ವಯನಾಡ್‌ ದುರಂತಕ್ಕೆ ಕರಗಿತು ರಶ್ಮಿಕಾ ಮಂದಣ್ಣ ಮನ, ಕೇರಳ ಸಿಎಂ ಪರಿಹಾರ ನಿಧಿಗೆ ಸೆಲೆಬ್ರಿಟಿಗಳು ಕೊಟ್ರು ಇಷ್ಟಿಷ್ಟು ಹಣ
ಕನ್ನಡ ಸುದ್ದಿ  /  ಮನರಂಜನೆ  /  ವಯನಾಡ್‌ ದುರಂತಕ್ಕೆ ಕರಗಿತು ರಶ್ಮಿಕಾ ಮಂದಣ್ಣ ಮನ, ಕೇರಳ ಸಿಎಂ ಪರಿಹಾರ ನಿಧಿಗೆ ಸೆಲೆಬ್ರಿಟಿಗಳು ಕೊಟ್ರು ಇಷ್ಟಿಷ್ಟು ಹಣ

ವಯನಾಡ್‌ ದುರಂತಕ್ಕೆ ಕರಗಿತು ರಶ್ಮಿಕಾ ಮಂದಣ್ಣ ಮನ, ಕೇರಳ ಸಿಎಂ ಪರಿಹಾರ ನಿಧಿಗೆ ಸೆಲೆಬ್ರಿಟಿಗಳು ಕೊಟ್ರು ಇಷ್ಟಿಷ್ಟು ಹಣ

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನೂರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಕೇರಳ ಸರ್ಕಾರವೂ ರಕ್ಷಣಾ ಕಾರ್ಯಚರಣೆಯಲ್ಲಿ ನಿರತವಾಗಿದೆ. ಈ ನಡುವೆ ಸಿನಿಮಾ ಸೆಲೆಬ್ರಿಟಿಗಳು ಸಿಎಂ ಪರಿಹಾರ ನಿಧಿಗೆ ಧನ ಸಹಾಯ ಮಾಡಿ ಕೈ ಜೋಡಿಸಿದ್ದಾರೆ.

ವಯನಾಡ್‌ ದುರಂತಕ್ಕೆ ಕರಗಿತು ರಶ್ಮಿಕಾ ಮಂದಣ್ಣ ಮನ, ಕೇರಳ ಸಿಎಂ ಪರಿಹಾರ ನಿಧಿಗೆ ಸೆಲೆಬ್ರಿಟಿಗಳು ಕೊಟ್ರು ಇಷ್ಟಿಷ್ಟು ಹಣ
ವಯನಾಡ್‌ ದುರಂತಕ್ಕೆ ಕರಗಿತು ರಶ್ಮಿಕಾ ಮಂದಣ್ಣ ಮನ, ಕೇರಳ ಸಿಎಂ ಪರಿಹಾರ ನಿಧಿಗೆ ಸೆಲೆಬ್ರಿಟಿಗಳು ಕೊಟ್ರು ಇಷ್ಟಿಷ್ಟು ಹಣ

Wayanad landslide relief fund: ಕೇರಳದ ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತ ದುರಂತ ನೂರಾರು ಜೀವಗಳನ್ನು ಬಲಿ ಪಡೆದಿದೆ. ಇಡೀ ದೇಶವೇ ಈ ಮಹಾ ದುರಂತಕ್ಕೆ ಮರುಗಿದೆ. ಸಮರೋಪಾದಿಯಲ್ಲಿ ಮಣ್ಣಿನೊಳಗೆ ಹುದುಗಿರುವ ಮೃತ ದೇಹಗಳನ್ನು ಹೊರತೆಗೆಯುವ ಕೆಲಸವೂ ನಡೆದಿದೆ. ಇದೆಲ್ಲದರ ನಡುವೆ ದೇವರ ನಾಡಿನ ಈ ದುರಂತಕ್ಕೆ ಸಿನಿಮಾ ಸೆಲೆಬ್ರಿಟಿಗಳೂ ಮರುಕ ವ್ಯಕ್ತಪಡಿಸಿ ಕೈಲಾದ ಧನ ಸಹಾಯ ಮಾಡುತ್ತಿದ್ದಾರೆ.

ತಮಿಳಿನ 'ತಂಗಳನ್' ಸಿನಿಮಾ ನಟ ವಿಕ್ರಮ್, ಭೂಕುಸಿತ ಪೀಡಿತ ಪ್ರದೇಶದ ಪುನರ್ನಿರ್ಮಾಣ ಮತ್ತು ಬದುಕುಳಿದವರ ಪುನರ್ವಸತಿಗಾಗಿ ಧನ ಸಹಾಯ ಮಾಡಿದ್ದಾರೆ. ಕೇರಳ ಸರ್ಕಾರದ ಪ್ರಯತ್ನಗಳಿಗೆ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ 20 ಲಕ್ಷ ರೂಪಾಯಿಗಳನ್ನು ನೀಡುವ ಮೂಲಕ ಕೈ ಜೋಡಿಸಿದ್ದಾರೆ. ಬರೀ ವಿಕ್ರಂ ಮಾತ್ರವಲ್ಲ ಇತರೇ ಚಿತ್ರರಂಗದ ಹಲವು ಸೆಲೆಬ್ರಿಟಿಗಳೂ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.

ಫಹಾದ್‌ ಕಡೆಯಿಂದ 25 ಲಕ್ಷ

ಮಾಲಿವುಡ್‌ ನಟ ಫಹಾದ್‌ ಫಾಸಿಲ್‌ ಮತ್ತು ಪತ್ನಿ ನಸ್ರಿಯಾ ಒಟ್ಟಿಗೆ ಸೇರಿ ತಮ್ಮ ನಿರ್ಮಾಣ ಕಂಪನಿ ವತಿಯಿಂದ ಒಟ್ಟು 25 ಲಕ್ಷ ನಗದನ್ನು ಕೇರಳ ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ.

ಸೂರ್ಯ, ಜ್ಯೋತಿಕಾ, ಕಾರ್ತಿಯಿಂದ 50 ಲಕ್ಷ

ಕಾಲಿವುಡ್‌ನ ಸ್ಟಾರ್‌ಗಳಾದ ಸೂರ್ಯ ಮತ್ತು ಪತ್ನಿ ಜ್ಯೋತಿಕಾ ಹಾಗೂ ಸಹೋದರ ಕಾರ್ತಿ ಒಟ್ಟಾಗಿ 50 ಲಕ್ಷ ರೂಪಾಯಿಗಳನ್ನು ವಿಪತ್ತು ಪರಿಹಾರ ನಿಧಿಗೆ ನೀಡಿದ್ದಾರೆ. ದುರಂತದ ಬಗ್ಗೆ ಸೂರ್ಯ ಟ್ವೀಟ್‌ನಲ್ಲಿ ಬೇಸರ ವ್ಯಕ್ತಪಡಿಸಿ, "ಅಲ್ಲಿನ ಕುಟುಂಬಗಳಿಗೆ ನನ್ನ ಪ್ರಾರ್ಥನೆ... ಇದು ನಿಜಕ್ಕೂ ಹೃದಯವಿದ್ರಾವಕ. ರಕ್ಷಣಾ ಕಾರ್ಯಾಚರಣೆಯಲ್ಲಿ ಕುಟುಂಬಗಳಿಗೆ ಸಹಾಯ ಮಾಡಿದ ಎಲ್ಲರಿಗೂ ನನ್ನ ನಮನಗಳು" ಎಂದಿದ್ದಾರೆ.

ಅಪ್ಪ ಮಗನಿಂದಲೂ ಪರಿಹಾರ

ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ಅವರು ತಮ್ಮ ಚಾರಿಟಬಲ್ ಟ್ರಸ್ಟ್ ಮೂಲಕ ದೊಡ್ಡ ಕೊಡುಗೆ ನೀಡಿದ್ದಾರೆ. ಟ್ರಸ್ಟ್‌ ವತಿಯಿಂದ ದುರಂತದಲ್ಲಿ ಸಂತ್ರಸ್ತರಾದವರಿಗೆ ಅಗತ್ಯ ಸಾಮಗ್ರಿಗಳನ್ನು ತಲುಪಿಸಲಾಗುತ್ತಿದೆ. ಬದುಕುಳಿದವರಿಗೆ ಬೇಕಾದ ಆಹಾರ, ಔಷಧಗಳು, ಬಟ್ಟೆಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಇದೆಲ್ಲದರ ಜತೆಗೆ ಅಪ್ಪ ಮಮ್ಮುಟ್ಟಿ 15 ಲಕ್ಷ ಮತ್ತು ಮಗ ದುಲ್ಖರ್‌ ಸಲ್ಮಾನ್‌ 10 ಲಕ್ಷ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ.

ರಶ್ಮಿಕಾ ಮಂದಣ್ಣ ನೀಡಿದ ಹಣವೆಷ್ಟು?

ಇತ್ತೀಚೆಗಷ್ಟೇ ಕೇರಳಕ್ಕೆ ಭೇಟಿ ನೀಡಿದ್ದ ರಶ್ಮಿಕಾ ಮಂದಣ್ಣ, ಅಲ್ಲಿನ ಅಭಿಮಾನಿಗಳ ಪ್ರೀತಿಯನ್ನು ಕಂಡು ಮೂಕವಿಸ್ಮಿತರಾಗಿದ್ದರು. ಇದೀಗ ಇದೇ ಕೇರಳಕ್ಕೆ ಸಂಕಷ್ಟ ಬಂದೊದಗಿದೆ. ಈ ಹಿನ್ನೆಲೆಯಲ್ಲಿ ಕೇರಳದ ಸಿಎಂ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

ನೆರವು ನೀಡುವಂತೆ ಕೋರಿದ ದಳಪತಿ ವಿಜಯ್

ತಮಿಳು ನಟ ದಳಪತಿ ವಿಜಯ್ ಸಹ ಈ ದುರಂತದ ಬಗ್ಗೆ ಟ್ವಿಟ್‌ ಮಾಡಿದ್ದಾರೆ. 'ಕೇರಳದ ವಯನಾಡಿನಲ್ಲಿ ಭೂಕುಸಿತದ ದುಃಖದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ನನ್ನ ಪ್ರಾರ್ಥನೆಗಳು ಅಲ್ಲಿನ ಎಲ್ಲ ಕುಟುಂಬಗಳೊಂದಿಗೆ ಇರಲಿದೆ. ಅಗತ್ಯ ರಕ್ಷಣಾ ಮತ್ತು ಪರಿಹಾರ ಕ್ರಮಗಳನ್ನು ಯುದ್ಧೋಪಾದಿಯಲ್ಲಿ ಒದಗಿಸುವಂತೆ ಸರ್ಕಾರದ ಅಧಿಕಾರಿಗಳಿಗೆ ನನ್ನ ವಿನಂತಿ" ಎಂದಿದ್ದರು ವಿಜಯ್‌.

Whats_app_banner