1969ರ ಕಾಲಘಟ್ಟ, ಚಿನ್ನದ ಜತೆಗೆ ಚೀನಾ ನಂಟು; ಸೆಟ್ಟೇರಿತು ಪ್ರಶಾಂತ್‌ ನೀಲ್‌- ಜೂನಿಯರ್‌ ಎನ್‌ಟಿಆರ್‌ ‘ಡ್ರ್ಯಾಗನ್‌’-tollywood news telugu actor junior ntr and prashanth neel upcoming ntr 31 movie launched and release date locked mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  1969ರ ಕಾಲಘಟ್ಟ, ಚಿನ್ನದ ಜತೆಗೆ ಚೀನಾ ನಂಟು; ಸೆಟ್ಟೇರಿತು ಪ್ರಶಾಂತ್‌ ನೀಲ್‌- ಜೂನಿಯರ್‌ ಎನ್‌ಟಿಆರ್‌ ‘ಡ್ರ್ಯಾಗನ್‌’

1969ರ ಕಾಲಘಟ್ಟ, ಚಿನ್ನದ ಜತೆಗೆ ಚೀನಾ ನಂಟು; ಸೆಟ್ಟೇರಿತು ಪ್ರಶಾಂತ್‌ ನೀಲ್‌- ಜೂನಿಯರ್‌ ಎನ್‌ಟಿಆರ್‌ ‘ಡ್ರ್ಯಾಗನ್‌’

ಟಾಲಿವುಡ್‌ನ ಸ್ಟಾರ್‌ ನಟ ಜೂನಿಯರ್‌ ಎನ್‌ಟಿಆರ್‌ ಮತ್ತು ಸರಣಿ ಹಿಟ್‌ ಸಿನಿಮಾ ನೀಡಿದ ನಿರ್ದೇಶಕ ಪ್ರಶಾಂತ್‌ ನೀಲ್‌ ಜೋಡಿಯ NTR 31 ಸಿನಿಮಾ ಸೆಟ್ಟೇರಿದೆ. ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಈ ಚಿತ್ರದ ಮುಹೂರ್ತ ನೆರವೇರಿದೆ.

1969ರ ಕಾಲಘಟ್ಟ, ಚಿನ್ನದ ಜತೆಗೆ ಚೀನಾ ನಂಟು; ಸೆಟ್ಟೇರಿತು ಪ್ರಶಾಂತ್‌ ನೀಲ್‌- ಜೂನಿಯರ್‌ ಎನ್‌ಟಿಆರ್‌ ‘ಡ್ರ್ಯಾಗನ್‌’
1969ರ ಕಾಲಘಟ್ಟ, ಚಿನ್ನದ ಜತೆಗೆ ಚೀನಾ ನಂಟು; ಸೆಟ್ಟೇರಿತು ಪ್ರಶಾಂತ್‌ ನೀಲ್‌- ಜೂನಿಯರ್‌ ಎನ್‌ಟಿಆರ್‌ ‘ಡ್ರ್ಯಾಗನ್‌’

Junior NTR Prashanth Neel Movie: ಜೂನಿಯರ್‌ ಎನ್ ಟಿಆರ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷ್‌ನನಲ್ಲಿ ಮೂಡಿಬರುತ್ತಿರುವ ಇನ್ನೂ ಶೀರ್ಷಿಕೆ ಅಂತಿಮವಾಗದ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್‌ ಶುಭ ಶುಕ್ರವಾರದಂದು ಘೋಷಣೆ ಮಾಡಿದ್ದಾರೆ. ಈ ಬಿಗ್ ಬಜೆಟ್ ಸಿನಿಮಾ 2026ರ ಜನವರಿ 9 ರಂದು ಬಿಡುಗಡೆಯಾಗಲಿದೆ. ಅದ್ಧೂರಿಯಾಗಿ ಮುಹೂರ್ತ ಕಾರ್ಯಕ್ರಮವೂ ಜರುಗಿದ್ದು, ಇನ್ನೇನು ಶೀಘ್ರದಲ್ಲಿ ಶೂಟಿಂಗ್‌ ಸಹ ಶುರುವಾಗಲಿದೆ.

ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಅಭಿನಯದ ಈ ಸಿನಿಮಾದ ಲಾಂಚಿಂಗ್‌ ಇವೆಂಟ್‌ ಶುಕ್ರವಾರ ಹೈದರಾಬಾದ್‌ನಲ್ಲಿ ನಡೆಯಿತು. ಯಾವುದೇ ಪೂರ್ವ ಮಾಹಿತಿ ಇಲ್ಲದೆ ಸರಳವಾಗಿ ಈ ಮುಹೂರ್ತ ಸಮಾರಂಭವನ್ನು ನಡೆಸಲಾಯಿತು. ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಚಿತ್ರದ ಉದ್ಘಾಟನಾ ಕಾರ್ಯಕ್ರಮದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಜೊತೆಗೆ ಕಲ್ಯಾಣ್ ರಾಮ್ ಮತ್ತು ಚಿತ್ರದ ನಿರ್ಮಾಪಕರು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಡ್ರ್ಯಾಗನ್‌ ಶೀರ್ಷಿಕೆ ಬಹುತೇಕ ಫೈನಲ್‌..

ಸದ್ಯ ಈ ಜೋಡಿಯ ಸಿನಿಮಾ ಕಥೆ ಏನು, ನೀಲ್‌ ಯಾವ ರೀತಿಯ ಸ್ಟೋರಿ ಮಾಡಿದ್ದಾರೆ ಎಂಬ ಸುಳಿವು ಸುಕ್ಕಿರಲಿಲ್ಲ. ಡ್ರ್ಯಾಗನ್‌ ಶೀರ್ಷಿಕೆಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ ಎಂದೂ ಹೇಳಲಾಗುತ್ತಿದೆ. ಇದೀಗ, ಮುಹೂರ್ತಕ್ಕೂ ಮುನ್ನ ಮೈತ್ರಿ ಮೂವಿ ಮೇಕರ್ಸ್‌ ಬಿಡುಗಡೆ ಮಾಡಿದ ಪೋಸ್ಟರ್‌ನಲ್ಲಿ ಸಿನಿಮಾದಲ್ಲಿ ಏನಿರಲಿದೆ ಎಂಬುದರ ಸುಳಿವು ಸಿಕ್ಕಿದೆ. 1969 ನಡೆಯುವ ಈ ಕಥೆಯಲ್ಲಿ ಚಿನ್ನದ ಜತೆಗೆ ಚೀನಾ ನಂಟೂ ಇದೆ. ಭೂತಾನ್‌ ಸಹ ಪೋಸ್ಟರ್‌ನಲ್ಲಿ ಕಾಣಿಸುತ್ತದೆ. ಹಾಗಾಗಿ ಕೆಜಿಎಫ್‌ ಬಳಿಕ ಮತ್ತೊಂದು ಬಂಗಾರದ ಕಥೆಯನ್ನೇ ಹೇಳ್ತಾರಾ ನೀಲ್‌ ಎಂಬುದು ಸದ್ಯದ ಪ್ರಶ್ನೆ.

ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ

ಈಗಾಗಲೇ ಎನ್‌ಟಿಆರ್‌ ಮತ್ತು ನೀಲ್‌ ಜೋಡಿಯ ಸಿನಿಮಾ ಘೋಷಣೆ ಆಗಿಯೇ ವರ್ಷಗಳು ಕಳೆದಿವೆ. ಆದರೆ, ಮುಂದುವರಿದು ಯಾವುದೇ ಅಪ್ಡೇಟ್‌ ಹೊರಬಂದಿರಲಿಲ್ಲ. ಇದೀಗ ಎನ್‌ಟಿಆರ್‌ ಮತ್ತು ನೀಲ್‌ ಕಾಂಬಿನೇಷನ್‌ ಸಿನಿಮಾ ಸೆಟ್ಟೇರಿದೆ. ಈ ಸುದ್ದಿ ತಿಳಿದ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಮುಹೂರ್ತ ಮಾತ್ರವಲ್ಲದೆ, ಚಿತ್ರದ ಬಿಡುಗಡೆಯ ದಿನಾಂಕವನ್ನೂ ಘೋಷಣೆ ಮಾಡಲಾಗಿದೆ. 2026ರ ಸಂಕ್ರಾಂತಿಗೆ ಈ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಮೂಲ ತೆಲುಗು ಜತೆಗೆ, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂನಲ್ಲಿ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.

ಬ್ಲಾಕ್‌ಬಸ್ಟರ್ ಹಿಟ್‌ ಸಿನಿಮಾಗಳಿಂದಲೇ ಹೆಸರುವಾಸಿಯಾದ ಪ್ರಶಾಂತ್ ನೀಲ್, ಎನ್‌ಟಿಆರ್‌ ಜತೆಗಿನ ಈ ಸಿನಿಮಾಕ್ಕೆ ಇನ್ನಷ್ಟು ಶ್ರಮ ಹಾಕುತ್ತಿದ್ದಾರೆ. ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವನ್ನು ಕಲ್ಯಾಣ್ ರಾಮ್ ನಂದಮೂರಿ, ನವೀನ್ ಯೆರ್ನೇನಿ, ರವಿಶಂಕರ್ ಯಲಮಂಚಿಲಿ ಮತ್ತು ಹರಿಕೃಷ್ಣ ಕೊಸರಾಜು ಅವರು ಮೈತ್ರಿ ಮೂವೀ ಮೇಕರ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ಕೆಜಿಎಫ್‌, ಸಲಾರ್‌ ಖ್ಯಾತಿಯ ಭುವನ್ ಗೌಡ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿದ್ದು, ರವಿ ಬಸ್ರೂರ್ ಸಂಗೀತ ಸಂಯೋಜಿಸಲಿದ್ದಾರೆ. ಚಿತ್ರದ ಪಾತ್ರವರ್ಗ ಇನ್ನಷ್ಟೇ ಅಂತಿಮವಾಗಬೇಕಿದೆ.

ಸೆಪ್ಟೆಂಬರ್‌ನಲ್ಲಿ ದೇವರ

ಸದ್ಯ ಎನ್ ಟಿಆರ್ ದೇವರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಈ ಚಿತ್ರ ಸೆಪ್ಟೆಂಬರ್ 27 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಬಿಡುಗಡೆ ದಿನಾಂಕ ಎರಡು ಬಾರಿ ಬದಲಾಯಿತು. ಆರಂಭದಲ್ಲಿ ಏಪ್ರಿಲ್ 5 ರಂದು ಬಿಡುಗಡೆಯಾಗುವ ನಿರೀಕ್ಷೆ ಇತ್ತು. ಬಳಿಕ ಅಕ್ಟೋಬರ್ 10ಕ್ಕೆ ಮುಂದೂಡಲಾಯಿತು. ಬಳಿಕ ಸೆಪ್ಟೆಂಬರ್ 27ಕ್ಕೆ ಫಿಕ್ಸ್‌ ಆಯಿತು.

ಎರಡು ಭಾಗಗಳಲ್ಲಿ ದೇವರ

ದೇವರ ಚಿತ್ರಕ್ಕೆ ಅನಿರುದ್ಧ್ ಸಂಗೀತ ನೀಡುತ್ತಿದ್ದಾರೆ. ಕಲ್ಯಾಣ್ ರಾಮ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರವನ್ನು ಸುಧಾಕರ್ ಮಿಕ್ಕೆಲೆನಿ ಮತ್ತು ಹರಿ ಕೊಸರಾಜು ನಿರ್ಮಿಸಿದ್ದಾರೆ. ದೇವರ ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣುತ್ತಿದೆ. ಮೊದಲ ಭಾಗಕ್ಕೆ ಸುಮಾರು 300 ಕೋಟಿ ಖರ್ಚು ಮಾಡಲಾಗಿದೆ ಎಂದು ವರದಿಯಾಗಿದೆ. ಮತ್ತೊಂದೆಡೆ, ಪ್ರಶಾಂತ್ ನೀಲ್ ಕಳೆದ ವರ್ಷ ಪ್ರಭಾಸ್ ಸಲಾರ್ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಆಕ್ಷನ್ ಎಂಟರ್‌ಟೈನರ್ ಆಗಿ ತಯಾರಾದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 700 ಕೋಟಿ ಕಲೆಕ್ಷನ್ ಮಾಡಿದೆ.