ಕನ್ನಡ ಸುದ್ದಿ  /  ಮನರಂಜನೆ  /  Vd12: ಮುಂದಿನ ಸಿನಿಮಾಕ್ಕೆ ಶ್ರೀಲೀಲಾ ಬದಲು ಭಾಗ್ಯಶ್ರೀ ಬೋರ್ಸೆ ಆಯ್ಕೆ ಮಾಡಿಕೊಂಡ್ರ ವಿಜಯ ದೇವರಕೊಂಡ

VD12: ಮುಂದಿನ ಸಿನಿಮಾಕ್ಕೆ ಶ್ರೀಲೀಲಾ ಬದಲು ಭಾಗ್ಯಶ್ರೀ ಬೋರ್ಸೆ ಆಯ್ಕೆ ಮಾಡಿಕೊಂಡ್ರ ವಿಜಯ ದೇವರಕೊಂಡ

Vijay Deverakonda VD12: ವಿಜಯ್‌ ದೇವರಕೊಂಡ ನಟನೆಯ 12ನೇ ಸಿನಿಮಾಕ್ಕೆ ಹೀರೋಯಿನ್‌ ಯಾರಾಗಲಿದ್ದಾರೆ? ಕೆಲವು ವರದಿಗಳ ಪ್ರಕಾರ ಭಾಗ್ಯಶ್ರೀ ಬೋರ್ಸೆಯನ್ನು ಚಿತ್ರತಂಡ ವಿಡಿ 12ಗೆ ಆಯ್ಕೆ ಮಾಡುವ ಸಾಧ್ಯತೆ ಇದೆ. ಇದೇ ಸಮಯದಲ್ಲಿ ಪ್ರೇಮಲು ನಟಿ ಮಮಿತಾ ಬೈಜು ಹೆಸರೂ ಕೇಳಿಬಂದಿದೆ.

ವಿಜಯ್‌ ದೇವರಕೊಂಡ ಮತ್ತು ಭಾಗ್ಯಶ್ರೀ ಬೋರ್ಸೆ
ವಿಜಯ್‌ ದೇವರಕೊಂಡ ಮತ್ತು ಭಾಗ್ಯಶ್ರೀ ಬೋರ್ಸೆ

ಬೆಂಗಳೂರು: ಟಾಲಿವುಡ್‌ ನಟ ವಿಜಯ ದೇವರಕೊಂಡ ಅವರ ಮುಂದಿನ ಹೆಸರಿಡಿದ ಸಿನಿಮಾ "ವಿಡಿ12"ಗೆ ಹೀರೋಯಿನ್‌ ಯಾರೆಂಬ ಪ್ರಶ್ನೆ ಇನ್ನೂ ಒಗಟಾಗಿಯೇ ಉಳಿದಿದೆ. ಸಿನಿಮಾದ ಮುಹೂರ್ತ ಸಂದರ್ಭದಲ್ಲಿ ಕರ್ನಾಟಕ ಮೂಲದ ಶ್ರೀಲೀಲಾ ಹೀರೋಯಿನ್‌ ಎಂದು ಹೇಳಲಾಗಿತ್ತು. ಆದರೆ, ಇದೀಗ ಬಂದ ವರದಿಗಳ ಪ್ರಕಾರ ಶ್ರೀಲೀಲಾಗೆ ವಿಜಯ್‌ ದೇವರಕೊಂಡರ ಮುಂದಿನ ಸಿನಿಮಾದಿಂದ ಗೇಟ್‌ ಪಾಸ್‌ ನೀಡಲಾಗಿದೆಯಂತೆ. ಈಕೆಯ ಬದಲು ಭಾಗ್ಯಶ್ರೀ ಬೋರ್ಸೆ ಎಂಬ ತೆಲುಗು-ಹಿಂದಿ ನಟಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.

ಟ್ರೆಂಡಿಂಗ್​ ಸುದ್ದಿ

ವಿಜಯ್‌ ದೇವರಕೊಂಡ ಅವರ ಮುಂದಿನ ಸ್ಪೈ ಥ್ರಿಲ್ಲರ್‌ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಫ್ಯಾಮಿಲಿ ಸ್ಟಾರ್‌ ಸಿನಿಮಾ ನಿರೀಕ್ಷಿತ ಗೆಲುವು ಪಡೆದಿರಲಿಲ್ಲ. ಹೀಗಾಗಿ, ಮುಂದಿನ ಚಿತ್ರಕ್ಕೆ ನಾಯಕಿಯನ್ನು ಬದಲಾಯಿಸುವ ಕೆಲಸಕ್ಕೆ ಚಿತ್ರತಂಡ ಕೈ ಹಾಕಿದೆಯಂತೆ. ಈ ಹಿಂದೆ ಜೆರ್ಸಿ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ಗೌತಮ್‌ ತಿನ್ನನೂರಿ ಅವರು ವಿಜಯ್‌ ದೇವರಕೊಂಡ ನಟನೆಯ ಮುಂದಿನ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಇದೀಗ ಬಂದ ವದಂತಿಗಳ ಪ್ರಕಾರ ಭಾಗ್ಯಶ್ರೀ ಬೋರ್ಸೆ ಅವರು ಈ ಸಿನಿಮಾಕ್ಕೆ ನಾಯಕಿಯಾಗುವ ಸಾಧ್ಯತೆ ಇದೆ.

ಈ ಹಿಂದೆ ಶ್ರೀಲೀಲಾ ಅವರು ನಾಯಕಿಯಾಗಿ ಆಯ್ಕೆಯಾಗಿದ್ದರು. ಶೆಡ್ಯೂಲಿಂಗ್‌ ವಿಷಯಗಳಿಂದ ಪ್ರೊಡಕ್ಷನ್‌ ಕೆಲಸ ಮುಂದೂಡಲಾಗಿತ್ತು. ಇದರಿಂದ ಈಕೆ ಈ ಪ್ರಾಜೆಕ್ಟ್‌ನಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ತೃಪ್ತಿ ದಿಮ್ರಿಯನ್ನು ನಾಯಕಿಯಾಗಿ ಆಯ್ಕೆ ಮಾಡಲು ಉದ್ದೇಶಿಸಲಾಗಿತ್ತು. ಅನಿಮಲ್‌ ಸಿನಿಮಾದಲ್ಲಿ ತೃಪ್ತಿ ದಿಮ್ರಿ ಗಮನ ಸೆಳೆದಿದ್ದರು. ಇದಾದ ಬಳಿಕ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಕನ್ನಡ ಮಾತ್ರವಲ್ಲದೆ ತೆಲುಗು ಸಿನಿಪ್ರಿಯರ ಗಮನ ಸೆಳೆದಿದ್ದ ರುಕ್ಮಿಣಿ ವಸಂತ್‌ರನ್ನೂ ಈ ಸಿನಿಮಾಕ್ಕೆ ಆಯ್ಕೆ ಮಾಡುವ ಕುರಿತು ಮಾತುಕತೆಯಾಗಿತ್ತು. ತೃಪ್ತಿ ದಿಮ್ರಿ ಮತ್ತು ರುಕ್ಮಿಣಿ ವಸಂತ್‌ರ ಶೂಟಿಂಗ್‌ ದಿನಗಳು ಮತ್ತು ಸಂಭಾವನೆ ವಿಚಾರಗಳು ಚಿತ್ರತಂಡಕ್ಕೆ ಹೊಂದಾಣಿಕೆಯಾಗದೆ ಇದ್ದ ಕಾರಣ ಇದೀಗ ಭಾಗ್ಯಶ್ರೀಯನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.

ಕೆಲವು ವರದಿಗಳ ಪ್ರಕಾರ ಪ್ರೇಮಲು ಸಿನಿಮಾದ ವಿಜಯ್‌ ದೇವರಕೊಂಡ ನಟನೆಯ ಮುಂದಿನ ಸಿನಿಮಾಕ್ಕೆ ಪ್ರೇಮಲು ನಟಿ ಮಮಿತಾ ಬೈಜು ಅವರನ್ನು ಆಯ್ಕೆ ಮಾಡಿಕೊಳ್ಳುವ ಕುರಿತು ಚಿತ್ರತಂಡ ಆಲೋಚಿಸುತ್ತಿದೆ. ಪ್ರೇಮಲು ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ 130 ಕೋಟಿಗಿಂತಲೂ ಹೆಚ್ಚು ಗಳಿಕೆ ಮಾಡಿದೆ. ಯುವಕರ ಹೊಸ ಕ್ರಶ್‌ ಆಗಿ ಹೊರಹೊಮ್ಮಿರುವ ಪ್ರೇಮಲು ನಟಿಯನ್ನು ವಿಜಯ ದೇವರಕೊಂಡ ಸಿನಿಮಾಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಇದೀಗ ಬಂದ ಕೆಲವು ವರದಿಗಳು ಭಾಗ್ಯಶ್ರೀ ಬೋಸ್ಲೆ ಹೆಸರನ್ನು ಹೇಳುತ್ತಿವೆ. ಪ್ರೇಮಲು ಸಿನಿಮಾ ಹಿಟ್‌ ಆಗಿದ್ದು, ಮಮಿತಾ ಬೈಜುಗೆ ಈಗ ಹಲವು ಪ್ರಾಜೆಕ್ಟ್‌ಗಳು ದೊರಕುವ ಸಾಧ್ಯತೆಯಿದೆ. ಇಂತಹ ಸಮಯದಲ್ಲಿ ಟಾಲಿವುಡ್‌ನ ಸಿನಿಮಾಕ್ಕೆ ಲಭ್ಯವಾಗುತ್ತಾರ ಎನ್ನುವ ಪ್ರಶ್ನೆಯೂ ಇದೆ.

ವಿಜಯ್‌ ದೇವರಕೊಂಡ ಸಿನಿಮಾಕ್ಕೆ ರಶ್ಮಿಕಾ ಮಂದಣ್ಣ ನಾಯಕಿ ಎಂಬ ಸುದ್ದಿಯೂ ಈ ಹಿಂದೆ ಹರಿದಾಡಿತ್ತು. ಶ್ರೀಲೀಲಾಗೆ ಈಗ ಟಾಲಿವುಡ್‌ನಲ್ಲಿ ಅವಕಾಶಗಳು ಕಡಿಮೆಯಾಗಿವೆ. ಶ್ರೀಲೀಲಾ ನಟಿಸಿದ್ದ ಸ್ಕಂದ, ಭಗವಂತ ಕೇಶರಿ, ಆದಿಕೇಶವ, ಎಕ್ಸ್‌ಟ್ರಾರ್ಡಿನರಿ ಮ್ಯಾನ್‌ ಚಿತ್ರಗಳು ನಿರೀಕ್ಷೆಯಷ್ಟು ಯಶಸ್ಸು ತಂದುಕೊಟ್ಟಿರಲಿಲ್ಲ. ಭಗವಂತ ಕೇಸರಿ ಸಿನಿಮಾ ಯಶಸ್ಸಾಗಿದ್ದರೂ ಅದರ ಕ್ರೆಡಿಟ್‌ ಶ್ರೀಲೀಲಾಗೆ ಸಿಗುವಂತೆ ಇರಲಿಲ್ಲ. ಇತ್ತೀಚೆಗೆ ಬಿಡುಗಡೆಯಾದ ಗುಂಟೂರು ಕಾರಂ ಕೂಡ ಯಶಸ್ಸು ಪಡೆಯಲಿಲ್ಲ. ಇದೇ ಸಮಯದಲ್ಲಿ ಶ್ರೀಲೀಲಾ ಎಂಬಿಬಿಎಸ್‌ ಓದುತ್ತಿದ್ದು, ಡಾಕ್ಟರ್‌ ಆಗುವ ಕನಸನ್ನೂ ಜೀವಂತವಾಗಿಟ್ಟುಕೊಂಡಿದ್ದಾರೆ.

IPL_Entry_Point