ಕನ್ನಡ ಸುದ್ದಿ  /  ಕರ್ನಾಟಕ  /  Odisha Train Accident: ಒಡಿಶಾ ರೈಲು ದುರಂತದಲ್ಲಿ ಮೃತರ ಸಂಖ್ಯೆ 288ಕ್ಕೆ ಏರಿಕೆ; ಚಿಕ್ಕಮಗಳೂರಿನ ಕಳಸದ 110 ಮಂದಿ ಸೇಫ್

Odisha train accident: ಒಡಿಶಾ ರೈಲು ದುರಂತದಲ್ಲಿ ಮೃತರ ಸಂಖ್ಯೆ 288ಕ್ಕೆ ಏರಿಕೆ; ಚಿಕ್ಕಮಗಳೂರಿನ ಕಳಸದ 110 ಮಂದಿ ಸೇಫ್

Chikkamagaluru people in Odisha train accident: ಚಿಕ್ಕಮಗಳೂರಿನ ಕಳಸದಿಂದ 110 ಮಂದಿ ಯಾತ್ರಿಕರ ತಂಡವು ಜೈನರ ಪವಿತ್ರ ಯಾತ್ರಾ ಸ್ಥಳವಾದ ಜಾರ್ಖಂಡ್‌ನ ಸಮ್ಮೇದ್ ಶಿಖರ್ಜಿಗೆ ಯಶವಂತಪುರ- ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ ತೆರಳುತ್ತಿದ್ದರು. ಶುಕ್ರವಾರ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ರೈಲ್ವೇ ನಿಲ್ದಾಣದಿಂದ ಈ ತಂಡವು ರೈಲು ಹತ್ತಿತ್ತು.

ಒಡಿಶಾ ರೈಲು ಅಪಘಾತದಲ್ಲಿ ಅಪಾಯದಿಂದ ಪಾರಾದ ಚಿಕ್ಕಮಗಳೂರು ಯಾತ್ರಿಕರು
ಒಡಿಶಾ ರೈಲು ಅಪಘಾತದಲ್ಲಿ ಅಪಾಯದಿಂದ ಪಾರಾದ ಚಿಕ್ಕಮಗಳೂರು ಯಾತ್ರಿಕರು

ಚಿಕ್ಕಮಗಳೂರು: ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 288ಕ್ಕೆ ಏರಿಕೆಯಾಗಿದೆ. ಅಪಘಾತಕ್ಕೀಡಾದ ಯಶವಂತಪುರ- ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿದ್ದ ಚಿಕ್ಕಮಗಳೂರಿನ 110 ಮಂದಿ ಪ್ರಯಾಣಿಕರು ಅದೃಷ್ಟವಶಾತ್​ ಯಾವುದೇ ಅಪಾಯವಿಲ್ಲಲೇ ಪಾರಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಚಿಕ್ಕಮಗಳೂರಿನ ಕಳಸದಿಂದ 110 ಮಂದಿ ಯಾತ್ರಿಕರ ತಂಡವು ಜೈನರ ಪವಿತ್ರ ಯಾತ್ರಾ ಸ್ಥಳವಾದ ಜಾರ್ಖಂಡ್‌ನ ಸಮ್ಮೇದ್ ಶಿಖರ್ಜಿಗೆ ಯಶವಂತಪುರ- ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ ತೆರಳುತ್ತಿದ್ದರು.

ಶುಕ್ರವಾರ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ರೈಲ್ವೇ ನಿಲ್ದಾಣದಿಂದ ಈ ತಂಡವು ರೈಲು ಹತ್ತಿತ್ತು. ಅವರೆಲ್ಲರೂ ರೈಲು ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕಳಸದ ಯಾತ್ರಿಕರೊಬ್ಬರ ಕುಟುಂಬ ಸದಸ್ಯ ಹರ್ಷ ವರ್ಧನ್ ಜೈನ್ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಯಾಣಿಕರಲ್ಲಿ ಒಬ್ಬರಾದ ಪ್ರವೀಣ್ ಜೈನ್, "ರಾತ್ರಿ 8.30 ರ ಸುಮಾರಿಗೆ, ನಮ್ಮ ಯಾತ್ರೆಯ ಭಾಗವಾಗಿ ನಾವು ಪೂಜಾ ವಿಧಿವಿಧಾನಗಳನ್ನು ನಡೆಸುತ್ತಿದ್ದಾಗ, ರೈಲು ಥಟ್ಟನೆ ನಿಂತಿತು. ಅದಕ್ಕೂ ಕೆಲವೇ ಸೆಕೆಂಡುಗಳ ಮೊದಲು, ನಮಗೆ ದೊಡ್ಡ ಶಬ್ದ ಕೇಳಿಸಿತು. ರೈಲು ಹಠಾತ್ತನೆ ಸ್ಥಗಿತಗೊಂಡಿದ್ದರಿಂದ ಗೊಂದಲ ಉಂಟಾಯಿತು. ನಾವು ಅಲ್ಲಿಂದ ಕೆಳಗಿಳಿದೆವು. ರೈಲಿನ ಹಿಂಬದಿಯ ಕಡೆಗೆ ಮೂರು ಕಿಲೋಮೀಟರ್ ನಡೆದೆವು. ನಂತರ ನಾವು ಹಲವಾರು ಬೋಗಿಗಳು ಒಂದರ ಮೇಲೊಂದು ರಾಶಿ ಬಿದ್ದಿರುವುದನ್ನು ನೋಡಿದೆವು" ಎಂದು ಹೇಳಿದ್ದಾರೆ.

ಆರಂಭದಲ್ಲಿ ಪ್ರಯಾಣಿಕರಿಗೆ ಏನಾಯಿತು ಎಂದು ತಿಳಿದಿರಲಿಲ್ಲ, ಆದರೆ ನಂತರ ದುರಂತದ ಸುದ್ದಿ ಹರಡಿತು. ಕೂಡಲೇ ಸ್ಥಳೀಯ ಗ್ರಾಮಸ್ಥರು ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡು ಹಳಿ ತಪ್ಪಿದ ಬೋಗಿಗಳಿಂದ ಮೃತದೇಹಗಳನ್ನು ಏಣಿಗಳ ಸಹಾಯದಿಂದ ಹೊರತೆಗೆದರು ಎಂದು ಪ್ರವೀಣ್​ ಹೇಳಿದರು.

ನೈಋತ್ಯ ರೈಲ್ವೇ (ಎಸ್‌ಡಬ್ಲ್ಯುಆರ್) ಅಧಿಕಾರಿಗಳ ಪ್ರಕಾರ, ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ ಜನರಲ್ ಸೀಟಿಂಗ್ (ಜಿಎಸ್) ಕೋಚ್‌ಗಳಲ್ಲಿದ್ದ 300 ಮಂದಿ ಸೇರಿದಂತೆ ಸುಮಾರು 1,294 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಕಾಯ್ದಿರಿಸಿದ ಕೋಚ್‌ಗಳಲ್ಲಿ ಯಾರೂ ಗಾಯಗೊಂಡಿಲ್ಲ ಹಾಗೂ ಪ್ರಾಣಹಾನಿ ಸಂಭವಿಸಿಲ್ಲ. ಜನರಲ್ ಸೀಟಿಂಗ್ ಬೋಗಿಗಳಲ್ಲಿದ್ದ ಕೆಲವು ಪ್ರಯಾಣಿಕರಿಗೆ ಕೆಲವು ಗಾಯಗಳಾಗಿವೆ.

ಮೂರು ರೈಲುಗಳ ಅಪಘಾತ

ನಿನ್ನೆ (ಜೂನ್​ 2, ಶುಕ್ರವಾರ) ಸಂಜೆ 7 ಗಂಟೆ ಸುಮಾರಿಗೆ ಮೊದಲು ಒಡಿಶಾದ ಬಾಲಾಸೋರ್​ನಲ್ಲಿ ಗೂಡ್ಸ್​ ರೈಲಿಗೆ 12841 ಶಾಲಿಮಾರ್ - ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಡಿಕ್ಕಿಹೊಡೆದಿದೆ. ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ಕೋರಮಂಡಲ್ ಎಕ್ಸ್‌ಪ್ರೆಸ್‌ಗೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ 12864 ಯಶವಂತಪುರ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿತ್ತು. ಈ ರೈಲು ಬೆಂಗಳೂರಿನ ಯಶವಂತಪುರದ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (SMVT) ನಿಂದ ಹೊರಟಿತ್ತು.

ಹೀಗಾಗಿ ಬೋಗಿಗಳಲ್ಲಿ ಕನ್ನಡಿಗರೂ ಸಿಲುಕಿರುವ ಹಾಗೂ ಆಸ್ಪತ್ರೆಗೆ ದಾಖಲಾಗಿರುವ ಶಂಕೆವ್ಯಕ್ತವಾಗಿದ್ದು, ಅವರ ರಕ್ಷಣೆಗಾಗಿ ಕರ್ನಾಟಕದ ಕಾರ್ಮಿಕ ಸಚಿವ ಸಂತೋಷ್​ ಲಾಡ್​ ನೇತೃತ್ವದ ತಂಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯೋಜಿಸಿದ್ದಾರೆ. ಇಂದು ಮಧ್ಯಾಹ್ನ 2:30ಕ್ಕೆ ಬೆಂಗಳೂರಿನ ಹೆಚ್​ಎಎಲ್​ ವಿಮಾನ ನಿಲ್ದಾಣದಿಂದ ಸಚಿವ ಸಂತೋಷ್​ ಲಾಡ್ ಜೊತೆ ಇತರ ನಾಲ್ವರು ಅಧಿಕಾರಿಗಳು ಒಡಿಶಾದ ಬಾಲಾಸೋರ್​ನ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲಿ ಕನ್ನಡಿಗರ ರಕ್ಷಣೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನ ಇವರು ಮಾಡಲಿದ್ದಾರೆ.

IPL_Entry_Point