ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರು ಕೆಂಪೇಗೌಡ ವಿಮಾನನಿಲ್ದಾಣದಲ್ಲಿ 7 ನಿಮಿಷ ನಂತರ ವಾಹನ ನಿಂತರೆ ಬೀಳಲಿದೆ ಭಾರೀ ಶುಲ್ಕ

Bangalore News: ಬೆಂಗಳೂರು ಕೆಂಪೇಗೌಡ ವಿಮಾನನಿಲ್ದಾಣದಲ್ಲಿ 7 ನಿಮಿಷ ನಂತರ ವಾಹನ ನಿಂತರೆ ಬೀಳಲಿದೆ ಭಾರೀ ಶುಲ್ಕ

ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ(Bengaluru International Airport Limited) ಹೋದ ವಾಹನಗಳವರು ಭಾರೀ ಶುಲ್ಕವನ್ನು ತೆರಬೇಕು. ಅದರ ವಿವರ ಇಲ್ಲಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಶುಲ್ಕ ಜಾರಿಯಾಗಿದೆ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಶುಲ್ಕ ಜಾರಿಯಾಗಿದೆ

ಬೆಂಗಳೂರು: ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ(Bengaluru International Airport Limited-BIAL) ಖಾಸಗಿ ವಾಹನಗಳಿಗೆ ಭಾರೀ ಶುಲ್ಕದ ವ್ಯವಸ್ಥೆ ಶುರುವಾಗಿದೆ. ಸೋಮವಾರದಿಂದಲೇ ಹೊಸ ವಾಹನ ಶುಲ್ಕ ವ್ಯವಸ್ಥೆ ಜಾರಿಗೆ ಬಂದಿದೆ. ವಿಮಾನ ನಿಲ್ದಾಣಕ್ಕೆ ನಿಮ್ಮ ಕುಟುಂಬದವರು, ಪರಿಚಯಸ್ಥರನ್ನು ಬಿಟ್ಟು ಬರಲು ಹೋದರೂ ಶುಲ್ಕ ತೆರಲೇಬೇಕು. ನಿತ್ಯ ಸಾವಿರಾರು ಕ್ಯಾಬ್‌ಗಳು ವಿಮಾನ ನಿಲ್ದಾಣಕ್ಕೆ ತೆರಳಲಿದ್ದು. ಆ ವಾಹನಗಳಿಗೂ ನಿಮಿಷದ ಲೆಕ್ಕದಲ್ಲಿ ಶುಲ್ಕ ನಿಗದಿಪಡಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಯಾವ ವಾಹನಕ್ಕೆ ಎಷ್ಟು?

ಹೊಸದಾಗಿ ಜಾರಿ ತಂದಿರುವ ನಿಯಮಗಳ ಪ್ರಕಾರ ಹಳದಿ ಬೋರ್ಡ್‌ ನ ಯಾವುದೇ ವಾಹನಗಳು ಒಂದು ಮತ್ತು ಎರಡನೇ ಲೇನ್‌ಗೆ ಬರುವವರು 150 ರೂ. ಪಾವತಿಸಬೇಕು. ಅದು ಏಳು ನಿಮಿಷಕ್ಕೆ ಮಾತ್ರ, ಏಳು ನಿಮಿಷದಿಂದ ಮತ್ತೆ ಏಳು ನಿಮಿಷದವರೆಗೆ ನಂತರದ 150 ರೂ. ಪಾವತಿಸಬೇಕು. ವೈಟ್‌ ಬೋರ್ಡ್‌ನವರಿಗೆ ಏಳು ನಿಮಿಷದವರೆಗೆ ಯಾವುದೇ ಶುಲ್ಕವಿಲ್ಲ. ಆನಂತರದ ಏಳು ನಿಮಿಷಕ್ಕೆ ಆ ವಾಹನಗಳಿಗೂ 150 ರೂ. ಶುಲ್ಕ ತುಂಬಬೇಕು.

ಇನ್ನು ಬಸ್‌ಗಳು ವಿಮಾನನಿಲ್ದಾಣ ಟರ್ಮಿನಲ್‌ ಪ್ರವೇಶಿಸಲು 600 ರೂ. ಪಾವತಿ ಮಾಡಬೇಕು. ಅದೇ ರೀತಿ ಟೆಂಪೋ ಟ್ರಾವಲರ್‌ ಗಳಿಗೆ 300 ರೂ.ಗಳನ್ನು ನಿಗದಿ ಮಾಡಲಾಗಿದೆ. ಬಸ್‌ ಹಾಗೂ ಟೆಂಪೋ ಟ್ರಾವಲರ್‌ಗಳು ಮೂರನೇ ಲೇನ್‌ನಲ್ಲಿಯೇ ಕಡ್ಡಾಯವಾಗಿ ಬರಬೇಕು ಎನ್ನುವ ಹೊಸ ಆದೇಶ ಮಾಡಲಾಗಿದೆ.

ಇನ್ನು ವಿಮಾನ ನಿಲ್ದಾಣದಲ್ಲಿ 15 ನಿಮಿಷಕ್ಕೂ ಹೆಚ್ಚು ಅವಧಿಗೆ ನಿಲ್ಲಿಸುವ ವಾರಸುದಾರರು ಇಲ್ಲದ ವಾಹನಗಳನ್ನು ಸಮೀಪದ ಪೊಲೀಸ್‌ ಠಾಣೆಗೆ ಹಸ್ತಾಂತರಿಸಲಾಗುವುದು ಎಂದು ವಾಹನಗಳ ಮಾಲೀಕರಿಗೆ ತಿಳಿಸಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ದೂರುಗಳಿದ್ದರೆ 9538882020 ಸಂಖ್ಯೆಗೆ ಸಂಪರ್ಕಿಸಬಹುದು ಎನ್ನುವ ಸೂಚನೆಯನ್ನು ನೀಡಲಾಗಿದೆ.

ಕಾರಣವಾದರೂ ಏನು

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ವಾಹನಗಳ ಸಂಖ್ಯೆ ಅಧಿಕವಾಗಿದೆ. ಅದರಲ್ಲೂ ಬಿಡುವವರು ಇಲ್ಲವೇ ಕರೆದುಕೊಂಡು ಹೋಗಲು ಬರುವವರ ಪ್ರಮಾಣವೂ ಅಧಿಕವಾಗಿ ಜಾಗದ ಸಮಸ್ಯೆ ಉಂಟಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ಅಡಚಣೆಗಳು ಆಗುತ್ತಿವೆ. ಸುಖಾಸುಮ್ಮನೇ ಗಂಟೆಗಟ್ಟಲೇ ವಿಮಾನ ನಿಲ್ದಾಣಗಳ ಟರ್ಮಿನಲ್‌ಗಳಲ್ಲಿ ವಾಹನ ನಿಲ್ಲಿಸುವುದನ್ನು ನಿಗ್ರಹಿಸಲು ಕಠಿಣ ಕ್ರಮ ಹಾಗೂ ಶುಲ್ಕ ವಿಧಿಸುವುದು ಅನಿವಾರ್ಯವೂ ಆಗಿದೆ ಎನ್ನುವುದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ಅಧಿಕಾರಿಗಳ ವಿವರಣೆ.

ಬಲವಾದ ವಿರೋಧ

ಆದರೆ ಇದಕ್ಕೆ ವಿರೋಧವೂ ಕೇಳಿ ಬಂದಿದೆ. ಯಾವುದೇ ಮಾಹಿತಿ ನೀಡದೇ ಏಕಾಏಕಿ ಇದನ್ನು ಜಾರಿಗೊಳಿಸಲಾಗಿದೆ. ಸೋಮವಾರ ನಿಲ್ದಾಣಕ್ಕೆ ಬಂದಾಗ ಶುಲ್ಕ ಪಾವತಿಸುವಂತೆ ತಿಳಿಸಿದಾಗಲೇ ನಮ್ಮ ಗಮನಕ್ಕೆ ಬಂದಿದೆ. ವಿಮಾನ ವಿಳಂಬ ಸೇರಿದಂತೆ ನಾನಾ ಕಾರಣಗಳಿಂದ ತಡವಾದಾಗ ನಿಲ್ದಾಣದ ಟರ್ಮಿನಲ್‌ಗಳಲ್ಲಿ ಕಾಯಬೇಕಾಗುತ್ತದೆ. ಇಷ್ಟು ದಂಡ ವಿಧಿಸುವುದು ಭಾರವೂ ಆಗಲಿದೆ. ಇದನ್ನು ಮರುಪರಿಶೀಲಿಸಬೇಕು ಎಂಬುದು ವಾಹನ ಚಾಲಕರ ಆಗ್ರಹ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ವಿಭಾಗ