ಕನ್ನಡ ಸುದ್ದಿ  /  ಕರ್ನಾಟಕ  /  Bmtc News: ಬಿಎಂಟಿಸಿ ಬಸ್‌ಗಳ ಮಾರ್ಗ ಫಲಕಗಳಿಗೆ ಹೊಸ ಆಯಾಮ ನೀಡಿದ ಬೆಂಗಳೂರು ವಿದ್ಯಾರ್ಥಿ ಅಮೋಘ್‌ ಸಾಧನೆ!

BMTC News: ಬಿಎಂಟಿಸಿ ಬಸ್‌ಗಳ ಮಾರ್ಗ ಫಲಕಗಳಿಗೆ ಹೊಸ ಆಯಾಮ ನೀಡಿದ ಬೆಂಗಳೂರು ವಿದ್ಯಾರ್ಥಿ ಅಮೋಘ್‌ ಸಾಧನೆ!

ಬೆಂಗಳೂರಿನ ಬಸ್‌ ಪ್ರಯಾಣಿಕರ ಒಡನಾಡಿ ಬಿಎಂಟಿಸಿ( BMTC). ಹೀಗೆಯೇ ಬಸ್‌ ಅಭಿಮಾನಿ ವಿದ್ಯಾರ್ಥಿ ಬಿಎಂಟಿಸಿಯ ಮಾರ್ಗಸೂಚಿ ಫಲಕಗಳಿಗೆ ಹೊಸ ರೂಪ ನೀಡಿ ಗಮನ ಸೆಳೆದಿದ್ದಾರೆ.

ಸ್ನೇಹಿತ ಬಿಎಂಟಿಸಿಗೆ ಫಲಕ ನೀಡುವಾಗ ಖುಷಿ ಗೊಂಡ ಅಮೋಘ್‌( ಎಡ ತುದಿ)
ಸ್ನೇಹಿತ ಬಿಎಂಟಿಸಿಗೆ ಫಲಕ ನೀಡುವಾಗ ಖುಷಿ ಗೊಂಡ ಅಮೋಘ್‌( ಎಡ ತುದಿ)

ಬೆಂಗಳೂರು: ಆತ ಅಪ್ಪಟ ಬೆಂಗಳೂರಿಗ. ಸಣ್ಣ ವಯಸ್ಸಿನಿಂದಲೂ ಬಿಎಂಟಿಸಿ ಬಸ್‌ಗಳಲ್ಲಿಯೇ ಸಂಚರಿಸಿಕೊಂಡು ಅಭಿಮಾನ ಹೆಚ್ಚಿಸಿಕೊಂಡವ. ಬಿಎಂಟಿಸಿ ಅಂದರೆ ಅದು ನಮ್ಮದು ಎನ್ನುವಷ್ಟರ ಮಟ್ಟಿಗೆ. ಈಗ ಆತ ಎಂಜಿನಿಯರಿಂಗ್‌ ವಿದ್ಯಾರ್ಥಿ.ಈಗಲೂ ಕಾಲೇಜಿಗೆ ಹೋಗಿ ಬರಲು ಬಿಎಂಟಿಸಿ ಬಸ್‌ಗಳೇ ಆಸರೆ. ಆದರೆ ಇದೇ ಬಸ್‌ಗಳಲ್ಲಿ ವರ್ಷಗಳಿಂದ ಸಂಚರಿಸುತ್ತಿದ್ದ ವಿದ್ಯಾರ್ಥಿಗೆ ಬಿಎಂಟಿಸಿ ಬಸ್‌ಗಳ ಮಾರ್ಗ ಫಲಕ( BMTC  route Board) ನೋಡಿದಾಗ ಇದಕ್ಕೆ ಹೊಸ ರೂಪ ನೀಡಬಹುದಲ್ಲಾ ಎಂದು ಅನ್ನಿಸುತ್ತಲೇ ಇತ್ತು. ಕೊನೆಗೂ ಪ್ರಯೋಗ ಮಾಡಿ ಒಂದು ಮಾರ್ಗ ಫಲಕವೂ ಸಿದ್ದವಾಗಿಯೇ ಹೋಯಿತು. ಅದನ್ನು ಬಿಎಂಟಿಸಿ ವ್ಯವಸ್ಥಾಪಕರಿಗೆ ತೋರಿಸಿದರೆ ಅವರಿಗೂ ಖುಷಿ. ಹೊಸತನವೂ ಇರುವುದು ಕಂಡು ಬಂದಿತು. ಅದನ್ನು ಅಳವಡಿಸಿದ ನಂತರ ಕೆಲವು ಬಸ್‌ಗಳಲ್ಲಿ ಇದೇ ಮಾದರಿ ಮಾರ್ಗ ಫಲಕಗಳು ಬಸ್‌ಗಳನ್ನು ಅಲಂಕರಿಸಿವೆ.

ಟ್ರೆಂಡಿಂಗ್​ ಸುದ್ದಿ

ಅಮೋಘ ಕಲ್ಪನೆ

ಆ ವಿದ್ಯಾರ್ಥಿ ಹೆಸರು ಎ.ಅಮೋಘ್.‌ ಬೆಂಗಳೂರಿನ ಶ್ರೀನಗರ ನಿವಾಸಿ. ಕೆಎಸ್‌ ಸ್ಕೂಲ್‌ ಆಫ್‌ ಎಂಜಿನಿಯರಿಂಗ್‌ ಹಾಗೂ ಮಾನೇಜ್‌ಮೆಂಟ್‌ ಕಾಲೆಜಿನ ವಿದ್ಯಾರ್ಥಿ. ಬೆಂಗಳೂರು ಮಟ್ರೋಪಾಲಿಟಿನ್‌ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿಯೇ ಸಂಚರಿಸಿ ಅದರ ಒಡನಾಟ ಬೆಳೆಸಿಕೊಂಡಿದ್ದಾರೆ ಅಮೋಘ್‌. ಬಸ್‌ನ ಮಾರ್ಗ ಫಲಕಕ್ಕೆ ಏನಾದರೂ ಹೊಸ ರೂಪ ನೀಡಬೇಕು ಎಂದು ಯೋಚಿಸುತ್ತಲೇ ಇದ್ದರು.

ಶ್ರೀನಗರ ಡಿಪೋ ಮ್ಯಾನೇಜರ್‌ ಅವರನ್ನು ಕೇಳಿದರೆ ಮಾಡಿಕೊಂಡು ಎಂದು ಹುರುದುಂಬಿಸಿದರು. ಸ್ನೇಹಿತರಾದ ಯತೀಶ್‌, ರಾಹುಲ್‌ ಜತೆಗೆ ಸೇರಿ ಹಣ ಕೂಡಿಸಿಕೊಂಡರು. ಬಸ್‌ ಎಲ್ಲಿಂದ ಎಲ್ಲಿಗೆ ಹೋಗುತ್ತದೆ ಹಾಗೂ ಬಸ್‌ ನಂಬರ್‌ ನೊಂದಿಗೆ ಹಾಕಿದರು. ಕೆಳಗಡೆ ಸಂಚರಿಸುವ ಮಾರ್ಗ, ಮೇಲ್ಭಾಗದಲ್ಲಿ ಬಸ್‌ ಸಂಖ್ಯೆಯೂ ಇತ್ತು. ಹಳದಿ ಹಿನ್ನೆಲೆಯ ಕಪ್ಪು ಬಣ್ಣದಲ್ಲಿ ಬಸ್‌ ಮಾರ್ಗ ಸಂಖ್ಯೆ, ಬಿಳಿ ಬಣ್ಣದಲ್ಲಿ ಮಾರ್ಗದ ವಿವರಗಳು ಇದ್ದವು.

ಕನ್ನಡ ಮತ್ತು ಇಂಗ್ಲೀಷ್‌ ಅಂಕಿ, ಪದಗಳು ಕೂಡ ಇದ್ದವು. ಇದನ್ನು ಒಳಗೊಂಡು ಮೊದಲ ಬಸ್‌ ಬನಶಂಕರಿಯಿಂದ ಗುಟ್ಟಹಳ್ಳಿ ಮಾರ್ಗದ ಬಸ್‌ ಸಂಖ್ಯೆ 214 ಕ್ಕೆ ಫಲಕ ಸಿದ್ದಪಡಿಸಿದರು. ಅದನ್ನು ನೋಡಿದ ವ್ಯವಸ್ಥಾಪಕರಿಗೂ ಖುಷಿ. ಅದನ್ನು ಅವರು ಅಂದೇ ವಾಹನಕ್ಕೆ ಅಳಡಿಸಿಯೂ ಬಿಟ್ಟರು.

ನಿಜಕ್ಕೂ ನನಗೆ ಖುಷಿಯಾಯಿತು. ಸ್ನೇಹಿತರು ಸೇರಿ ಹಣ ಸಂಗ್ರಹಿಸಿ ಪುಟ್ಟ ಪ್ರಯತ್ನ ಮಾಡಿದ್ದೆವು. ಅದನ್ನು ಅವರು ಒಪ್ಪಿಕೊಂಡರು. ಇದನ್ನು ನೋಡಿದ ಶ್ರೀನಗರ ಮಾರ್ಗಕ್ಕೂ ಒಂದು ಬೇಕು ಎನ್ನುವ ಕೋರಿಕೆ ಬಂತು. ಅದನ್ನು ಸಿದ್ದಪಡಿಸಿಕೊಟ್ಟೆವು ಎಂದು ಅಮೋಘ್‌ ಅಭಿಮಾನದಿಂದಲೇ ಹೇಳುತ್ತಾರೆ.

ಇನ್ನಷ್ಟು ಸುಧಾರಣೆ

ಮೊದಲು ಕೊಟ್ಟಿದ್ದ ಫಲಕವನ್ನು ಇನ್ನಷ್ಟು ಸುಧಾರಿಸಿ ಅಮೋಘ್‌ ಸಿದ್ದಪಡಿಸಿ ನೀಡಿದ ನಂತರ ಇನ್ನೂ ನಾಲ್ಕೈದು ಮಾರ್ಗಗಳಿಗೂ ಇದನ್ನು ಅಳವಡಿಸುವ ಹಂತಕ್ಕೂ ಹೋಗಿದೆ. ಎರಡೇ ತಿಂಗಳಲ್ಲಿ ಸಣ್ಣ ಪ್ರಯತ್ನ ಅಷ್ಟೇ ಪರಿಣಾಮಕಾರಿ. ಬಿಎಂಟಿಸಿಗೆ ಇದು ಬೇಕು ಎನ್ನುವ ಹಂತಕ್ಕೆ ಹೋಗಿರುವುದು ಖುಷಿ ತಂದಿದೆ.

ಇದು ಡಿಜಿಟಲ್‌ ಯುಗ. ಕಣ್ಣಿಗೆ ಅಂದವಾಗಿ ಕಾಣುವ ಜತೆಗೆ ಹೊಸತನ ಇದ್ದರೆ ಆಕರ್ಷಿಸುತ್ತದೆ ಎನ್ನುವದನ್ನೇ ಮನದಲ್ಲಿಟ್ಟುಕೊಂಡು ಇದನ್ನು ರೂಪಿಸಿದರು ಅಮೋಘ್‌. ಬಿಎಂಟಿಸಿ ಬಸ್‌ಗಳಲ್ಲಿ ಡಿಜಿಟಲ್‌ ಬೋರ್ಡ್‌ ಗಳಿವೆ. ಹಗಲು ವೇಳೆ ಕೆಲವೊಮ್ಮೆ ಸರಿಯಾಗಿ ಕಾಣುವುದೂ ಇಲ್ಲ. ಅದು ಮೇಲ್ಭಾಗದಲ್ಲಿ ಅದನ್ನು ನೋಡಿಕೊಂಡು ಬರುವವರು ಬಸ್‌ ಏರುತ್ತಾರೆ. ಆದರೆ ಮಾರ್ಗಫಲಕವೂ ಮಾಹಿತಿ ಪೂರ್ಣ ಹಾಗೂ ಆಕರ್ಷಕವಾಗಿರಲಿ ಎಂದುಕೊಂಡೆವು ಎನ್ನುವುದು ಅಮೋಘ್‌ ವಿವರಣೆ.

ಫ್ರೆಂಡ್ಸ್‌ ಆಫ್‌ ಬಿಎಂಟಿಸಿ

ಅಮೋಘ್‌ ಫ್ರೆಂಡ್ಸ್‌ ಆಫ್‌ ಬಿಎಂಟಿಸಿ (FriendsofBMTC) ಎನ್ನುವ ಟ್ವಿಟ್ಟರ್‌ ಬಳಗದ ಸಂಸ್ಥಾಪಕ ಕೂಡ. ಆ ಮೂಲಕವೂ ಬಿಎಂಟಿಸಿ ಬಳಸುವ ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನವನ್ನೂ ಮಾಡಿದ್ದಾರೆ.

.ಅಮೋಘ್‌ ಇಂತದೊಂದು ಪ್ರಯತ್ನ, ಅದಕ್ಕೆ ಸಿಕ್ಕ ಪ್ರತಿಕ್ರಿಯೆಯನ್ನು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರೂ ಮೆಚ್ಚುಗೆ ಸೂಚಿಸಿದ್ದಾರೆ. ಇದು ಸಣ್ಣ ಪ್ರಯತ್ನ ಇರಬಹುದು. ಅಮೋಘ್‌ ಹಾಗೂ ಅವರ ಸ್ನೇಹಿತರ ಅಭಿಮಾನ, ಬಿಎಂಟಿಸಿ ಎಂದರೆ ನಮ್ಮದು ಎನ್ನುವ ಪ್ರೀತಿಗೆ ಹೆಚ್ಚಿನ ಬೆಲೆ ಹಾಗೂ ಗೌರವ. ಜನ ಇದನ್ನೇ ಬಯಸುವುದು ಎಂದು ಹಲವರು ಹೇಳಿದ್ದಾರೆ.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ವಿಭಾಗ