Gruha Lakshmi Scheme: ನಾಡದೇವತೆ ಮೈಸೂರು ಚಾಮುಂಡೇಶ್ವರಿ ದೇವಿಯನ್ನೂ ಗೃಹಲಕ್ಷ್ಮಿ ಫಲಾನುಭವಿ ಮಾಡಿತಾ ಕರ್ನಾಟಕ ಸರ್ಕಾರ!
ಕನ್ನಡ ಸುದ್ದಿ  /  ಕರ್ನಾಟಕ  /  Gruha Lakshmi Scheme: ನಾಡದೇವತೆ ಮೈಸೂರು ಚಾಮುಂಡೇಶ್ವರಿ ದೇವಿಯನ್ನೂ ಗೃಹಲಕ್ಷ್ಮಿ ಫಲಾನುಭವಿ ಮಾಡಿತಾ ಕರ್ನಾಟಕ ಸರ್ಕಾರ!

Gruha Lakshmi Scheme: ನಾಡದೇವತೆ ಮೈಸೂರು ಚಾಮುಂಡೇಶ್ವರಿ ದೇವಿಯನ್ನೂ ಗೃಹಲಕ್ಷ್ಮಿ ಫಲಾನುಭವಿ ಮಾಡಿತಾ ಕರ್ನಾಟಕ ಸರ್ಕಾರ!

ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿಲಕ್ಷಣ ನಡೆಯೊಂದು ಎಲ್ಲರ ಗಮನಸೆಳೆದಿದೆ. ನಾಡದೇವತೆ ಚಾಮುಂಡೇಶ್ವರಿ ದೇವಿಯನ್ನೂ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯನ್ನಾಗಿ ಮಾಡಿದೆ ಕಾಂಗ್ರೆಸ್ ಸರ್ಕಾರ. ಯಾರು ಈ ಪ್ರಸ್ತಾವನೆ ಸಲ್ಲಿಸಿದ್ದು, ಯಾರು ಇದನ್ನು ಅಂಗೀಕರಿಸಿದ್ದು ಇಲ್ಲಿದೆ ವಿವರ.

ನಾಡದೇವತೆ ಚಾಮುಂಡೇಶ್ವರಿಯನ್ನೂ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯನ್ನಾಗಿ ಮಾಡಿದ ಕಾಂಗ್ರೆಸ್ ಸರ್ಕಾರ!
ನಾಡದೇವತೆ ಚಾಮುಂಡೇಶ್ವರಿಯನ್ನೂ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯನ್ನಾಗಿ ಮಾಡಿದ ಕಾಂಗ್ರೆಸ್ ಸರ್ಕಾರ!

ವಿರಳ ವಿದ್ಯಮಾನ ಇದು. ಕರ್ನಾಟಕದ ಸಿದ್ದರಾಮಯ್ಯ- ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ನಾಡದೇವತೆ ಮೈಸೂರಿನ ಚಾಮುಂಡೇಶ್ವರಿ ದೇವಿಯನ್ನೂ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯನ್ನಾಗಿ ಮಾಡಿದೆ!

ಮೈಸೂರು ಚಾಮುಂಡೇಶ್ವರಿ ದೇವಿಯನ್ನೂ ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರೆಂಟಿ ಯೋಜನೆಗಳ ಪೈಕಿ ಪ್ರಮುಖವಾಗಿರುವ ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿ ಎಂದು ಪರಿಗಣಿಸಿದ್ದು, ಪ್ರತಿ ತಿಂಗಳು 2,000 ರೂಪಾಯಿ ಠೇವಣಿ ಮಾಡಲು ನಿರ್ಧರಿಸಿದೆ.

ಪ್ರತಿ ತಿಂಗಳು ಮನೆಯ ಯಜಮಾನಿಯ ಬ್ಯಾಂಕ್ ಖಾತೆಗೆ 2,000 ರೂಪಾಯಿ ಜಮೆ ಮಾಡುವ ಈ ಯೋಜನೆ ಕಾಂಗ್ರೆಸ್ ಪಕ್ಷ ಘೋ‍ಷಿಸಿದ 5 ಗ್ಯಾರೆಂಟಿಗಳ ಪೈಕಿ ಒಂದು.

ಈ ವಿಲಕ್ಷಣ ಪ್ರಸ್ತಾವನೆ ಮುಂದಿಟ್ಟದ್ದು ಯಾರು

ನಾಡದೇವತೆ ಚಾಮುಂಡೇಶ್ವರಿ ದೇವಿಯನ್ನು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಎಂದು ಪರಿಗಣಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದು ಕಾಂಗ್ರೆಸ್ ಪಕ್ಷದ ಎಂಎಲ್‌ಸಿ (ವಿಧಾನ ಪರಿಷತ್ ಸದಸ್ಯ) ಮತ್ತು ಪಕ್ಷದ ಮೀಡಿಯಾ ಸೆಲ್ ಉಪಾಧ್ಯಕ್ಷ ದಿನೇಶ್‌ ಗೂಳಿಗೌಡ.

ಅವರು ಈ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದರು. ಅಲ್ಲದೆ, ಈ ವಿಚಾರವನ್ನು ನೇರವಾಗಿ ಡಿಕೆ ಶಿವಕುಮಾರ್ ಅವರ ಜತೆಗೆ ಮಾತಾನಾಡಿದರು. ಆಗ ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ ಡಿಕೆ ಶಿವಕುಮಾರ್ ಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಈ ಕುರಿತು ನಿರ್ದೇಶನ ನೀಡಿದರು. ಚಾಮುಂಡೇಶ್ವರಿ ದೇವರ ಖಾತೆಗೆ ಪ್ರತಿ ತಿಂಗಳೂ 2,000 ರೂಪಾಯಿ ಜಮೆ ಮಾಡುವಂತೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್‌ ಸೂಚಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

ಲಕ್ಷ್ಮಿ ಹೆಬ್ಬಾಳ್ಕರ್ ಅವರ ಇಲಾಖೆಯಿಂದ ಅಥವಾ ವೈಯಕ್ತಿಕವಾಗಿ ದೇವಿಗೆ ಪ್ರತಿ ತಿಂಗಳು 2,000 ರೂ. ಠೇವಣಿ ಇಡುವಂತೆ ಮನವಿ ಮಾಡಿದ ನನ್ನ ಪತ್ರಕ್ಕೆ ಉಪಮುಖ್ಯಮಂತ್ರಿ ಅವರು ತಕ್ಷಣ ಸ್ಪಂದಿಸಿದ್ದಾರೆ ಎಂದು ಗೂಳಿಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್‌ ಸರ್ಕಾರದ ಇತರೆ ನಾಲ್ಕು ಗ್ಯಾರೆಂಟಿ ಯೋಜನೆಗಳಿವು

ಕಾಂಗ್ರೆಸ್ ಸರ್ಕಾರದ ಇತರ 4 ಪ್ರಮುಖ ಚುನಾವಣಾ ಗ್ಯಾರೆಂಟಿಗಳಿವು.

1. ಎಲ್ಲಾ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ (ಗೃಹ ಜ್ಯೋತಿ),

2. ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ 10 ಕೆಜಿ ಉಚಿತ ಅಕ್ಕಿ (ಅನ್ನ ಭಾಗ್ಯ),

3. ನಿರುದ್ಯೋಗಿ ಪದವೀಧರ ಯುವಕರಿಗೆ 3,000 ತಿಂಗಳ ನೆರವು ಮತ್ತು ನಿರುದ್ಯೋಗಿ ಡಿಪ್ಲೊಮಾದಾರರಿಗೆ (ಇಬ್ಬರೂ 18-25 ವರ್ಷ ವಯಸ್ಸಿನವರು) ಎರಡು ವರ್ಷಗಳವರೆಗೆ (ಯುವನಿಧಿ) ರೂ 1,500,

4. ಕೊನೆಯದಾಗಿ ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ (ಶಕ್ತಿ ಯೋಜನೆ).

Whats_app_banner