ಕನ್ನಡ ಸುದ್ದಿ  /  ಕರ್ನಾಟಕ  /  ಮುಂಗಾರು 2024; ಮಳೆಗಾಲದ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಬಳ್ಳಾರಿ ಜೆಸ್ಕಾಂ ಇಂಜಿನಿಯರ್‌ಗಳ ಫೋನ್ ನಂಬರ್‌ ಸೇವ್ ಮಾಡಿಟ್ಟುಕೊಳ್ಳಿ

ಮುಂಗಾರು 2024; ಮಳೆಗಾಲದ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಬಳ್ಳಾರಿ ಜೆಸ್ಕಾಂ ಇಂಜಿನಿಯರ್‌ಗಳ ಫೋನ್ ನಂಬರ್‌ ಸೇವ್ ಮಾಡಿಟ್ಟುಕೊಳ್ಳಿ

ಮುಂಗಾರು ಮಳೆ ಶುರುವಾಗಲಿದ್ದು, ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆಗಳಾಗುವುದು ಸಹಜ. ಮಳೆಗಾಲದ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಬಳ್ಳಾರಿ ಜೆಸ್ಕಾಂ ಇಂಜಿನಿಯರ್‌ಗಳ ಫೋನ್ ನಂಬರ್‌ ಸೇವ್ ಮಾಡಿಟ್ಟುಕೊಳ್ಳಿ. ಇಲ್ಲಿದೆ ಬಳ್ಳಾರಿ ಗ್ರಾಮೀಣ, ಸಂಡೂರು, ಸಿರಗುಪ್ಪ ಉಪವಿಭಾಗಗಳ ಇಂಜಿನಿಯರ್‌ಗಳ ಫೋನ್‌ನಂಬರ್‌ಗಳು.

ಮಳೆಗಾಲದ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಬಳ್ಳಾರಿ ಜೆಸ್ಕಾಂ ಇಂಜಿನಿಯರ್‌ಗಳ ಫೋನ್ ನಂಬರ್‌ ಸೇವ್ ಮಾಡಿಟ್ಟುಕೊಳ್ಳಿ( ಸಾಂಕೇತಿಕ ಚಿತ್ರ)
ಮಳೆಗಾಲದ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಬಳ್ಳಾರಿ ಜೆಸ್ಕಾಂ ಇಂಜಿನಿಯರ್‌ಗಳ ಫೋನ್ ನಂಬರ್‌ ಸೇವ್ ಮಾಡಿಟ್ಟುಕೊಳ್ಳಿ( ಸಾಂಕೇತಿಕ ಚಿತ್ರ)

ಬಳ್ಳಾರಿ: ಮಳೆಗಾಲ ಶುರುವಾಗುತ್ತಿದ್ದು, ಈ ಅವಧಿಯಲ್ಲಿ ವಿದ್ಯುತ್ ಸಮಸ್ಯೆಗಳು ಉಂಟಾಗುವುದು ಸಾಮಾನ್ಯ. ಈ ರೀತಿ ಸಮಸ್ಯೆಗಳಾದರೆ ಅಂದರೆ, ಗ್ರಾಮೀಣ ಜೆಸ್ಕಾಂ ವಿಭಾಗದ ವ್ಯಾಪ್ತಿಯಲ್ಲಿ ಯಾವುದೇ ವಿದ್ಯುತ್ ತಂತಿ, ವಿದ್ಯುತ್ ವಾಹಕಗಳು ತುಂಡಾಗಿ ಬಿದ್ದಲ್ಲಿ ಅಥವಾ ಆ ರೀತಿ ಕಂಡುಬಂದರೆ, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದಲ್ಲಿ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಮೇಲೆ ಬೆಂಕಿ ಕಾಣಿಸಿಕೊಂಡರೆ ಸಾರ್ವಜನಿಕರು ಕೂಡಲೇ ಜೆಸ್ಕಾಂ ಸಹಾಯವಾಣಿ ಅಥವಾ ಸಂಬಂಧಪಟ್ಟ ವಿಭಾಗಗಳ ಇಂಜಿನಿಯರ್‌ಗಳನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು.

ಟ್ರೆಂಡಿಂಗ್​ ಸುದ್ದಿ

ಇಂತಹ ಅವಘಡಗಳಾದ ಸಂದರ್ಭದಲ್ಲಿ, ಅದರಿಂದ ತನಗೇನೂ ತೊಂದರೆ ಇಲ್ಲ. ಯಾರಿಗೆ ತೊಂದರೆ ಆಗುವುದೋ ಅವರು ಮಾಡಲಿ ಎಂದು ಉದಾಸೀನ ಮಾಡಬಾರದು. ಸಾರ್ವಜನಿಕ ಹಿತದೃಷ್ಟಿಯಿಂದ ಈ ವಿಚಾರದಲ್ಲಿ ಜೆಸ್ಕಾಂ ಇಂಜಿನಿಯರ್‌ಗಳಿಗೆ ತಿಳಿಸಬೇಕಾದ್ದು ಹೊಣೆಗಾರಿಕೆ ಎಂದು ತಿಳಿಯಬೇಕು ಎಂದು ಸಾರ್ವಜನಿಕರಲ್ಲಿ ಜೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಅಥವಾ ಸಾರ್ವಜನಿಕರು ತಾವೇ ಸ್ವತಃ ವಿದ್ಯುತ್ ಕಂಬ ಅಥವಾ ತಂತಿ ದುರಸ್ತಿಗೆ ಹೋಗಬಾರದು. ಅಂತಹ ದುಸ್ಸಾಹಸ ಮಾಡಬಾರದು. ಅದರ ಬದಲು ಮುಂಜಾಗ್ರತಾ ಕ್ರಮವಾಗಿ ಮತ್ತು ಎಚ್ಚರಿಕೆಯಿಂದ ಅಲ್ಲಿದ್ದವರನ್ನು ತಡೆದು ಜೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅವರ ಮಾರ್ಗದರ್ಶನದಂತೆ ನಡೆಯಬೇಕು. ಘಟನಾ ಸ್ಥಳಕ್ಕೆ ಜೆಸ್ಕಾಂ ಅಧಿಕಾರಿಗಳು, ಇಂಜಿನಿಯರ್‌ಗಳು ಬರುವ ತನಕ ಉಳಿದವರನ್ನು ಎಚ್ಚರಿಸಬೇಕು ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ರಂಗನಾಥಬಾಬು ತಿಳಿಸಿದ್ದಾರೆ.

ಬಳ್ಳಾರಿ ಗ್ರಾಮೀಣ (ಬಳ್ಳಾರಿ ಗ್ರಾಮೀಣ, ಕುರುಗೋಡು ತಾಲೂಕು), ಉಪ ವಿಭಾಗ

ಬಳ್ಳಾರಿ ಗ್ರಾಮೀಣ ಜೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ 9448482161, ಘಟಕ-1 (ಕೋಳೂರು, ಕೊರ್ಲಗುಂದಿ, ಹರಗಿನಡೋಣಿ ಭಾಗದ ಗ್ರಾಮಗಳ) ಶಾಖಾಧಿಕಾರಿ 9449597337, ಘಟಕ -2 (ಎಸ್.ಜೆ. ಕೋಟೆ, ಶಂಕರಬಂಡೆ, ಮಿಂಚೇರಿ ಮಿಂಚೇರಿ ಭಾಗದ ಗ್ರಾಮಗಳ) ಶಾಖಾಧಿಕಾರಿ 9449597338 ಸಂಪರ್ಕಿಸಬಹುದು.

ಘಟಕ-3 (ಗುಗ್ಗರಹಟ್ಟಿ, ಹಲಕುಂದಿ, ಅಂದ್ರಾಳ್ ಭಾಗದ ಗ್ರಾಮಗಳ) ಶಾಖಾಧಿಕಾರಿ 9449597351, ಕುಡುತಿನಿ ಶಾಖಾಧಿಕಾರಿ 9449597345, ಮೋಕಾ ಶಾಖಾಧಿಕಾರಿ9449597346, ಪಿ.ಡಿಹಳ್ಳಿ ಶಾಖಾಧಿಕಾರಿ 9449597352, ಕುರುಗೋಡು ಶಾಖಾಧಿಕಾರಿ 9449597347, ಎಮ್ಮಿಗನೂರು ಶಾಖಾಧಿಕಾರಿ 9449597353.

ಸಂಡೂರು (ಸಂಡೂರು) , ಸಿರುಗುಪ್ಪ ಉಪ ವಿಭಾಗಗಳು

ಸಂಡೂರು ಜೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯ‌ರ್‌ 9448482159,

ಸಂಡೂರು ಶಾಖಾಧಿಕಾರಿ 9449597343,

ತೋರಣಗಲ್ಲು ಶಾಖಾಧಿಕಾರಿ 9449597344,

ಚೋರನೂರು ಶಾಖಾಧಿಕಾರಿ 9449597350,

ವಿಠಲಾಪುರ ಶಾಖಾಧಿಕಾರಿ 9480846642

ಬಂಡ್ರಿ ಶಾಖಾಧಿಕಾರಿ 9449597350.

ಸಿರುಗುಪ್ಪ ಉಪ ವಿಭಾಗ

ಜೆಸ್ಕಾಂ ಸಿರಗುಪ್ಪ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯ‌ರ್‌ 9036502714,

ಸಿರುಗುಪ್ಪ ನಗರ ಶಾಖಾಧಿಕಾರಿ 9986382872,

ಹಚ್ಚಳ್ಳಿ ಶಾಖಾಧಿಕಾರಿ 9900169001,

ಸಿರುಗುಪ್ಪ ಗ್ರಾಮೀಣ ಶಾಖಾಧಿಕಾರಿ 9448632907,

ತೆಕ್ಕಲಕೋಟೆ 8861297323,

ಶಾಖಾಧಿಕಾರಿ ಸಿರಿಗೇರಿ ಶಾಖಾಧಿಕಾರಿ 9743484634.

ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ಗ್ರಾಮೀಣ ಜೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ 9448359022, ಯಾವುದೇ ವಿದ್ಯುತ್ ಕುರಿತ ಸಮಸ್ಯೆ ಅಥವಾ ದೂರುಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ 1912 ನಂಬರಿಗೆ ಕರೆ ಮಾಡಿ ತಮ್ಮ ದೂರುಗಳನ್ನು ನೊಂದಾಯಿಸಿಕೊಳ್ಳಬಹುದು ಎಂದು ಗ್ರಾಮೀಣ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ರಂಗನಾಥಬಾಬು ತಿಳಿಸಿದ್ದಾರೆ.

ಟಿ20 ವರ್ಲ್ಡ್‌ಕಪ್ 2024