ಕನ್ನಡ ಸುದ್ದಿ  /  Karnataka  /  Dakshin Kannada News Dvsadanandgowda Questioned Congress Bring Compensation From Kerala For Elephant Issue In Sullia Hsm

Dakshin Kannada News:ಸುಳ್ಯ ಗಡಿ ಭಾಗದಲ್ಲಿ ಕಾಡಾನೆಗಳ ದಾಳಿ, ಕೇರಳದಿಂದ ಪರಿಹಾರ ತರಿಸಬಹುದೇ;ಡಿವಿಎಸ್ ಪ್ರಶ್ನೆ

Elephants ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಸುಳ್ಯ ತಾಲ್ಲೂಕಿನಲ್ಲೂ ಕಾಡಾನೆ ಹಾವಳಿ ಜೋರಾಗಿದ್ದು, ಮೃತ ರೈತನಿಗೆ ಪರಿಹಾರ ನೀಡಿದ ವಿಚಾರದಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಆಕ್ರೋಶ ಹೊರ ಹಾಕಿದ್ದಾರೆ.

ಸುಳ್ಯ ತಾಲ್ಲೂಕಿನಲ್ಲಿ ಕಾಡಾನೆಗಳ ಉಪಟಳ ಜೋರಾಗಿದೆ.
ಸುಳ್ಯ ತಾಲ್ಲೂಕಿನಲ್ಲಿ ಕಾಡಾನೆಗಳ ಉಪಟಳ ಜೋರಾಗಿದೆ.

ಮಂಗಳೂರು: ಕೇರಳದಲ್ಲಿ ಆನೆ ದಾಳಿಯಿಂದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಕ್ಕೆ ಕರ್ನಾಟಕ ಸರ್ಕಾರಿದಂದ ಪರಿಹಾರ ನೀಡಿರುವ ವಿವಾದ ಭಿನ್ನ ಸ್ವರೂಪ ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೂಚನೆ ನೀಡಿದ ಕಾರಣಕ್ಕೆ ಅವರು ಪ್ರತಿನಿಧಿಸುವ ವಯನಾಡು ಲೋಕಸಭಾ ಕ್ಷೇತ್ರದ ವ್ಯಕ್ತಿಗೆ ಪರಿಹಾರ ನೀಡುವುದು ಸರಿಯೇ ಎಂದು ಬಿಜೆಪಿ ಕಾರವಾಗಿಯೇ ಪ್ರತಿಕ್ರಿಯಿಸಿದೆ.

ಇದಕ್ಕೆ ಪೂರಕವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೇರಳ ಗಡಿ ಭಾಗದಲ್ಲಿ ಹಲವು ವರ್ಷಗಳಿಂದ ಆನೆಗಳು ನಿರಂತರ ದಾಳಿ ಮಾಡುತ್ತಿದ್ದು, ಇದಕ್ಕೆ ಕೇರಳ ಸರಕಾರದಿಂದ ಪರಿಹಾರ ತರಿಸಬಹುದೇ ಎಂದು ಕಾಂಗ್ರೆಸ್ ನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಸುಳ್ಯ ತಾಲೂಕಿನ ಮಂಡೆಕೋಲಿನವರಾಗಿರುವ ಡಿ.ವಿ.ಸದಾನಂದ ಗೌಡ ಪೋಸ್ಟ್ ಮಾಡಿದ್ದಾರೆ.

ಸುಳ್ಯ ತಾಲೂಕಿನ ಕೇರಳ ಗಡಿ ಭಾಗದಲ್ಲಿ ಹಲವು ವರ್ಷಗಳಿಂದ ಆನೆಗಳು ನಿರಂತರ ದಾಳಿ ಮಾಡಿ ಸಾವಿರಾರು ಎಕರೆ ಕೃಷಿ ನಾಶ ಮಾಡುತ್ತಿವೆ. ಈ ಆನೆಗಳು ಕೇರಳ ಭಾಗದಿಂದ ಬರುತ್ತಿರುವುದರಿಂದ ಪರಿಹಾರವನ್ನು ಕೇರಳ ಸರಕಾರದಿಂದ ತರಿಸಿ ಕೊಡಲು ನಿಮ್ಮ ರಾಹುಲ್ ಗಾಂಧಿ ಮತ್ತು ಕೆ.ಸಿ ವೇಣುಗೋಪಾಲ್ ಅವರಿಗೆ ಪತ್ರ ಬರೆಯಬಹುದೇ ? ಎಂದು ಕರ್ನಾಟಕ ಕಾಂಗ್ರೆಸ್ ಗೆ ಡಿ.ವಿ ಸದಾನಂದ ಗೌಡ ಪ್ರಶ್ನಿಸಿ ಸಾಮಾಜಿಕ ಜಾಲತಾಣ ದಲ್ಲಿ (ಪೇಸ್ ಬುಕ್, ಎಕ್ಸ್ - ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕೇರಳದ ವಯನಾಡ್ ನಲ್ಲಿ ಆನೆ ತುಳಿತಕ್ಕೆ ಒಳಗಾಗಿ ಸತ್ತಿರೋ ವ್ಯಕ್ತಿಗೆ ಕರ್ನಾಟಕದ ತೆರಿಗೆ ಹಣದಿಂದ ಪರಿಹಾರ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದೂ ಅವರನ್ನು ಅದಕ್ಕೂ ಮೊದಲ ಪೋಸ್ಟ್ ನಲ್ಲಿ ಬರೆದಿದ್ದಾರೆ. ಸಚಿವರು ಬರೆದ ಪತ್ರದಲ್ಲಿ ಕೆ.ಸಿ. ವೇಣುಗೋಪಾಲ್ ಯಾಕೆ? ಇನ್ನು ಎಷ್ಟು ಸಮಯ ರಾಹುಲ್ ಗಾಂಧಿಗೆ ಗುಲಾಮರಾಗಿ ಕರ್ನಾಟಕದ ತೆರಿಗೆ ಹಣ ಪೋಲು ಮಾಡುತ್ತೀರಿ ಎಂದು ಕರ್ನಾಟಕ ಕಾಂಗ್ರೆಸ್ ನ್ನು ಪ್ರಶ್ನಿಸಿದ್ದಾರೆ.

ಸದನದ ಒಳಗೂ ಹಾಗೂ ಹೊರಗೂ ಬಿಜೆಪಿ ಈ ವಿಷಯವನ್ನು ಗಂಭೀರವಾಗಿಯೇ ಪ್ರಶ್ನಿಸಿದೆ. ಇದಲ್ಲದೇ ಜೆಡಿಎಸ್‌ ಕೂಡ ಈ ನಡೆಯನ್ನು ವಿರೋಧಿಸಿದೆ. ನಮ್ಮ ರೈತರಿಗೆ ನಾಲ್ಕು ಸಾವಿರ ರೂ. ಪರಿಹಾರ ನೀಡಲು ನಿಧಾನ ಮಾಡುವ ಅರಣ್ಯ ಇಲಾಖೆ ಕೇರಳದ ರೈತನಿಗೆ ಹದಿನೈದು ಲಕ್ಷ ನೀಡಿದ್ದು ಸರಿಯೇ ಎಂದು ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಕೂಡ ಪ್ರಶ್ನಿಸಿದ್ದಾರೆ.

(ವರದಿ: ಹರೀಶ್‌ ಮಾಂಬಾಡಿ ಮಂಗಳೂರು)

IPL_Entry_Point