Bengaluru Weather: ಬೆಂಗಳೂರು ನಗರ ಮತ್ತು ಗ್ರಾಮಾಂತರಗಳಲ್ಲಿ ಇಂದು, ನಾಳೆ ಭಾರಿ ಚಳಿ, ಸಾಧಾರಣ ಮಳೆಯ ಮುನ್ಸೂಚನೆ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Weather: ಬೆಂಗಳೂರು ನಗರ ಮತ್ತು ಗ್ರಾಮಾಂತರಗಳಲ್ಲಿ ಇಂದು, ನಾಳೆ ಭಾರಿ ಚಳಿ, ಸಾಧಾರಣ ಮಳೆಯ ಮುನ್ಸೂಚನೆ

Bengaluru Weather: ಬೆಂಗಳೂರು ನಗರ ಮತ್ತು ಗ್ರಾಮಾಂತರಗಳಲ್ಲಿ ಇಂದು, ನಾಳೆ ಭಾರಿ ಚಳಿ, ಸಾಧಾರಣ ಮಳೆಯ ಮುನ್ಸೂಚನೆ

ಕರ್ನಾಟಕದ ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಇಂದು (ಜ.4) ಮತ್ತು ನಾಳೆ (ಜ.5) ಸಾಧಾರಣ ಮಳೆಯಾಗಬಹುದು. ಚಳಿ ಕೂಡ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನಾ ವರದಿ ಹೇಳಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಮುಂಜಾನೆ ಬಹುತೇಕ ಮಂಜುಕವಿದ ವಾತಾವರಣ ಇರಲಿದೆ. ಅದೇ ರೀತಿ ಹಗಲು ಮೋಡ ಕವಿದ ವಾತಾವರಣ ನಿರೀಕ್ಷಿಸಬಹುದು ಎಂದು ವರದಿ ಹೇಳಿದೆ.

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. (ಸಾಂಕೇತಿಕ ಚಿತ್ರ) (pixabay)

ದಕ್ಷಿಣ ಒಳನಾಡಿನ ಭಾಗವಾಗಿರುವ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಇದ್ದ ವಾತಾವರಣಕ್ಕಿಂತ ಭಿನ್ನವಾಗಿ ಇಂದು (ಜ.4) ಮತ್ತು ನಾಳೆ (ಜ.5) ಸಾಧಾರಣ ಮಳೆಯ ವಾತಾವರಣ ಇರಲಿದೆ. ಮಳೆ ಮತ್ತು ಚಳಿ ಇರುವ ಕಾರಣ ವಾತಾವರಣದ ತಾಪಮಾನ ಕಡಿಮೆಯಾಗಿ ಹೆಚ್ಚಿನ ಚಳಿ ಅನುಭವಕ್ಕೆ ಬಂದೀತು.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಹವಾಮಾನ ಇಲಾಖೆಯ ಮುನ್ಸೂಚನೆ ವರದಿಯು ಇಂದು (ಜ.4) ಬೆಳಗ್ಗೆ 8.30 ರಿಂದ ನಾಳೆ (ಜ.5) ಬೆಳಗ್ಗೆ 8.30ರ ತನಕ ಅನ್ವಯವಾಗುವಂಥದ್ದು. ಇದರ ಪ್ರಕಾರ, ಮುಂದಿನ 24 ಗಂಟೆ ಅವಧಿಯಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಬಹುತೇಕ ಪ್ರದೇಶಗಳಲ್ಲಿ ಸಾಧಾರಣ ಮಳೆಯನ್ನು ನಿರೀಕ್ಷಿಸಬಹುದು.

ಬೆಂಗಳೂರ ಹವಾಮಾನ ಕೇಂದ್ರದ ಮೂಲಗಳ ಪ್ರಕಾರ, ಬೆಂಗಳೂರು ಮಹಾನಗರದ ಕೆಲವು ಪ್ರದೇಶಗಳಲ್ಲಿ ಮುಂಜಾನೆ ಹೊತ್ತು ಮಂಜು ಮುಸುಕಿದ ವಾತಾವರಣದ ಜತೆಗೆ ಸಾಧಾರಣ ಮಳೆ ಬೀಳಬಹುದು. ವಾತಾವರಣದಲ್ಲಿ ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಶಿಯಸ್ ಮತ್ತು ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಶಿಯಸ್ ನಡುವೆ ಇರಲಿದೆ.

ಇನ್ನುಳಿದ ಹಾಗೆ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜ ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರಗಳಲ್ಲಿ ಜಿಲ್ಲೆಗಳಲ್ಲಿ ಚಳಿಯ ಜೊತೆಗೆ ಸಾಧಾರಣ ಮಳೆಯೂ ಬೀಳಬಹುದು ಎಂದು ಮುನ್ಸೂಚನೆ ವರದಿ ವಿವರಿಸಿದೆ.

Whats_app_banner