ಬೆಂಗಳೂರು ಮೆಟ್ರೋದ ಚಾಲಕ ರಹಿತ ರೈಲು ಮಾದರಿಯ ಫಸ್ಟ್ ಲುಕ್; ಮಾರ್ಚ್ 1 ಕ್ಕೆ ಪ್ರಾಯೋಗಿಕ ಸಂಚಾರ ನಡೆಸಲು ನಮ್ಮ ಮೆಟ್ರೋ ಸಿದ್ದತೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಮೆಟ್ರೋದ ಚಾಲಕ ರಹಿತ ರೈಲು ಮಾದರಿಯ ಫಸ್ಟ್ ಲುಕ್; ಮಾರ್ಚ್ 1 ಕ್ಕೆ ಪ್ರಾಯೋಗಿಕ ಸಂಚಾರ ನಡೆಸಲು ನಮ್ಮ ಮೆಟ್ರೋ ಸಿದ್ದತೆ

ಬೆಂಗಳೂರು ಮೆಟ್ರೋದ ಚಾಲಕ ರಹಿತ ರೈಲು ಮಾದರಿಯ ಫಸ್ಟ್ ಲುಕ್; ಮಾರ್ಚ್ 1 ಕ್ಕೆ ಪ್ರಾಯೋಗಿಕ ಸಂಚಾರ ನಡೆಸಲು ನಮ್ಮ ಮೆಟ್ರೋ ಸಿದ್ದತೆ

ಬೆಂಗಳೂರು ಮೆಟ್ರೋದ ಚಾಲಕ ರಹಿತ ರೈಲು ಮಾದರಿಯ ಫಸ್ಟ್ ಲುಕ್ ಅನ್ನು ಬಿಎಂಆರ್‌ಸಿಎಲ್ ಶೇರ್ ಮಾಡಿದೆ. ಅದೇ ರೀತಿ, ಮಾರ್ಚ್ 1 ಕ್ಕೆ ಪ್ರಾಯೋಗಿಕ ಸಂಚಾರ ನಡೆಸಲು ನಮ್ಮ ಮೆಟ್ರೋ ಸಿದ್ದತೆ ನಡೆಸಿದೆ.

ಬೆಂಗಳೂರು ಮೆಟ್ರೋದ ಚಾಲಕ ರಹಿತ ರೈಲು ಮಾದರಿಯ ಫಸ್ಟ್ ಲುಕ್ ಇಲ್ಲಿದೆ. ಮಾರ್ಚ್ 1 ಕ್ಕೆ ಪ್ರಾಯೋಗಿಕ ಸಂಚಾರ ನಡೆಸಲು ನಮ್ಮ ಮೆಟ್ರೋ ಸಿದ್ದತೆ ನಡೆಸಿದೆ.
ಬೆಂಗಳೂರು ಮೆಟ್ರೋದ ಚಾಲಕ ರಹಿತ ರೈಲು ಮಾದರಿಯ ಫಸ್ಟ್ ಲುಕ್ ಇಲ್ಲಿದೆ. ಮಾರ್ಚ್ 1 ಕ್ಕೆ ಪ್ರಾಯೋಗಿಕ ಸಂಚಾರ ನಡೆಸಲು ನಮ್ಮ ಮೆಟ್ರೋ ಸಿದ್ದತೆ ನಡೆಸಿದೆ.

ಬೆಂಗಳೂರು: ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ರೈಲನ್ನು ಹೆಬ್ಬಗೋಡಿ ಡಿಪೋದಲ್ಲಿ ಅನಾವರಣಗೊಳಿಸಲಾಗಿದೆ. ಬೆಂಗಳೂರು ಮೆಟ್ರೋದ ಡ್ರೈವಿಂಗ್ ಕೋಚ್‌ನ ಫೋಟವನ್ನು ಬಿಎಂಆರ್‌ಸಿಎಲ್ ಶೇರ್ ಮಾಡಿದ್ದು, ಜನರ ಕುತೂಹಲ ಕೆರಳಿಸಿದೆ. ಈ ಚಾಲಕ ರಹಿತ ಮೆಟ್ರೋದ ಪ್ರಾಯೋಗಿಕ ಸಂಚಾರ ಮಾರ್ಚ್ 1ರಂದು ನಡೆಯುವ ಸಾಧ್ಯತೆ ಇದೆ.

ಈ ಪ್ರೊಟೋ ಟೈಪ್‌ ರೈಲಿನ ಮೊದಲ ಫೋಟೋಗಳನ್ನು ಬಿಎಂಆರ್‌ಸಿಎಲ್‌ ತನ್ನ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದೆ. ಈ ರೈಲು ಬೆಂಗಳೂರು ಮೆಟ್ರೋದ ಹಳದಿ ಮಾರ್ಗದಲ್ಲಿ ಸಂಚರಿಸಲಿದೆ. ಅಂದರೆ ಸಿಲ್ಕ್ ಬೋರ್ಡ್ ಜಂಕ್ಷನ್ ಮೂಲಕ ಹಾದು ಹೋಗುವ ಆರ್‌ವಿ ರಸ್ತೆ ಮತ್ತು ಬೊಮ್ಮಸಂದ್ರ ನಡುವೆ ಸಂಚರಿಸಲಿದೆ.

ಮೇಕ್‌ ಇನ್ ಇಂಡಿಯಾ ಉಪಕ್ರಮದಲ್ಲಿ ಚೀನಾ ಸಹಭಾಗಿತ್ವದಲ್ಲಿ ನಿರ್ಮಾಣ

ಚೀನಾ ಸಹಯೋಗದ ಮೆಟ್ರೋ ರೈಲುಗಳನ್ನು ಆಮದು ಮಾಡಿಕೊಂಡಿದ್ದು, ಜನವರಿ 20 ರಂದು ಹಡಗಿನ ಮೂಲಕ ಚೆನ್ನೈಗೆ ಬಂದು ಅಲ್ಲಿಂದ ಬೆಂಗಳೂರು ತಲುಪಿದೆ. ಈ ಡ್ರೈವರ್‌ಲೆಸ್ ಪ್ರೊಟೊಟೈಪ್ ಅನ್ನು ಚೀನಾದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕಂ ಲಿಮಿಟೆಡ್ ತಯಾರಿಸಿದೆ.

ಮೇಕ್ ಇನ್ ಇಂಡಿಯಾ ಉಪಕ್ರಮದ ಮಾನದಂಡಗಳನ್ನು ಪೂರ್ಣಗೊಳಿಸುವುದಕ್ಕೆ ಚೀನಾದ ಸಿಆರ್‌ಆರ್‌ಸಿ, ಕೋಲ್ಕತ್ತ ಮೂಲದ ತಿತಾಗಢ ರೈಲ್‌ ಜೊತೆಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿತು. ಈ ಕಂಪನಿ ಬೋಗಿಗಳ ಉತ್ಪಾದನೆ ಮತ್ತು ಪೂರೈಕೆಯ ಹೊಣೆಗಾರಿಕೆ ವಹಿಸಿಕೊಂಡಿತ್ತು.

ಹೆಬ್ಬಗೋಡಿ ಡಿಪೋದಲ್ಲಿರುವ ತಲಾ 38.7 ಮೆಟ್ರಿಕ್ ಟನ್ ತೂಕದ ಆರು ಬೋಗಿಗಳ ರೈಲು ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಆಗಮನವು ನವೀನ ತಂತ್ರಜ್ಞಾನ ಮತ್ತು ಸುವ್ಯವಸ್ಥಿತ ಲಾಜಿಸ್ಟಿಕ್ಸ್ ಮೂಲಕ ಭವಿಷ್ಯದ ಸಾರಿಗೆ ಪರಿಹಾರಗಳಲ್ಲಿ ನಗರದ ಪ್ರಗತಿಯನ್ನು ತೋರಿಸುತ್ತದೆ.

ಈ ವರ್ಷ ಮಧ್ಯಭಾಗದಲ್ಲಿ ಹಳದಿ ಮೆಟ್ರೋ ಸಂಚಾರ ಶುರು ಸಾಧ್ಯತೆ

ಹಳದಿ ಮಾರ್ಗದ ಮೂಲಕ, ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣಿಸುವ ಪ್ರಯಾಣಿಕರು ಈ ಮೆಟ್ರೋವನ್ನು ಬಳಸುವುದರಿಂದ ಜಯದೇವ ಜಂಕ್ಷನ್‌ನಲ್ಲಿ ದಟ್ಟಣೆ ಕಡಿಮೆಯಾಗುವ ಸಾಧ್ಯತೆಯಿದೆ. ಸಿಲ್ಕ್ ಬೋರ್ಡ್ ಜಂಕ್ಷನ್, ನಗರದ ಅತ್ಯಂತ ದಟ್ಟಣೆಯ ಪ್ರದೇಶಗಳಲ್ಲಿ ಒಂದಾಗಿದೆ. ಈ ಮಾರ್ಗವನ್ನು ಸೇರಿಸುವುದರಿಂದ ಕಡಿಮೆ ದಟ್ಟಣೆಯನ್ನು ಅನುಭವಿಸುವ ಸಾಧ್ಯತೆಯಿದೆ. ಈ ಮೆಟ್ರೋ ಮಾರ್ಗವನ್ನು 2024 ರ ಮಧ್ಯಭಾಗದಲ್ಲಿ ಸಾರ್ವಜನಿಕರ ಬಳಕೆಗೆ ಸಿಗಬಹುದು ಎಂದು ಸರ್ಕಾರ ಹೇಳಿದೆ.

ದಕ್ಷಿಣ ಬೆಂಗಳೂರು ಮತ್ತು ಇಲೆಕ್ಟ್ರಾನಿಕ್ಸ್‌ ಸಿಟಿ ನಡುವೆ ಸಂಪರ್ಕ ಒದಗಿಸುವ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ 15 ರೈಲುಗಳು ಸಂಚರಿಸಲಿವೆ. ಮೆಟ್ರೋ ಕಾರಿಡಾರ್‌ನಲ್ಲಿ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಒಟ್ಟು 21 ಆರು ಬೋಗಿಗಳ ರೈಲು ಸಂಚಾರ ಇದೆ.

ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಆರ್‌ ವಿ ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್‌, ಸೆಂಟ್ರಲ್ ಸಿಲ್ಕ್ ಬೋರ್ಡ್‌, ಬೊಮ್ಮನಹಳ್ಳಿ (ಹೆಚ್‌ಎಸ್‌ಆರ್‌ ಲೇಔಟ್‌), ಹೊಂಗಸಂದ್ರ (ಆಕ್ಸ್‌ಫರ್ಡ್‌ ಕಾಲೇಜು), ಕೂಡ್ಲು ಗೇಟ್‌ (ಮುನೇಶ್ವರ ನಗರ), ಸಿಂಗಸಂದ್ರ (ಚಿಕ್ಕಬೇಗೂರು), ಹೊಸಾ ರೋಡ್‌ (ಬಸಾಪುರ ರಸ್ತೆ), ಬೆರಟೇನಾ ಅಗ್ರಹಾರ (ಹೊಸಾ ರೋಡ್‌), ಇಲೆಕ್ಟ್ರಾನಿಕ್ಸ್ ಸಿಟಿ, ಇನ್‌ಫೋಸಿಸ್ ಫೌಂಡೇಶನ್‌, ಕೋನಪ್ಪನ ಅಗ್ರಹಾರ (ಇಲೆಕ್ಟ್ರಾನಿಕ್ ಸಿಟಿ- 2ನೇ ಹಂತ), ಹಸ್ಕರ್ ರಸ್ತೆ, ಹೆಬ್ಬಗೋಡಿ, ಬೊಮ್ಮಸಂದ್ರ ಎಂಬ 16 ನಿಲ್ದಾಣಗಳಿವೆ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner