ಎನ್‌ಟಿಆರ್‌ ಸಿನಿಮಾ

ಬೆಂಗಳೂರು: ಪ್ರಶಾಂತ್‌ ನೀಲ್‌ ನಿರ್ದೇಶನದ ಜೂನಿಯರ್‌ ಎನ್‌ಟಿಆರ್‌ ಸಿನಿಮಾ ಬರಲಿದೆ ಎಂಬ ಸುದ್ದಿ ಈಗಾಗಲೇ ಎಲ್ಲರಿಗೂ ತಿಳಿದಿದೆ. ಆದರೆ, ಇದೀಗ ಇದೇ ಆಗಸ್ಟ್‌ನಲ್ಲಿ ಈ ಚಿತ್ರ ಸೆಟ್ಟೇರಲಿದೆ ಎಂದು ಮೈತ್ರಿ ಮೂವಿ ಮೇಕರ್ಸ್‌ ಘೋಷಣೆ ಮಾಡಿದ್ದು ಎಲ್ಲರಿಗೂ ಅಚ್ಚರಿ ತಂದಿದೆ. ಇನ್ನೂ ಹೆಸರಿಡದ ಈ ಚಿತ್ರ ಈ ವರ್ಷ ಸೆಟ್ಟೇರಲಿದ್ದು, ಮುಂದಿನ ವರ್ಷ ಸಿನಿಮಾ ರಿಲೀಸ್‌ ಮಾಡುವ ಗುರಿಯನ್ನು ಹೊಂದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಜೂನಿಯರ್ ಎನ್‌ಟಿಆರ್‌ ಅವರ ಮುಂದಿನ ಚಿತ್ರ

ತೆಲುಗು ನಟ ಜೂನಿಯರ್‌ ಎನ್‌ಟಿಆರ್‌ ಜನ್ಮದಿನದಂದು ಚಿತ್ರದ ನಿರ್ಮಾಪಕರಾದ ಮೈತ್ರಿ ಮೂವಿ ಮೇಕರ್ಸ್‌ ಟ್ವೀಟ್‌ ಮಾಡಿದೆ. "ಮಾಸ್‌ ಮ್ಯಾನ್‌ ಮ್ಯಾಸ್‌ಗೆ ಜನ್ಮದಿನದ ಶುಭಾಶಯಗಳು. ಆಗಸ್ಟ್‌ 2024ರಲ್ಲಿ ಮುಂದಿನ ಚಿತ್ರದ ಚಿತ್ರೀಕರಣ ಆರಂಭವಾಗುತ್ತದೆ. ಪವರ್ ಹೌಸ್ ಯೋಜನೆಗೆ ನಿಮ್ಮನ್ನು ಸಜ್ಜುಗೊಳಿಸಿಕೊಳ್ಳಿ" ಎಂದು ಟ್ವೀಟ್‌ ಮಾಡಿದೆ. ಜೂನಿಯರ್‌ ಎನ್‌ಟಿಆರ್‌ ಸಿನಿಮಾದ ಕುರಿತು ಯಾವುದೇ ಅಪ್‌ಡೇಟ್‌ ನಿರೀಕ್ಷಿಸದೆ ಇದ್ದ ಅಭಿಮಾನಿಗಳಿಗೆ ಇದರಿಂದ ಆಶ್ಚರ್ಯವಾಗಿದೆ.

ಆದರೆ, ನಿರ್ಮಾಪಕರು ಕಳೆದ ವರ್ಷವೂ ಇದೇ ರೀತಿಯ ಘೋಷಣೆ ಮಾಡಿದ್ದರು ಎಂದು ಅಭಿಮಾನಿಯೊಬ್ಬರು ಎಕ್ಸ್‌ನಲ್ಲಿ ಗಮನ ಸೆಳೆದಿದ್ದಾರೆ. ಈ ವರ್ಷದ ಮಾರ್ಚ್‌ ತಿಂಗಳಿನಿಂದ ಸಿನಿಮಾ ಸೆಟ್ಟೇರಲಿದೆ ಎಂದು ಕಳೆದ ವರ್ಷ ಹೇಳಿದ್ದರು. ಪ್ರಶಾಂತ್‌ ನೀಲ್‌ ಸದ್ಯ ಜೂನಿಯರ್‌ ಎನ್‌ಟಿಆರ್‌ ಅವರ ಸಿನಿಮಾದ ಸ್ಕ್ರಿಪ್ಟ್‌ ಅಂತಿಮಗೊಳಿಸುತ್ತಿದ್ದಾರೆ. ಜೂನಿಯರ್‌ ಎನ್‌ಟಿಆರ್‌ ಅವರನ್ನು ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದಿಡಲು ಯೋಜಿಸಿದ್ದಾರೆ. ಹೀಗಾಗಿ, ಈ ಸಿನಿಮಾದ ಕುರಿತಾದ ನಿರೀಕ್ಷೆಗಳು ಗರಿಗೆದರಿವೆ.

ಮೈತ್ರಿ ಮೇಕರ್ಸ್‌ನ ಈ ಘೋಷಣೆ ಪ್ರಭಾಸ್‌ ಅಭಿಮಾನಿಗಳಿಗೆ ಗೊಂದಲ ಉಂಟು ಮಾಡಿದೆ. ಸಲಾರ್‌ 2 ಸಿನಿಮಾದ ಶೂಟಿಂಗ್‌ ಮತ್ಯಾವಾಗ ಮಾಡುತ್ತಾರೆ ಎಂಬ ಪ್ರಶ್ನೆ ಪ್ರಭಾಸ್‌ ಫ್ಯಾನ್ಸ್‌ಗಳಲ್ಲಿ ಮೂಡಿದೆ. ಇವೆರಡು ಸಿನಿಮಾಗಳನ್ನೂ ಪ್ರಶಾಂತ್‌ ನೀಲ್‌ ಜತೆಜತೆಯಾಗಿ ಮಾಡುತ್ತಾರ ಎಂಬ ಕುತೂಹಲವಿದೆ.

ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರು ಜೂನ್ ತಿಂಗಳಲ್ಲಿ ಸಲಾರ್ ಪಾರ್ಟ್ 2: ಶೌರ್ಯಂಗ ಪರ್ವಂ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ಈ ಹಿಂದೆ ವರದಿ ಮಾಡಿದೆ. "ಪ್ರಭಾಸ್, ಪೃಥ್ವಿರಾಜ್ ಅವರೊಂದಿಗೆ ಜೂನ್ ದ್ವಿತೀಯಾರ್ಧದಲ್ಲಿ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ. ಚಿತ್ರದ ಮೊದಲ ಶೆಡ್ಯೂಲ್ 15 ದಿನಗಳ ಕಾಲ ನಡೆಯಲಿದೆ" ಎಂದು ಮೂಲಗಳು ಹಿಂದೂಸ್ತಾನ್‌ ಟೈಮ್ಸ್‌ಗೆ ತಿಳಿಸಿವೆ.

ಆದರೆ, ಮೈತ್ರಿ ಮೇಕರ್ಸ್‌ನ ಹೊಸ ಅಪ್‌ಡೇಟ್‌ ನೋಡಿ ಪ್ರಭಾಸ್‌ ಅಭಿಮಾನಿಗಳಿಗೆ ಅಚ್ಚರಿಯಾಗಿದೆ. "ಎನ್‌ಟಿಆರ್‌ ಮತ್ತು ನೀಲ್‌ ಆಗಸ್ಟ್‌ ತಿಂಗಳಿನಿಂದ ಚಿತ್ರೀಕರಣ ಆರಂಭಿಸಿದರೆ, ಸಲಾರ್‌ 2 ಚಿತ್ರೀಕರಣ ಯಾವಾಗ ನಡೆಯುತ್ತದೆ?" ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ. ಸಲಾರ್‌ 2 ಗಾಗಿ ಕಾಯುತ್ತಿರುವ ಪಾನ್‌ ಪ್ರಪಂಚದ ಕಥೆ ಏನು ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ. "ಅಭಿಮಾನಿಗಳೇ ಗೊಂದಲಕ್ಕೆ ಒಳಗಾಗಬೇಡಿ. ನೀಲ್‌ ಮೊದಲು ಸಲಾರ್‌ 2 ಮುಗಿಸುತತಾರೆ. ನಂತರ ಸಲಾರ್‌ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿರುವಾಗ ಕೆಜಿಎಫ್‌, ಸಲಾರ್‌ ಮಾಡಿದಂತೆಯೇ ಜೂನಿಯರ್‌ ಎನ್‌ಟಿಆರ್‌ ಸಿನಿಮಾ ಆರಂಭಿಸುತ್ತಾರೆ" ಎಂದು ಅಭಿಮಾನಿಯೊಬ್ಬರು ಉಳಿದ ಅಭಿಮಾನಿಗಳಿಗೆ ಸಮಾಧಾನ ಹೇಳಿದ್ದಾರೆ.

ಟಿ20 ವರ್ಲ್ಡ್‌ಕಪ್ 2024