ಗಡಿನಾಡ ಕನ್ನಡಿಗರಿಗೆ ತಮಿಳುನಾಡು ಪೊಲೀಸರಿಂದ ಕಿರುಕುಳ; ಹೊಗೇನಕಲ್ ಫಾಲ್ಸ್​ನಲ್ಲಿ ತೆಪ್ಪ ಸಂಚಾರ ಸ್ಥಗಿತ
ಕನ್ನಡ ಸುದ್ದಿ  /  ಕರ್ನಾಟಕ  /  ಗಡಿನಾಡ ಕನ್ನಡಿಗರಿಗೆ ತಮಿಳುನಾಡು ಪೊಲೀಸರಿಂದ ಕಿರುಕುಳ; ಹೊಗೇನಕಲ್ ಫಾಲ್ಸ್​ನಲ್ಲಿ ತೆಪ್ಪ ಸಂಚಾರ ಸ್ಥಗಿತ

ಗಡಿನಾಡ ಕನ್ನಡಿಗರಿಗೆ ತಮಿಳುನಾಡು ಪೊಲೀಸರಿಂದ ಕಿರುಕುಳ; ಹೊಗೇನಕಲ್ ಫಾಲ್ಸ್​ನಲ್ಲಿ ತೆಪ್ಪ ಸಂಚಾರ ಸ್ಥಗಿತ

Chamarajanagar News: ತಮಿಳುನಾಡು ಪೊಲೀಸರು ತೀವ್ರ ಕಿರುಕುಳ ನೀಡುತ್ತಿರುವ ಕಾರಣ ಹೊಗೇನಕಲ್ ಫಾಲ್ಸ್​ನಲ್ಲಿ ಗಡಿನಾಡ ಕನ್ನಡಿಗರು ತೆಪ್ಪ ಸಂಚಾರ ಸ್ಥಗಿತ ಮಾಡಿದ್ದಾರೆ.

ಹೊಗೆನಕಲ್ ಫಾಲ್ಸ್​ನಲ್ಲಿ ತೆಪ್ಪ ಸಂಚಾರ ಸ್ಥಗಿತ ಮಾಡಿದ ಕನ್ನಡಿಗರಿಗಂದ ಪ್ರತಿಭಟನೆ.
ಹೊಗೆನಕಲ್ ಫಾಲ್ಸ್​ನಲ್ಲಿ ತೆಪ್ಪ ಸಂಚಾರ ಸ್ಥಗಿತ ಮಾಡಿದ ಕನ್ನಡಿಗರಿಗಂದ ಪ್ರತಿಭಟನೆ.

ಚಾಮರಾಜನಗರ: ಹೊಗೇನಕಲ್ ಫಾಲ್ಸ್​​ನಲ್ಲಿ ತೆಪ್ಪ ಸಂಚಾರ ಸ್ಥಗಿತವಾಗಿದೆ, ತಮಿಳುನಾಡಿನ ಪೊಲೀಸರ ದೌರ್ಜನ್ಯ ಖಂಡಿಸಿ ಕನ್ನಡಿಗರು ತೆಪ್ಪ ಸಂಚಾರವನ್ನೇ ಸ್ಥಗಿತ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಕಳೆದ 50 ವರ್ಷಗಳಿಂದಲೂ ತೆಪ್ಪ ಓಡಿಸಿಕೊಂಡು ಜೀವನ ಮಾಡುತ್ತಿರುವ ನಮಗೆ ನೆರೆಯ ರಾಜ್ಯ ತಮಿಳುನಾಡಿನ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಕನ್ನಡಿಗರು ಆರೋಪ ಮಾಡಿದ್ದಾರೆ.

ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿರುವ ಹೊಗೇನಕಲ್ ಫಾಲ್ಸ್​​ ಬಳಿ ಸ್ಥಳೀಯ 300ಕ್ಕೂ ಹೆಚ್ಚು ಕನ್ನಡಿಗರು ತೆಪ್ಪ ಓಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ತಮಿಳುನಾಡು ಪೊಲೀಸರು ನಿರಂತರ ದೌರ್ಜನ್ಯ ನಡೆಸುತ್ತಿರುವ ಕಾರಣ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯ ಕೂಡಿಸುವವರಗೂ ತೆಪ್ಪವನ್ನೇ ಓಡಿಸುವುದಿಲ್ಲ ಎಂದು ಸ್ಥಗಿತಗೊಳಿಸಿ ಹೋರಾಟ ನಡೆಸುತ್ತಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ಗಡಿನಾಡ ಕನ್ನಡಿಗರು ಅಂಗಲಾಚಿದ್ದಾರೆ.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಪೂರ್ವ ಭಾಗದ ಹೊಗೇನಕಲ್ ಫಾಲ್ಸ್​​ ಬಳಿ ಇರುವ ಮಾರುಕೊಟ್ಟಾಯ್ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಕರ್ನಾಟಕದ ಕಡೆಯಿಂದ ಹೊಗೆನಕಲ್ ಫಾಲ್ಸ್ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ತೆಪ್ಪದ ಸಂಚಾರ ಸದ್ದಕ್ಕಿಲ್ಲ. ಸ್ಥಳೀಯ ಜಿಲ್ಲಾಡಳಿತ ಮತ್ತು ತಮಿಳುನಾಡು ಪೊಲೀಸರ ನಡುವೆ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥ ಮಾಡುವ ತನಕ ತೆಪ್ಪ ಸಂಚಾರ ಸ್ಥಗಿತ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Whats_app_banner