Bangalore News: ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಒಂದು ತಿಂಗಳು ಮಾರ್ಗ ಬದಲಾವಣೆ; ಸಂಚಾರಿ ಪೊಲೀಸರ ಸೂಚನೆ
Bangalore Traffic Divertion ಬೆಂಗಳೂರಿನ ಚಿಕ್ಕಪೇಟೆ, ರಸ್ತೆ ಅವೆನ್ಯೂ ರಸ್ತೆ, ಕಬ್ಬನ್ ಪೇಟೆ, ಬಿವಿಕೆ ಅಯ್ಯಂಗಾರ್ ರಸ್ತೆ ಮಾರ್ಗದಲ್ಲಿ ಸಂಚರಿಸುತ್ತೀರಾ, ಒಂದು ತಿಂಗಳು ಪರ್ಯಾಯ ಮಾರ್ಗ ಬಳಸಲು ಸೂಚನೆ ನೀಡಲಾಗಿದೆ.(ವರದಿ: ಎಚ್.ಮಾರುತಿ,ಬೆಂಗಳೂರು)
ಬೆಂಗಳೂರು: ಬೆಂಗಳೂರು ನಗರ ಪಶ್ಚಿಮ ವಿಭಾಗದ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆ ಹಾಗೂ ಸಿಟಿ ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕೆಲವು ರಸ್ತೆಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ತಿಂಗಳ ಕಾಲ ಕೆಲವು ರಸ್ತೆಗಳಲ್ಲಿ ಸಂಚಾರ ಮಾರ್ಪಾಟು ಮಾಡಲಾಗಿದೆ. ಈ ಮಾರ್ಗಗಳಲ್ಲಿ ಸಂಚರಿಸುವವರು ಮೊದಲೇ ಬದಲಾವಣೆಯನ್ನು ಗಮನಿಸಿಕೊಂಡು ಪರ್ಯಾಯ ಮಾರ್ಗದ ಮೂಲಕ ತೆರಳಬೇಕು ಎಂದು ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ. ಬದಲಾವಣೆ ಆಗಿರುವ ಮಾರ್ಗ ಹಾಗೂ ಪರ್ಯಾಯ ಮಾರ್ಗದ ವಿವರಗಳು ಇಲ್ಲಿವೆ.
1,ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಕಬ್ಬನ್ ಪೇಟೆ ಮುಖ್ಯ ರಸ್ತೆಯಅವೆನ್ಯೂ ರಸ್ತೆಯಿಂದ ಸಿದ್ದಣ್ಣ ಗಲ್ಲಿಯವರೆಗೆ, ಬನಪ್ಪ ಪಾರ್ಕ್ ರಸ್ತೆಯ ಅವಿನ್ಯೂರಸ್ತೆಯಿಂದ 15 ನೇ ಕ್ರಾಸ್ ವರೆಗೆ ವಾಹನ ಸಂಚಾರ ನಿರ್ಬಂಧ ವಿಧಿಸಲಾಗಿದೆ.
2. ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣೆಯ ವಿಲ್ ರಸ್ತೆಯ ಡಾ. ಟಿಸಿಎಂ ರಾಯನ್ ರಸ್ತೆಜಂಕ್ಷನ್ ನಿಂದ ಅಕ್ಕಿಪೇಟೆ ಮುಖ್ಯ ರಸ್ತೆವರೆಗೆ ವಾಹನ ಸಂಚಾರ ಇರುವುದಿಲ್ಲ.
3. ಸಿಟಿ ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆಯ ಆರ್.ಟಿ. ಸ್ಟ್ರೀಟ್ ನ ಬಿವಿಕೆಅಯ್ಯಂಗಾರ್ ರಸ್ತೆಯಿಂದ ಅವೆನ್ಯೂ ರಸ್ತೆವರೆಗೆ, ಆರ್.ಟಿ. ಸ್ಟ್ರೀಟ್ ನ ಬಿವಿಕೆಅಯ್ಯಂಗಾರ್ ರಸ್ತೆಯಿಂದ ಅವೆನ್ಯೂ ರಸ್ತೆವರೆಗೆ, ಆರ್.ಟಿ ಸ್ಟ್ರೀಟ್ ನ ಬಿವಿಕೆಅಯ್ಯಂಗಾರ್ ರಸ್ತೆಯಿಂದ ಬಳೆಪೇಟೆ ಮುಖ್ಯ ರಸ್ತೆವರೆಗೆ ಮತ್ತು ಸಿಟಿ ಸ್ಟ್ರೀಟ್ ನ ದೇವರದಾಸಿಮಯ್ಯ ರಸ್ತೆಯಿಂದ ಒಟಿಸಿ (ನಗರ್ತ ಪೇಟೆ ಮುಖ್ಯ ರಸ್ತೆವರೆಗೆ) ವರೆಗೆ ವಾಹನ ಸಂಚಾರ ನಿರ್ಬಂಧ ವಿಧಿಸಲಾಗಿದೆ.
ಪರ್ಯಾಯ ಮಾರ್ಗಗಳು ಹೀಗಿವೆ:
1.ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆ:
* ಕಬ್ಬನ್ ಪೇಟೆ ಮುಖ್ಯ ರಸ್ತೆಯಲ್ಲಿ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಬನಪ್ಪ ರಸ್ತೆಮತ್ತು ಕೆಂಪೇಗೌಡ ರಸ್ತೆಗಳನ್ನು ಪರ್ಯಾಯವಾಗಿ ಬಳಸಬಹುದಾಗಿದೆ.
* ಪೊಲೀಸ್ ಠಾಣೆ ಜಂಕ್ಷನ್ ನಿಂದ ಅವೆನ್ಯೂ ರಸ್ತೆ ಕಡೆ ಸಂಚರಿಸುವ ವಾಹನಗಳುಕೆಂಪೇಗೌಡ ರಸ್ತೆ ಮುಖಾಂತರ ಸಂಚರಿಸಿ ಅವೆನ್ಯೂ ರಸ್ತೆ ತಲುಪಬಹುದಾಗಿದೆ.
2.ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣೆ:
* ರಾಯನ್ ರಸ್ತೆ ಜಂಕ್ಷನ್ ನಿಂದ ಆಗಮಿಸುವ ವಾಹನಗಳು ಡಾ. ಟಿಸಿಎಂ ರಾಯನ್ ರಸ್ತೆಜಂಕ್ಷನ್ ನಲ್ಲಿ ಎಡ ತಿರುವು ಪಡೆದು ಗೂಡ್ಸ್ ರಸ್ತೆಯಲ್ಲಿ ಸಾಗಿ ಶಾಂತಲಾ ಸಿಲ್ಕ್‌ಹೌಸ್ ಜಂಕ್ಷನ್ ನಲ್ಲಿ ಬಲ ತಿರುವು ಪಡೆದು ಕಾಟನ್ ಪೇಟೆ ಮುಖ್ಯ ರಸ್ತೆ ಮೂಲಕಸಂಚರಿಸಬಹುದಾಗಿದೆ.
* ಬಿನ್ನಿ ಮಿಲ್ ಜಂಕ್ಷನ್ ನಿಂದ ಆಗಮಿಸುವ ವಾಹನಗಳು ಬಿನ್ನಿ ಮಿಲ್ ಟ್ಯಾಂಕ್‌ಬಂಡ್ ರಸ್ತೆಯಲ್ಲಿ ಸಾಗಿ ಸಿರಸಿ ವೃತ್ತದಲ್ಲಿ ಎಡ ತಿರುವ ಪಡೆದು ಮೈಸೂರು ರಸ್ತೆಮೂಲಕ ಸಂಚರಿಸಬಹುದಾಗಿದೆ.
*ಮೈಸೂರು ರಸ್ತೆಯಿಂದ ಆಗಮಿಸುವ ವಾಹನಗಳು ಗೂಡ್ಸ್ ರಸ್ತೆಯಲ್ಲಿ ಸಾಗಿ ಶಾಂತಲಾಸಿಲ್ಕ್ ಹೌಸ್ ಜಂಕ್ಷನ್ ನಲ್ಲಿ ಬಲ ತಿರುವು ಪಡೆದು ಕಾಟನ್ ಪೇಟೆ ಮುಖ್ಯ ರಸ್ತೆಮುಖಾಂತರ ಸಂಚರಿಸಬಹುದಾಗಿದೆ.
3. ಸಿಟಿ ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆ:
* ಆರ್. ಟಿ ಸ್ಟ್ರೀಟ್ ರಸ್ತೆಯಲ್ಲಿ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಬಿವಿಕೆಅಯ್ಯಂಗಾರ್ ರಸ್ತೆಯಿಂದ ಅವೆನ್ಯೂ ರಸ್ತೆಗೆ ಸಂಚರಿಸಬೇಕಾದ ವಾಹನಗಳು ಬಿವಿಕೆಅಯ್ಯಂಗಾರ್ ರಸ್ತೆಯಲ್ಲಿ ಮುಂದುವರೆದು ಮಾಮೂಲ್ ಪೇಟೆಗೆ (ಬೆಳ್ಳಿ ಬಸವಣ್ಣದೇವಸ್ಥಾನ) ಎಡ ತಿರುವ ಪಡೆದು ಅವೆನ್ಯೂ ರಸ್ತೆಯನ್ನು ಸಂಪರ್ಕಿಸಬಹುದಾಗಿದೆ.
* ಆರ್. ಟಿ. ಸ್ಟ್ರೀಟ್ ರಸ್ತೆಯಲ್ಲಿ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಬಿವಿಕೆಅಯ್ಯಂಗಾರ್ ರಸ್ತೆಯಿಂದ ಬಳೆಪೇಟೆ ಮುಖ್ಯ ರಸ್ತೆಗೆ ಸಂಚರಿಸಬೇಕಾದ ವಾಹನಗಳು ಬಿವಿಕೆಅಯ್ಯಂಗಾರ್ ರಸ್ತೆಯಲ್ಲಿ ಮುಂದುವರೆದು ಚಿಕ್ಕಪೇಟೆ ವೃತ್ತದಲ್ಲಿ ಬಲ ತಿರುವು ಪಡೆದುಓಟಿಸಿ ರಸ್ತೆ ಮುಖಾಂತರ ಬಳೆಪೇಟೆ ಮುಖ್ಯ ರಸ್ತೆಯನ್ನು ಸಂಪರ್ಕಿಸಬಹುದಾಗಿದೆ.
* ಸಿಟಿ ಸ್ಟ್ರೀಟ್ ರಸ್ತೆಯಲ್ಲಿ (ದೇವರ ದಾಸಿಮಯ್ಯ ರಸ್ತೆಯಿಂದ ಓಟಿಸಿ ರಸ್ತೆವರೆಗೆ)ಕಾಮಗಾರಿ ನಡೆಯುವ ಸಂದರ್ಭದಲ್ಲಿ ದೇವರ ದಾಸಿಮಯ್ಯ ರಸ್ತೆಯಿಂದ ನಗರ್ತ ಪೇಟೆಗೆ ಸಂಪರ್ಕಿಬೇಕಾದ ವಾಹನಗಳು ದೇವರ ದಾಸಿಮಯ್ಯ ರಸ್ತೆಯಲ್ಲಿ ಮುಂದುವರೆದು ಸಿದ್ದಣ್ಣರಸ್ತೆಗೆ ಬಲ ತಿರುವು ಪಡೆದು ನಗರ್ತ ಪೇಟೆಯನ್ನು ಸಂಪರ್ಕಿಸಬಹುದಾಗಿದೆ.
* ನಗರ್ತ ಪೇಟೆ ರಸ್ತೆಯಿಂದ ದೇವರ ದಾಸಿಮಯ್ಯ ರಸ್ತೆ ಕಡೆಗೆ ಸಿಟಿ ಸ್ಟ್ರೀಟ್‌ಮುಖಾಂತರ ಸಂಚರಿಸುವ ವಾಹನಗಳು ನಗರ್ತ ಪೇಟೆಯಲ್ಲಿ ಎಡ ತಿರುವ ಪಡೆದು ಅವೆನ್ಯೂ ರಸ್ತೆಮುಖಾಂತರ ಸಾಗಿ ದೇವರ ದಾಸಿಮಯ್ಯ ರಸ್ತೆಯನ್ನು ಸಂಪರ್ಕಿಸಬಹುದು.
ವರದಿ: ಎಚ್.ಮಾರುತಿ, ಬೆಂಗಳೂರು