HSRP Deadline: ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆಗೆ ಸೆಪ್ಟೆಂಬರ್‌ 15 ಡೆಡ್‌ಲೈನ್‌, ವಾಹನ ಮಾಲಿಕರೇ ಕೊನೆಕ್ಷಣದ ಗಡಿಬಿಡಿ ತಪ್ಪಿಸಿ-automobile news hsrp number plate karnataka last date september 15 follow this steps to book hsrp number plate pcp ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Hsrp Deadline: ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆಗೆ ಸೆಪ್ಟೆಂಬರ್‌ 15 ಡೆಡ್‌ಲೈನ್‌, ವಾಹನ ಮಾಲಿಕರೇ ಕೊನೆಕ್ಷಣದ ಗಡಿಬಿಡಿ ತಪ್ಪಿಸಿ

HSRP Deadline: ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆಗೆ ಸೆಪ್ಟೆಂಬರ್‌ 15 ಡೆಡ್‌ಲೈನ್‌, ವಾಹನ ಮಾಲಿಕರೇ ಕೊನೆಕ್ಷಣದ ಗಡಿಬಿಡಿ ತಪ್ಪಿಸಿ

HSRP Number Plate Karnataka Last Date: ಕರ್ನಾಟಕದಲ್ಲಿ 2019ಕ್ಕಿಂತ ಹಳೆಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ಪ್ಲೇಟ್‌ ಅಳವಡಿಸಲು ಸೆಪ್ಟೆಂಬರ್‌ 15 ಕೊನೆಯ ದಿನವಾಗಿದೆ. ಇನ್ನು ಹದಿನೈದು ದಿನಗಳು ಬಾಕಿ ಉಳಿದಿದ್ದು, ಕೊನೆಯ ಕ್ಷಣದವರೆಗೆ ಕಾಯದೇ ನಿಮ್ಮ ಸ್ಲಾಟ್‌ ಈಗಲೇ ಬುಕ್‌ ಮಾಡಿ.

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆಗೆ ಸೆಪ್ಟೆಂಬರ್‌ 15 ಕೊನೆಯ ದಿನ
ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆಗೆ ಸೆಪ್ಟೆಂಬರ್‌ 15 ಕೊನೆಯ ದಿನ

ಬೆಂಗಳೂರು: ಕರ್ನಾಟಕದಲ್ಲಿ ಎಚ್‌ಎಚ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆಗೆ ಸೆಪ್ಟೆಂಬರ್‌ 15 (HSRP Number Plate Karnataka Last Date Sept 15) ಕೊನೆಯ ದಿನವಾಗಿದೆ. ಹೀಗಿದ್ದರೂ, ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ನಂಬರ್‌ ಪ್ಲೇಟ್‌ ಅಳವಡಿಕೆಗೆ ಸರಿಯಾದ ಸ್ಲಾಟ್‌ ದೊರಕದೆ ವಾಹನ ಮಾಲೀಕರು ಪರದಾಡುತ್ತಿದ್ದಾರೆ. ವೀಕೆಂಡ್‌ ಸ್ಲಾಟ್‌ಗಳು ಬಹುತೇಕ ಕಡೆ ಬುಕ್‌ ಆಗಿದ್ದು, ವಾರದ ಇತರೆ ದಿನಗಳಲ್ಲಿ ಕೆಲಸದ ಒತ್ತಡದಿಂದ ಸಮಯ ದೊರಕುತ್ತಿಲ್ಲ. ಹೀಗಾಗಿ, ಬಹುತೇಕ ವಾಹನ ಮಾಲೀಕರು ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆಗೆ ನಿರಾಸಕ್ತಿ ತೋರಿಸುತ್ತಿದ್ದಾರೆ. ಇದೇ ಸಮಯದಲ್ಲಿ ಕರ್ನಾಟಕದಲ್ಲಿ ವಾಹನ ನಂಬರ್‌ ಪ್ಲೇಟ್‌ ಅಳವಡಿಕೆಗೆ ಗಡುವು ಹತ್ತಿರದಲ್ಲಿದ್ದು, ಈ ಕುರಿತು ಸರಕಾರದಿಂದ ಯಾವುದೇ ಎಚ್ಚರಿಕೆ, ಸೂಚನೆ ಅಥವಾ ಜ್ಞಾಪನೆಯೂ ಬಂದಿಲ್ಲ. ಸೆಪ್ಟೆಂಬರ್‌ 15ರವರೆಗೆ ಸೈಲೆಂಟ್‌ ಆಗಿದ್ದು, ಬಳಿಕ ವಾಹನ ಮಾಲೀಕರಿಂದ ದಂಡ ವಸೂಲು ಮಾಡುವ ಯೋಜನೆಯೂ ಇರಬಹುದು ಎಂಬ ಚರ್ಚೆಯೂ ಸೋಷಿಯಲ್‌ ಮೀಡಿಯಾದಲ್ಲಿ ನಡೆಯುತ್ತಿದೆ. ಎಚ್‌ಎಸ್‌ಆಎರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆಗೆ ಇನ್ನು ಹದಿನೈದು ದಿನ ಬಾಕಿ ಇರುವುದರಿಂದ ಇನ್ನೂ ಹೊಸ ನಂಬರ್‌ ಪ್ಲೇಟ್‌ ಅಳವಡಿಕೆ ಮಾಡದೆ ಇರುವವರು ವಿಳಂಬ ಮಾಡದೆ bookmyhsrpಯಲ್ಲಿ ಸ್ಲಾಟ್‌ ಬುಕ್‌ ಮಾಡುವುದು ಉತ್ತಮ. ವಾಹನಕ್ಕೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಸುವುದು ಹೇಗೆ ಎಂದು ತಿಳಿಯೋಣ.

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಕೊನೆದಿನ ಮತ್ತು ದಂಡ

1989ರ ಸಿಎಂವಿಆರ್‌ ಕಾಯಿದೆಯ ನಿಯಮ 50ರಡಿ ಭಾರತದ ಎಲ್ಲಾ ವಾಹನಗಳು ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ, ಇದು ಆಯ್ಕೆಯಲ್ಲ, ವಾಹನ ಮಾಲೀಕರು ಕಡ್ಡಾಯವಾಗಿ ಅಳವಡಿಸಬೇಕಿದೆ. ಇದೇ ಸೆಪ್ಟೆಂಬರ್‌ 15 ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಕೊನೆಯ ದಿನವಾಗಿದ್ದು, ಇಲ್ಲವಾದಲ್ಲಿ 500-1000 ರೂ.ವರೆಗೆ ದಂಡ ಪಾವತಿಸಬೇಕಾಗುತ್ತದೆ. ನೋಂದಣಿ ಪ್ರಾಧಿಕಾರದ ಹೆಸರು, ವಾಹನದ ನೋಂದಣಿ ಸಂಖ್ಯೆ, ಲೇಸರ್‌ ಬ್ರಾಂಡೆಡ್‌ ಕಾಯಂ ಗುರುತಿನ ಸಂಖ್ಯೆ ಮತ್ತು ವಾಹನ ಮೊದಲು ನೋಂದಣಿಯಾದ ದಿನಾಂಕವನ್ನು ಈ ನಂಬರ್‌ ಪ್ಲೇಟ್‌ ಹೊಂದಿರಲಿದೆ. ವಾಹನದ ನೋಂದಣಿ ಸಂಖ್ಯೆ, ಛಾಸಿ ಸಂಖ್ಯೆ, ಎಂಜಿನ್‌ ಸಂಖ್ಯೆ ಇತ್ಯಾದಿಗಳನ್ನು ರೆಡಿಯಾಗಿಟ್ಟುಕೊಂಡು bookmyhsrp ವೆಬ್‌ಸೈಟ್‌ನಲ್ಲಿ ಎಚ್‌ಎಸ್‌ಆರ್‌ಪಿ ನಂಬರ್‌ಪ್ಲೇಟ್‌ಗಾಗಿ ಅರ್ಜಿ ಸಲ್ಲಿಸಬಹುದು.

ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅರ್ಜಿ ಸಲ್ಲಿಕೆ ಹೇಗೆ?

ಹಂತ 1: ಮೊದಲಿಗೆ bookmyhsrp.com ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 2: High Security Registration Plate with Colour Sticker ಎಂಬ ಆಯ್ಕೆ ಕ್ಲಿಕ್‌ ಮಾಡಿ.

ಹಂತ 3: ರಾಜ್ಯ, ನೋಂದಣಿ ಸಂಖ್ಯೆ, ಛಾಸಿ ಸಂಖ್ಯೆ, ಎಂಜಿನ್‌ ಸಂಖ್ಯೆ ನಮೂದಿಸಿ. ಕ್ಯಾಪ್ಚಾ ನಮೂದಿಸಿ ಕ್ಲಿಕ್‌ ಇಯರ್‌ ಬಟನ್‌ ಕ್ಲಿಕ್‌ ಮಾಡಿ.

ಹಂತ 4: ಫಿಟ್‌ಮ್ಯಾನ್‌ ಲೊಕೆಷನ್‌ ವಿವರದಲ್ಲಿ "ನಂಬರ್‌ ಪ್ಲೇಟ್‌ ಅಳವಡಿಸುವ ಸ್ಥಳ" ಆಯ್ಕೆ ಮಾಡಿಕೊಳ್ಳಿ.

ಹಂತ 4: ಲಭ್ಯವಿರುವ ಸ್ಲಾಟ್‌ಗಳಲ್ಲಿ ನಿಮಗೆ ಅನುಕೂಲವಾಗುವ ಸ್ಲಾಟ್‌ ಆಯ್ಕೆ ಮಾಡಿ. ಅದೇ ದಿನ ಅದೇ ಸಮಯ ನಿಗದಿತ ಸ್ಥಳಕ್ಕೆ ಹೋಗಲು ಮರೆಯದಿರಿ. ಇಷ್ಟು ಹಂತಗಳನ್ನು ಪೂರೈಸಿದ ಬಳಿಕ ಬುಕ್ಕಿಂಗ್‌ ಸಮ್ಮರಿ ದೊರಕುತ್ತದೆ.

ಹಂತ 5: ನಮೂದಿಸಿರುವ ವಿವರವನ್ನು ದೃಢೀಕರಿಸಿ ಮತ್ತು ಪಾವತಿಸಿ. ಒಮ್ಮೆ ಒಂದು ಲೊಕೆಷನ್‌ ಆಯ್ಕೆ ಮಾಡಿಕೊಂಡ ನಂತರ ಬದಲಾಯಿಸಲಾಗುವುದಿಲ್ಲ. ಹೀಗಾಗಿ ಎಚ್ಚರಿಕೆಯಿಂದ ದೃಢೀಕರಿಸಿ ಪಾವತಿಸಿ. ನಿರ್ದಿಷ್ಟ ದಿನಾಂಕದಂದು ನಿರ್ದಿಷ್ಟ ಡೀಲರ್‌ಶಿಪ್‌/ಲೊಕೆಷನ್‌ಗೆ ಹೋಗಿ ನಂಬರ್‌ ಪ್ಲೇಟ್‌ ಅಳವಡಿಸಿಕೊಳ್ಳಿ.