ಕನ್ನಡ ಸುದ್ದಿ  /  ಕರ್ನಾಟಕ  /  ಕೆಎಂಎಫ್‌ ನಂದಿನಿ ಹಾಲು, ಮೊಸರು ಭರ್ಜರಿ ಮಾರಾಟ, ನಿತ್ಯವೂ ಸರಾಸರಿ 52 ಲಕ್ಷ ಲೀ ಹಾಲು ಪೂರೈಕೆ, ಬೆಳಗ್ಗೆ 8ಕ್ಕೆ, ಸಂಜೆ 5ಕ್ಕೆಲ್ಲ ಹಾಲು ಖಾಲಿ

ಕೆಎಂಎಫ್‌ ನಂದಿನಿ ಹಾಲು, ಮೊಸರು ಭರ್ಜರಿ ಮಾರಾಟ, ನಿತ್ಯವೂ ಸರಾಸರಿ 52 ಲಕ್ಷ ಲೀ ಹಾಲು ಪೂರೈಕೆ, ಬೆಳಗ್ಗೆ 8ಕ್ಕೆ, ಸಂಜೆ 5ಕ್ಕೆಲ್ಲ ಹಾಲು ಖಾಲಿ

ಕರ್ನಾಟಕದಲ್ಲಿ ಈ ಸಲ ಸುಡುಬೇಸಿಗೆಯ ಕಾರಣ ಕೆಎಂಎಫ್‌ ನಂದಿನಿ ಹಾಲು, ಮೊಸರು ಭರ್ಜರಿ ಮಾರಾಟವಾಗುತ್ತಿದ್ದು, ನಿತ್ಯವೂ ಸರಾಸರಿ 52 ಲಕ್ಷ ಲೀ ಹಾಲು ಪೂರೈಕೆಯಾಗುತ್ತಿದೆ. ಆದಾಗ್ಯೂ, ಬೆಳಗ್ಗೆ 8ಕ್ಕೆ, ಸಂಜೆ 5ಕ್ಕೆಲ್ಲ ಹಾಲು ಖಾಲಿಯಾಗುತ್ತಿದ್ದು, ಗ್ರಾಹಕ ವಲಯದ ಬೇಡಿಕೆಯ ಪ್ರಮಾಣ ಈಡೇರಿಸುವುದು ಕೆಎಂಎಫ್‌ಗೆ ಸವಲಾಗಿ ಪರಿಣಮಿಸಿದೆ.

ಸುಡುಬಿಸಿಲು, ಬಿರುಬೇಸಿಗೆಯ ಕಾರಣ ಕೆಎಂಎಫ್‌ ನಂದಿನಿ ಹಾಲು, ಮೊಸರು ಭರ್ಜರಿ ಮಾರಾಟವಾಗುತ್ತಿದೆ. ಕೆಎಂಎಫ್‌ ನಿತ್ಯವೂ ಸರಾಸರಿ 52 ಲಕ್ಷ ಲೀ ಹಾಲು ಪೂರೈಕೆ ಮಾಡುತ್ತಿದೆ. ಚಿಲ್ಲರೆ ವ್ಯಾಪಾರಿಗಳ ಬಳಿ ಸದ್ಯ ನಿತ್ಯವೂ ಬೆಳಗ್ಗೆ 8ಕ್ಕೆ, ಸಂಜೆ 5ಕ್ಕೆಲ್ಲ ಹಾಲು ಖಾಲಿಯಾಗುತ್ತಿರುವುದು ಗಮನಸೆಳೆದಿದೆ.
ಸುಡುಬಿಸಿಲು, ಬಿರುಬೇಸಿಗೆಯ ಕಾರಣ ಕೆಎಂಎಫ್‌ ನಂದಿನಿ ಹಾಲು, ಮೊಸರು ಭರ್ಜರಿ ಮಾರಾಟವಾಗುತ್ತಿದೆ. ಕೆಎಂಎಫ್‌ ನಿತ್ಯವೂ ಸರಾಸರಿ 52 ಲಕ್ಷ ಲೀ ಹಾಲು ಪೂರೈಕೆ ಮಾಡುತ್ತಿದೆ. ಚಿಲ್ಲರೆ ವ್ಯಾಪಾರಿಗಳ ಬಳಿ ಸದ್ಯ ನಿತ್ಯವೂ ಬೆಳಗ್ಗೆ 8ಕ್ಕೆ, ಸಂಜೆ 5ಕ್ಕೆಲ್ಲ ಹಾಲು ಖಾಲಿಯಾಗುತ್ತಿರುವುದು ಗಮನಸೆಳೆದಿದೆ.

ಬೆಂಗಳೂರು: ಬಿಸಿಲ ಝಳ ಮತ್ತು ತಾಪಮಾನಕ್ಕೆ ಹಾಲು, ಮೊಸರು ಮತ್ತು ಇತರೆ ಹಾಲಿನ ಉತ್ಪನ್ನಗಳ ಬಳಕೆ ಹೆಚ್ಚಾಗಿದೆ. ಹೀಗಾಗಿ ಕರ್ನಾಟಕ ಹಾಲು ಮಹಾಮಂಡಳಿ (Karnataka Milk Federation - KMF) ತನ್ನ ನಂದಿನ ಹಾಲು (Nandini Milk), ನಂದಿನಿ ಮೊಸರು (Nandini Curds) ಮಾರಾಟದಲ್ಲಿ ಹೊಸ ದಾಖಲೆ ಬರೆದಿದೆ. ಸದ್ಯ ಕೆಎಂಎಫ್‌ನ ಅಧೀನ ಇರುವಂತಹ ರಾಜ್ಯದ 15 ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಗಳು ಒದಗಿಸುವ ಹಾಲು ಗ್ರಾಹಕ ಬೇಡಿಕೆ ಪೂರೈಸಲು ಸಾಕಾಗುತ್ತಿಲ್ಲ ಎಂದು ಮಂಡಲದ ಮೂಲಗಳು ತಿಳಿಸಿವೆ.

ಟ್ರೆಂಡಿಂಗ್​ ಸುದ್ದಿ

ನಂದಿನಿ ಹಾಲು ಮತ್ತು ಮೊಸರು ಬೆಳಗ್ಗೆ 8 ರಿಂದ 8.30ರ ಒಳಗೆ ಖಾಲಿಯಾಗುತ್ತಿದ್ದು, ಮಧ್ಯಾಹ್ನ ಪೂರೈಕೆಯಾಗುವ ಹಾಲು ಸಂಜೆ 5 ಗಂಟೆಗೆಲ್ಲ ಖಾಲಿಯಾಗುತ್ತಿದೆ ಎಂದು ಬೆಂಗಳೂರಿನ ಮುನೇಶ್ವರ ಬ್ಲಾಕ್‌ನಲ್ಲಿರುವ ಚಿಲ್ಲರೆ ವ್ಯಾಪಾರ ಮಳಿಗೆಯ ರಾಘವೇಂದ್ರ ಹಿಂದೂಸ್ತಾನ್ ಟೈಮ್ಸ್ ಕನ್ನಡಕ್ಕೆ ತಿಳಿಸಿದ್ದಾರೆ. ಚಿಲ್ಲರೆ ವ್ಯಾಪಾರಿಗಳಷ್ಟೇ ಅಲ್ಲ, ಅದೇ ರೀತಿ ದೊಡ್ಡ ದೊಡ್ಡ ಮಾಲ್‌ಗಳಲ್ಲಿ, ಕೆಲವು ನಂದಿನಿ ಬೂತ್‌ಗಳಲ್ಲಿ ಕೂಡ ಈಗ ನಂದಿನಿ ಹಾಲು, ಮೊಸರು ಖಾಲಿಯಾಗಿರುತ್ತವೆ.

ಹಾಲು, ಮೊಸರು, ಮಜ್ಜಿಗೆಯ ಬೇಡಿಕೆ ದಿನೇದಿನೆ ಹೆಚ್ಚಾಗುತ್ತಿದ್ದು, ಅದೇ ರೀತಿ ಇನ್ನೊಂದೆಡೆ ಹಾಲು ಸಂಗ್ರಹದಲ್ಲೂ ಸ್ವಲ್ಪ ಹೆಚ್ಚಳವಾಗಿದೆ. ಕೆಎಂಎಫ್‌ ಸದ್ಯ ಪ್ರತಿನಿತ್ಯ 82 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದ್ದು, ಇದರಲ್ಲಿ 52 ಲಕ್ಷ ಲೀಟರ್ ಹಾಲು ಮಾರಾಟಕ್ಕೆ, ಉಳಿದವು ಹಾಲಿನ ಉತ್ಪನ್ನ ತಯಾರಿಸಲು ಬಳಸುತ್ತಿದೆ. ಆದಾಗ್ಯೂ, ಇದು ಗ್ರಾಹಕ ಬೇಡಿಕೆಯನ್ನು ಪೂರೈಸಲು ಸಾಕಾಗುತ್ತಿಲ್ಲ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.

ಒಂದೇ ದಿನ 51 ಲಕ್ಷ ಲೀಟರ್ ನಂದಿನಿ ಹಾಲು, 16.5 ಲಕ್ಷ ಲೀಟರ್ ನಂದಿನಿ ಮೊಸರು ಮಾರಾಟದ ದಾಖಲೆ

ಕರ್ನಾಟಕದಲ್ಲಿ ಏಪ್ರಿಲ್ 26 ರಂದು ಮೊದಲ ಬಾರಿಗೆ ಒಂದೇ ದಿನ 51 ಲಕ್ಷ ಲೀಟರ್ ನಂದಿನಿ ಹಾಲು ಮಾರಾಟವಾಗಿ ಗರಿಷ್ಠ ಮಾರಾಟದ ದಾಖಲೆಯನ್ನು ಕೆಎಂಎಫ್ ನಿರ್ಮಿಸಿತು. ಇದಾಗಿ, ಸದ್ಯ ಪ್ರತಿನಿತ್ಯ ಸರಾಸರಿ 52 ಲಕ್ಷ ಲೀಟರ್‌ ನಂದಿನಿ ಹಾಲು ಮಾರಾಟವಾಗುತ್ತಿದೆ. ಇಷ್ಟು ವರ್ಷ ಈ ಮಟ್ಟದ ಹಾಲು ನಿತ್ಯ ಮಾರಾಟವಾಗಿದ್ದಿಲ್ಲ. ಗರಿಷ್ಠ ಎಂದರೆ 45 ಲಕ್ಷ ಲೀಟರ್ ಹಾಲು ಮಾರಾಟವಾಗಿರುವುದು ದಾಖಲೆಯಾಗಿತ್ತು. ಈಗ ಬೇಡಿಕೆ ಹೆಚ್ಚುತ್ತಲೇ ಇದ್ದು, ಜನ ಹಾಲನ್ನು ಕುಡಿಯಲು, ಜ್ಯೂಸ್, ಮಿಲ್ಕ್‌ಶೇಕ್ ಮುಂತಾದವಕ್ಕೆ ಹೆಚ್ಚು ಬಳಸುತ್ತಿರುವುದು ಇದಕ್ಕೆ ಕಾರಣ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.

ಮೊಸರು ಕೂಡ ಅಷ್ಟೆ. 16.5 ಲಕ್ಷ ಲೀಟರ್ ನಂದಿನಿ ಮೊಸರು ಏಪ್ರಿಲ್ 26 ರಂದು ಮೊದಲ ಬಾರಿಗೆ ಒಂದೇ ದಿನ ಮಾರಾಟವಾಗಿತ್ತು. ಸದ್ಯ ಸರಾಸರಿ 12.5 ಲಕ್ಷ ಲೀಟರ್ ಮೊಸರು ಮಾರಾಟವಾಗುತ್ತಿದೆ. ಈ ಮೊದಲು ನಿತ್ಯ ಸರಾಸರಿ 10 ಲಕ್ಷ ಲೀಟರ್ ಮೊಸರು ಮಾರಾಟವಾಗುತ್ತಿತ್ತು ಅಷ್ಟೆ ಎಂದು ವರದಿ ಹೇಳಿದೆ.

ಕೆಎಂಎಫ್‌ ನಂದಿನಿ ಐಸ್‌ಕ್ರೀಂ ಮಾರಾಟದಲ್ಲೂ ಹೆಚ್ಚಳ

ಕೆಎಂಎಫ್ ನಂದಿನಿ ಐಸ್‌ಕ್ರೀಂ ಮಾರಾಟದಲ್ಲಿಯೂ ಈ ಸಲ ಬೇಸಿಗೆಯಲ್ಲಿ ದಾಖಲೆಯ ಶೇಕಡ 40 ಏರಿಕೆ ಕಂಡುಬಂದಿದೆ. ಇದು ಏರುತ್ತಲೇ ಇದೆ. ಫೆಬ್ರವರಿ ತಿಂಗಳಿಂದಲೇ ರಾಜ್ಯದಲ್ಲಿ ಬೇಸಿಗೆ ಅನುಭವಕ್ಕೆ ಬಂದಿತ್ತು. ಆಗಲೇ ಹೆಚ್ಚುವರಿ ಬೇಡಿಕೆ ಈಡೇರಿಸುವುದಕ್ಕೆ ಕೆಎಂಎಫ್‌ ಸಜ್ಜಾಗಿತ್ತು. ಐಸ್‌ಕ್ರೀಂ ಉತ್ಪಾದನೆಯನ್ನು ಕೂಡ ಹೆಚ್ಚಿಸಿದ್ದರಿಂದ ಬೇಡಿಕೆ ಪೂರೈಸುವುದು ಸಾಧ್ಯವಾಗಿದೆ. ಐಸ್‌ಕ್ರೀಂ ಉತ್ಪನ್ನ ಒಂದು ವರ್ಷ ಕೆಡುವುದಿಲ್ಲ. ಹೀಗಾಗಿ, ಮುಂಚಿತವಾಗಿಯೇ ಯೋಜನೆ ರೂಪಿಸಿಕೊಂಡ ಕಾರಣ ಪೂರ್ವಸಿದ್ದತೆ ಸುಲಭವಾಯಿತು ಎಂದು ಕೆಎಂಎಫ್‌ ಎಂಡಿ ಎಂಕೆ ಜಗದೀಶ್ ತಿಳಿಸಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಈ ನಡುವೆ, ಬೇಸಿಗೆಯಲ್ಲಿ ಹಾಲು ಉಳಿಸಿಕೊಳ್ಳುವುದು ಕಷ್ಟ ಎಂದು ಚಿಲ್ಲರೆ ವ್ಯಾಪಾರಿಗಳು ನಂದಿನಿ ಹಾಲನ್ನು ಅಗತ್ಯ ಇದ್ದಷ್ಟೇ ತರಿಸಿಕೊಳ್ಳುತ್ತಿದ್ದಾರೆ. ಹಾಲು ಬೇಗ ಹಾಳಾಗುತ್ತದೆ ಎಂಬುದು ಅವರ ಆತಂಕ. ನಷ್ಟವನ್ನು ಕೈಯಿಂದಲೇ ಭರಿಸುವುದನ್ನು ತಪ್ಪಿಸಬೇಕು ಎಂಬ ಮುಂಜಾಗ್ರತೆ ಅವರದ್ದು. ಈ ಕುರಿತು ಬೆಂಗಳೂರಿನ ಮುನೇಶ್ವರ ಬ್ಲಾಕ್‌ನ ಚಿಲ್ಲರೆ ವ್ಯಾಪಾರಿ ರಾಘವೇಂದ್ರ ಅವರು, “ನಿತ್ಯ ಬರುವ ಗ್ರಾಹಕರ ಬೇಡಿಕೆ ಎಷ್ಟು ಎಂಬ ಅಂದಾಜು ಇದೆ. ಹೀಗಾಗಿ ಅಗತ್ಯ ಇದ್ದಷ್ಟೇ ಹಾಲು ತರಿಸುತ್ತೇವೆ. ಅದರಲ್ಲಿ ಹೆಚ್ಚು ಲಾಭ ಇಲ್ಲ. ಬೇಡಿಕೆ ಇರುವ ಕಾರಣ ತರಿಸುತ್ತೇವಷ್ಟೆ. ಬೇಸಿಗೆಯಲ್ಲಿ ಹಾಲನ್ನು ಫ್ರಿಜ್‌ನಲ್ಲಿಟ್ಟರೂ ಹಾಳಾಗುತ್ತದೆ. ನಮ್ಮ ಹಣೆಬರಹ ಚೆನ್ನಾಗಿದ್ದರೆ ಬಚಾವ್. ಒಂದು ಪ್ಯಾಕೆಟ್ ಹಾಳಾದರೂ ಅದರಲ್ಲಿ ಬರುವ ಲಾಭ ಅಲ್ಲಿಗೇ ಹೋಗಿ ಬಿಡುತ್ತದೆ. ಆದ್ದರಿಂದಲೇ ಹೆಚ್ಚುವರಿ ಹಾಲು ಹಾಕಿಸಿಕೊಳ್ಳಲ್ಲ” ಎನ್ನುತ್ತಾರೆ.

IPL_Entry_Point