ಈ ಸಲ ಮಕ್ಕಳ ದಿನವನ್ನು ವಿಶೇಷವಾಗಿ ಆಚರಿಸೋಣವೇ? ನಿಮ್ಮ ಮನೆ ಮಕ್ಕಳ ಹತ್ರ ಪ್ರಬಂಧ, ಚಿತ್ರ ಬರೆಯಿಸಿ ನವೆಂಬರ್ 20ರ ಒಳಗೆ ನಮಗೆ ಕಳುಹಿಸಿ
Children's Day 2024: ಪಾಲಕರೇ, ಮಕ್ಕಳ ದಿನಾಚರಣೆ ಇನ್ನೇನು ಬಂದೇ ಬಿಡ್ತು. ಈ ಸಲ ಮಕ್ಕಳ ದಿನವನ್ನು ವಿಶೇಷವಾಗಿ ಆಚರಿಸೋಣವೇ? ನಿಮ್ಮ ಜೊತೆಗೆ ಹಿಂದೂಸ್ತಾನ್ ಟೈಮ್ಸ್ ಕನ್ನಡ ಬಳಗವಿದೆ. ನಿಮ್ಮ ಮನೆ ಮಕ್ಕಳ ಹತ್ರ ಪ್ರಬಂಧ, ಚಿತ್ರ ಬರೆಸಿ ನ 20ರ ಒಳಗೆ ನಮಗೆ ಕಳುಹಿಸಿ. ಆಯ್ದ ಚಿತ್ರಗಳನ್ನು, ಪ್ರಬಂಧವನ್ನು ಪ್ರಕಟಿಸಿ ಮಕ್ಕಳ ಖುಷಿ, ಸಂಭ್ರಮವನ್ನು ಕಣ್ತುಂಬಿಕೊಳ್ಳೋಣ.
ಬೆಂಗಳೂರು: ಮಕ್ಕಳ ದಿನ (ನವೆಂಬರ್ 14) ಇನ್ನೇನು ಬಂದೇ ಬಿಡ್ತು. ಇದು ವಾರ್ಷಿಕವಾಗಿ ನಡೆಯುವ ಮಕ್ಕಳ ಸಂಭ್ರಮ ಸಡಗರದ ದಿನ. ಶಾಲೆಗಳಲ್ಲಿ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಯಾಗಿರುತ್ತದೆ. ಅದರಲ್ಲಿ ಭಾಗವಹಿಸುವುದು, ಪ್ರಮಾಣ ಪತ್ರ, ಬಹುಮಾನ ಗೆಲ್ಲುವುದರ ಖುಷಿಯೇ ಬೇರೆ. ಮಕ್ಕಳಿಗಂತೂ ತಾವು ಬರೆದ ಚಿತ್ರ, ಪ್ರಬಂಧ, ಪತ್ರಿಕೆಯಲ್ಲೋ, ಜಾಲಾ ತಾಣದಲ್ಲೋ ಮೊದ ಮೊದಲು ಪ್ರಕಟವಾದಾಗ ಆಗುವ ಖುಷಿ ಇದೆಯಲ್ಲ.. ಅವರ ಮುಖದಲ್ಲಿ ಆ ಸಂಭ್ರಮ, ಸಡಗರ ನೋಡುವಾಗ ಪಾಲಕರಾಗಿ ನಾವು ನೋಡುವಾಗ ಆಗುವ ಸಂತೋಷ ಎಲ್ಲವನ್ನೂ ಅನುಭವಿಸುವುದಕ್ಕೆ ಇದಕ್ಕೆ ಬೇರೆ ಸಂದರ್ಭ ಇಲ್ಲ. ಹಾಗಾಗಿ, ಈ ಸಲ ಮಕ್ಕಳ ಖುಷಿ, ಸಂಭ್ರಮ ಸಡಗರ ಹೆಚ್ಚಿಸಲು ನಾವು ಅಂದರೆ ಹಿಂದೂಸ್ತಾನ್ ಟೈಮ್ಸ್ ಕನ್ನಡ ನಿಮ್ಮ ಜತೆಗೂಡುತ್ತಿದ್ದೇವೆ. ಹಾಗಾದರೆ, ಪಾಲಕರೇ, ಈ ಸಲ ಮಕ್ಕಳ ದಿನವನ್ನು ವಿಶೇಷವಾಗಿ ಆಚರಿಸೋಣವೇ? ನಾವು ವಿಷಯ ಕೊಡ್ತೇವೆ. ಆ ವಿಷಯಕ್ಕೆ ಸಂಬಂಧಿಸಿ ನಿಮ್ಮ ಮಕ್ಕಳ ಹತ್ತಿರ ಪ್ರಬಂಧ ಬರೆಸಿ, ಚಿತ್ರ ಬರೆಯೋದಕ್ಕೆ ಹೇಳಿ. ಅವುಗಳನ್ನು ನವೆಂಬರ್ 20ರ ಒಳಗೆ ನಮಗೆ ಕಳುಹಿಸಿ.
ಹಿಂದೂಸ್ತಾನ್ ಟೈಮ್ಸ್ ಕನ್ನಡದೊಂದಿಗೆ ಮಕ್ಕಳ ದಿನ ಆಚರಿಸಿ, ನಿಮ್ಮ ಮನೆ ಮಕ್ಕಳ ಸಂಭ್ರಮ ಹೆಚ್ಚಿಸಿ
ಹಿಂದೂಸ್ತಾನ್ ಟೈಮ್ಸ್ ಕನ್ನಡದೊಂದಿಗೆ ಮಕ್ಕಳ ದಿನ ಹೇಗಪ್ಪಾ ಆಚರಿಸುವುದು ಅಂತ ತಲೆಕೆರೆದುಕೊಳ್ಳಬೇಡಿ. ವಿಷಯ ಇಷ್ಟೆ - “ನನ್ನಿಷ್ಟದ ಸಾಕುಪ್ರಾಣಿ”
ನಾಯಿ, ಬೆಕ್ಕು, ಕುರಿ, ಕೋಳಿ, ಹಸು, ಎಮ್ಮೆ, ಮೇಕೆ... ನಿಮಗೆ ಪ್ರಾಣಿಗಳು ಅಂದ್ರೆ ಇಷ್ಟಾನಾ? ನಿಮ್ಮ ಮನೆಯಲ್ಲಿ, ನಿಮ್ಮ ಊರಲ್ಲಿ ಇರೋ ನಿಮ್ಮಿಷ್ಟದ ಸಾಕುಪ್ರಾಣಿಗಳ ಬಗ್ಗೆ ಪ್ರಬಂಧ ಅಥವಾ ಚಿತ್ರ ಬರೆದು ಕಳಿಸಿ. ಪ್ರಕಟಿತ ಬರಹ, ಚಿತ್ರಗಳಿಗೆ ಕಿರು ಸಂಭಾವನೆಯನ್ನೂ ಕೊಡಲಾಗುತ್ತದೆ. ಹಾಗಾದರೆ ಇನ್ನೇಕೆ ತಡ, ಬೇರೇನೂ ಯೋಚನೆ ಮಾಡಬೇಡಿ. ಬೇಗ ಮನೆ ಮಕ್ಕಳನ್ನು ಹತ್ತಿರ ಕರೆದು ಹೇಳಿ- “ಪುಟ್ಟ ಮರಿ, ಬೇಗ ಬರಿ” ಎನ್ನುತ್ತ ಚಿತ್ರ ಬಿಡಿಸುವ ಮಕ್ಕಳಿಗೆ ಡ್ರಾಯಿಂಗ್ ಶೀಟ್ ಮತ್ತು ಬಣ್ಣವನ್ನು ಕೊಟ್ಟುಬಿಡಿ. ಪ್ರಬಂಧ ಬರೆಯುವ ಮಕ್ಕಳಿಗೆ ಬಿಳಿ ಹಾಳೆ ಮತ್ತು ಪೆನ್ ಕೊಟ್ಟುಬಿಡಿ..
ಗಮನಿಸಬೇಕಾದ ಅಂಶಗಳು
ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಜತೆಗೆ ಮಕ್ಕಳ ದಿನಾಚರಣೆ ಆಚರಿಸುವುದಕ್ಕೆ ಪಾಲಕರು ಗಮನಿಸಬೇಕಾದ ವಿಷಯಗಳಿವು.
1) 4 ರಿಂದ 7ನೇ ತರಗತಿ ಮಕ್ಕಳಿಗೆ ಮಾತ್ರ ಅವಕಾಶ
2) ಪ್ರಬಂಧ ಕೈಬರಹದಲ್ಲಿಯೇ ಇರಬೇಕು, ಸ್ವಂತ ಬರವಣಿಗೆ ಆಗಿರಬೇಕು
3) ಚಿತ್ರಕಲೆ ನಿಮ್ಮ ಸ್ವಂತ ಕಲ್ಪನೆಯಿಂದ ರೂಪುಗೊಂಡಿಬೇಕು, ಬಣ್ಣ ಹಾಕಿರಬೇಕು
4) ಕಂಪ್ಯೂಟರ್ ಪ್ರಿಂಟೌಟ್‌ಗಳಿಗೆ ಅವಕಾಶವಿಲ್ಲ
5) ಶಾಲಾ ಶಿಕ್ಷಕರು ಅಥವಾ ಪೋಷಕರು ದೃಢೀಕರಿಸಿರಬೇಕು. ಇವೆರೆಡೂ ಸಾಧ್ಯವಾಗದಿದ್ದರೆ ಮಕ್ಕಳ ಶಾಲಾ ಗುರುತಿನ ಚೀಟಿ (ಸ್ಕೂಲ್ ಐಡಿ ಕಾರ್ಡ್)ಯ ಜೆರಾಕ್ಸ್ ಪ್ರತಿಯನ್ನು ಜೊತೆಗೆ ಕಳುಹಿಸಬೇಕು.
6) ನಿಮ್ಮ ಹೆಸರು, ಶಾಲೆಯ ಹೆಸರು, ವಿಳಾಸ, ಮಗುವಿನ ಪಾಸ್‌ಪೋರ್ಟ್ ಅಳತೆಯ ಫೋಟೋ ಜತೆಗೆ ಸಂಪರ್ಕ ಸಂಖ್ಯೆಯನ್ನು ಕಡ್ಡಾಯವಾಗಿ ಪ್ರತ್ಯೇಕ ಹಾಳೆಯಲ್ಲಿ ನಮೂದಿಸಿರಬೇಕು
7) ಸ್ವೀಕೃತ ಬರಹಗಳನ್ನು kannada.hindustantimes.com ಜಾಲತಾಣದಲ್ಲಿ ಪ್ರಕಟಿಸಲಾಗುವುದು
8) ಬರಹಗಳು ನಮಗೆ ನವೆಂಬರ್ 20 ರ ಒಳಗೆ ತಲುಪಬೇಕು
ಮಕ್ಕಳು ಬರೆದ ಚಿತ್ರ ಮತ್ತು ಪ್ರಬಂಧಗಳನ್ನು ಕಳುಹಿಸಬೇಕಾದ ವಿಳಾಸ: ಸಂಪಾದಕರು, ಹಿಂದೂಸ್ತಾನ್ ಟೈಮ್ಸ್ ಕನ್ನಡ, ಶ್ರೀಹರಿಕೃಪ, ಡಿ ಕ್ರಾಸ್, ಮುತ್ಸಂದ್ರ ರಸ್ತೆ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ - 561 203. ಮೊಬೈಲ್: 95991 30861.