ಕನ್ನಡ ಸುದ್ದಿ  /  ಕರ್ನಾಟಕ  /  Bellary Result: ಬಳ್ಳಾರಿಯಲ್ಲಿ ಕಾಂಗ್ರೆಸ್‌ನ ಇ ತುಕಾರಂಗೆ ಗೆಲುವು, ಬಿಜೆಪಿ ಅಭ್ಯರ್ಥಿ ಶ್ರೀರಾಮುಲುಗೆ ಸೋಲಿನ ಆಘಾತ

Bellary Result: ಬಳ್ಳಾರಿಯಲ್ಲಿ ಕಾಂಗ್ರೆಸ್‌ನ ಇ ತುಕಾರಂಗೆ ಗೆಲುವು, ಬಿಜೆಪಿ ಅಭ್ಯರ್ಥಿ ಶ್ರೀರಾಮುಲುಗೆ ಸೋಲಿನ ಆಘಾತ

ಬಳ್ಳಾರಿ ಲೋಕಸಭಾ ಕ್ಷೇತ್ರ ಚುನಾವಣಾ ಫಲಿತಾಂಶ 2024: ಗಣಿದಣಿಗಳ ನಾಡು ಎಂದೇ ಖ್ಯಾತಿ ಪಡೆದಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ ಇ. ತುಕಾರಂ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಬಿ. ಶ್ರೀರಾಮುಲು ಸೋಲು ಕಂಡಿದ್ದಾರೆ. bellary Lok Sabha Elections Result.

ಬಳ್ಳಾರಿಯಲ್ಲಿ ಶ್ರೀರಾಮುಲುಗೆ ಸೋಲಿನ ಆಘಾತ, ಕಾಂಗ್ರೆಸ್‌ನ ಇ ತುಕಾರಂಗೆ ಗೆಲುವು
ಬಳ್ಳಾರಿಯಲ್ಲಿ ಶ್ರೀರಾಮುಲುಗೆ ಸೋಲಿನ ಆಘಾತ, ಕಾಂಗ್ರೆಸ್‌ನ ಇ ತುಕಾರಂಗೆ ಗೆಲುವು

ಬಳ್ಳಾರಿ: ಲೋಕಸಭಾ ಚುನಾವಣೆ ಮುಗಿದು ಫಲಿತಾಂಶದ ಕುತೂಹಲವೂ ಇದೀಗ ಕೊಂಚ ತಣ್ಣಗಾಗುತ್ತಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರದ (Bangalore South Lok Sabha MP Election 2024 Result) ದ ಫಲಿತಾಂಶವು ಇದೀಗ ಹೊರ ಬದ್ದಿದೆ. ಗಣಿದಣಿಗಳ ನಾಡಿನಲ್ಲಿ ಬಿಜೆಪಿಯಲ್ಲಿ ಅಲ್ಲೋಕ ಕಲ್ಲೋಲದ ಸ್ಥಿತಿ ಉಂಟಾಗಿ ಈಗ ಎಲ್ಲವೂ ತಹಬದಿಗೆ ಬಂದಿದೆ. ಬಳ್ಳಾರಿಯಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು ಅವರಿಗೆ ಎದುರಾಳಿಯಾಗಿ ಕಾಂಗ್ರೆಸ್‌ ಇ ತುಕಾರಂ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಶ್ರೀರಾಮುಲುಗೆ ಸೋಲಾಗಿದ್ದು, ಇ. ತುಕಾರಂ ಗೆಲುವು ಸಾಧಿಸಿದ್ದಾರೆ. ಇ. ತುಕಾರಂ ಶ್ರೀರಾಮುಲು ಎದುರು 98,992 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಳ್ಳಾರಿ ಲೋಕಸಭಾ ಕ್ಷೇತ್ರವು ಭಾರತದ ರಾಜಕಾರಣದಲ್ಲಿ ಹೆಸರುವಾಸಿ ಎಂದರೂ ತಪ್ಪಲ್ಲ. ಇದು ಕರ್ನಾಟಕದ ರಾಜಕೀಯ ಶಕ್ತಿಗಳಲ್ಲಿ ಒಂದು. 90ರ ದಶಕಕ್ಕೂ ಮುನ್ನ ಕಾಂಗ್ರೆಸ್‌ ಬಲಹೊಂದಿದ್ದ ಬಳ್ಳಾರಿ ನಂತರದ ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿದೆ. ಈವರೆಗೆ ಬಳ್ಳಾರಿ ಲೋಕ ಕ್ಷೇತ್ರದಲ್ಲಿ ನಡೆದ ಒಟ್ಟು 19 ಚುನಾವಣೆಗಳಲ್ಲಿ 15 ಬಾರಿ ಕಾಂಗ್ರೆಸ್‌ ಗೆದಿದ್ದರೆ, 4 ಬಾರಿ ಬಿಜೆಪಿ ಗೆಲುವು ಸಾಧಿಸಿದೆ. ಇದೀಗ ಮತ್ತೆ ಕಾಂಗ್ರೆಸ್‌ ಗೆಲುವು ಸಾಧಿಸಿದೆ.

ಟ್ರೆಂಡಿಂಗ್​ ಸುದ್ದಿ

ಬಳ್ಳಾರಿ ಲೋಕಸಭೆ ಎಲೆಕ್ಷನ್ ಕ್ವಿಕ್‌ ಲುಕ್‌

ಲೋಕಸಭಾ ಕ್ಷೇತ್ರದ ಹೆಸರು: ಬಳ್ಳಾರಿ

ಅಭ್ಯರ್ಥಿಯ ಹೆಸರು ಮತ್ತು ಪಡೆದ ಮತಗಳು

ಬಿ ಶ್ರೀರಾಮುಲು (ಬಿಜೆಪಿ): 631853 ಮತಗಳು

ಇ ತುಕಾರಂ (ಕಾಂಗ್ರೆಸ್‌): 730845 ಮತಗಳು

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಪಡೆದ ಇ ತುಕಾರಂ ಪರಿಚಯ

ಬಳ್ಳಾರಿಯ ಸಂಡೂರು ಕ್ಷೇತ್ರದ ಶಾಸದ ಇ ತುಕಾರಂ ಮೂಲತಃ ಬಳ್ಳಾರಿಯವರು. ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ವಸ್ತುವಾರಿ ಸಚಿವರೂ ಆಗಿದ್ದರು ತುಕಾರಂ.

ಚುನಾವಣಾ ಕಣ: ಬಳ್ಳಾರಿ ಲೋಕಸಭಾ ಕ್ಷೇತ್ರ

ಕರ್ನಾಟಕದ ರಾಜಕೀಯ ಶಕ್ತಿಕೇಂದ್ರ ಎಂದೇ ಖ್ಯಾತಿ ಪಡೆದಿರುವ ಬಳ್ಳಾರಿಗೆ ಗಣಿದಣಿಗಳ ನಾಡು ಎಂಬ ಹೆಸರೂ ಇದೆ. 1998ರಲ್ಲಿ ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾಗಾಂಧಿ ಹಾಗೂ ಬಿಜೆಪಿ ನಾಯಕಿ ದಿವಂಗತ ಸುಷ್ಮಾ ಸ್ವರಾಜ್‌ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆ ಸ್ಪರ್ಧೆಯಿಂದಾಗಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಇಮೇಜ್‌ ಬದಲಾಗಿತ್ತು. ಆ ನಂತರ ಬಳ್ಳಾರಿ ಕಡೆಗೆ ದೇಶವೇ ತಿರುಗಿ ನೋಡುವಂತಾಗಿತ್ತು. 2019ರಲ್ಲಿ ಬಿಜೆಪಿಯ ದೇವೇಂದ್ರಪ್ಪ ಈ ಕ್ಷೇತ್ರದಿಂದ ಗೆದ್ದಿದ್ದಾರೆ.

 

Disclaimer: ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಮತಗಳ ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರವನ್ನು ಇದೇ ಬರಹದಲ್ಲಿ ಅಪ್‌ಡೇಟ್ ಮಾಡಲಾಗುವುದು.

ಟಿ20 ವರ್ಲ್ಡ್‌ಕಪ್ 2024