Edible Oil Prices: ದಸರಾ-ದೀಪಾವಳಿ ಮುನ್ನವೇ ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಏರಿಕೆ: ಆಮದು ಸುಂಕ ಹೆಚ್ಚಳ ಕಾರಣ ನೀಡುತ್ತಿರುವ ಮಾರಾಟಗಾರರು-bangalore news before dasara deepavali festivities edible oil prices jumped across karnataka by 15 percent kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Edible Oil Prices: ದಸರಾ-ದೀಪಾವಳಿ ಮುನ್ನವೇ ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಏರಿಕೆ: ಆಮದು ಸುಂಕ ಹೆಚ್ಚಳ ಕಾರಣ ನೀಡುತ್ತಿರುವ ಮಾರಾಟಗಾರರು

Edible Oil Prices: ದಸರಾ-ದೀಪಾವಳಿ ಮುನ್ನವೇ ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಏರಿಕೆ: ಆಮದು ಸುಂಕ ಹೆಚ್ಚಳ ಕಾರಣ ನೀಡುತ್ತಿರುವ ಮಾರಾಟಗಾರರು

Edible Oil Prices ದಸರಾ-ದೀಪಾವಳಿ ಸಹಿತ ಸರಣಿ ಹಬ್ಬಗಳ ಸಂಭ್ರಮದಲ್ಲಿರುವ ಜನತೆಗೆ ಅಡುಗೆ ಎಣ್ಣೆ ದರಗಳ ದಿಢೀರ್‌ ಏರಿಕೆ ಆಘಾತ ನೀಡಿದೆ. ಲೀಟರ್‌ ಎಣ್ಣೆಗೆ 20ರಿಂದ 25 ರೂ.ವರೆಗೆ ಏರಿಕೆಯಾಗಿದ್ದು, ಗ್ರಾಹಕರಿಗೆ ಹೊರೆಯಾಗಿದೆ.

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಅಡುಗೆ ಎಣ್ಣೆ ದರ ಏರಿಕೆ ಕಂಡಿದೆ.
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಅಡುಗೆ ಎಣ್ಣೆ ದರ ಏರಿಕೆ ಕಂಡಿದೆ.

ಬೆಂಗಳೂರು: ಕರ್ನಾಟಕದಲ್ಲಿ ಗೌರಿ ಗಣೇಶ ಹಬ್ಬ ಮುಗಿದು ದಸರಾಗೆ ಜನ ಅಣಿಯಾಗುತ್ತಿರುವಾಗ ಏಕಾಏಕಿ ಅಡುಗೆ ಎಣ್ಣೆಗಳ ಬೆಲೆಯನ್ನು ಏರಿಸಲಾಗಿದೆ. ಲೀಟರ್‌ ಅಡುಗೆ ಎಣ್ಣೆಯ ಬೆಲೆ ಲೀಟರ್‌ಗೆ .15ರಿಂದ 25 ರೂ. ದಿಢೀರ್‌ ಏರಿಕೆ ಅದರಲ್ಲೂ ಶೇ.10 ರಿಂದ ಶೇ. 15 ರವರೆಗೆ ದರ ಏರಿಕೆಯಾಗಿದ್ದು, ಗ್ರಾಹಕರಿಗೆ ಭಾರೀ ಹೊರೆಯಾಗಿದೆ. ದಸರಾ ಹಾಗೂ ದೀಪಾವಳಿ ಹಬ್ಬ ಆಚರಣೆಗೆ ತಯಾರಿ ಮಾಡಿಕೊಳ್ಳುತ್ತಿರುವಾಗಲೇ ಅಡುಗೆ ಎಣ್ಣೆಗಳ ಬೆಲೆ ಏರಿಕೆ ಕಂಡಿದೆ ಎಂದು ಗ್ರಾಹಕರು ಅಲವತ್ತುಕೊಂಡಿದ್ದಾರೆ. ಅಡುಗೆ ಎಣ್ಣೆಗಳ ದರದಲ್ಲಿ ಏರಿಕೆ ಕಂಡು ಬಂದಿರುವ ಕಾರಣದಿಂದ ಹೊಟೇಲ್‌ನ ಅಡುಗೆ, ತಿಂಡಿ ದರ ಹಾಗೂ ಬೇಕರಿ ಉತ್ಪನ್ನಗಳ ದರಗಳೂ ದುಬಾರಿಯಾಗಬಹುದು ಎನ್ನುವ ಆತಂಕವೂ ಎದುರಾಗಿದೆ.

ಎರಡು ದಿನಗಳ ಹಿಂದೆ 15 ಲೀಟರ್‌ ಪ್ಯಾಕೆಟ್‌ಗಳಿರುವ ತಾಳೆ ಎಣ್ಣೆ ಬಾಕ್ಸ್‌ಗೆ 1,450 ರೂ. ಇತ್ತು. ಆದರೆ ಶುಕ್ರವಾರ ಸಂಜೆ ವೇಳೆಗೆ ಶೇ. 20ರಷ್ಟು ಆಮದು ಸುಂಕ ಹೆಚ್ಚಳದಿಂದ ಕೇವಲ 24 ತಾಸುಗಳ ಒಳಗೆ ಪ್ರತೀ ಬಾಕ್ಸ್‌ಗೆ 200ರಿಂದ 250 ರೂ. ಅಂದರೆ 1,650ರಿಂದ 1,700 ರೂ. ವರೆಗೆ ಏರಿಕೆಯಾಗಿದೆ.

ಲೀಟರ್‌ ಪ್ಯಾಕೆಟ್‌ಗೆ 98 ರೂ. ಇದ್ದ ಬೆಲೆ ಈಗ 120 ರೂ. ಆಗಿದೆ. ಇನ್ನೊಂದೆಡೆ 10 ಲೀ. ಪ್ಯಾಕೆಟ್‌ಗಳ ಸೂರ್ಯಕಾಂತಿ ಎಣ್ಣೆ ಬಾಕ್ಸ್‌ಗೆ 1,050 ರೂ. ಇದ್ದ ದರ ಈಗ 150ರಿಂದ 200 ರೂ. ಹೆಚ್ಚಳವಾಗಿ 1,220ರಿಂದ 1,300 ರೂ. ಆಗಿದೆ. ಲೀಟರ್‌ ಪ್ಯಾಕೆಟ್‌ಗೆ 105 ರೂ. ಇದ್ದ ಬೆಲೆ ಈಗ 125ಕ್ಕೇರಿಕೆ ಕಂಡು ಬಂದಿದೆ.

ಗೌರಿ ಗಣೇಶ ಹಬ್ಬದ ವೇಳೆಯೇ ಎಣ್ಣೆ ಬೆಲೆ ಏರಿಕೆ ಸೂಚನೆ ದೊರೆತಿತ್ತು. ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಅಡುಗೆ ಎಣ್ಣೆಯ ಬೆಲೆ ಆನಂತರ ಒಂದು ವಾರದವರೆಗೂ ಏರಿಕೆಯಾಗಿರಲಿಲ್ಲ. ಒಂದು ವಾರದಿಂದ ಹೀಗೆ ವ್ಯತ್ಯಾಸವಾಗುವ ಸೂಚನೆಗಳಿದ್ದ ಅಡುಗೆ ಎಣ್ಣೆ ದರ ಎರಡು ದಿನದಿಂದಲೇ ಗಗನಕ್ಕೇರಿದೆ. ತಾಳೆ ಎಣ್ಣೆ, ಸೋಯಾಬೀನ್‌ ಎಣ್ಣೆ ಹಾಗೂ ಸೂರ್ಯಕಾಂತಿ ರಿಫೈನ್‌ ಎಣ್ಣೆ ದರ ಒಂದೇ ದಿನದಲ್ಲಿ ಹೆಚ್ಚಳ ಕಂಡಿದೆ.

ಅಡುಗೆ ಎಣ್ಣೆ ಈಗಾಗಲೇ ಜಿಎಸ್‌ಟಿ ವ್ಯಾಪ್ತಿಗೆ ಸೇರಿದೆ. ಆದರೆ ಹೆಚ್ಚುವರಿಯಾಗಿ ಶೇ. 20ರಷ್ಟು ಆಮದು ಸುಂಕ ಹೇರಿದ್ದರಿಂದ ದರ ಹಠಾತ್‌ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ಕಾರಣ ನೀಡುತ್ತಿದ್ದಾರೆ. ಗ್ರಾಹಕರು ಮಾತ್ರ ದರ ಏರಿಕೆಯಿಂದ ಕೈ ಸುಟ್ಟುಕೊಂಡು ಎಣ್ಣೆ ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ.

ಎರಡನೇ ಶನಿವಾರ, ರವಿವಾರ ಹಾಗೂ ಸೋಮವಾರ ಈದ್‌-ಮಿಲಾದ್‌ ಹಿನ್ನೆಲೆಯಲ್ಲಿ ಸತತ ಮೂರು ದಿನ ಸರಕಾರಿ ರಜೆ ಇರುವ ಕಾರಣ ಮಂಗಳವಾರವೇ ಸುಂಕ ಕುರಿತು ನಿಖರ ಮಾಹಿತಿ ಜತೆಗೆ ಅಡುಗೆ ಎಣ್ಣೆ ದರದಲ್ಲಿ ಏರಿಕೆ ಹಾಗೂ ಇಳಿಕೆಯ ಸ್ಪಷ್ಟತೆ ಗೊತ್ತಾಗಲಿದೆ ಎನ್ನುವ ಅಭಿಪ್ರಾಯಗಳನ್ನು ಮಾರಾಟಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅಧಿಕಾರಿಗಳಿಗೂ ಈ ಕುರಿತು ನಿಖರ ಮಾಹಿತಿಯಿಲ್ಲ. ಆದರೆ ಕೇಂದ್ರ ಸರ್ಕಾರ ಹೆಚ್ಚುವರಿ ತೈಲ ಆಮದು ಸುಂಕವನ್ನು ರೈತರಿಗೆ ನೀಡುವುದಾಗಿ ತಿಳಿಸಿರುವ ಮಾಹಿತಿಯಿದ್ದು, ಇದೂ ಖಚಿತವಾಗಿಲ್ಲ.

ತಾಳೆ ಎಣ್ಣೆ, ಸೂರ್ಯಕಾಂತಿ ರಿಫೈನ್ಡ್ ಎಣ್ಣೆ ಸಹಿತ ಅಡುಗೆ ಎಣ್ಣೆ ಈಗಾಗಲೇ ಜಿಎಸ್‌ಟಿ ವ್ಯಾಪ್ತಿಗೆ ಸೇರಿತ್ತು. ಆಮದು ಸುಂಕವನ್ನು ಸೊನ್ನೆಗೆ ಇಳಿಸಲಾಗಿತ್ತು. ಶುಕ್ರವಾರ ಸಂಜೆ ಏಕಾಏಕಿ ಶೇ. 20ರಷ್ಟು ಆಮದು ಸುಂಕ ಹೇರಿದ್ದರಿಂದ ಅಡುಗೆ ಎಣ್ಣೆ ದರದಲ್ಲಿ ಭಾರೀ ಏರಿಕೆಯಾಗಿದೆ. ಮಂಗಳವಾರ ಮಧ್ಯಾಹ್ನದ ವರೆಗೆ ದರದಲ್ಲಿ ಯಾವುದೇ ವ್ಯತ್ಯಾಸ ಕಾಣದು. ಅಂದೇ ಅಡುಗೆ ಎಣ್ಣೆ ದರದಲ್ಲಿ ಏರಿಕೆ ಅಥವಾ ಇಳಿಕೆ ಕುರಿತು ತಿಳಿಯಲಿದೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.

ಈ ಬಾರಿ ಹಬ್ಬ ಇದ್ದುದರಿಂದ ಎಣ್ಣೆ ಬಳಕೆ ಹೆಚ್ಚಾಗಿ ಬೇಗನೇ ಅಡುಗೆ ಎಣ್ಣೆ ಖರೀದಿಗೆ ಹೋದೆ. ಅಲ್ಲಿ ನೋಡಿದರೆ ಹಿಂದಿಗಿಂತಲೂ ಹೆಚ್ಚಿತ್ತು. ನಮಗೆ ಖರೀದಿ ದರ ಏರಿಕೆ ಕಂಡಿದೆ. ಇದರಿಂದ ನಾವೂ ಏರಿಕೆ ಮಾಡಿದ್ದೇನೆ. ಇದು ಮಾರುಕಟ್ಟೆಯಲ್ಲಿಯೇ ಆಗಿದೆ ಎಂದು ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಹಕರೊಬ್ಬರು ಹೇಳಿಕೊಂಡರು.

mysore-dasara_Entry_Point