ಬೆಂಗಳೂರು ಮಳೆ ಇವತ್ತೊಂದು ದಿನ ಅಷ್ಟೆ, ನಾಳೆಯಿಂದ ನಾಲ್ಕಾರು ದಿನ ಅಲ್ಲೋ ಇಲ್ಲೋ ಸುರಿಯಲಿದೆ, ಇಲ್ಲಿದೆ ಹವಾಮಾನ ಮುನ್ಸೂಚನೆ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಮಳೆ ಇವತ್ತೊಂದು ದಿನ ಅಷ್ಟೆ, ನಾಳೆಯಿಂದ ನಾಲ್ಕಾರು ದಿನ ಅಲ್ಲೋ ಇಲ್ಲೋ ಸುರಿಯಲಿದೆ, ಇಲ್ಲಿದೆ ಹವಾಮಾನ ಮುನ್ಸೂಚನೆ ವಿವರ

ಬೆಂಗಳೂರು ಮಳೆ ಇವತ್ತೊಂದು ದಿನ ಅಷ್ಟೆ, ನಾಳೆಯಿಂದ ನಾಲ್ಕಾರು ದಿನ ಅಲ್ಲೋ ಇಲ್ಲೋ ಸುರಿಯಲಿದೆ, ಇಲ್ಲಿದೆ ಹವಾಮಾನ ಮುನ್ಸೂಚನೆ ವಿವರ

ಬೆಂಗಳೂರು ಮಳೆ ತೀವ್ರತೆ ಕಳೆದುಕೊಂಡಿದೆ. ಹೌದು ಬೆಂಗಳೂರು ಮಳೆ ಇವತ್ತೊಂದು ದಿನ ಅಷ್ಟೆ, ನಾಳೆಯಿಂದ ನಾಲ್ಕಾರು ದಿನ ಅಲ್ಲೋ ಇಲ್ಲೋ ಎಂಬಂತೆ ಸುರಿಯಲಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಬೆಂಗಳೂರು ಹವಾಮಾನದ ಪೂರ್ತಿ ವಿವರ ಇಲ್ಲಿದೆ.

ಬೆಂಗಳೂರು ಮಳೆ ಇವತ್ತೊಂದು ದಿನ ಅಷ್ಟೆ, ನಾಳೆಯಿಂದ ನಾಲ್ಕಾರು ದಿನ ಅಲ್ಲೋ ಇಲ್ಲೋ ಸುರಿಯಲಿದೆ ಎಂಬ ಮಾಹಿತಿ ಹವಾಮಾನ ಮುನ್ಸೂಚನೆಯಲ್ಲಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಮಳೆ ಇವತ್ತೊಂದು ದಿನ ಅಷ್ಟೆ, ನಾಳೆಯಿಂದ ನಾಲ್ಕಾರು ದಿನ ಅಲ್ಲೋ ಇಲ್ಲೋ ಸುರಿಯಲಿದೆ ಎಂಬ ಮಾಹಿತಿ ಹವಾಮಾನ ಮುನ್ಸೂಚನೆಯಲ್ಲಿದೆ. (ಸಾಂಕೇತಿಕ ಚಿತ್ರ) (HTK)

ಬೆಂಗಳೂರು: ಸತತ ಮಳೆಯಿಂದಾಗಿ ಬೆಂಗಳೂರಿನ ಹಲವು ಪ್ರದೇಶಗಳು ಸಂಕಷ್ಟಕ್ಕೆ ಸಿಲುಕಿವೆ. ಉತ್ತರ ಮತ್ತು ಪೂರ್ವ ಬೆಂಗಳೂರು ಹೆಚ್ಚು ತೊಂದರೆಗೆ ಒಳಗಾದರೆ, ಮಹಾತ್ಮ ಗಾಂಧಿ ರಸ್ತೆ ಸೇರಿ ಸೆಂಟ್ರಲ್ ಬಿಜಿನೆಸ್‌ ಡಿಸ್ಟ್ರಿಕ್ಟ್‌ನ ಭಾಗದಲ್ಲೂ ಸಮಸ್ಯೆಯಾಗಿತ್ತು. ಕೆಲವೇ ಕೆಲವು ದಿನಗಳ ಮಳೆ ಬೆಂಗಳೂರು ತಲ್ಲಣಕ್ಕೆ ಒಳಗಾಗುವಂತೆ ಮಾಡಿತು. ಬೆಂಗಳೂರಿಗರು ಇನ್ನೂ ಎಷ್ಟು ದಿನ ಈ ಮಳೆ ಎಂದು ಕೇಳುವಂತಾಯಿತು. ಬುಧವಾರ (ಅಕ್ಟೋಬರ್ 23) ಕೂಡ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಕಳೆದ 30 ವರ್ಷಗಳ ಅವಧಿಯಲ್ಲಿ ಈ ರೀತಿ ಮಳೆ ಸುರಿದಿರುವುದು ಇದೇ ಮೊದಲು. ಹವಾಮಾನ ಕೇಂದ್ರದ ಮಾಹಿತಿ ಪ್ರಕಾರ, ಸೋಮವಾರ 7.3 ಇಂಚು ಮಳೆಯಾಗಿತ್ತು. ಇದು 1997ರಿಂದೀಚೆಗಿನ ಒಂದು ದಿನದ ಗರಿಷ್ಠ ಮಳೆ ಪ್ರಮಾಣ. ಬೆಂಗಳೂರು ಮಳೆ ಅಕ್ಟೋಬರ್ ಒಂದೇ ತಿಂಗಳಲ್ಲಿ 211.7 ಎಂಎಂ ಸುರಿದು ಹೊಸ ದಾಖಲೆ ಬರೆದಿದೆ. ಅಕ್ಟೋಬರ್ ತಿಂಗಳಲ್ಲಿ ಸುರಿಯುವ ವಾಡಿಕೆಯ ದುಪ್ಪಟ್ಟು ಮಳೆ ಇದು.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಇಂದು ಹೇಗಿದೆ ಬೆಂಗಳೂರು ಹವಾಮಾನ; ಇವತ್ತು ಮಳೆ ಬರುತ್ತಾ

ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿಯ ಪ್ರಕಾರ, ಬೆಂಗಳೂರು ಮಳೆ ಇವತ್ತೊಂದು ದಿನ ಅಷ್ಟೆ… ನಾಳೆಯಿಂದ ನಾಲ್ಕಾರು ದಿನ ಅಲ್ಲೋ ಎಲ್ಲೋ ಎಂಬಂತೆ ಮಳೆ ಸುರಿಯಲಿದೆ. ಇನ್ನೂ ನಿಖರವಾಗಿ ಹೇಳಬೇಕು ಎಂದರೆ ಕರ್ನಾಟಕದಲ್ಲಿ ಇಂದು ಒಂದು ದಿನ ಮಳೆ ಸುರಿಯಲಿದೆ. ವಿಶೇಷವಾಗಿ ದಕ್ಷಿಣ ಒಳನಾಡು ಭಾಗದಲ್ಲಿ ವ್ಯಾಪಕ ಮಳೆ ಇರಲಿದೆ. ನಾಳೆಯಿಂದ ಮಳೆಯ ತೀವ್ರತೆ ಕಡಿಮೆಯಾಗಲಿದ್ದು, ಕೆಲವು ಜಿಲ್ಲೆಗಳಲ್ಲಿ ಮಳೆಯೇ ಇರಲ್ಲ.

ಹವಾಮಾನ ಇಲಾಖೆ ನೀಡಿರುವ ಹವಾಮಾನ ಮುನ್ಸೂಚನೆ ವರದಿ ಪ್ರಕಾರ ನಾಳೆ (ಅಕ್ಟೋಬರ್ 25) ಬೆಳಗ್ಗೆ 8.30ರ ತನಕದ ಅವಧಿಯಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ವ್ಯಾಪಕವಾಗಿ ಸಾಧಾರಣ ಮಳೆಯಾಗಲಿದೆ. ಮೋಡ ಕವಿದ ವಾತಾವರಣ, ಗುಡುಗು ಮಿಂಚು ಸಹಿತ ಮಳೆಯನ್ನೂ ನಿರೀಕ್ಷಿಸಬಹುದಾಗಿದೆ. ಇನ್ನು ತಾಪಮಾನ ಕೂಡ ಗರಿಷ್ಠ 30 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಶಿಯಸ್ ಇರಬಹುದು. ಇದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಲಿದ್ದು, ಗುಡುಗು ಮಿಂಚು ಸಹಿತ ಮಳೆಯನ್ನೂ ನಿರೀಕ್ಷಿಸಬಹುದಾಗಿದೆ. ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಶಿಯಸ್‌ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಶಿಯಸ್ ಇರಲಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ನಿನ್ನೆ ಅಪರಾಹ್ನ 1 ಗಂಟೆ ತನಕ 23.6 ಎಂಎಂ ಮಳೆ ದಾಖಲಾಗಿದೆ. ಗುಡುಗು ಸಹಿತ ಮಳೆ ಸುರಿದಿತ್ತು. ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 20.6 ಡಿಗ್ರಿ ಸೆಲ್ಶಿಯಸ್ ಇತ್ತು. ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೂಡ ಮಳೆ ಸುರಿದಿದ್ದು 1.6 ಎಂಎಂ ದಾಖಲಾಗಿತ್ತು. ಗರಿಷ್ಠ ತಾಪಮಾನ 28.8 ಮತ್ತು ಕನಿಷ್ಠ ತಾಪಮಾನ 20.9 ಇತ್ತು. ಗುಡುಗು ಮಿಂಚು ಸಹಿತ ಮಳೆ ಕೆಲವು ಕಡೆ ಇದ್ದರೆ, ಮಂಜು ಮುಸುಕಿದ ಹವಾಮಾನ ಮತ್ತು ಮೋಡ ಕವಿದ ವಾತಾವರಣ ಅನೇಕ ಕಡೆ ಇತ್ತು.

ಬೆಂಗಳೂರು ಮಳೆ ಇನ್ನೆಷ್ಟು ದಿನ

ಬೆಂಗಳೂರು ಮಳೆ ತೀವ್ರತೆ ಕಡಿಮೆಯಾಗಿದೆ. ಇಂದು ಮಳೆ ಬೀಳುವುದಾದರೂ ಹೆಚ್ಚಿನ ಪ್ರಮಾಣದಲ್ಲಿ ಇರಲ್ಲ. ನಾಳೆಯಿಂದ ಈ ಪ್ರಮಾಣ ಇನ್ನೂ ಕಡಿಮೆಯಾಗಲಿದೆ. ಭಾರತೀಯ ಹವಾಮಾನ ಇಲಾಖೆ ನಿನ್ನೆ (ಅಕ್ಟೋಬರ್ 23) ಅಪರಾಹ್ನ 1 ಗಂಟೆಗೆ ಪ್ರಕಟಿಸಿರುವ ಹವಾಮಾನ ಮುನ್ಸೂಚನೆ ಪ್ರಕಾರ, ಅಕ್ಟೋಬರ್ 29ರ ತನಕ ಮಳೆ ಇದೆ. ಆದರೆ ವ್ಯಾಪಕವಾಗಿ ಇಲ್ಲ. ಕೆಲವು ಕಡೆ ಮಾತ್ರ ಮಳೆ ಸುರಿಯಲಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರದ ಹವಾಮಾನ ಮುನ್ಸೂಚನೆ ನೀಡಿರುವ ಬೆಂಗಳೂರು ಹವಾಮಾನ ಕೇಂದ್ರ, ಈ ಎರಡೂ ಜಿಲ್ಲೆಗಳಲ್ಲಿ ಅಕ್ಟೋಬರ್ 27 ರ ತನಕ ಮೋಡ ಕವಿದ ವಾತಾವರಣ ಮತ್ತು ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಸುಳಿವು ನೀಡಿದೆ.

Whats_app_banner